Breaking News
Home / Laxminews 24x7 (page 11)

Laxminews 24x7

ಬಸ್​​​ ನಿಲ್ಲಿಸಿಲ್ಲವೆಂದು ಚಾಲಕನ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ

ಬೆಳಗಾವಿ, ಏ.25: ಬಸ್ ನಿಲ್ಲಿಸಿಲ್ಲ ಎಂದು ಸರ್ಕಾರಿ ಬಸ್ ನಿರ್ವಾಹಕ ಮತ್ತು ಚಾಲಕನ ಮೇಲೆ ಮುಸ್ಲಿಂ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆಬೈಲಹೊಂಗಲ(Bailhongal) ಬಸ್ ನಿಲ್ದಾಣದಲ್ಲಿ ನಡೆದಿದೆ. ಇನ್ನು ಈ ಬಸ್​ ಬೈಲಹೊಂಗಲದಿಂದ ಧಾರವಾಡಕ್ಕೆ ಹೊರಟ್ಟಿತ್ತು. ಈ ವೇಳೆ ಓಡಿ ಬಂದು ಬಸ್ ಹತ್ತಲು ಮಹಿಳೆ ಯತ್ನಿಸಿದ್ದಾರೆ. ಆಗ ಮಹಿಳೆಗೆ ನಿರ್ವಾಹಕ ಬೈಯ್ದಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಸ್​ಗಳನ್ನ ಸ್ಥಗಿತಗೊಳಿಸಿ ಪ್ರತಿಭಟನೆ ಇನ್ನು ಈ ವೇಳೆ ಜಗಳ …

Read More »

ಇನ್ಮುಂದೆ ವರ್ಷಕ್ಕೆ ಎರಡು ಬಾರಿ ‘CBSE’ ಬೋರ್ಡ್ ಪರೀಕ್ಷೆ : ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿ ಸಾಧ್ಯತೆ

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 2025-26ರ ಶೈಕ್ಷಣಿಕ ವರ್ಷದಿಂದ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ. ಈ ಸಂಭಾವ್ಯ ಕ್ರಮವು ಜಾರಿಗೆ ಬಂದರೆ, ಸಿಬಿಎಸ್‌ಇ ಮೌಲ್ಯಮಾಪನಗಳ ಹೆಗ್ಗುರುತಾಗಿರುವ ಸಾಂಪ್ರದಾಯಿಕ ವಾರ್ಷಿಕ ಪರೀಕ್ಷಾ ಸ್ವರೂಪದಿಂದ ಗಮನಾರ್ಹ ನಿರ್ಗಮನವನ್ನು ಸೂಚಿಸುತ್ತದೆ. ದ್ವಿವಾರ್ಷಿಕ ಪರೀಕ್ಷೆಗಳತ್ತ ಸಾಗುವುದರಿಂದ ವಿದ್ಯಾರ್ಥಿಗಳಿಗೆ ವಿಷಯಗಳಲ್ಲಿ ತಮ್ಮ ತಿಳುವಳಿಕೆ ಮತ್ತು ಕಾರ್ಯಕ್ಷಮತೆಯನ್ನ ಪ್ರದರ್ಶಿಸಲು ಹೆಚ್ಚಿನ ಅವಕಾಶಗಳನ್ನ ಒದಗಿಸಬಹುದು. ಅಂತಹ …

Read More »

‘ಸಿ.ಟಿ ರವಿ’ ವಿರುದ್ಧ ‘FIR’ ದಾಖಲು

ಚಿಕ್ಕಮಗಳೂರು: ಈಗಾಗಲೇ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಧರ್ಮ ದ್ವೇಷ ಭಾಷಣದ ಕಾರಣ ಚುನಾವಣಾ ಆಯೋಗ ನೀಡಿದಂತ ದೂರಿನ ಹಿನ್ನಲೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಬೆನ್ನಲ್ಲೇ ದ್ವೇಷ ಭಾಷಣ ಮಾಡಿದಂತ ಬಿಜೆಪಿ ಮುಖಂಡ ಸಿ.ಟಿ ರವಿ ರವಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

Read More »

IT ಅಧಿಕಾರಿಗಳಿಂದ 4.8 ಕೋಟಿ ಜಪ್ತಿ ಕೇಸ್: ಬಿಜೆಪಿ ಅಭ್ಯರ್ಥಿ ‘ಡಾ.ಕೆ.ಸುಧಾಕರ್’ ವಿರುದ್ಧ ‘FIR’ ದಾಖಲು

ಚಿಕ್ಕಬಳ್ಳಾಪುರ: ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬಿಜೆಪಿ ಮುಖಂಡ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಕೆ ಸುಧಾಕರ್ ಆಪ್ತ, ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಮಾದಾವರ ಗೋವಿಂದಪ್ಪ ಮನೆ ಮೇಲೆ ದಾಳಿ ಮಾಡಿದ್ದರು. ಈ ದಾಳಿಯ ವೇಳೆಯಲ್ಲಿ 4.82 ಕೋಟಿ ಹಣ ಜಪ್ತಿ ಮಾಡಿದ್ದರು. ಈ ಪ್ರಕರಣದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ ಸುಧಾಕರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಧಿಕಾರಿಗಳು ಹಣವನ್ನು ಜಪ್ತಿ ಮಾಡಿಕೊಂಡ ಬಳಿಕ ಬೆಂಗಳೂರು ಉತ್ತರ ತಾಲೂಕಿನ ಚುನಾವಣಾ ನೋಡೆಲ್ …

Read More »

ಗೃಹ ಸಚಿವರ ತವರು ಕ್ಷೇತ್ರದಲ್ಲಿ 10 ಗುಡಿಸಲುಗಳಿಗೆ ಬೆಂಕಿ

ಬೆಂಗಳೂರು, ಏಪ್ರಿಲ್ 26: ರಾಜ್ಯದಲ್ಲಿ ಎಲ್ಲರ ಚಿತ್ತ ಮೊದಲ ಹಂತದ ಲೋಕಸಭಾ ಚುನಾವಣೆಯ ಮತದಾನದತ್ತ ನೆಟ್ಟಿದೆ. ತುಮಕೂರು ಕ್ಷೇತ್ರದಲ್ಲಿ ಇಂದು ಮತದಾನ ನಡೆದಿದೆ. ಇದೇ ವೇಳೆ ಗೃಹ ಸಚಿವರ ತವರು ಕ್ಷೇತ್ರದಲ್ಲಿ ಹಲವು ಗುಡಿಸಲುಗಳಿಗೆ ಬಂಕಿ ಬಿದ್ದು, ಎಲ್ಲವು ಸುಟ್ಟು ಭಸ್ಮವಾಗಿವೆ. ಹೌದು, ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಪ್ರತಿನಿಧಿಸುವ ತುಮಕೂರು ಜಿಲ್ಲೆಯ ಕೊರಟಗೆರೆ (ತಾಲೂಕು) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಂಪುಗಾನಹಳ್ಳಿ ಗ್ರಾಮದಲ್ಲಿ ಸುಮಾರು 10 ಗುಡಿಸಲುಗಳಿಗೆ ಬೆಂಕಿಗೆ ಆಹುತಿಯಾಗಿವೆ. …

Read More »

ಕೋಳಿ ಮಾಂಸಕ್ಕಿಂತ ಬೀನ್ಸ್‌ ದುಬಾರಿ!

ಹೊಸಕೋಟೆ: ಮಾರುಕಟ್ಟೆಯಲ್ಲಿ ಆವಕ ಕುಸಿದ ಕಾರಣ ಈ ವಾರ ಬೀನ್ಸ್‌ ಬೆಲೆ ಏಕಾಏಕಿ ಏರಿಕೆಯಾಗಿದ್ದು ಕೆ.ಜಿ. ಬೀನ್ಸ್‌ ಬೆಲೆ ₹250 ಗಡಿ ತಲುಪಿದೆ. ಮಾರುಕಟ್ಟೆಯಲ್ಲಿ ಕೋಳಿಮಾಂಸಕ್ಕಿಂತ ಬೀನ್ಸ್‌ ದುಬಾರಿಯಾಗಿದೆ. ಕೆ.ಜಿ ಕೋಳಿ ಮಾಂಸ ₹240 ಇದ್ದರೆ, ಬೀನ್ಸ್‌ ₹250ರಂತೆ ಮಾರಾಟವಾಗುತ್ತಿದೆ. ಕಳೆದ ವಾರ ₹130-₹140 ಆಸುಪಾಸಿನಲ್ಲಿದ್ದ ಕೆ.ಜಿ ಬೀನ್ಸ್‌ ಈ ವಾರ ದಿಢೀರ್‌ ನೂರು ರೂಪಾಯಿ ಏರಿಕೆಯಾಗಿದೆ. ಈ ಮೊದಲು ಕೆ.ಜಿ ಲೆಕ್ಕದಲ್ಲಿ ಬೀನ್ಸ್‌ ಖರೀದಿಸುತ್ತಿದ್ದ ಗ್ರಾಹಕರು ಈಗ ಗ್ರಾಂ …

Read More »

ರೈತನ ಕೈಹಿಡಿದ ಪಪ್ಪಾಯಿ; ಉತ್ತಮ ಆದಾಯ

ಧಾರವಾಡ: ತಾಲ್ಲೂಕಿನ ಮಾದನಭಾವಿಯ ಎಂಜಿನಿಯರಿಂಗ್‌ ಪದವೀಧರ ದಯಾನಂದ ಹೊಳೆಹಡಗಲಿ ಅವರು ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪ್ರಯೋಜನ ಪಡೆದು ಥೇವಾನ್ ರೆಡ್ ಲೇಡಿ ತಳಿ ಪಪ್ಪಾಯಿ ಲಾಭ ಗಳಿಸಿದ್ದಾರೆ. ಕೊಲ್ಲಾಪುರ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಅವರು ಕೋವಿಡ್‌ ತಲ್ಲಣದ ಕಾಲಘಟ್ಟದಲ್ಲಿ ಉದ್ಯೊಗ ತೊರೆದು ಊರು ಸೇರಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. 15 ಎಕರೆ ಜಮೀನಿನಲ್ಲಿ ಮಿಶ್ರ ಬೇಸಾಯ (ಕಬ್ಬು, ಗೋವಿನಜೋಳ, ಕಡಲೆ, ತರಕಾರಿ, ಸೋಯಾಬಿನ್…) ಮಾಡುತ್ತಿದ್ದಾರೆ. ಹೊಸ ಬೆಳೆ …

Read More »

ಕೊಲೆಯಾದ ನೇಹಾ ಹಿರೇಮಠ ತಂದೆಗೆ ಪೊಲೀಸ್ ಭದ್ರತೆ

ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ಮೃತಳ ತಂದೆ ನಿರಂಜನಯ್ಯ ಹಿರೇಮಠ ಅವರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಮಗಳ ಕೊಲೆ ಪ್ರಕಣಕ್ಕೆ ಸಂಬಂಧಿಸಿ ತನಗೆ ಕೆಲವರಿಂದ ಜೀವ ಬೆದರಿಕೆಯಿದೆ ಎಂದು ನಿರಂಜನಯ್ಯ ಗುರುವಾರ ಹೇಳಿದ್ದರು. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿಯೂ ಬೆದರಿಕೆ ಕುರಿತು ಪ್ರಸ್ತಾವಿಸಿದ್ದರು. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಘಟಕ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ಅವರಿಗೆ ಶಸ್ತ್ರಸಜ್ಜಿತ ಒಬ್ಬ ಅಂಗರಕ್ಷಕರನ್ನು ಭದ್ರತೆಗೆ ನಿಯೋಜಿಸಿದೆ. ಸಾಂತ್ವನ ಹೇಳುವ ನೆಪದಲ್ಲಿ …

Read More »

ರಾಹುಲ್‌ ಗಾಂಧಿ ‘ಇಂಡಿಯಾ’ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಆಗಲಿ: ಸುರ್ಜೇವಾಲಾ

ಬೆಳಗಾವಿ: ‘ರಾಹುಲ್‌ ಗಾಂಧಿ ಅವರೇ ಮುಂದಿನ ಪ್ರಧಾನಿ ಆಗಬೇಕು ಎಂಬ ನಿರೀಕ್ಷೆ ನಮಗಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಹೇಳಿದರು. ನಗರದಲ್ಲಿ ಗುರುವಾರ ಚೊಂಬು ಹಿಡಿದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಂಡಿ’ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರು’ ಎಂಬ ಪ್ರಶ್ನೆಗೆ ಹೀಗೆ ಪ್ರತಿಕ್ರಿಯಿಸಿದರು. ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕನ್ನಡಿಗರಿಗೆ ಅನ್ಯಾಯ ಮಾಡಿದ ಮೋದಿ ಚುನಾವಣಾ ಪ್ರವಾಸಕ್ಕೆ ಬರುವ …

Read More »

‘ತೇಜಸ್ವಿ ಸೂರ್ಯ’ ವಿರುದ್ಧ ಪ್ರಕರಣ ದಾಖಲು

‘ತೇಜಸ್ವಿ ಸೂರ್ಯ’ ವಿರುದ್ಧ ಪ್ರಕರಣ ದಾಖಲು ಬೆಂಗಳೂರು: ‘ಎಕ್ಸ್’ ಹ್ಯಾಂಡಲ್ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಧರ್ಮದ ಆಧಾರದ ಮೇಲೆ ಮತಯಾಚಿಸಿದ ಆರೋಪದ ಮೇಲೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಶುಕ್ರವಾರ ತಿಳಿಸಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಜಯನಗರ ಪೊಲೀಸ್ ಠಾಣೆಯ 123(3) ಸೆ.123(3)ರಲ್ಲಿ ಪ್ರಕರಣ ದಾಖಲಾಗಿದೆ.

Read More »