Breaking News
Home / 2021 / ಮೇ / 08 (page 3)

Daily Archives: ಮೇ 8, 2021

ಮನೆಗೆ ನುಗ್ಗಿದ ಚಿರತೆ, ಅಡುಗೆ ಮನೆಯ ಶೆಲ್ಫ್ ಮೇಲೆ

ಚಿತ್ರದುರ್ಗ: ತಾಲೂಕಿನ ಮುದ್ದಾಪುರ ಗ್ರಾಮದ ಮನೆಯೊಂದಕ್ಕೆ ನಸುಕಿನಲ್ಲೇ ನುಗ್ಗಿದ ಚಿರತೆಯೊಂದನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಬೆಳಗ್ಗೆ 5.30 ರ ವೇಳೆಗೆ ಮುದ್ದಾಪುರದ ಚಿದಾನಂದ ಎಂಬುವವರ ಮನೆಗೆ ನುಗ್ಗಿದ ಚಿರತೆ, ಅಡುಗೆ ಮನೆಯ ಶೆಲ್ಫ್ ಮೇಲೆ ಪಾತ್ರೆ, ಡಬ್ಬಗಳ ನಡುವೆ ಬಚ್ಚಿಟ್ಟುಕೊಂಡಿತ್ತು. ಮನೆಯೊಳಗೆ ಚಿರತೆ ಕಂಡು ಮನೆಯವರು ಆತಂಕಗೊಂಡು, ಹೊರಗೆ ಓಡಿ ಬಂದು ಬಾಗಿಲು ಬಂದ್ ಮಾಡಿದ್ದರು. ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿ …

Read More »

ಪಿತೃದೋಷ ಇದೆ ಎಂದು ಜ್ಯೋತಿಷಿ ಹೇಳಿದ ಮಾತಿಗೆ ತಂದೆ-ತಾಯಿಯನ್ನೇ ಮುಗಿಸಿದ್ದ.!

ಬೆಂಗಳೂರು: ಮೊನ್ನೆ ಬೆಂಗಳೂರಿನ ಪೀಣ್ಯದ ಕರಹೋಬನಹಳ್ಳಿಯಲ್ಲಿ ಕೆಎಎಸ್ ಅಧಿಕಾರಿ ಕಚೇರಿಯಲ್ಲಿನ ಸೆಕ್ಯುರಿಟಿ ದಂಪತಿ ಕೊಲೆ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಅವರ ಮಗನಿಂದ ಶಾಕಿಂಗ್ ವಿಚಾರ ಹೊರಬಿದ್ದಿದೆ. ಮೃತ ದಂಪತಿ ಮಗನಿಗೆ ಜ್ಯೋತಿಷಿ ಒಬ್ಬ ನಿನಗೆ ಪಿತೃದೋಷ ಇದೆ ಅಂತ ಹೇಳಿದ್ದನ್ನ ಕೇಳಿದ್ದ ಮಗ ಕಡೆಗೆ ಆ ದೋಷ ಪರಿಹಾರಕ್ಕೆ ತಂದೆ ತಾಯಿಯನ್ನೆ ಕೊಲೆ‌ಮಾಡಿದ್ದಾನೆ. ನೀನೂ ಚೆನ್ನಾಗಿ ಇರ್ಬೇಕು ಅಂದ್ರೆ ನಿಮ್ಮ ತಂದೆ ಸಾಯಬೇಕು ಎಂದು ಶಾಸ್ತ್ರ ಹೇಳಿದ್ದರಂತೆ. ಇದೇ ವಿಚಾರಕ್ಕೆ ತಂದೆ …

Read More »

ಹಲವು ದಿನಗಳ ಬಳಿಕ ಬಹಿರಂಗವಾಗಿ ಕಾಣಿಸಿಕೊಂಡ ಶಾಸಕ ರಮೇಶ್ ಜಾರಕಿಹೊಳಿ‌

ಬೆಳಗಾವಿ/ಗೋಕಾಕ: ಕಳೆದ ಕೆಲವು ದಿನಗಳಿಂದ ಕೋವಿಡ್ ಸೋಂಕಿಗೆ ತುತ್ತಾಗಿ ವಿಶ್ರಾಂತಿ ಪಡೆಯುತ್ತಿದ್ದ ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಶನಿವಾರ ಕೋವಿಡ್ ನಿಯಂತ್ರಣದಲ್ಲಿ ಸಭೆ ನಡೆಸುವ ಮೂಲಕ ಬಹಿರಂಗವಾಗಿ ಕಾಣಿಸಿಕೊಂಡರು. ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ರಮೇಶ್ ಜಾರಕಿಹೊಳಿ ಅವರು ಸೋಮವಾರದಿಂದ ಗೋಕಾಕ ನಗರ ಮತ್ತು ತಾಲೂಕು ಪ್ರದೇಶದಲ್ಲಿ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಸೂಚಿಸಿದರು. ಗೋಕಾಕ್ ತಾಲೂಕಿನಾದ್ಯಂತ ಲಾಕ್ ಡೌನ್ …

Read More »

ಆಕ್ಸಿಜನ್​ ದುಬಾರಿ ಬೆಲೆಗೆ ಮಾರಾಟ: ಆರೋಪಿ ಅರೆಸ್ಟ್​​

ಬೆಂಗಳೂರು: ಕೊರೊನಾ ಬಿಕ್ಕಟ್ಟು ಕೆಲ ಖದೀಮರ ಪಾಲಿಗೆ ಬಂಡವಾಳವಾಗಿ ಬಿಟ್ಟಿದ್ದೆ. ರಾಜ್ಯದಲ್ಲಿ ಬೆಡ್​ ಹಾಗೂ ರೆಮಿಡಿಸಿವರ್​​ನ್ನ ಕಾಳಸಂತೆಯಲ್ಲಿ ಮಾರಿದ್ದಾಯ್ತು. ಇದೀಗ ಪ್ರಾಣವಾಯುವಿನ ಮೇಲೆ ಖದೀಮರ ಕಣ್ಣು ಬಿದ್ದಿದೆ. ನಗರದಲ್ಲಿ ದುಬಾರಿ ಬೆಲೆಗೆ ಆಕ್ಷಿಜನ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರವಿಕುಮಾರ್ ಬಂಧಿತ ಆರೋಪಿ ಖಾಸಗಿ ಗ್ಯಾಸ್​ ಏಜೆನ್ಸಿಯಲ್ಲಿ ಬ್ರಾಂಚ್​ ಇನ್ಚಾರ್ಜ್​ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಆಕ್ಸಿಜನ್​ನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. 47‌ಲೀಟರ್ ಆಕ್ಸಿಜನ್​ಗೆ …

Read More »

ಬಳ್ಳಾರಿ: ಕಾಳಸಂತೆಯಲ್ಲಿ ರೆಮ್‌ಡಿಸಿವಿರ್ ಮಾರಾಟ, ವ್ಯಕ್ತಿ ಬಂಧನ

ಬಳ್ಳಾರಿ: ನಗರದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ರೆಮ್‌ಡಿಸಿವಿರ್ ಲಸಿಕೆಗಳನ್ನು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಹೇಳಿದರು. ಸುದ್ದಿಗಾರರೊಂದಿಗೆ ಶನಿವಾರ ಅವರು ಮಾತನಾಡಿ, ರೆಮ್‌ಡಿಸಿವಿರ್ ದಂಧೆ ನಡೆಸುತ್ತಿರುವ ಬಗ್ಗೆ ಬಂದ ಮಾಹಿತಿ ಅನ್ವಯ ದಾಳಿ ಕಾರ್ಯಾಚರಣೆ ನಡೆಸಿ ಆರು ಡೋಸ್ ರೆಮ್ ಲಸಿಕೆ ವಶಪಡಿಸಿಕೊಳ್ಳಲಾಗಿದೆ.‌ ರೆಮ್ ಡಿಸಿವಿರ್ ಬ್ಲಾಕ್ ದಂಧೆ ನಡೆಸುತ್ತಿದ್ದ ಕಿಶೋರ್ ಕುಮಾರ್ ಎನ್ನುವ ವ್ಯಕ್ತಿಯನ್ನು ಕೂಡ ವಶಕ್ಕೆ ಪಡೆಯಲಾಗಿದೆ ಎಂದರು. ₹3 …

Read More »

ಹಿಮಾಚಲಕ್ಕೆ ಹೋಗಲು ಬಿಗ್ ಬಿ, ಟ್ರಂಪ್ ಹೆಸರಿನಲ್ಲಿ ನಕಲಿ ಇ-ಪಾಸ್ : FIR ದಾಖಲು

ಶಿಮ್ಲಾ : ಹಿಮಾಚಲಕ್ಕೆ ಪ್ರವಾಸ ಕೈಗೊಳ್ಳಲು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಹೆಸರಿನಲ್ಲಿ ನಕಲಿ ಇ-ಪಾಸ್ ನೋಂದಣಿ ಮಾಡಲಾಗಿದ್ದು, ಆರೋಪಿ ವಿರುದ್ಧ FIR ದಾಖಲಾಗಿದೆ. ಹಿಮಾಚಲ ಪ್ರದೇಶ ಸರ್ಕಾರವು ಕೋವಿಡ್ ಸಮಯದಲ್ಲಿ ಪ್ರವಾಸ ಕೈಗೊಳ್ಳುವ ಪ್ರವಾಸಿಗರಿಗೆ ಇ-ಪಾಸ್ ಕಡ್ಡಾಯ ಮಾಡಿದೆ. ಈ ವೇಳೆ ಇಬ್ಬರು ಖ್ಯಾತ ನಾಮರ ಹೆಸರುಗಳನ್ನು ಬಳಿಸಿಕೊಂಡು, ಈ ಇಬ್ಬರು ಚತ್ತೀಸ್ ಗಡದಿಂದ ಶಿಲ್ಲಾಕ್ಕೆ ಪ್ರವಾಸ ಕೈಗೊಳ್ಳುತ್ತಿದ್ದಾರೆ …

Read More »

ಇದೆಂತಹ ಲಾಕ್ ಡೌನ್ ಗೈಡ್ಲೈನ್ಸ್: ಕೊರೊನಾ ಚೈನ್ ಬ್ರೇಕ್ ಮಾಡುವ ಸದುದ್ದೇಶ ಇಲ್ಲವೇ?

ಜನತಾ ಕರ್ಫ್ಯೂ ಒಂದು ವಾರದಿಂದ ಜಾರಿಯಲ್ಲಿದೆ, ನಿರೀಕ್ಷಿತ ಪ್ರಮಾಣದಲ್ಲಿ ಸಾರ್ವಜನಿಕರು ಇದಕ್ಕೆ ಸ್ಪಂದಿಸುತ್ತಿಲ್ಲ ಎಂದು ಖುದ್ದು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಹಾಗಾಗಿ, ಕಠಿಣ ಕ್ರಮ ಅನಿವಾರ್ಯ ಎಂದಿದ್ದಾರೆ. ಸಿಎಂ ಹೇಳಿಕೆಯ ನಂತರ, ಲಾಕ್ ಡೌನ್ ಘೋಷಣೆಯಾಗಬಹುದು ಎಂದು ಬೆಳಗ್ಗೆಯಿಂದಲೇ ನಿರೀಕ್ಷಿಸಲಾಗಿತ್ತು. ಈ ಬಾರಿ ಲಾಕ್ ಡೌನ್ ನಲ್ಲಿ ಬಿಗಿಯಾದ ಮಾರ್ಗಸೂಚಿ ಇರಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಜನತಾ ಕರ್ಫ್ಯೂನಲ್ಲಿದ್ದ ಮಾರ್ಗಸೂಚಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ಲಾಕ್ ಡೌನ್ ಗೈಡ್ಲೈನ್ಸ್ ಅನ್ನು ಕಟ್ …

Read More »

ಜಗತ್ತಿನ ದುಬಾರಿ ಕೋವಿಡ್ ಲಸಿಕೆ ಫೈಜರ್..!

ಮಾರುಕಟ್ಟೆಗಳಲ್ಲಿ ಸಾಮಾನ್ಯವಾಗಿ ಎಲ್ಲಾ ವಸ್ತುಗಳಲ್ಲಿ ಕೆಳ, ಮಧ್ಯಮ ಹಾಗೂ ಉನ್ನತ ಮಟ್ಟದ್ದು ಎನ್ನುವ ವಿಭಾಗಗಳಿರುತ್ತವೆ. ಅದು ಈಗ ಲಸಿಕೆಯ ವಿಚಾರದಲ್ಲಿಯೂ ಕೂಡ ಆಗುತ್ತಿದೆ ಎನ್ನುವುದು ದುರಂತ. ಅಮೆರಿಕಾದಲ್ಲಿ ಈ ರೀತಿಯ ಬೆಳವಣಿಗೆ ಕಂಡು ಬರುತ್ತಿರುವುದು ಜಾಗತಿಕ ಮಟ್ಟದಲ್ಲಿ ಈಗ ಸುದ್ದಿಯಾಗುತ್ತಿದೆ. ಜಾನ್ಸನ್ ಲಸಿಕೆಯನ್ನು ಪಡೆದುಕೊಂಡವ ಸಾಮಾನ್ಯ, ಮಾಡೆರ್ನಾ ಲಸಿಕೆಯನ್ನು ನೀವು ಸ್ವೀಕಾರ ಮಾಡಿದರೆ ನಿಮ್ಮನ್ನು ಮಧ್ಯಮ ವರ್ಗದವರು ಎಂದು ಪರಿಗಣಿಸಲಾಗುತ್ತಿದೆ. ಹಾಗೂ ಫೈಜರ್ ಲಸಿಕೆಯನ್ನು ನೀವು ತೆಗೆದುಕೊಂಡರೇ, ನಿಮ್ಮನ್ನು ಮೇಲ್ವರ್ಗದವರು …

Read More »

ಹೊಸ ಅವತಾರದಲ್ಲಿ ಲಗ್ಗೆಯಿಡುತ್ತಿದೆ ಪಬ್ ಜಿ: ಗೇಮ್

ಬೆಂಗಳೂರು: ಗೇಮಿಂಗ್ ಪ್ರಿಯರಿಗೆ ಸಂತಸದ ವಿಚಾರವೊಂದು ಹೊರಬಿದ್ದಿದ್ದು ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಎಂಬ ಹೆಸರಿನಲ್ಲಿ ದೇಸಿ ಅವತಾರದ ಪಬ್ ಜಿ ಗೇಮ್ ಭಾರತಕ್ಕೆ ಲಗ್ಗೆಯಿಡುತ್ತಿದೆ. ದಕ್ಷಿಣ ಕೊರಿಯಾ ಮೂಲದ ಕ್ರಾಫ್ಟನ್ ಸಂಸ್ಥೆಯು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಶೀಘ್ರದಲ್ಲಿ ಅತ್ಯುನ್ನತ ಗುಣಮಟ್ಟದೊಂದಿಗೆ ಹೊಸ ಮಾದರಿಯ ಪಬ್ ಜಿ ಬಳಕೆದಾರರನ್ನು ತಲುಪಲಿದೆ ಎಂದು ತಿಳಿಸಿದೆ. ಗಮನಿಸಬೇಕಾದ ಅಂಶವೆಂದರೇ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಎಂಬ ಹೆಸರಿನಲ್ಲಿ ಈಗಾಗಲೇ ವೆಬ್ …

Read More »

ತರಕಾರಿ ಅಂಗಡಿಯನ್ನು ಕಾಲಿನಿಂದ ಒದ್ದು ದರ್ಪ ಮೆರೆದ ಪೊಲೀಸ್ ಅಧಿಕಾರಿ : ಅಮಾನತು

ನವದೆಹಲಿ : ಪಂಜಾಬಿನ ಫಗ್ವಾರ ಪ್ರದೇಶದ ಪೊಲೀಸ್ ಅಧಿಕಾರಿಯೊಬ್ಬ ತರಕಾರಿ ಮಾರಾಟ ಮಳಿಗೆಯನ್ನು ಕಾಲಿನಿಂದ ಜಾಡಿಸಿರುವ ಘಟನೆ ನಡೆದಿದ್ದು, ಆ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಫಗ್ವಾರ್ ಸ್ಟೇಷನ್ ಹೌಸ್ ಆಫೀಸರ್ ನವದೀಪ್ ಸಿಂಗ್ ತರಕಾರಿ ಅಂಗಡಿಯನ್ನು ಕಾಲಿನಿಂದ ಜಾಡಿಸಿ ದರ್ಪ ತೋರಿರುವ ಅಧಿಕಾರಿ. ಪೊಲೀಸ್ ಅಧಿಕಾರಿಯ ಈ ದರ್ಪದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ. ಇನ್ನು ನವದೀಪ್ ಸಿಂಗ್ ಮೇಲೆ ಕಠಿಣ ಕ್ರಮ ಕೈಗೊಂಡಿರುವ …

Read More »