Breaking News
Home / ರಾಜ್ಯ / ಇದೆಂತಹ ಲಾಕ್ ಡೌನ್ ಗೈಡ್ಲೈನ್ಸ್: ಕೊರೊನಾ ಚೈನ್ ಬ್ರೇಕ್ ಮಾಡುವ ಸದುದ್ದೇಶ ಇಲ್ಲವೇ?

ಇದೆಂತಹ ಲಾಕ್ ಡೌನ್ ಗೈಡ್ಲೈನ್ಸ್: ಕೊರೊನಾ ಚೈನ್ ಬ್ರೇಕ್ ಮಾಡುವ ಸದುದ್ದೇಶ ಇಲ್ಲವೇ?

Spread the love

ಜನತಾ ಕರ್ಫ್ಯೂ ಒಂದು ವಾರದಿಂದ ಜಾರಿಯಲ್ಲಿದೆ, ನಿರೀಕ್ಷಿತ ಪ್ರಮಾಣದಲ್ಲಿ ಸಾರ್ವಜನಿಕರು ಇದಕ್ಕೆ ಸ್ಪಂದಿಸುತ್ತಿಲ್ಲ ಎಂದು ಖುದ್ದು ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ. ಹಾಗಾಗಿ, ಕಠಿಣ ಕ್ರಮ ಅನಿವಾರ್ಯ ಎಂದಿದ್ದಾರೆ.

ಸಿಎಂ ಹೇಳಿಕೆಯ ನಂತರ, ಲಾಕ್ ಡೌನ್ ಘೋಷಣೆಯಾಗಬಹುದು ಎಂದು ಬೆಳಗ್ಗೆಯಿಂದಲೇ ನಿರೀಕ್ಷಿಸಲಾಗಿತ್ತು. ಈ ಬಾರಿ ಲಾಕ್ ಡೌನ್ ನಲ್ಲಿ ಬಿಗಿಯಾದ ಮಾರ್ಗಸೂಚಿ ಇರಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಜನತಾ ಕರ್ಫ್ಯೂನಲ್ಲಿದ್ದ ಮಾರ್ಗಸೂಚಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿ ಲಾಕ್ ಡೌನ್ ಗೈಡ್ಲೈನ್ಸ್ ಅನ್ನು ಕಟ್ ಎಂಡ್ ಪೇಸ್ಟ್ ಮಾಡಲಾಗಿದೆ.

 

ಕೊರೊನಾ ಚೈನ್ ಬ್ರೇಕ್ ತಪ್ಪಿಸಲು ಲಾಕ್ ಡೌನ್ ಅನಿವಾರ್ಯ ಎನ್ನುವುದು ತಜ್ಞರ ಅಭಿಪ್ರಾಯವಾಗಿದ್ದರೂ, ಸರಕಾರ ಈ ವಿಚಾರದಲ್ಲಿ ವಸ್ತುನಿಷ್ಠ ಪ್ರಯತ್ನವನ್ನು ಮಾಡುತ್ತಿದೆಯೇ ಎನ್ನುವ ಪ್ರಶ್ನೆ ಕಾಡುವುದು ಲಾಕ್ ಡೌನ್ ಮಾರ್ಗಸೂಚಿಗಳು.

ಕಳೆದ ಮಾರ್ಚ್ ಅಂತ್ಯದಲ್ಲಿ ಪ್ರಧಾನಿ ಘೋಷಿಸಿದ್ದ ಲಾಕ್ ಡೌನ್ ನಿಯಮಗಳು ಎಷ್ಟು ಕಟ್ಟುನಿಟ್ಟಾಗಿ ಇದ್ದವು, ಅದೇ ರೀತಿಯ ನಿಯಮಗಳು ಈ ಬಾರಿ ಬರಬಹುದು ಎನ್ನುವ ಊಹೆ ತಪ್ಪಾಗಿದೆ. ಬದಲಿಗೆ, ಏನಾದರೂ ನೆಪ ಹೇಳಿ ಜನರಿಗೆ ಮನೆಯಿಂದ ಹೊರಬರಲು ಸರಕಾರವೇ ಅವಕಾಶ ಕೊಟ್ಟಂತಾಗಿದೆ.

 

ಲಾಕ್‌ಡೌನ್‌ನಲ್ಲಿ ಪೊಲೀಸರಿಗೆ ಫ್ರೀಹ್ಯಾಂಡ್ ನೀಡಿದ್ದು ಅಪರಾಧ ಎಂದು ಬಿಂಬಿಸಲಾಗಿತ್ತು

ಲಾಕ್‌ಡೌನ್‌ನಲ್ಲಿ ಪೊಲೀಸರಿಗೆ ಫ್ರೀಹ್ಯಾಂಡ್ ನೀಡಲಾಗಿದೆ. ಕಳೆದ ವರ್ಷದ ಲಾಕ್‌ಡೌನ್‌ ನೆನಪಿಸಿಕೊಳ್ಳುವುದಾದರೆ, ಫ್ರೀಹ್ಯಾಂಡ್ ಕೊಟ್ಟಿದ್ದೇ ಮಹಾಪರಾಧ ಎಂದು ವಿರೋಧ ಪಕ್ಷಗಳು ಬಿಂಬಿಸಿದ್ದವು. ಮನೆಯಿಂದ ಸುಮ್ಮನೆ ಹೊರಗೆ ಬರುವಂತಿಲ್ಲ, ಸುಮ್ಮನೆ ಓಡಾಡಿದರೆ ಬೀಳುತ್ತೆ ಫೈನ್ ಎಂದು ಮುಖ್ಯಮಂತ್ರಿಗಳು ಹೇಳಿಕೆಯನ್ನು ನೀಡಿದ್ದಾರೆ. ಆದರೆ, ಜನರು ಇದಕ್ಕೆ ಕ್ಯಾರೇ ಅನ್ನುತ್ತಾರಾ ಎನ್ನುವುದು ಸರಕಾರಕ್ಕೆ ಇಷ್ಟಾದರೂ ಪಾಠ ಕಲಿಯಲಿಲ್ಲ.

ಟ್ಯಾಕ್ಸಿ ಮತ್ತು ಆಟೋ ರಿಕ್ಷಾಗಳು ತುರ್ತು ಸಂದರ್ಭಗಳಲ್ಲಿ ಇಳಿಯಬಹುದು

ಟ್ಯಾಕ್ಸಿ ಮತ್ತು ಆಟೋ ರಿಕ್ಷಾಗಳು ತುರ್ತು ಸಂದರ್ಭಗಳಲ್ಲಿ ಹಾಗೂ ಮಾರ್ಗಸೂಚಿಯಲ್ಲಿ ಅನುಮತಿಸಿದ ರೀತಿಯಲ್ಲಿ ಸಂಚರಿಸಲು ಅವಕಾಶವಿದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಆಹಾರ ಮಳಿಗೆಗಳು ಪಾರ್ಸೆಲ್ ಹಾಗೂ ಹೋಂ ಡೆಲಿವರಿ ಸೇವೆಗಳನ್ನು ಮಾತ್ರ ಒದಗಿಸಲು ಅನುಮತಿಸಲಾಗುವುದು. ಇವೆಲ್ಲಾ ಹೊಸ ಮಾರ್ಗಸೂಚಿಯಲ್ಲಿರುವ ಅಂಶಗಳು, ಇದು ಈಗಾಗಲೇ ಜಾರಿಯಲ್ಲಿದೆ.

ಸಿನೆಮಾ ಹಾಲ್‌ಗಳು, ಶಾಪಿಂಗ್ ಮಾಲ್‌ಗಳು, ಜಿಮ್ನೇಸಿಯಂಗಳು ಬಂದ್

ಸಿನೆಮಾ ಹಾಲ್‌ಗಳು, ಶಾಪಿಂಗ್ ಮಾಲ್‌ಗಳು, ಜಿಮ್ನೇಸಿಯಂಗಳು, ಕ್ರೀಡಾ ಸಂಕೀರ್ಣಗಳು, ಕ್ರೀಡಾಂಗಣ, ಈಜುಕೊಳ, ಉದ್ಯಾನವನಗಳು, ಮನರಂಜನಾ ಪಾರ್ಕ್, ಕ್ಲಬ್, ಥಿಯೇಟರ್ , ಬಾರ್ ಮತ್ತು ಸಭಾಂಗಣ, ಸಮುದಾಯ ಭವನಗಳಂತಹ ಸ್ಥಳಗಳು ಮುಚ್ಚಲಿವೆ. ಧಾರ್ಮಿಕ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಲಾಗಿದೆ. MRP ಅಂಗಡಿಯಲ್ಲಿ ಪಾರ್ಸೆಲಿಗೆ ಅವಕಾಶ ನೀಡಲಾಗಿದೆ. ಮದುವೆಗೆ ಐವತ್ತು ಜನರಿಗೆ ಅವಕಾಶ. ಇದರಲ್ಲೂ ಏನೂ ಬದಲಾವಣೆಯಾಗಿಲ್ಲ.

ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕ್ವಾರಂಟೈನ್‌ಗೆ ಒಳಪಡಿಸುವ ಬಗ್ಗೆ ಚಕಾರವಿಲ್ಲ

ಅಂತರ್ ಜಿಲ್ಲಾ ಓಡಾಟಕ್ಕೆ ಅವಕಾಶವಿಲ್ಲ, ಆದರೆ ಜಿಲ್ಲೆಯೊಳಗೆ ಸಂಚಾರಕ್ಕೆ ಅವಕಾಶವಿದೆ. ಅಂತರ್ ರಾಜ್ಯ ಅಥವಾ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ನಿರ್ಬಂಧವಿಲ್ಲ. ಅಂತರ್ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕ್ವಾರಂಟೈನ್‌ಗೆ ಒಳಪಡಿಸುವ ಬಗ್ಗೆ ಮಾರ್ಗಸೂಚಿಯಲ್ಲಿ ಚಕಾರವೆತ್ತಲಿಲ್ಲ. ಉತ್ಪಾದನಾ ಘಟಕಗಳಿಗೆ ನಿರ್ಬಂಧಿತ ಅವಕಾಶ, ಕಟ್ಟಡ ಕಾಮಗಾರಿಗೆ ಅವಕಾಶ, ಇ-ಕಾಮರ್ಸ್ , ಹೋಮ್ ಡೆಲಿವರಿಗೆ ಅವಕಾಶವನ್ನು ನೀಡಲಾಗಿದೆ. ಇಲ್ಲೂ ನೋ ಚೇಂಜಸ್

ಇದೆಂತಹ ಲಾಕ್ ಡೌನ್ ಮಾರ್ಗಸೂಚಿ: ಕೊರೊನಾ ಚೈನ್ ಬ್ರೇಕ್ ಮಾಡುವ ಸದುದ್ದೇಶ ಇಲ್ಲವೇ?

ತಳ್ಳುವ ಗಾಡಿಗಳಿಗೆ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಅವಕಾಶ. ದಿನಸಿ , ಮಾಂಸ , ಹಣ್ಣು, ತರಕಾರಿ ಅಂಗಡಿ ತೆರೆಯಲು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಅವಕಾಶ. ಹಾಪ್ ಕಾಮ್ಸ್, ಹಾಲಿನ ಬೂತ್ ಎಂದಿನಂತೆ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ವ್ಯಾಪಾರ ಮಾಡಬಹುದು. ಇವೆಲ್ಲವೂ, ಈಗ ಜಾರಿಯಲ್ಲಿರುವ ನಿಯಮಗಳೇ. ಹಾಗಾಗಿ, ಲಾಕ್ ಡೌನ್ ಮಾರ್ಗಸೂಚಿಯಲ್ಲಿ ಅಂತಹ ಬದಲಾವಣೆ ಏನೂ ಇಲ್ಲ. ಬಹುಶಃ ಕೇಂದ್ರದ ಒತ್ತಡಕ್ಕೆ ಯಡಿಯೂರಪ್ಪ ಸರಕಾರ ಮಣಿದಿರಬಹುದು.


Spread the love

About Laxminews 24x7

Check Also

ಅಧಿಕಾರಕ್ಕೆ ಬಂದ 2-3 ತಿಂಗಳಲ್ಲಿ ಕಾಡುಗೊಲ್ಲರಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ-ಕುಮಾರಸ್ವಾಮಿ

Spread the love ಚಿತ್ರರ್ದು, : ರಾಜ್ಯದಲ್ಲಿ ಮಹಿಳೆಯರಿಗೆ 2 ಸಾವಿರ ಹಣ ಕೊಟ್ಟು, ಕುಟುಂಬದ ಮುಖ್ಯಸ್ಥರಿಂದ 4-5 ಸಾವಿರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ