Breaking News
Home / Uncategorized / ಹೊಸ ಅವತಾರದಲ್ಲಿ ಲಗ್ಗೆಯಿಡುತ್ತಿದೆ ಪಬ್ ಜಿ: ಗೇಮ್

ಹೊಸ ಅವತಾರದಲ್ಲಿ ಲಗ್ಗೆಯಿಡುತ್ತಿದೆ ಪಬ್ ಜಿ: ಗೇಮ್

Spread the love

ಬೆಂಗಳೂರು: ಗೇಮಿಂಗ್ ಪ್ರಿಯರಿಗೆ ಸಂತಸದ ವಿಚಾರವೊಂದು ಹೊರಬಿದ್ದಿದ್ದು ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಎಂಬ ಹೆಸರಿನಲ್ಲಿ ದೇಸಿ ಅವತಾರದ ಪಬ್ ಜಿ ಗೇಮ್ ಭಾರತಕ್ಕೆ ಲಗ್ಗೆಯಿಡುತ್ತಿದೆ. ದಕ್ಷಿಣ ಕೊರಿಯಾ ಮೂಲದ ಕ್ರಾಫ್ಟನ್ ಸಂಸ್ಥೆಯು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಶೀಘ್ರದಲ್ಲಿ ಅತ್ಯುನ್ನತ ಗುಣಮಟ್ಟದೊಂದಿಗೆ ಹೊಸ ಮಾದರಿಯ ಪಬ್ ಜಿ ಬಳಕೆದಾರರನ್ನು ತಲುಪಲಿದೆ ಎಂದು ತಿಳಿಸಿದೆ.

ಗಮನಿಸಬೇಕಾದ ಅಂಶವೆಂದರೇ ಬ್ಯಾಟಲ್ ಗ್ರೌಂಡ್ಸ್ ಮೊಬೈಲ್ ಇಂಡಿಯಾ ಎಂಬ ಹೆಸರಿನಲ್ಲಿ ಈಗಾಗಲೇ ವೆಬ್ ಸೈಟ್ ಒಂದು ಆರಂಭವಾಗಿದ್ದು, ಹೊಸ ಗೇಮ್ ನಲ್ಲಿ ಹಲವು ಬದಲಾವಣೆಗಳಿರಲಿವೆ ಎಂದು ತಿಳಿಸಿದೆ. ಸಂಸ್ಥೆಯ ಸುರಕ್ಷತಾ ನೀತಿಯ ಅನುಸಾರ “18 ವರ್ಷಕ್ಕಿಂತ ಕೆಳಗಿನವರು ಈ ಗೇಮ್ ಆಡಲು ಪೋಷಕರ ಅನುಮತಿ ಕಡ್ಡಾಯವಾಗಿ ಪಡೆದುಕೊಳ್ಳುವುದು ಅಗತ್ಯವಾಗಿದೆ”

ಕ್ರಾಫ್ಟನ್ ಸಂಸ್ಥೆಯ ಪ್ರಕಾರ “18 ವರ್ಷಕ್ಕಿಂತ ಕೆಳಗಿನವರು ಈ ಗೇಮ್ ಆಡಬೇಕಾದರೇ ಪೋಷಕರ ಅನುಮತಿ ಪಡೆಯಬೇಕಾಗುತ್ತದೆ. ಇದಕ್ಕಾಗಿ ಪೋಷಕರ ಮೊಬೈಲ್ ನಂಬರ್ ಅನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಸೈನ್ ಇನ್ ಆದ ನಂತರವಷ್ಟೇ ಬ್ಯಾಟಲ್ ಗ್ರೌಂಡ್ಸ್ ಆಡಲು ಅವಕಾಶ ಕಲ್ಪಿಸಲಾಗುವುದು. ಅದಾಗ್ಯೂ ಈ ಹೊಸ ಫೀಚರ್ ನಲ್ಲಿ ಹಲವು ಸಮಸ್ಯೆಗಳು ಕಂಡುಬರುತಿದ್ದು, ಪರಿಹಾರವಾದ ನಂತರ ಗೇಮ್ ಅನ್ನು ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದೆ.

ಇಂದು 18 ವರ್ಷ ಕೆಳಗಿನವರೂ ಕೂಡ ಪ್ರತ್ಯೇಕವಾದ ಮೊಬೈಲ್ ನಂಬರ್ ಅನ್ನು ಹೊಂದಿರುತ್ತಾರೆ. ಹೀಗಾಗಿ ಈ ಗೇಮಿಂಗ್ ಆಡಲೆಂದೇ ಕೆಲವೊಂದು ಜಾಣ್ಮೆಗಳನ್ನು ಪ್ರದರ್ಶಿಸುತ್ತಾರೆ. ಈ ಎಲ್ಲಾ ಆಂಶಗಳನ್ನು ಗಮನದಲ್ಲಿಟ್ಟುಕೊಂಡು ವೇರಿಫಿಕೇಶನ್ ತಂತ್ರಜ್ಞಾನವನ್ನು ರೂಪಿಸಲಾಗುತ್ತಿದೆ ಎಂದು ಕ್ರಾಫ್ಟನ್ ತಿಳಿಸಿದೆ. ಇದರ ಜೊತೆಗೆ 18 ವರ್ಷ ಕೆಳಗಿನವರಿಗೆ ಈ ಗೇಮ್ ಅನ್ನು ದಿನದಲ್ಲಿ ಇಂತಿಷ್ಟೇ ಗಂಟೆ ಮಾತ್ರ ಆಡಬೇಕೆಂಬ ನಿಯಮವನ್ನೂ ಕೂಡ ರೂಪಿಸಲಾಗುತ್ತಿದೆ ಎಂದು ವರದಿಯಾಗಿದೆ,

ಕಳೆದ ವರ್ಷ ಭಾರತದಲ್ಲಿ ಪಬ್ ಜಿ ಸೇರಿದಂತೆ ನೂರಕ್ಕೂ ಅಧಿಕ ಆಯಪ್ ಗಳನ್ನು ನಿಷೇಧ ಮಾಡಲಾಗಿತ್ತು. ತದನಂತರದಲ್ಲಿ ಹಲವು ದೇಸಿ ಆಯಪ್ ಗಳು ಮುನ್ನಲೆಗೆ ಬಂದಿದ್ದವು. ಇದೀಗ ಬ್ಯಾಟಲ್ ಗ್ರೌಂಡ್ಸ್ ಇಂಡಿಯಾ ಕೂಡ ಹಲವು ಸುಧಾರಿತ ತಂತ್ರಜ್ಞಾನಗಳು, ವಿಶೇಷ ಇನ್ ಗೇಮ್ ಇವೆಂಟ್ ಗಳು, ಡೇಟಾ ಗೌಪ್ಯತಾ ಅಂಶಗಳನ್ನು ಒಳಗೊಂಡು ಭಾರತದಲ್ಲಿ ಲಗ್ಗೆಯಿಡುತ್ತಿದೆ.


Spread the love

About Laxminews 24x7

Check Also

ಬಿಜೆಪಿ ಶಾಸಕ ಮಹಿಳೆ ಜೊತೆ ಇದ್ದ ಅಶ್ಲೀಲ ಪೋಟೋ ವೈರಲ್ ?

Spread the loveಬೆಳಗಾವಿ : ರಾಜ್ಯದಲ್ಲಿ ಸಧ್ಯ ಚುನಾವಣಾ ಕಾವು ಜೋರಾಗಿದ್ದು ಈ ಹಂತದಲ್ಲೇ ಬಿಜೆಪಿ ಶಾಸಕ ಮಹಿಳೆ ಜೊತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ