Breaking News
Home / Laxminews 24x7 (page 30)

Laxminews 24x7

ನಾಮಪತ್ರ ಸಲ್ಲಿಸಲು ‘ಕಾಲ’ ನೋಡಲ್ಲ: ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ: ‘ನಾಮಪತ್ರ ಸಲ್ಲಿಸುವಾಗ ಮೌಢ್ಯ ಅನುಸರಿಸಲ್ಲ. ಒಳ್ಳೆಯ ಕಾಲ, ಕೆಟ್ಟ ಕಾಲ ಎಂಬುದು ಇಲ್ಲ. ನಮ್ಮ ಎಲ್ಲ ಶಾಸಕರು ಲಭ್ಯವಿದ್ದ ದಿನ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಗಳು ಪ್ರಿಯಾಂಕಾ ನಾಮಪತ್ರ ಸಲ್ಲಿಸುವರು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಾವು ಒಳ್ಳೆಯದು ಮಾಡಿದರೆ ಒಳ್ಳೆಯದಾಗುತ್ತದೆ. ಕೆಟ್ಟದ್ದು ಮಾಡಿದರೆ ಕೆಟ್ಟದ್ದಾಗುತ್ತದೆ. ಕಾಲದ ಮೇಲೆ ಯಾವುದೂ ಅವಲಂಬಿತವಲ್ಲ. ಬೇರೆಡೆ ಅಭ್ಯರ್ಥಿಗಳು ನಾಮಪತ್ರ …

Read More »

ಡಾ.ಅಂಜಲಿ ನಾಮಪತ್ರ ಸಲ್ಲಿಕೆ ಏ.16ರಂದು

ಖಾನಾಪುರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಾ.ಅಂಜಲಿ ನಿಂಬಾಳಕರ ಏ.16ರಂದು ಕಾರವಾರದ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಪಕ್ಷದ ಮುಖಂಡ ಭರತೇಶ ತೋರೋಜಿ ಹೇಳಿದರು. ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಡಾ.ಅಂಜಲಿ ಅವರೊಂದಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಮಾಜಿ ಸಚಿವ ಆರ್.ವಿ ದೇಶಪಾಂಡೆ, ಶಾಸಕರಾದ …

Read More »

ಲಾರಿ-ಟ್ರ್ಯಾಕ್ಟರ್ ಮಧ್ಯೆ ಅಪಘಾತ: ಚಾಲಕ ಸಾವು

ಹಿರೇಬಾಗೇವಾಡಿ: ಸಮೀಪದ ಹಲಗಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರ್ಯಾಕ್ಟರ್ ಹಾಗೂ ಲಾರಿ ಮಧ್ಯೆ ಭಾನುವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ತವಾಡ ಗ್ರಾಮದ ಮಲ್ಲಪ್ಪ ದೊಡ್ಡಕಲ್ಲಣ್ಣವರ(41) ಮೃತರು. ಬೆಳಗಾವಿಗೆ ಕೊತ್ತಂಬರಿ ಸೊಪ್ಪನ್ನು ಟ್ರ್ಯಾಕ್ಟರ್‌ನಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ಹಿಂದಿನಿಂದ ಬಂದ ಮಹಾರಾಷ್ಟ್ರ ಮೂಲದ ಲಾರಿ ಡಿಕ್ಕಿ ಹೊಡೆದಿದೆ. ಘಟನಾ ಸ್ಥಳಕ್ಕೆ ಹಿರೇಬಾಗೇವಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಟ್ರ್ಯಾಕ್ಟರ್ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಎರಡೂ ವಾಹನಗಳನ್ನು ತೆರವುಗೊಳಿಸುವ …

Read More »

ಏ.8ರಿಂದ 11ರ ವರೆಗೆ ಜರುಗಲಿದೆ ವಿಧ ದಾಸೋಹಿ ದುರದುಂಡೀಶ್ವರ ಜಾತ್ರೆ

ಮೂಡಲಗಿ: ತಾಲ್ಲೂಕಿನ ಅರಭಾವಿಯ ದುರದುಂಡೀಶ್ವರರ ಜಾತ್ರೆಯು 12ನೇ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಏ.8ರಿಂದ 11ರ ವರೆಗೆ ಜರುಗಲಿದೆ. ಗ್ರಾಮದಲ್ಲಿ ಈಗಾಗಲೇ ಹಬ್ಬದ ವಾತಾವರಣ ಮನೆ ಮಾಡಿದೆ. ಧಾರ್ಮಿಕ ಹಾಗೂ ಐತಿಹಾಸಿಕ ಹಿನ್ನೆಲೆಯಿರುವ ಮಠಗಳಲ್ಲಿ ಒಂದಾಗಿರುವ ಅರಭಾವಿಯ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠವು ಜಾಗೃತ ಸ್ಥಳವಾಗಿದೆ. ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಗಳೊಂದಿಗೆ ತ್ರಿವಿಧ ದಾಸೋಹದ ತಾಣ ಮತ್ತು ಭಾವೈಕ್ಯದ ಕ್ಷೇತ್ರವೆನಿಸಿದೆ. ಐತಿಹ್ಯ: 600 ವರ್ಷಗಳ ಪೂರ್ವ ಇತಿಹಾಸವನ್ನು …

Read More »

ಕಲ್ಲೋಳಿ ಮಹಾಲಕ್ಷ್ಮಿ ಸೊಸೈಟಿಗೆ ₹2.51 ಕೋಟಿ ಲಾಭ: ಈರಣ್ಣ ಕಡಾಡಿ

ಮೂಡಲಗಿ: ‘ಕಲ್ಲೋಳಿಯ ಶ್ರೀ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿ ಸೊಸೈಟಿಯು 2023-24ನೇ ಆರ್ಥಿಕ ವರ್ಷದ ಕೊನೆಯಲ್ಲಿ ₹2.51 ಕೋಟಿ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದು ಸೊಸೈಟಿಯ ಅಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದರು. ಸೊಸೈಟಿಯ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸದ್ಯ ಸೊಸೈಟಿಯಲ್ಲಿ 12,612 ಸದಸ್ಯರಿದ್ದು, ₹20.12 ಲಕ್ಷ ಶೇರು ಬಂಡವಾಳ, ₹6.96 ಕೋಟಿ ಕಾಯ್ದಿಟ್ಟ ನಿಧಿ, ₹71.10 ಕೋಟಿ ಠೇವು ಸಂಗ್ರಹ ಹಾಗೂ ₹66.71 ಕೋಟಿ ಸಾಲವನ್ನು ವಿತರಿಸಲಾಗಿದೆ’ ಎಂದು …

Read More »

ಹುಕ್ಕೇರಿ: ಸ್ಮಶಾನ ಜಾಗದಲ್ಲಿ ಸ್ವಚ್ಛತಾ ಅಭಿಯಾನ

ಹುಕ್ಕೇರಿ: ಪಟ್ಟಣದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನೌಕರರ ಕಾಲೊನಿ ಪಕ್ಕದ ವೀರಶೈವ ಲಿಂಗಾಯತ ಸಮಾಜದ ಸ್ಮಶಾನ (ರುದ್ರಭೂಮಿ) ಜಾಗವನ್ನು ಸಮುದಾಯದ ಜನರು ಭಾನುವಾರ ಸ್ವಚ್ಛಗೊಳಿಸಿದರು. ಬಜಾರ್ ರಸ್ತೆ ಸೇರಿದಂತೆ ವಿವಿಧ ಬಡಾವಣೆಯ ಲಿಂಗಾಯತ ಒಳಪಂಗಡ ಸಮುದಾಯದ ಜನರು ಬೆಳಿಗ್ಗೆ ಸ್ಮಶಾನ ಭೂಮಿಗೆ ಬಂದು ಸ್ವಚ್ಛತಾ ಅಭಿಯಾನ ಹಮ್ಮಿಕೊಂಡರು. ಸ್ಮಶಾನದಲ್ಲಿ ಬೆಳೆದಿದ್ದ ಮುಳ್ಳು ಕಂಟಿ, ಗಿಡಗಂಟಿ, ಹುಲ್ಲು ಸೇರಿದಂತೆ ಕುರುಚಲ ಗಿಡಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿದರು. ಒಣಗಿದ ಗಿಡದ ಬೊಡ್ಡೆ ದಂಡೆಗೆ …

Read More »

ಕೇಜ್ರಿವಾಲ್ ಬಂಧನ ಖಂಡಿಸಿ AAPಯಿಂದ ಸಾಮೂಹಿಕ ಉಪವಾಸ,

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಬಂಧನವನ್ನು ಖಂಡಿಸಿ ಎಎಪಿ ನಾಯಕರು ಭಾನುವಾರ ಜಂತರ್ ಮಂತರ್‌ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಎಎಪಿ ಆಡಳಿತವಿರುವ ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಭಗವಂತ ಮಾನ್ ಅವರು, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಹುಟ್ಟೂರಾದ ಖಟ್ಕರ್ ಕಲಾನ್‌ನಲ್ಲಿ ಸಾಮೂಹಿಕ ಉಪವಾಸದಲ್ಲಿ ಪಾಲ್ಗೊಂಡಿದ್ದಾರೆ. ದೆಹಲಿ ವಿಧಾನಸಭೆ ಸ್ಪೀಕರ್ ರಾಮ್ ನಿವಾಸ್ ಗೋಯೆಲ್, ಡೆಪ್ಯೂಟಿ ಸ್ಪೀಕರ್ ರಾಖಿ ಬಿಲಾ, ಸಚಿವರಾದ ಅತಿಶಿ, ಗೋಪಾಲ್ ರೈ ಮತ್ತು …

Read More »

ನನ್ನದು ಗಜಕೇಸರಿ ಯೋಗ, ಮುಂದೆ ನಾನು ‘ಪ್ರಧಾನಿ’ಯಾದರು ಆಗಬಹುದು :ಸಂಯುಕ್ತ ಪಾಟೀಲ್

ಬಾಗಲಕೋಟೆ : ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆಯ ವಿಚಾರವಾಗಿ ಅಸಮಾಧಾನ ಬಿಜೆಪಿ ಪಕ್ಷ ಅಷ್ಟೆ ಅಲ್ಲದೆ ಕಾಂಗ್ರೆಸ್ ಪಕ್ಷ ಕೂಡ ಇದಕ್ಕೆ ಹೊರತಾಗಿಲ್ಲ. ಏಕೆಂದರೆ ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಶಾಸಕ ವಿಧಾನದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರು ಲೋಕಸಭೆ ಆಕಾಂಕ್ಷಿಯಾಗಿದ್ದರು.   ಆದರೆ ಕಾಂಗ್ರೆಸ್ ಹೈಕಮಾಂಡ್ ಸಚಿವ ಶಿವಾನಂದ್ ಪಾಟೀಲ್ ಅವರ ಪುತ್ರಿ ಸಂಯುಕ್ತ ಪಾಟೀಲ್ ಗೆ ಟಿಕೆಟ್ ನೀಡಿದೆ. ಹೀಗಾಗಿ ಅವರು ಇದೀಗ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. …

Read More »

ನಾಳೆ ಸಂಭವಿಸಲಿದೆ ‘ಖಗೋಳ ವಿಸ್ಮಯ’ : ಎಲ್ಲೆಲ್ಲಿ ಗೋಚರಿಸಲಿದೆ ವರ್ಷದ ಮೊದಲ ‘ಸೂರ್ಯಗ್ರಹಣ’

ನವದೆಹಲಿ : ಏಪ್ರಿಲ್ 8ರ ನಾಳೆ ಸೂರ್ಯಗ್ರಹಣ ಸಂಭವಿಸಲಿದೆ. ಇದು ಈ ವರ್ಷದ ಮೊದಲ ಸೂರ್ಯಗ್ರಹಣವಾಗಿದೆ. ವೈಜ್ಞಾನಿಕ ದೃಷ್ಟಿಕೋನದಿಂದ, ಸೂರ್ಯಗ್ರಹಣವು ಕೇವಲ ಖಗೋಳ ಘಟನೆಯಾಗಿದೆ, ಆದರೆ ಧಾರ್ಮಿಕ ದೃಷ್ಟಿಕೋನದಿಂದ ಇದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಜ್ಯೋತಿಷ್ಯದ ಪ್ರಕಾರ, ಗ್ರಹಣ ಸಮಯದಲ್ಲಿ ನಮ್ಮ ಸುತ್ತಲಿನ ಎಲ್ಲವೂ ಪರಿಣಾಮ ಬೀರುತ್ತದೆ. ಸೂರ್ಯಗ್ರಹಣಕ್ಕೂ ಮೊದಲು, ವರ್ಷದ ಮೊದಲ ಚಂದ್ರ ಗ್ರಹಣವು ಮಾರ್ಚ್ 25 ರಂದು ಗೋಚರಿಸಿತು, ಇದು ಭಾರತದಲ್ಲಿ ಗೋಚರಿಸಲಿಲ್ಲ. ವಿಶೇಷವೆಂದರೆ ಎರಡೂ ಗ್ರಹಣ ದಿನಗಳು …

Read More »

ಕೇಸರಿ ಪಡೆಗೆ ಕ್ಯಾರೆ ಎನ್ನದ ಈಶ್ವರಪ್ಪ..ಶಿವಮೊಗ್ಗದಲ್ಲಿ ಶಕ್ತಿ ಪ್ರದರ್ಶನ: ಅಪ್ಪ-ಮಕ್ಕಳ ವಿರುದ್ಧ ವಾಗ್ದಾಳಿ

ಶಿವಮೊಗ್ಗ: ಪುತ್ರನಿಗೆ ಟಿಕೆಟ್ ಕೈತಪ್ಪಿದ ಹಿನ್ನಲೆ ಪಕ್ಷೇತರವಾಗಿ ಕಣಕ್ಕಿಳಿದಿರುವ ಕೆಎಸ್ ಈಶ್ವರಪ್ಪ (K. S. Eshwarappa) ಅವರು ಶಿವಮೊಗ್ಗ(Shivamogga)ದಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಶಿವಮೊಗ್ಗ ನಗರದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘​ಧರ್ಮದ ಪರವಾಗಿರುವ ಈಶ್ವರಪ್ಪ ಗೆಲ್ತಾರೆ. ಶಿವಮೊಗ್ಗದಲ್ಲಿ ನಾನು ಯಾರಿಗೂ ಅನ್ಯಾಯ ಮಾಡಿಲ್ಲ ಎಂದು ಬಿಎಸ್‌ವೈ ಕುಟುಂಬದ ವಿರುದ್ದ ಮತ್ತೆ ವಾಗ್ದಾಳಿ ನಡೆಸಿದರು.   ನಿಮ್ಮ ಒಬ್ಬ ಮಗ ಎಂಪಿ, ಒಬ್ಬ ಎಂಎಲ್‌ಎ ಅವನೇ ರಾಜ್ಯಾಧ್ಯಕ್ಷ, ಕರ್ನಾಟಕದಲ್ಲಿ ಇವರೇ …

Read More »