Breaking News
Home / ರಾಜಕೀಯ / ಜಗತ್ತಿನ ದುಬಾರಿ ಕೋವಿಡ್ ಲಸಿಕೆ ಫೈಜರ್..!

ಜಗತ್ತಿನ ದುಬಾರಿ ಕೋವಿಡ್ ಲಸಿಕೆ ಫೈಜರ್..!

Spread the love

ಮಾರುಕಟ್ಟೆಗಳಲ್ಲಿ ಸಾಮಾನ್ಯವಾಗಿ ಎಲ್ಲಾ ವಸ್ತುಗಳಲ್ಲಿ ಕೆಳ, ಮಧ್ಯಮ ಹಾಗೂ ಉನ್ನತ ಮಟ್ಟದ್ದು ಎನ್ನುವ ವಿಭಾಗಗಳಿರುತ್ತವೆ. ಅದು ಈಗ ಲಸಿಕೆಯ ವಿಚಾರದಲ್ಲಿಯೂ ಕೂಡ ಆಗುತ್ತಿದೆ ಎನ್ನುವುದು ದುರಂತ.

ಅಮೆರಿಕಾದಲ್ಲಿ ಈ ರೀತಿಯ ಬೆಳವಣಿಗೆ ಕಂಡು ಬರುತ್ತಿರುವುದು ಜಾಗತಿಕ ಮಟ್ಟದಲ್ಲಿ ಈಗ ಸುದ್ದಿಯಾಗುತ್ತಿದೆ. ಜಾನ್ಸನ್ ಲಸಿಕೆಯನ್ನು ಪಡೆದುಕೊಂಡವ ಸಾಮಾನ್ಯ, ಮಾಡೆರ್ನಾ ಲಸಿಕೆಯನ್ನು ನೀವು ಸ್ವೀಕಾರ ಮಾಡಿದರೆ ನಿಮ್ಮನ್ನು ಮಧ್ಯಮ ವರ್ಗದವರು ಎಂದು ಪರಿಗಣಿಸಲಾಗುತ್ತಿದೆ. ಹಾಗೂ ಫೈಜರ್ ಲಸಿಕೆಯನ್ನು ನೀವು ತೆಗೆದುಕೊಂಡರೇ, ನಿಮ್ಮನ್ನು ಮೇಲ್ವರ್ಗದವರು ಎಂದು ಪರಿಗಣಿಸಲಾಗುತ್ತಿದೆ.

 

ಹೌದು, ಸಾಮಾಜಿಕ ಜಾಲ ತಾಣದಾದ್ಯಂತ ಮೀಮ್‌ ಗಳಲ್ಲಿ, ಫೈಜರ್ ಲಸಿಕೆಯನ್ನು ಶ್ರೀಮಂತ ವರ್ಗದ ಲಸಿಕೆ ಎನ್ನುವಂತೆ ಬಿಂಬಿಸಲಾಗಿದೆ. ಅಮೇರಿಕಾದ ಈ ಲಸಿಕೆ ತಾರತಮ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಾದ್ಯಂತ ಭಾರಿ ಚರ್ಚೆಗೆ ಕಾರಣವಾಗುತ್ತಿದೆ.

ಫೈಜರ್ ಲಸಿಕೆಗೆ ಈ ಬ್ರಾಂಡ್ ಹೇಗೆ ಬಂತು ?

ಫೈಜರ್ ಒಂದು ಅನುಭವಿ ಕಂಪನಿ 1849 ರಲ್ಲಿ ಸ್ಥಾಪನೆಯಾಯಿತು. ಶತಮಾನದ ನಂತರ, ದೊಡ್ಡ ಪ್ರಗತಿಯನ್ನು ಹೊಂದಿ ಬೆಳೆದ ಸಂಸ್ಥೆ ಇದಾಗಿದ್ದು, ಪೆನಿಸಿಲಿನ್ ಉತ್ಪಾದನೆಗೆ ಖ್ಯಾತಿ ಗಳಿಸಿದ ಸಂಸ‍್ಥೆ. ಇಂದು, ವಿಶ್ವದ ಪ್ರಮುಖ ಔಷದಿ ತಯಾರಿಕರ ದೈತ್ಯ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ. ಕಳೆದ ವರ್ಷ, ಕೋವಿಡ್ ಲಸಿಕೆ ತಯಾರಿಸುವ ಮೊದಲು 6 9.6 ಬಿಲಿಯನ್ ವಾರ್ಷಿಕ ಆದಾಯವನ್ನು ಗಳಿಸಿರುವುದಾಗಿ ಸಂಸ್ಥೆ ಹೇಳಿಕೊಂಡಿತ್ತು.

ಫೈಜರ್ ನ ಮೊದಲ ತ್ರೈಮಾಸಿಕ ವರದಿಯು 3.5 ಬಿಲಿಯನ್ ಆದಾಯವನ್ನು ದಾಖಲಿಸಿದೆ. ಎಲ್ಲಾ ಆದಾಯದ ಕಾಲು ಭಾಗದಷ್ಟು ಕೋವಿಡ್ ಲಸಿಕೆಯಿಂದ ಬಂದಿದೆ ಎನ್ನುವುದು ಪ್ರಮುಖಾಂಶ. ಆದರೇ, ಫೈಜರ್ ತನ್ನ ಒಟ್ಟು ಲಾಭದ ಡೇಟಾವನ್ನು ಪ್ರಕಟಿಸಲಿಲ್ಲ.

ಕಳೆದ ವರ್ಷ ಕೋವಿಡ್ ಸೋಂಕು ವಿಶ್ವದಾದ್ಯಂತ ಕಾಣಿಸಿಕೊಂಡಾದಾಗಿನಿಂದ ಕೋವಿಡ್ ಲಸಿಕೆಯನ್ನು ಫೈಜರ್ ಸಂಸ್ಥೆ ತಯಾರಿಸುತ್ತಿದ್ದು ವಿಶ್ವದ ಅತ್ಯಂತ ಶ್ರೀಮಂತ ಕೋವಿಡ್ ಲಸಿಕೆ ಎಂದು ಕರೆಸಿಕೊಳ್ಳುತ್ತಿದೆ.

ಹೌದು, ಈ ಲಸಿಕೆ ಶ್ರೀಮಂತ ವರ್ಗದವರಿಗೆ ಮಾತ್ರ ಖರದಿಸಲು ಸಾಧ್ಯವಾಗುವಷ್ಟ ದುಬಾರಿಯಾಗಿರುವುದರಿಂದ ಇದನ್ನು ಶ್ರೀಮಂತ ವರ್ಗದ ಲಸಿಕೆ ಎಂದು ಹೇಳಲಾಗುತ್ತಿದೆ. ಪ್ರತಿ ಡೋಸ್ ಫೈಜರ್ ಲಸಿಕೆಯ ಬೆಲೆ 19.5 ಅಮೆರಿಕದ ಡಾಲರ್‌ ಅಂದರೇ, 1439 ರೂಪಾಯಿ 81 ಪೈಸೆಯಾಗಿದೆ. ಫೈಜರ್ ಕಂಪನಿ ಈ ವರ್ಷ 2.5 ಬಿಲಿಯನ್ ಡೋಸ್‌ ಗಳನ್ನು ಉತ್ಪಾದಿಸುತ್ತಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

ಸದ್ಯ ಕೇವಲ 40 ಮಿಲಿಯನ್ ಜನರು ಕೊವಾಕ್ಸ್‌ ಲಸಿಕೆಯನ್ನು ಸ್ವೀಕರಿಸುತ್ತಿದ್ದು, ಇದು ಫೈಜರ್ ನ ಒಟ್ಟು ಉತ್ಪಾದನೆಯ ಕೇವಲ 2 ಶೇಕಡಾ ಆಗುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಮಾಡರ್ನಾ 500 ಮಿಲಿಯನ್ ಲಸಿಕೆಯನ್ನು ನೀಡುತ್ತಿದೆ.

ಫೈಜರ್ ಶ್ರೀಮಂತ ವರ್ಗದವರಿಗೆ ಮಾರಾಟ ಮಾಡುವ ಮೂಲಕ ಮತ್ತು ಪ್ರತಿ ದೇಶದಲ್ಲಿ ವಿಭಿನ್ನ ಬೆಲೆಯೊಂದಿಗೆ ಅಪಾರದರ್ಶಕ ಒಪ್ಪಂದಗಳಿಗೆ ಸಹಿ ಹಾಕುವ ಮೂಲಕ ಹಣವನ್ನು ಸಂಪಾದಿಸುತ್ತಿದೆ. ಕೆಲವು ವರದಿಗಳು ಯುಎಸ್ ಪ್ರತಿ ಡೋಸ್‌ ಗೆ 19.5 ಡಾಲರ್ ನನ್ನು ಪಾವತಿಸುತ್ತಿದ್ದರೇ , ಇಸ್ರೇಲ್ ನಲ್ಲಿ ಇದೇ ಲಸಿಕೆ ಪ್ರತಿ ಡೋಸ್ ಗೆ 30 ಡಾಲರ್ ನಂತೆ ಮಾರಾಟವಾಗುತ್ತಿದೆ.

ಫೈಜರ್ ಮತ್ತು ಭಾರತ :

ಫೈಜರ್ ಇತ್ತೀಚೆಗೆ ಭಾರತಕ್ಕೆ 70 ಮಿಲಿಯನ್ ಮೌಲ್ಯದ ಲಸಿಕೆಯನ್ನು ದಾನ ಮಾಡಿತು. ಇದನ್ನು ಫೈಜರ್ ನ ಅತಿದೊಡ್ಡ ಮಾನವೀಯ ಕಳಕಳಿ ಎಂದು ಕರೆಯಲಾಗುತ್ತಿದೆ ಮತ್ತು ಲಸಿಕೆಗಳ ತ್ವರಿತ ಅನುಮೋದನೆ ಪಡೆಯಲು ಕಂಪನಿಯು ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ.

ಫೈಜರ್ ಕಳೆದ ವರ್ಷ ಭಾರತದಲ್ಲಿ ತನ್ನ ಲಸಿಕೆಗಾಗಿ ತುರ್ತು ಅನುಮೋದನೆ ಪಡೆದ ಮೊದಲ ಸಂಸ‍್ಥೆ. ಆದರೆ ಫೆಬ್ರವರಿಯಲ್ಲಿ . ಭಾರತವು ಸ್ಥಳೀಯ ಸುರಕ್ಷತಾ ಲಸಿಕೆಯ ಪ್ರಯೋಗಕ್ಕೆ ಮುಂದಾದ ಕಾರಣ ಈ ಒಪ್ಪಂದದಿಂದ ಪೀಜರ್ ಹೊರಬಂತು.

ದೇಶದಲ್ಲಿ ಮತ್ತೆ ಆತಂಕ ಸೃಷ್ಟಿ ಮಾಡುತ್ತಿರುವ ಎರಡನೇ ಅಲೆಯ ಸಂದರ್ಭದಲ್ಲಿ, ಭಾರತವು ಲಸಿಕೆ ಕೊರತೆಯನ್ನು ಅನುಭವಿಸುತ್ತಿದೆ. ಈಗ ಮತ್ತೆ ಫಿಜರ್ ಲಸಿಕೆಯನ್ನು ಭಾರತಕ್ಕೆ ಅವಲಂಭಿಸಬೇಕಾದ ಸ್ಥಿತಿ ಬಂದಿದೆ ಎನ್ನುವುದು ಸತ್ಯ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸ್ಥೆಯ ವಕ್ತಾರರೋರ್ವರು ಫೈಜರ್ ನ ನನ್ನು ಸಾಗರೋತ್ತರ ಪ್ರಯೋಗಗಳಿಗೆ ಅನುಮೋದಿಸಲಾಗಿದೆ ಮತ್ತು ಲಸಿಕೆಯನ್ನು ಈಗಾಗಲೇ ಎಲ್ಲಾ ಪ್ರಮುಖ ನಿಯಂತ್ರಕರು ಅನುಮೋದಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಲಸಿಕೆಯ ವೆಚ್ಚ ಮತ್ತು ಸಂಗ್ರಹಣೆಯ ಬಗ್ಗೆ ಇನ್ನೂ ಕೆಲವು ಗೊಂದಲಗಳಿವೆ. ಆದರೇ, ಫೈಜರ್ ತನ್ನ ಲಸಿಕೆಯನ್ನು ಕಡಿಮೆ ಲಾಭದಲ್ಲಿ ಭಾರತಕ್ಕೆ ತಲುಪಿಸುವ ಭರವಸೆ ನೀಡಿದೆ. ಇನ್ನು, ಫೈಜರ್ ಲಸಿಕೆಗಳನ್ನು ಮೈನಸ್ 70 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಬೇಕಾಗುತ್ತದೆ ಭಾರತದಲ್ಲಿ ಈ ವ್ಯವಸ್ಥೆ ಇಲ್ಲದಿರುವುದು ಸಮಸ್ಯೆಯಾಗಿದೆ. ಈ ಬಗ್ಗೆ ಇದುವರೆಗೆ ಹೆಚ್ಚಿನ ಮಾಹಿತಿ ಲಭ್ಯವಲಿಲ್ಲಎಂದು ವರದಿ ತಿಳಿಸಿದೆ.

ಇನ್ನು, ಲಸಿಕೆಗಳನ್ನು ವಿಶೇಷ ಕಂಟೇನರ್‌ ಗಳಲ್ಲಿ ಲಸಿಕೆ ಕೇಂದ್ರಗಳಿಗೆ ತಲುಪಿಸಲಾಗುವುದು ಕಂಪನಿ ಹೇಳಿದೆ.

ವರ್ಲ್ಡ್ ವಾರ್ 2 ರ ಸಮಯದಲ್ಲಿ ಫಿಜರ್ ಸಂಸ್ಥೆ ಯಶಸ್ವಿಯಾಗಿ ಪೆನಿಸಿಲಿನ್ ಅನ್ನು ಉತ್ಪಾದಿಸಿತ್ತು. ಫೈಜರ್ ಕಾರಣದಿಂದಾಗಿ ಸಾವಿರಾರು ಸೈನಿಕರ ಪಾಲಿಗೆ ಸಂಜೀವಿನಿಯಾಗಿತ್ತು. ಇಂದು, ಅದೇ ಕಂಪನಿಯು ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಲಕ್ಷಾಂತರ ಕೋವಿಡ್ ಲಸಿಕೆಯನ್ನು ಉತ್ಪಾದಿಸುತ್ತಿದೆ ಮತ್ತು ಜಗತ್ತಿಗೆ ಅದನ್ನು ಜೀವ ಸಂಜೀವಿನಿಯಾಗಿ ನೀಡುತ್ತಿದೆ. ಆದರೇ, ಅದರ ದುಬಾರಿ ಬೆಲೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ಸದ್ಯದ ಸತ್ಯ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ