Breaking News

Laxminews 24x7

ಕ್ಷುಲ್ಲಕ ಕಾರಣಕ್ಕೆ ಗ್ಯಾಂಗ್‌ನಿಂದ ಅಟ್ಯಾಕ್‌ – ರೌಡಿಶೀಟರ್‌ ಬರ್ಬರ ಹತ್ಯೆ

ಬೆಂಗಳೂರು: ಪೀಣ್ಯದ  ಗುಲ್ಬರ್ಗ ಕಾಲೋನಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ರೌಡಿಶೀಟರ್‌ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ. ದೀಪಕ್ ಅಲಿಯಾಸ್‌ ದೀಪು ಕೊಲೆಯಾದ ರೌಡಿಶೀಟರ್. ಈತ ನಂದಿನಿ ಲೇಔಟ್ ರೌಡಿಶೀಟರ್ ಆಗಿದ್ದ. ಕಳೆದ ಎರಡು ದಿನಗಳ ಹಿಂದೆ ಎರಡು ಗುಂಪುಗಳ ನಡುವೆ ಗಲಾಟೆ ಆಗಿತ್ತು. ಇದೇ ಕಾರಣಕ್ಕೆ ಸೆ.27ರ ರಾತ್ರಿ ದೀಪಕ್ ಮೇಲೆ ದಾಳಿ ಮಾಡಿದ 7-8 ಜನರ ಗ್ಯಾಂಗ್‌ ದಾಳಿ ಮಾಡಿ ಹತ್ಯೆ ಮಾಡಿದೆ. ಎರಡು …

Read More »

2013ರಲ್ಲಿ 6 ಗಂಟೆಗಳ ಕಾಲ ರೈಲು ತಡೆದ ಪ್ರಕರಣ – ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಅರೆಸ್ಟ್‌

ಹುಬ್ಬಳ್ಳಿ: 2013ರಲ್ಲಿ ರೈಲು ತಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್  ಅವರನ್ನು ಹುಬ್ಬಳ್ಳಿ ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಶಿರಸಿಯ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಅವರು ಆಗಮಿಸಿದ್ದರು. ಈ ವೇಳೆ ಶಿರಸಿ ಪೊಲೀಸರ ಸಹಾಯ ಪಡೆದು ಅವರನ್ನು ಬಂಧಿಸಲಾಗಿದೆ. 2013ರಲ್ಲಿ ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ನಡೆದ ಹೋರಾಟದ ವೇಳೆ ಅವರ ನೇತೃತ್ವದಲ್ಲಿ ರೈಲು ತಡೆಯಲಾಗಿತ್ತು. ಸುಮಾರು ಆರು ಗಂಟೆಗಳ ಕಾಲ ಎಲ್ಲಾ ರೈಲುಗಳನ್ನು ತಡೆದು ರೈತರು ಹೋರಾಟ …

Read More »

ಕೇದಾರನಾಥದಲ್ಲಿ ಏಕಾಏಕಿ ಭೂಕುಸಿತ – 5 ವರ್ಷದ ಬಾಲಕ ಸಾವು, 1,500 ಯಾತ್ರಿಕರ ಸ್ಥಳಾಂತರ

ಡೆಹ್ರಾಡೂನ್: ಕೇದಾರನಾಥ  ಮಾರ್ಗದ ಚಿರ್ಬಾಸಾ ಬಳಿ ಏಕಾಏಕಿ ಸಂಭವಿಸಿದ ಭೂಕುಸಿತದಿಂದಾಗಿ 5 ವರ್ಷದ ಬಾಲಕ ಸಾವನ್ನಪ್ಪಿದ್ದು, 1,500 ಯಾತ್ರಿಕರನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಭಾನುವಾರ (ಸೆ.27) ತಡರಾತ್ರಿ ಗೌರಿಕುಂಡದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಚಿರ್ಬಾಸಾ ಬಳಿಯ ಮಾರ್ಗದಲ್ಲಿ ಬೆಟ್ಟದಿಂದ ಬಂಡೆ, ಶಿಲಾಖಂಡದ ರಾಶಿಗಳು ಏಕಾಏಕಿ ಕೂಸಿದಿವೆ. ಪರಿಣಾಮ ಕಲ್ಲು ಬಡಿದು ಉತ್ತರ ಪ್ರದೇಶದ ಇಟಾ ಮೂಲದ ಬಾಲಕ ಯಶ್(5) ಸಾವನ್ನಪ್ಪಿದ್ದು, ಹಲವು ಯಾತ್ರಿಕರು ಸಿಲುಕಿಕೊಂಡಿದ್ದರು. ಮಾಹಿತಿ ತಿಳಿದ ಕೂಡಲೇ …

Read More »

ತಾಂಡವ್ Emergency Exit – ಅನಿರೀಕ್ಷಿತ ನಿರ್ಗಮನಕ್ಕೆ ಇಡೀ ಮನೆ ಕಣ್ಣೀರು!

ಬಿಗ್‌ಬಾಸ್  ಮನೆಯ ಆಟದಲ್ಲಿ ಯಾವಾಗ ಯಾವ ತಿರುವು ಸಿಗುತ್ತೆ ಅಂತ ಊಹಿಸೋಕೂ ಸಾಧ್ಯವಿಲ್ಲ. ಅದರಂತೆ ಎಮರ್ಜೆನ್ಸಿ ಎಕ್ಸಿಟ್ ಮೂಲಕ ತಾಂಡವ್ ರಾಮ್ ಮನೆಯಿಂದ ಹೊರಬಂದಿದ್ದಾರೆ. ವಾರದ ಆರಂಭದಲ್ಲೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ‘ಎಮರ್ಜೆನ್ಸಿ ಎಕ್ಸಿಟ್’ ಎಂಬ ಬಿಗ್ ಟ್ವಿಸ್ಟ್ ನೀಡಿದ್ದರು. ‘ಎಮರ್ಜೆನ್ಸಿ ಎಕ್ಸಿಟ್’ನಿಂದ ತಮ್ಮನ್ನು ತಾವು ಉಳಿಸಿಕೊಳ್ಳಲು ಟಾಸ್ಕ್ ಆಡಿದ್ದ ನಾಲ್ವರು ಅಡ್ವಾಂಟೇಜ್ ಪಡೆದುಕೊಂಡಿದ್ದರು. ಕೊನೆಗೆ ಟಾಸ್ಕ್‌ನಲ್ಲಿ ತಮ್ಮ ವೋಟ್‌ ಹೆಚ್ಚಿಸಿಕೊಳ್ಳಲು ಬೇರೆಯವರಿಂದ ವೋಟ್‌ ಪಡೆದುಕೊಂಡಿದ್ದೇ ತಡ.. ಮತಗಳ …

Read More »

ಸಂಸತ್‌ನಲ್ಲಿ ಎಸ್‌ಸಿ-ಎಸ್‌ಟಿ ಸಂಸದರಿಗೆ ಹೆಚ್ಚು ಮಾತನಾಡಲು ಅವಕಾಶ ನೀಡಿ – ಸ್ಪೀಕರ್ ಓಂ ಬಿರ್ಲಾಗೆ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಪತ್ರ

ನವದೆಹಲಿ: ಪ್ರಮುಖ ಮಸೂದೆಗಳ ಮೇಲಿನ ಚರ್ಚೆ ಸಂದರ್ಭದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯಗಳಿಗೆ ಸೇರಿದ ಸಂಸದರಿಗೆ ಹೆಚ್ಚಿನ ಸಮಯ ಮಾತನಾಡಲು ಅವಕಾಶ ನೀಡುವಂತೆ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ  ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ  ಅವರಿಗೆ ಮನವಿ ಮಾಡಿದ್ದಾರೆ. ಸೆಪ್ಟೆಂಬರ್ 16ರಂದು ಬರೆದಿರುವ ಪತ್ರದಲ್ಲಿ ಮಾಂಝಿ ಅವರು ಆಗಸ್ಟ್ 5ರಂದು ತಮ್ಮ ದೆಹಲಿ ನಿವಾಸದಲ್ಲಿ ನಡೆದ ಎನ್‌ಡಿಎ ಸಂಸದ ಸಮೂಹ ಸಂವಾದ …

Read More »

ನಾಗಾಲ್ಯಾಂಡ್‌ನಲ್ಲಿ ಕಳ್ಳಭಟ್ಟಿ ಸೇವಿಸಿ 19 ಮಂದಿ ಸಾವು

ಕೊಹಿಮಾ: ಕಳ್ಳಭಟ್ಟಿ  ಸೇವಿಸಿ ಕನಿಷ್ಠ 19 ಮಂದಿ ಮೃತಪಟ್ಟಿರುವ ಘಟನೆ ನಾಗಾಲ್ಯಾಂಡ್‌ನಲ್ಲಿ ನಡೆದಿದೆ. ಘಟನೆ ಬೆನ್ನಲ್ಲೇ ಮದ್ಯದ ಮೂಲ ಮತ್ತು ಪೂರೈಕೆ ಜಾಲವನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ಕಳ್ಳಭಟ್ಟಿ ಸೇವನೆಯ ಬಳಿಕ ಮೊಕೊಕ್ಚುಂಗ್  ಜಿಲ್ಲೆಯಲ್ಲಿ 8 ಮಂದಿ ಹಾಗೂ ಟುಯೆನ್‌ಸಾಂಗ್  ಜಿಲ್ಲೆಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಸಲು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಐ.ಬಂಗ್ಲಾಂಗ್ …

Read More »

ಬರಪೀಡಿತ ಎಂದು ಘೋಷಿಸದ್ದಕ್ಕೆ ರಾಜೀನಾಮೆ ಸಲ್ಲಿಸಿದೆ – ಕ್ಷೇತ್ರದ ಜನರಿಗಾಗಿ ರಾಜಕೀಯ ನಿವೃತ್ತಿಗೂ ಸಿದ್ಧ: ಯಶವಂತರಾಯಗೌಡ

ವಿಜಂಯಪುರ: 188 ತಾಲೂಕುಗಳು ಘೋಷಣೆ ಆದಾಗಲೂ, ವಿಜಯಪುರ ಜಿಲ್ಲೆಯ 13 ತಾಲೂಕುಗಳ ಪೈಕಿ 11 ಘೋಷಣೆ ಆದರೂ ಇಂಡಿ, ಚಡಚಣ ಬರಪೀಡಿತ ಎಂದು ಘೋಷಣೆ ಮಾಡಿರಲಿಲ್ಲ. ಹೀಗಾಗಿ ನಾನು ರಾಜೀನಾಮೆ ಸಲ್ಲಿಸಿದೆ. ಕ್ಷೇತ್ರದ ಜನರಿಗಾಗಿ ರಾಜಕೀಯ ನಿವೃತ್ತಿಗೂ ಸಿದ್ಧ ಎಂದು ಇಂಡಿ ಶಾಸಕ ( ಯಶವಂತರಾಯಗೌಡ ಪಾಟೀಲ್  ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರ ಹಂತ ಹಂತವಾಗಿ 217 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದೆ. ರಾಜ್ಯದಲ್ಲಿ ರೈತರು …

Read More »

ಚುನಾವಣಾ ಆಯೋಗದಲ್ಲಿ ಯಾಕೆ ಭಿನ್ನಾಭಿಪ್ರಾಯ ಬಂದಿದೆ ಅಂತ ಆಯೋಗವೇ ಸ್ಪಷ್ಟಪಡಿಸಲಿ: ಹೆಚ್‌ಡಿಕೆ

ಬೆಂಗಳೂರು: ಚುನಾವಣಾ ಆಯೋಗದಲ್ಲಿ ಯಾಕೆ ಭಿನ್ನಾಭಿಪ್ರಾಯ ಬಂದಿದೆ ಅಂತ ಆಯೋಗವೇ ಸ್ಪಷ್ಟಪಡಿಸಲಿ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ  ಹೇಳಿದ್ದಾರೆ. ಚುನಾವಣಾ ಆಯೋಗದಲ್ಲಿ ಭಿನ್ನಾಭಿಪ್ರಾಯ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅದು ಅವರಿಗೆ ಸೇರಿದ ಭಿನ್ನಾಭಿಪ್ರಾಯ. ಆ ಮೂವರಲ್ಲಿ ಯಾಕೆ ಈ ವಾತಾವರಣ ಬಂದಿದೆ ಅಂತ ತಿಳಿಸಲಿ. ಆ ಮೂಲಕ ಅವರು ಮೂವರೂ ಸಂಸ್ಥೆಯ ಗೌರವ ಕಾಪಾಡಲಿ ಎಂದರು. ಕಾಂಗ್ರೆಸ್‌ನವರು ಯಾವ ಪುರುಷಾರ್ಥಕ್ಕೆ ಹೋರಾಟ ಮಾಡುತ್ತಿದ್ದಾರೆ? ಅವರ ನಡವಳಿಕೆ ಯಾವ …

Read More »

ಬಾಲ್ಕನಿಯಲ್ಲಿ ಒಣಗಲು ಹಾಕಿದ್ದ ಬಟ್ಟೆ ತೆಗೆಯಲು ಹೋಗಿ 12ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು

ಲಕ್ನೋ: ಒಣಗಲು ಹಾಕಿದ್ದ ಬಟ್ಟೆಗಳನ್ನು ತರಲು ಬಾಲ್ಕನಿಗೆ ತೆರಳಿದ್ದ ವಿದ್ಯಾರ್ಥಿನಿ 12ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ  ಘಾಜಿಯಾಬಾದ್‌ನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಪ್ರಾಚಿ ಎಂದು ಗುರುತಿಸಲಾಗಿದೆ. ಪ್ರಾಚಿ ಸಂಜಯ್ ನಗರದಲ್ಲಿರುವ ಡೆಹ್ರಾಡೂನ್ ಪಬ್ಲಿಕ್ ಸ್ಕೂಲ್‌ನಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ರಾಜ್‌ನಗರ ಎಕ್ಸ್ಟೆನ್ಶನ್‌ನ ನಿವಾಸಿಯಾಗಿದ್ದ ಪ್ರಾಚಿ ಸಾಯುವ ಎರಡು ದಿನಗಳ ಹಿಂದಷ್ಟೇ ಮಹಾರಾಷ್ಟ್ರದ ಶಿರಡಿಯಲ್ಲಿ ನಡೆದ ಸಿಬಿಎಸ್‌ಸಿ ರೋಪ್ ಸ್ಕಿಪ್ಪಿಂಗ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಎರಡು …

Read More »

AI ಕ್ಯಾಮೆರಾ ಯಡವಟ್ಟು – ಗಿಟಾರ್‌ಗೆ ಹೆಲ್ಮೆಟ್ ಹಾಕಿಲ್ಲ ಅಂತ ದಂಡ

ಬೆಂಗಳೂರು: ಟ್ರಾಫಿಕ್ ರೂಲ್ಸ್  ಉಲ್ಲಂಘನೆ ತಡೆಗೆ ಅಳವಡಿಸಲಾಗಿರುವ ಎಐ ಕ್ಯಾಮೆರಾ  ಯಡವಟ್ಟೊಂದನ್ನು ಮಾಡಿದೆ. ಸ್ಕೂಟಿಯಲ್ಲಿ ಕೊಂಡೊಯ್ಯಲಾಗುತ್ತಿದ್ದ ಗಿಟಾರ್ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ಹಾಕಿದೆ. ಸೌವಿಕ್ ದತ್ತ ಎಂಬುವವರು ಸ್ಕೂಟರ್‌ನಲ್ಲಿ ಹೆಬ್ಬಾಳದಿಂದ  ಟಿನ್ ಫ್ಯಾಕ್ಟರಿಗೆ ಕಡೆಗೆ ಹೊರಟಿದ್ದರು. ಈ ವೇಳೆ ಗಿಟಾರ್ ಅನ್ನು ಬೆನ್ನಿಗೆ ಹಾಕಿಕೊಂಡಿದ್ದರು. ಇದನ್ನು ಗಮನಿಸಿದ ಎಐ ಕ್ಯಾಮೆರಾ, ಹಿಂಬದಿಯಲ್ಲಿದ್ದ ಗಿಟಾರ್ ಅನ್ನು ಮನುಷ್ಯ ಎಂದುಕೊಂಡು ಹೆಲ್ಮೆಟ್ ಹಾಕಿಲ್ಲ ಎಂದು ದಂಡ ವಿಧಿಸಿದೆ. ಆನ್‌ಲೈನ್‌ನಲ್ಲಿ ಬೈಕ್ ಸವಾರನಿಗೆ …

Read More »