Breaking News

Laxminews 24x7

ಗದಗ KRIDL AEE ಪರ್ವೇಜ್ ಭೋಪಾಲ್ ರೈಲ್ವೆ ನಿಲ್ದಾಣದ ಸಿಸಿಟಿವಿಯಲ್ಲಿ ಪತ್ತೆ

ಗದಗ: ನಾಪತ್ತೆಯಾಗಿದ್ದ KRIDL ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್  ಪರ್ವೇಜ್ ಮಧ್ಯಪ್ರದೇಶದ ಭೋಪಾಲ್ ರೈಲ್ವೆ ನಿಲ್ದಾಣದ ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿರುವುದು ತನಿಖೆಗೆ ಮಹತ್ವದ ಸುಳಿವು ನೀಡಿದೆ. ಪರ್ವೇಜ್ ಗದಗದಿಂದ ಬೆಂಗಳೂರಿಗೆ, ಬಳಿಕ ಆಂಧ್ರಪ್ರದೇಶದ ವಿಜಯವಾಡ ಹಾಗೂ ಅಲ್ಲಿಂದ ಮಧ್ಯಪ್ರದೇಶದ ಭೋಪಾಲ್‌ಗೆ ತೆರಳಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಮೂಲಕ ಅವರು ಸುಮಾರು 1,200 ಕಿಲೋಮೀಟರ್‌ಗೂ ಹೆಚ್ಚು ಪ್ರಯಾಣಿಸಿರುವ ಸುಳಿವು ಸಿಕ್ಕಿದೆ. ವಿಜಯವಾಡ ತಲುಪಿದ ಬಳಿಕ ಪರ್ವೇಜ್ ಅವರ ಮೊಬೈಲ್ ಲೊಕೇಷನ್ …

Read More »

ಬಸವನ ಬಾಗೇವಾಡಿಯಲ್ಲಿ 3.5 ತೀವ್ರತೆಯ ಭೂಕಂಪನ

ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ  ತಾಲೂಕಿನಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ. ರಾಷ್ಟ್ರೀಯ ಭೂಕಂಪನ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಈ ಬಗ್ಗೆ ಮಾಹಿತಿ ನೀಡಿದೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಸುತ್ತಮುತ್ತಿಲು ಕಂಪನದ ಅನುಭವವಾಗಿದೆ. ತಡರಾತ್ರಿ 2:04ಕ್ಕೆ ಭೂಕಂಪನ ಸಂಭವಿಸಿದ್ದು, ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಮುನ್ನಚ್ಚರಿಕೆಗಾಗಿ ಜಿಲ್ಲಾಡಳಿತಕ್ಕೆ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ಸೂಚನೆ.

Read More »

ಮಂಗಳೂರಿನ MRPLನಲ್ಲಿ ಭಾರಿ ಸ್ಫೋಟದ ಶಬ್ದ

ಮಂಗಳೂರು: ಇಲ್ಲಿನ ಜೋಕಟ್ಟೆ ಬಳಿ ಇರುವ ಎಂಆರ್‌ಪಿಎಲ್‌ನಲ್ಲಿ ಭಾರಿ ಸ್ಫೋಟದ ಶಬ್ದ ಕೇಳಿಬಂದಿದ್ದು, ದಟ್ಟ ಹೊಗೆ ಆವರಿಸಿದೆ. ಮಂಗಳೂರು ರಿಫೈನರಿ & ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನ ಬಾಯ್ಲರ್ ಸ್ಫೋಟಗೊಂಡಿರುವ‌ ಸಾಧ್ಯತೆ ಇದೆ. ಅಕ್ಕಪಕ್ಕದ ಏರಿಯಾಗಳಿಗೆ ಹೊಗೆ ಆವರಿಸಿರುವುದು ಕಂಡುಬಂದಿದೆ.

Read More »

ಸೌಜನ್ಯ ಕೇಸ್: SITಯಿಂದ ನನ್ನ ಕೈಬಿಡಿ ಅಂತ ಎಎಸ್‌ಪಿ ಪತ್ರ

ಬೆಂಗಳೂರು: ಸೌಜನ್ಯ ಕೊಲೆ  ಪ್ರಕರಣದ ಮರುತನಿಖೆಗೂ ಮುನ್ನ ಹಿನ್ನಡೆಯಾಗಿದೆ. ಪ್ರಕರಣದ ತನಿಖೆಗೆ ರಚನೆಯಾದ ಎಸ್‌ಐಟಿ  ತಂಡದಿಂದ ನನ್ನ ಹೆಸರು ಕೈಬಿಡುವಂತೆ ಎಎಸ್‌ಪಿ ವೆಂಕಟೇಶ್ ಪ್ರಸನ್ನ ಪತ್ರ ಬರೆದಿದ್ದಾರೆ. ಸೌಜನ್ಯ ಪ್ರಕರಣ ಮರುತನಿಖೆಗೆ ಎಸ್‌ಐಟಿ ನೇಮಕ ಮಾಡಲಾಗಿದೆ. ಎಸ್‌ಐಟಿ ತಂಡಕ್ಕೆ ಮತ್ತಷ್ಟು ಅಧಿಕಾರಿ, ಸಿಬ್ಬಂದಿ ನಿಯೋಜಿಸಲಾಗಿದೆ. ತನಿಖಾ ಸಹಾಯಕರಾಗಿ 16 ಮಂದಿ ನೇಮಕಗೊಂಡಿದ್ದಾರೆ. ಮಂಗಳೂರು ನಗರ ಸಿಸಿಬಿ ಎಸಿಪಿ ಮನೋಜ್ ಕುಮಾರ್ ನಾಯಕ್, ಬೆಂಗಳೂರು ಸಿಸಿಬಿ ಎಸಿಪಿ ರಾಮಚಂದ್ರ.ಬಿ, ಐಡಿ ಇನ್ಸ್ಪೆಕ್ಟರ್ …

Read More »

ಶಿಕಾರಿಪುರದಿಂದ ‘ಭಾರತ್ ಜೋಡೋ 2.0’ ಪಾದಯಾತ್ರೆಗೆ ಚಾಲನೆ; 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಂಘಟನೆಗೆ ಪ್ಲ್ಯಾನ್

ಶಿವಮೊಗ್ಗ: ಕಾಂಗ್ರೆಸ್  ಸೋತಿರುವ 84 ವಿಧಾನಸಭಾ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಕೆಪಿಸಿಸಿ ಆಯೋಜಿಸಿರುವ ‘ಭಾರತ್ ಜೋಡೋ 2.0’  ಪಾದಯಾತ್ರೆಗೆ ಇಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ಚಾಲನೆ ನೀಡಲಾಯಿತು. ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಪಾದಯಾತ್ರೆ ನಡೆಯುತ್ತಿದ್ದು, 2022ರಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕರ್ನಾಟಕ ಪ್ರವೇಶಿಸಿ ನಾಲ್ಕು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಪಾದಯಾತ್ರೆ ಆಯೋಜಿಸಲಾಗಿದೆ. ಕಾಂಗ್ರೆಸ್ 2023ರ ವಿಧಾನಸಭಾ ಚುನಾವಣೆಯಲ್ಲಿ ಸೋತ 84 ಕ್ಷೇತ್ರಗಳಲ್ಲಿ ಈ …

Read More »

ಕೊಲೆಗೂ ಮುನ್ನ ಬೆಂಗಳೂರಿನಲ್ಲಿ ಕೇತನ್‌ ಕೈಕಾಲು ಮುರಿಸೋಕೆ ಪ್ಲ್ಯಾನ್ – ಚಾರ್ಜ್‌ಶೀಟ್‌ನಲ್ಲಿ ಸತ್ಯ ಬಯಲು

ಪುಣೆ: ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ  ತನಿಖೆಯಲ್ಲಿ ಹಲವು ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿವೆ. ಪುಣೆ ಪೊಲೀಸರು ಸಲ್ಲಿಸಿರುವ 5,053 ಪುಟಗಳ ಆರೋಪಪಟ್ಟಿಯಲ್ಲಿ, ಕೇತನ್‌ನನ್ನು ಕೊಲ್ಲುವ ಪ್ಲ್ಯಾನ್‌ಗೂ ಮುನ್ನ ಆತನ ಕೈಕಾಲು ಮುರಿಸಲು ಬೆಂಗಳೂರಿಗೆ ಕರೆತರುವ ಯೋಜನೆ ಮಾಡಲಾಗಿತ್ತು ಎಂದು ಉಲ್ಲೇಖಿಸಲಾಗಿದೆ. ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ರಿತೇಶ್ ಹಾಂಗೆ ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತನೊಂದಿಗೆ ಈ ಬಗ್ಗೆ ಚರ್ಚಿಸಿದ್ದ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. ಕೊಲೆಗೆ ಮುನ್ನ ಹಲವು ಪ್ಲ್ಯಾನ್ 25 …

Read More »

ಉದ್ಯೋಗ ಖಾತ್ರಿ ನಕಲಿ ಜಿಪಿಎಸ್ ಫೋಟೋ – ತನಿಖೆಗೆ ಈಶ್ವರ ಖಂಡ್ರೆ ಸೂಚನೆ

ಬೆಂಗಳೂರು: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ  ಕೂಲಿ ಕಾರ್ಮಿಕರ ನಕಲಿ ಜಿಪಿಎಸ್ ಫೋಟೋ  ತೆಗೆದು ವಂಚಿಸಲಾಗುತ್ತಿದೆ ಎಂಬ ವರದಿ ಹಿನ್ನೆಲೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ  ತನಿಖೆಗೆ ಆದೇಶ ನೀಡಿದ್ದಾರೆ. ಇಲಾಖೆಯ ಕಾರ್ಯದರ್ಶಿಗಳಿಗೆ ಈ ಸಂಬಂಧ ಲಿಖಿತ ಸೂಚನೆ ನೀಡಿರುವ ಅವರು, ಕೊಪ್ಪಳ ಜಿಲ್ಲೆಯಲ್ಲಿ ಮೇಟಿಗಳು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಕೆಲಸಗಾರರು ಹೋಗದಿದ್ದರೂ ವೀಡಿಯೋ ಚಿತ್ರೀಕರಣ ಮಾಡಿಸಿ ಆ ವೀಡಿಯೋ ಪ್ಲೇ ಆಗುತ್ತಿರುವಾಗ ಮತ್ತೊಂದು ಮೊಬೈಲ್‌ನಲ್ಲಿ …

Read More »

38 ಸಾವಿರ ಕೋಟಿ ಬಾಕಿ ಹಣ ಕೊಡಿ, ಶೇ.70 ರಷ್ಟು ಶಾಸಕರಿಂದ ಕಮಿಷನ್‌ ಕಾಟ: ಸರ್ಕಾರದ ವಿರುದ್ಧ ಸಿಡಿದ ಗುತ್ತಿಗೆದಾರರು

ಬೆಂಗಳೂರು: ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ 1.5 ಲಕ್ಷ ಗುತ್ತಿಗೆದಾರರು ಬಿಲ್ ಪಾವತಿಯಾಗದೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರಕ್ಕೆ ನಮ್ಮ ಕಷ್ಟ ತೀರಿಸಲು ಆಗದಿದ್ದರೆ ನಮಗೆ ಒಂದೊಂದು ಬಾಟಲ್ ವಿಷ ಕೊಟ್ಟುಬಿಡಿ, ಕುಡಿದು ಸತ್ತು ಹೋಗುತ್ತೇವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ರಾಜ್ಯ ಸರ್ಕಾರದ ವಿರುದ್ಧ ನೇರ ಆಕ್ರೋಶ ಹೊರಹಾಕಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ  ಕಾರ್ಯವೈಖರಿ, ಶಾಸಕರ ಕಮಿಷನ್ …

Read More »

ರಾಜ್ಯದ ರೈತರಿಗೆ ಗುಡ್‌ನ್ಯೂಸ್‌ – ಸೂರ್ಯಕಾಂತಿ, ಹೆಸರುಕಾಳು, ಸೋಯಾಬೀನ್ ಖರೀದಿಗೆ ಕೇಂದ್ರ ಒಪ್ಪಿಗೆ

ನವದೆಹಲಿ: ಕನಿಷ್ಠ ಬೆಂಬಲ ಬೆಲೆಯಲ್ಲಿ ಕರ್ನಾಟಕದಲ್ಲಿ ಸೂರ್ಯಕಾಂತಿ, ಹೆಸರುಕಾಳುಸೋಯಾಬೀನ್ ಖರೀದಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಸಚಿವ ಪ್ರಹ್ಲಾದ್‌ ಜೋಶಿ ಈ ವಿಚಾರವನ್ನು ತಿಳಿಸಿ ಕರ್ನಾಟಕದ ರೈತ ಬಾಂಧವರ ಹಿತ ಕಾಯಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮತ್ತೊಂದು ಪ್ರಮುಖ ಹಾಗೂ ರೈತಪರ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ. ಜೋಶಿ ಪೋಸ್ಟ್‌ನಲ್ಲಿ ಏನಿದೆ? 2026-27ರ ಮುಂಗಾರು ಋತುವಿನಲ್ಲಿ …

Read More »

ನಿಮ್ಮ ಜೀವನದಲ್ಲೇ ಒಂದು ಚುನಾವಣೆ ಗೆಲ್ಲೋಕೆ ಆಗಿಲ್ಲ: ಬಿ.ಕೆ.ಹರಿಪ್ರಸಾದ್ ವಿರುದ್ಧ ವಿಜಯೇಂದ್ರ ಕಿಡಿ

ಬೆಂಗಳೂರು: ಬಿಕೆ ಹರಿಪ್ರಸಾದ್‌ರವರ  ಹಿನ್ನೆಲೆ ಏನೆಂದು ಎಲ್ಲರಿಗೂ ಗೊತ್ತಿದೆ. ನಿಮ್ಮ ಜೀವನದಲ್ಲೇ ಒಂದು ಚುನಾವಣೆ ಗೆಲ್ಲೋಕೆ ಆಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ  ತಿರುಗೇಟು ನೀಡಿದ್ದಾರೆ. ಶಿಕಾರಿಪುರದಿಂದ ಕಾಂಗ್ರೆಸ್ ಪಾದಯಾತ್ರೆ ನಡೆಸುವ ವಿಚಾರದ ಕುರಿತು ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಿ.ಕೆ.ಹರಿಪ್ರಸಾದ್ ರವರಿಗೆ ನಮ್ಮ ಬಳ್ಳಾರಿ ಪಾದಯಾತ್ರೆ ಪ್ರೇರಣೆ ಕೊಟ್ಟಿದೆ. ರಾಜ್ಯ ಸರ್ಕಾರದ ಸೊಕ್ಕನ್ಬು ಅಡಗಿಸುವಲ್ಲಿ ನಮ್ಮ ಬಳ್ಳಾರಿ ಪಾದಯಾತ್ರೆ ಯಶಸ್ವಿಯಾಗಿದೆ. ನನ್ನ ಕ್ಷೇತ್ರದಲ್ಲೇ ಬಿ.ಕೆ ಹರಿಪ್ರಸಾದ್ ಪ್ರಾರಂಭ …

Read More »