Breaking News
Home / 2021 / ಮೇ / 08 (page 2)

Daily Archives: ಮೇ 8, 2021

ಕೊರೊನಾ ನೆಗೆಟಿವ್ ವರದಿ ಇಲ್ಲ :ರಾಯ್ಪುರದಿಂದ ಬೆಂಗಳೂರಿಗರು ವಾಪಸ್

ಬೆಂಗಳೂರು, ಮೇ 08: ಕೋವಿಡ್ ನೆಗೆಟಿವ್ ವರದಿಯಿಲ್ಲದೆ ಬೆಂಗಳೂರಿನಿಂದ ರಾಯ್ಪುರಕ್ಕೆ ಬಂದಿಳಿಸಿದ್ದ 13 ಮಂದಿ ಪ್ರಯಾಣಿಕರನ್ನು ವಾಪಸ್ ಕಳುಹಿಸಿರುವ ಘಟನೆ ನಡೆದಿದೆ. ಪ್ರಯಾಣಿಕರು ಬೆಂಗಳೂರು, ಹೈದರಾಬಾದ್ ಮತ್ತು ನವದೆಹಲಿಯಿಂದ ಅವರು ರಾಯ್ಪುರಕ್ಕೆ ಆಗಮಿಸಿದ್ದರು. ಈ ಘಟನೆ ಬುಧವಾರ ಸಂಭವಿಸಿದ್ದು ಬೆಳಿಗ್ಗೆ 10.25 ಕ್ಕೆ ಬೆಂಗಳೂರಿನಿಂದ ಹೊರಟ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರು ಹತ್ತಿದ್ದರು ಅದರೆ ಕೋವಿಡ್ -19 ಪ್ರಕರಣಗಳ ಇತ್ತೀಚಿನ ಏರಿಕೆಯಿಂದಾಗಿ, ಛತ್ತೀಸ್‌ಗಢದ ಎಲ್ಲಾ ವಿಮಾನ ಪ್ರಯಾಣಿಕರಿಗೆ ಮೇ 4ರಿಂದ ಕೋವಿಡ್ …

Read More »

ಬೆಳಗಾವಿಗೆ ರೆಮಿಡಿಸಿವರ್ ಹಂಚಿಕೆಯಲ್ಲಿ ತಾರತಮ್ಯ: ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ: ಕೋವಿಡ್ ಸೋಂಕಿತರಿಗೆ ನೀಡಲಾಗುವ ರೆಮಿಡಿಸಿವರ್ ಇಂಜಕ್ಷನ್ ಹಂಚಿಕೆಯಲ್ಲಿ ಬೆಳಗಾವಿ ಜಿಲ್ಲೆಗೆ ಭಾರಿ ತಾರತಮ್ಯ ಮಾಡಲಾಗುತ್ತಿದ್ದು, ಕೂಡಲೇ ಸರಿಪಡಿಸಬೇಕು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಆಗ್ರಹಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಶುಕ್ರವಾರ ರಾಜ್ಯಕ್ಕೆ ಒಟ್ಟು 40 ಸಾವಿರ ರೆಮಿಡಿಸಿವರ್ ಇಂಜಕ್ಷನ್ ಹಂಚಿಕೆಯಾಗಿದ್ದರೂ ಬೆಳಗಾವಿ ಜಿಲ್ಲೆಗೆ ಕಳೆದ 3 ದಿನಕ್ಕೆ ಕೇವಲ 400 ನೀಡಲಾಗಿದೆ. ಜಿಲ್ಲೆಯಲ್ಲಿ ಈಗ ಬರುತ್ತಿರುವ ಕೋವಿಡ್ ಸೋಂಕು ಪ್ರಕರಣದ ಪ್ರಮಾಣ ನೋಡಿದರೆ ದಿನಕ್ಕೆ ಕನಿಷ್ಠ …

Read More »

ನೀವು ಉಳಿಯುತ್ತಿರೋ ಇಲ್ಲವೋ ನಾನಂತು ಉಳಿಯಬೇಕು : ಸಚಿವ ಕತ್ತಿ

ಬನಹಟ್ಟಿ : ಕೋವಿಡ್ ಮೂರನೇ ಅಲೆ ಬರುತ್ತಿದೆ. ನೀವು ಉಳಿಯುತ್ತಿರೋ ಇಲ್ಲವೋ ನಾನಂತು ಉಳಿಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು. ಅವರು ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ-ಬನಹಟ್ಟಿ ನಗರಸಭೆ ಸಭಾ ಭವನದಲ್ಲಿ ನಡೆದ ಸರಕಾರಿ ಹಾಗೂ ಖಾಸಗಿ ವೈದ್ಯರ ಸಭೆಯಲ್ಲಿ ಮಾತನಾಡಿದರು. ಸ್ಥಳೀಯರು ಆಕ್ಷಿಜನ್ ಸಾಂದ್ರಕ ಯಂತ್ರವನ್ನು ಸರಕಾರಿ ಆಸ್ಪತ್ರೆಗೆ ದೇಣಿಗೆಯಾಗಿ ನೀಡಿದ್ದರು. ಈ ವೇಳೆ ರಬಕವಿಯ ಖಾಸಗಿ ವೈದ್ಯ ರವಿ ಜಮಖಂಡಿ ಮಾತನಾಡುವ …

Read More »

ಕೋವಿಡ್ ಲಸಿಕೆ ಅಭಿಯಾನ: 2ನೇ ಡೋಸ್‌ ಸಿಗದೆ ಪರದಾಟ

ಶಿರಹಟ್ಟಿ: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮೇ 1ರಿಂದ ಕೋವಿಡ್‌ ಲಸಿಕೆ ನೀಡುತ್ತೇವೆ ಎಂದು ರಾಜ್ಯ ಸರ್ಕಾರವೇ ಹೇಳಿತ್ತು. ಆದರೆ, 60 ಮತ್ತು 45 ವರ್ಷ ಮೇಲ್ಪಟ್ಟ ತಾಲ್ಲೂಕಿನ ಸಾವಿರಾರೂ ಜನ ಎರಡನೇ ಲಸಿಕೆ ಹಾಕಿಸಿಕೊಳ್ಳಲು ಕಾಯುವಂತಾಗಿದೆ. ಶಿರಹಟ್ಟಿ ತಾಲ್ಲೂಕಿನಾದ್ಯಂತ ಈವರೆಗೂ 60 ವರ್ಷ ಮೇಲ್ಪಟ್ಟವರು 6,965 ಜನ ಮೊದಲ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದರಲ್ಲಿ 45 ದಿನಗಳನ್ನು ಪೂರೈಸಿದ 1,595 ಜನ ಮಾತ್ರ ಎರಡನೇ ಲಸಿಕೆಯನ್ನು ಹಾಕಿಸಿಕೊಂಡದ್ದಾರೆ. 45 ವರ್ಷ …

Read More »

ರಾಜ್ಯದಲ್ಲಿ ಮೇ.10 ರಿಂದ ಮೇ.24 ರವರಗೆ ಚಿತ್ರೀಕರಣ ಸ್ಥಗಿತ, ʼಬಿಗ್‌ ಬಾಸ್‌ʼ ಶೂಟಿಂಗ್‌ಗೂ ಬ್ರೇಕ್..!‌

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನ ಹತೋಟಿಗೆ ತರಲು ರಾಜ್ಯವನ್ನ 10ರಿಂದ 24ರವರೆಗೆ ಲಾಕ್‌ ಡೌನ್‌ ಮಾಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಇನ್ನು ಲಾಕ್‌ ಡೌನ್‌ ಪರಿಣಾಮ ಮೇ 10 ರಿಂದ ಯಾವುದೇ ಚಿತ್ರ, ಧಾರಾವಾಹಿ ಸೇರಿ ರಿಯಾಲಿಟಿ ಶೋಗಳ ಚಿತ್ರೀಕರಣ ಸ್ಥಗಿತಗೊಳ್ಳಲಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಮೇ 10ರಿಂದ ರಾಜ್ಯ ಲಾಕ್‌ಡೌನ್‌ ಆಗುವ ಪರಿಣಾಮ ಸಿನಿಮಾ ಸೇರಿದಂತೆ ಎಲ್ಲ ರೀತಿಯ ಚಿತ್ರೀಕರಣಗಳನ್ನ …

Read More »

ಸ್ಪೀಕರ್ ವಿಶ್ವೇಶ್ವರ್ ಹೆಗಡೆ ಕಾಗೇರಿ ಭಾಗವಹಿಸಿದ್ದ ಮದುವೆಗೆ ಬಂದಿದ್ದ 32 ಜನರಿಗೆ ಕೊರೊನಾ

ಶಿರಸಿ: ವಿಧಾನಸಭಾ ಸ್ಪೀಕರ್​​ ವಿಶ್ವೇಶ್ವರ ಹೆಗಡೆ ಕಾಗೇರಿ ಇತ್ತೀಚಿಗೆ ಉಪಸ್ಥಿತರಿದ್ದರು ಎನ್ನಲಾದ ಮದುವೆಯಲ್ಲಿ ಭಾಗಿಯಾಗಿದ್ದ 32 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಬೆಂಗಳೂರಿನಿಂದ ಆಗಮಿಸಿದ್ದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು ಎಂದು ಹೇಳಲಾಗಿತ್ತು. ತದನಂತರ ಅವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಆದರೆ ಕಳೆದ 2 ದಿನದಿಂದ ಅದೇ ಮದುವೆಯಲ್ಲಿ ಭಾಗಿಯಾಗಿದ್ದ 32 ಜನರಲ್ಲಿ ಕೊರೊನಾ ಪತ್ತೆಯಾಗಿದ್ದು ಆತಂಕ ಮೂಡಿಸಿದೆ. ಆದರೆ …

Read More »

‘ರಾಜ್ಯಗಳಿಗೆ ಕೊರೊನಾ ಲಸಿಕೆಯನ್ನು ಕೇಂದ್ರ ಉಚಿತವಾಗಿ ನೀಡಲಿ’

ನವದೆಹಲಿ: ಏಕರೂಪದ ಲಸಿಕೆ ನೀತಿ ಇರಬೇಕು ಮತ್ತು ಇತ್ತೀಚಿನ ಹಂತದ ನೂತನ ಭೇದಾತ್ಮಕ ಬೆಲೆ ವ್ಯವಸ್ಥೆಯನ್ನು ರದ್ದುಗೊಳಿಸಬೇಕು ಎಂದು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ಇಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.ಲಸಿಕೆಗಳು ಲಭ್ಯವಾಗುವಂತೆ ಮತ್ತು ರಾಜ್ಯಗಳಿಗೆ ಉಚಿತವಾಗಿ ನೀಡುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಬಂಗಾಳ ಹೇಳಿದೆ. ಲಸಿಕೆ ಬೆಲೆಗಳ ಬಗ್ಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಲು ಮತ್ತು ಚೌಕಾಶಿ ಮಾಡಲು ರಾಜ್ಯಗಳಿಗೆ ಸಾಧ್ಯವಿಲ್ಲ.ಲಸಿಕೆಗಳಿಗೆ ಹಣವನ್ನು ವಿನಿಯೋಗಿಸಲು …

Read More »

ಅಂತರ್‌ ರಾಜ್ಯ ಪ್ರಯಾಣಕ್ಕೆ ಕೋವಿಡ್ ಪರೀಕ್ಷೆ ಪ್ರಮಾಣಪತ್ರ ಅಗತ್ಯವಿಲ್ಲ: ಐಸಿಎಂಆರ್

ಹೊಸದಿಲ್ಲಿ, ಮೇ 7: ಆರೋಗ್ಯವಂತ ನಾಗರಿಕರು ರಾಜ್ಯದೊಳಗೆ ಪ್ರಯಾಣಿಸಬೇಕಿದ್ದರೆ ಆರ್‌ಟಿಪಿಸಿಆರ್ ಪರೀಕ್ಷೆಯ ಪ್ರಮಾಣಪತ್ರ ಸಲ್ಲಿಸಬೇಕು ಎಂಬ ಸೂಚನೆಯನ್ನು ಸಂಪೂರ್ಣ ರದ್ದುಗೊಳಿಸಬಹುದಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಹೇಳಿದೆ. ದೇಶದಲ್ಲಿ ಕೊರೋನ ಸೋಂಕಿನ ಎರಡನೇ ಅಲೆ ತೀವ್ರಗತಿಯಲ್ಲಿ ಹೆಚ್ಚಿರುವುದರಿಂದ ಪ್ರಯೋಗಾಲಯದಲ್ಲಿ ಹೆಚ್ಚಿನ ಒತ್ತಡ ನಿವಾರಿಸುವ ದೃಷ್ಟಿಯಿಂದ ಹೀಗೆ ಮಾಡಬಹುದು ಎಂದು ಐಸಿಎಂಆರ್ ಸಲಹೆ ನೀಡಿದೆ. ಇದರಿಂದ ಅಗತ್ಯದ ಕೆಲಸಗಳಿಗಾಗಿ ರಾಜ್ಯದೊಳಗೆ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ. ಈ ಮಧ್ಯೆ, ಲಾಕ್‌ಡೌನ್ ಜಾರಿಗೊಳಿಸಿದ …

Read More »

ರಾಜ್ಯಾಧ್ಯಂತ ಮೇ.10ರಿಂದ ಮೇ.24ರವರೆಗೆ ಲಾಕ್ ಡೌನ್ : ಈ ವೇಳೆ ಯಾವುದಕ್ಕೆ ಅವಕಾಶ.? ಯಾವುದಕ್ಕೆ ಇಲ್ಲ.? ಇಲ್ಲಿದೆ ಮಾಹಿತಿ

ಬೆಂಗಳೂರು : ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ರಾಜ್ಯಾಧ್ಯಂತ ಮೇ.10 ರಿಂದ ಮೇ.24ರವರೆಗೆ ಸಂಪೂರ್ಣ ಲಾಕ್ ಡೌನ್ ಅನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದಾರೆ. ಪರಿಷ್ಕೃತ ಮಾರ್ಗಸೂಚಿಯಂತೆ ಮೇ.10ರ ಬೆಳಿಗ್ಗೆ 6 ಗಂಟೆಯಿಂದ ಮೇ.24ರ ಬೆಳಿಗ್ಗೆ 6 ಗಂಟೆಯವರೆಗೆ ಯಾವುದಕ್ಕೆ ಅವಕಾಶ ನೀಡಲಾಗಿದೆ.? ಯಾವುದಕ್ಕೆ ಅವಕಾಶ ನೀಡಲಾಗಿಲ್ಲ ಎನ್ನುವ ಬಗ್ಗೆ ಮುಂದೆ ಓದಿ. ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ನಿಯಂತ್ರಣಕ್ಕಾಗಿ ಮೊದಲು ನೈಟ್ ಕರ್ಪ್ಯೂ, ಆನಂತ್ರದ ವಾರಾಂತ್ಯ ಸಂಪೂರ್ಣ ಕರ್ಪ್ಯೂ ಬಳಿಕ, …

Read More »

ಚುನಾವಣೆಯಿಂದ ಸೋಂಕು ಹೆಚ್ಚಾಗಿದೆ ಎಂಬುದು ಸುಳ್ಳು:ಶೆಟ್ಟರ್

ಬಳ್ಳಾರಿ: ಉಪ ಚುನಾವಣೆಯಿಂದ ಕೊರೊನಾ ಸೋಂಕು ಹೆಚ್ಚಳವಾಗಿದೆ ಎಂಬುದು ಸುಳ್ಳು, ಜನರೇ ಕೊರೊನಾ ವಿರುದ್ಧ ಹೋರಾಡಬೇಕು ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚರಾಜ್ಯ ಮತ್ತು ರಾಜ್ಯದ ಉಪ ಚುನಾವಣೆಗಳಿಂದ ಕೊರೊನಾ ಹೆಚ್ಚಳ ಆಗಿದೆ ಎಂಬುದು ಸುಳ್ಳು. ಕೊರೊನಾ ಹೆಚ್ವಳಕ್ಕೆ ನೂರಾರು ಕಾರಣ ಇವೆ. ಜನರೇ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಆಕ್ಸಿಜನ್ ಹಂಚಿಕೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಸಿಎಂ ನನಗೆ ನೀಡಿದ್ದಾರೆ. …

Read More »