Breaking News

ಮೂರು ತಿಂಗಳಿನಿಂದ ಸಿಗದ ವೇತನ: ರಾಜ್ಯಾದ್ಯಂತ ಇಂದು ರಾತ್ರಿಯಿಂದ ಆಂಬುಲೆನ್ಸ್ ಸೇವೆ ಸ್ಥಗಿತಗೊಳಿಸಿ ಮುಷ್ಕರ../

Spread the love

ಬೆಂಗಳೂರು: ಕಳೆದ ಮೂರು ತಿಂಗಳಿನಿಂದ ವೇತನ ನೀಡದ ಕಾರಣ ಆರೋಗ್ಯ ಕವಚ 108 ಆಂಬುಲೆನ್ಸ್ ಸಿಬ್ಬಂದಿ ಮುಷ್ಕರಕ್ಕೆ ಸಜ್ಜಾಗಿದ್ದಾರೆ.

ಮೇ 6ರ ರಾತ್ರಿ 8 ಗಂಟೆಯಿಂದ ರಾಜ್ಯವ್ಯಾಪಿ ಆಂಬುಲೆನ್ಸ್ ಸೇವೆಗಳನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕಳೆದ ಫೆಬ್ರವರಿ, ಮಾರ್ಚ್, ಏಪ್ರಿಲ್ ತಿಂಗಳ ವೇತನ ನೀಡದೆ ಬಾಕಿ ಉಳಿಸಿಕೊಳ್ಳಲಾಗಿದೆ.ಜಿವಿಕೆ ಸಂಸ್ಥೆ ಈಗಾಗಲೇ ಡಿಸೆಂಬರ್, ಜನವರಿ ತಿಂಗಳ ವೇತನವನ್ನು 30 ಸಾವಿರ ರೂ. ಕಡಿತ ಮಾಡಿ ಕೇವಲ 13,000 ರೂ. ನೀಡಿದೆ.

 

ಹೀಗಾಗಿ ಸೋಮವಾರ ಸಂಜೆಯೊಳಗೆ ವೇತನ ಪಾವತಿಸುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗಿದ್ದು, ಕಡಿತಗೊಳಿಸಿದ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ವೇತನ ಪಾವತಿಸದಿದ್ದರೆ ಮೇ 6 ರ ರಾತ್ರಿಯಿಂದ ರಾಜ್ಯವ್ಯಾಪಿ ಮುಷ್ಕರ ಕೈಗೊಳ್ಳುವುದಾಗಿ ಕರ್ನಾಟಕ ರಾಜ್ಯ ಆರೋಗ್ಯ ಕವಚ 108 ನೌಕರರ ಸಂಘದಿಂದ ಎಚ್ಚರಿಕೆ ನೀಡಲಾಗಿದೆ.


Spread the love

About Laxminews 24x7

Check Also

543 ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ: ಮೋದಿಗೆ ಖರ್ಗೆ ಸವಾಲು

Spread the loveನವದೆಹಲಿ: ಪ್ರಸ್ತುತ ಇರುವ 543 ಲೋಕಸಭಾ ಸ್ಥಾನಗಳಲ್ಲೇ ಮಹಿಳೆಯರಿಗೆ 33% ಮೀಸಲಾತಿಯನ್ನು ತಕ್ಷಣವೇ ಜಾರಿಗೆ ತನ್ನಿ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ