Breaking News

Daily Archives: ಫೆಬ್ರವರಿ 3, 2021

ರೈತ ಹೋರಾಟ: ಹರಿಯಾಣದ 7 ಜಿಲ್ಲೆಗಳಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತ

ನವದೆಹಲಿ, ಫೆಬ್ರವರಿ.03: ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ನವದೆಹಲಿಯಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆ ಹರಿಯಾಣ ಸರ್ಕಾರವು ಏಳು ಜಿಲ್ಲೆಗಳಲ್ಲಿ ಇಂಟರ್ ನೆಟ್ ಸೇವೆಗಳ ಮೇಲೆ ವಿಧಿಸಿದ ನಿರ್ಬಂಧವನ್ನು ಫೆಬ್ರವರಿ.3ರ ಸಂಜೆ 5 ಗಂಟೆವರೆಗೂ ವಿಸ್ತರಿಸಿದೆ. ಹರಿಯಾಣದ ಕೈಥಲ್, ಪಾಣಿಪತ್, ಜಿಂದ್, ರೋಹ್ಟಕ್, ಚರ್ಖಿ ದಾದ್ರಿ, ಸೋನಿಪತ್ ಮತ್ತು ಝಜ್ಜರ್ ಜಿಲ್ಲೆಗಳಲ್ಲಿ ದೂರವಾಣಿ ಕರೆಯನ್ನು ಹೊರತುಪಡಿಸಿದಂತೆ ಇಂಟರ್ ನೆಟ್, ಎಸ್‌ಎಂಎಸ್ ಮತ್ತು ಡೋಂಗಲ್ ಸೇವೆಯನ್ನು ನಿರ್ಬಂಧಿಸಲಾಗಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತರ …

Read More »

ಫೆ. 28ರ ವರೆಗೆ ಚಿತ್ರಮಂದಿರಗಳಲ್ಲಿ ಶೇ. 50 ರಷ್ಟು ಆಸನ ಭರ್ತಿ ಆದೇಶ ಮುಂದುವರಿಕೆ

ಬೆಂಗಳೂರು: ಕೊರೋನಾ ವೈರಸ್ ಅಬ್ಬರ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಚಿತ್ರಮಂದಿರಗಳ ಭರ್ತಿಗೆ ಆದೇಶ ನೀಡಿ ಮಾರ್ಗಸೂಚಿ ಪ್ರಕಟಿಸಿತ್ತು. ಅಲ್ಲದೇ, ರಾಜ್ಯ ಸರ್ಕಾರಗಳು ಈ ಸಂಬಂಧ ನಿರ್ಧಾರ ಕೈಗೊಳ್ಳಬಹುದು ಎಂದು ಕೂಡ ಸೂಚಿಸಿತ್ತು. ಹೀಗಾಗಿ ರಾಜ್ಯ ಸರ್ಕಾರ ಚಿತ್ರಮಂದಿರಗಳ ಭರ್ತಿಗೆ ಅವಕಾಶ ನೀಡದೆ ಶೇ. 50 ರಷ್ಟು ಆಸನ ಮಾತ್ರ ಭರ್ತಿ ಮಾಡಲು ಅವಕಾಶ ನೀಡಿ ಆದೇಶ ಹೊರಡಿಸಿದೆ. ಈ ಸಂಬಂಧ ರಾಜ್ಯ ಸರ್ಕಾರ ಮಂಗಳವಾರ ಹೊಸ ಮಾರ್ಗಸೂಚಿ ಬಿಡುಗಡೆ …

Read More »

ಬಿಡಿಎನಲ್ಲಿ ಊಹಿಸಲಾಗದಷ್ಟು ಹಗರಣ, ಮೂರ್ನಾಲ್ಕು ತಿಂಗಳಲ್ಲಿ ಎಲವೂ ಬಹಿರಂಗ: B.S.Y.

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದಲ್ಲಿ ಊಹೆ ಮಾಡಲಾಗದಷ್ಟು ದೊಡ್ಡ ಹಗರಣ ನಡೆದಿದೆ. ಇನ್ನು ಮೂರುನಾಲ್ಕು ತಿಂಗಳಲ್ಲಿ ಅದೆಲ್ಲವನ್ನೂ ಹೊರಹಾಕಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಂಗಳವಾರ ವಿಧಾನಸಭೆಗೆ ಭರವಸೆ ನೀಡಿದ್ದಾರೆ. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾರ್ಪಣೆ ಚೆರ್ಚೆಯ ವೇಳೆ ಬಿಡಿಎ ವಿಚಾರ ಪ್ರಸ್ತಾಪವಾದಾಗ ಸಿಎಂ ಯಡಿಯೂರಪ್ಪ ಅವರು ಈ ಭರವಸೆ ನೀಡಿದ್ದಾರೆ. ನಾನೇ ಖುದ್ದಾಗಿ ಹೋಗಿ ಬಿಡಿಎ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದು, ಎರಡು …

Read More »

ಮೇ 2ರಿಂದ ನೆಟ್‌, 4ರಿಂದ ಸಿಬಿಎಸ್‌ಇ ಪರೀಕ್ಷೆ

ಹೊಸದಿಲ್ಲಿ: ಯುಜಿಸಿ ನೆಟ್‌ (ರಾಷ್ಟ್ರೀಯ ಪ್ರವೇಶ ಪರೀಕ್ಷೆ ) ಪರೀಕ್ಷೆಯ ದಿನಾಂಕ ಮಂಗಳವಾರ ಹೊರಬಿದ್ದಿದ್ದು, ಮೇ 2ರಂದು ಪರೀಕ್ಷೆಗಳು ಆರಂಭವಾಗಲಿವೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ಮಾಹಿತಿ ನೀಡಿದ್ದಾರೆ. ಜೂನಿಯರ್‌ ರಿಸರ್ಚ್‌ ಫೆಲೋಶಿಪ್‌ ಹಾಗೂ ಸಹಾಯಕ ಪ್ರೊಫೆಸರ್‌ ಹುದ್ದೆಗೆ ಅರ್ಹತೆ ಪಡೆಯಲು ಇರುವ ಯುಜಿಸಿ- ನೆಟ್‌ ಪರೀಕ್ಷೆ ಗಳು ಮೇ 2ರಿಂದ ಆರಂಭ ವಾಗಿ 17ರವರೆಗೆ ನಡೆಯಲಿವೆ. ಪರೀಕ್ಷೆ ಬರೆಯ ಲಿಚ್ಛಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ugcnet.nta.nic.in ಮೂಲಕ ಅರ್ಜಿಯನ್ನು ಆನ್‌ಲೈನ್‌ನಲ್ಲೇ ಭರ್ತಿ …

Read More »

ಯಶಸ್ವಿ ಅನುಷ್ಠಾನವಾಗಲಿ ಗುಜರಿ ನೀತಿ

ಸೋಮವಾರ ಮಂಡನೆಯಾದ ಕೇಂದ್ರ ಬಜೆಟ್‌ ಮೂಲಸೌಕರ್ಯಾ ಅಭಿವೃದ್ಧಿಗೆ ಹಾಗೂ ಸ್ವಾಸ್ಥ್ಯವಲಯಕ್ಕೆ ಕೊಟ್ಟಿರುವ ಆದ್ಯತೆ ಗಮನಾರ್ಹ. ಅದರ ಜತೆಗೆ ಪರಿಸರ ರಕ್ಷಣೆಯ ನಿಟ್ಟಿನಲ್ಲೂ ಅದು ಮಹತ್ವ ಪೂರ್ಣ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿರುವುದೂ ಶ್ಲಾಘನೀಯ. ಈ ಬಜೆಟ್‌ನಲ್ಲಿ ಕೇಂದ್ರ ಸರಕಾರ “ವಾಹನ ಗುಜರಿ’ ನೀತಿಯನ್ನು ಘೋಷಣೆ ಮಾಡಿದೆ. ಇದರನ್ವಯ 20 ವರ್ಷ ದಾಟಿದ ಖಾಸಗಿ ವಾಹನಗಳು ಹಾಗೂ 15 ವರ್ಷ ತುಂಬಿದ ವಾಣಿಜ್ಯ ವಾಹನ ಗಳು ಕಡ್ಡಾಯ ಫಿಟೆ°ಸ್‌ ಪರೀಕ್ಷೆಗೆ ಒಳಪಡಬೇಕು. ಆಗ ಅವು …

Read More »

ಗ್ರಾ.ಪಂ: ಸಾಮಾನ್ಯ ಸ್ಥಾನದವರಿಗೂ ಮೀಸಲಾತಿ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ!

ಪುತ್ತೂರು: ಸಾಮಾನ್ಯ ಕ್ಷೇತ್ರದಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳು ಕೂಡ ಗ್ರಾ.ಪಂ. ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಅವರ ವರ್ಗಕ್ಕೆ ಮೀಸಲಿಟ್ಟ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹತೆ ಹೊಂದಿದ್ದಾರೆ! ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿಯಡಿ ಸ್ಪರ್ಧಿಸಬಹುದಾದ ಅರ್ಹತೆಗಳ ಬಗ್ಗೆ ಮೂಡಿರುವ ಗೊಂದಲದ ಬಗ್ಗೆ ರಾಜ್ಯ ಚುನಾವಣ ಆಯೋಗ ಸುತ್ತೋಲೆ ಹೊರಡಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆದಿದೆ. ಗ್ರಾ.ಪಂ. ಅಧ್ಯಕ್ಷ-ಉಪಾಧ್ಯಕ್ಷತೆ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದಿರುವ ಹಿಂದುಳಿದ ವರ್ಗ ಎ, ಬಿ, ಎಸ್‌ಸಿ, ಎಸ್‌ಟಿ ಪುರುಷ ಅಥವಾ …

Read More »

ಕಾಮಗಾರಿ ಮಾಡದೇ ವರ್ಷದ ಹಿಂದೆ ಬಿಲ್ ಎತ್ತುವಳಿ; ಮಾಹಿತಿ ಹಕ್ಕಿನಡಿ ಅಕ್ರಮ ಬಯಲು

ಬಾಗಲಕೋಟೆ: ಬಾದಾಮಿ ತಾಲೂಕಿನ ಗಣಿ ಸಚಿವ ಮುರುಗೇಶ್ ನಿರಾಣಿ ಕ್ಷೇತ್ರದ ಕಗಲಗೊಂಬ ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಶಾಲಾ ಅಭಿವೃದ್ಧಿ, ಕಾಂಪೌಂಡ್ ನಿರ್ಮಾಣದ ಹೆಸ್ರಲ್ಲಿ ಕಾಮಗಾರಿ ಮಾಡದೇ ಅಧಿಕಾರಿಗಳು, ಗುತ್ತಿಗೆದಾರರು ಬರೋಬ್ಬರಿ 5.98 ಲಕ್ಷ ಬಿಲ್ ಎತ್ತುವಳಿ ಮಾಡಿರುವ ಆರೋಪ ಕೇಳಿಬಂದಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರದ ಸೂಳಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗಲಗೊಂಬ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ …

Read More »

ಆರೋಗ್ಯ ಸಿಬ್ಬಂದಿಗಳ ನಿರ್ಲಕ್ಷ್ಯ ಪೋಲಿಯೋ ಲಸಿಕೆ ಬದಲು 12 ಮಕ್ಕಳಿಗೆ ಹ್ಯಾಂಡ್ ಸ್ಯಾನಿಟೈಸರ್ ಬಾಯಿಗೆ ಹಾಕಿ ಬಿಟ್ಟಿದ್ದಾರೆ.

ಯಾವತ್ಮಲ್: ದೇಶಾದ್ಯಂತ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನ ಆರಂಭವಾಗಿದ್ದು, ಲಸಿಕೆ ಹಾಕುವ ವೇಳೆ ಆರೋಗ್ಯ ಸಿಬ್ಬಂದಿಯ ಎಡವಟ್ಟಿನಿಂದಾಗಿ ಮಕ್ಕಳಿಗೆ ಸ್ಯಾನಿಟೈಸರ್ ಹಾಕಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಇಲ್ಲಿನ ಯಾವತ್ಮಲ್ ನಲ್ಲಿ ಆರೋಗ್ಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಪೋಲಿಯೋ ಲಸಿಕೆ ಬದಲು 12 ಮಕ್ಕಳಿಗೆ ಹ್ಯಾಂಡ್ ಸ್ಯಾನಿಟೈಸರ್ ಬಾಯಿಗೆ ಹಾಕಿ ಬಿಟ್ಟಿದ್ದಾರೆ. ತಕ್ಷಣ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳಿಗೆ ಯಾವುದೇ ಅಪಾಯವಾಗಿಲ್ಲ. ಎಲ್ಲಾ ಮಕ್ಕಳೂ ಆರೋಗ್ಯದಿಂದ ಇದ್ದಾರೆ. ಆದರೆ ಸಿಬ್ಬಂದಿಗಳ ಬೇಜವಾಬ್ದಾರಿ ಹಾಗೂ …

Read More »

ಅಪೌಷ್ಟಿಕತೆ ಮುಕ್ತ ಬೆಳಗಾವಿ ಪೋಷಣ ಅಭಿಯಾನ ಯೋಜನೆಯ ಪ್ರಗತಿ ಪರಿಶೀಲನೆ

ಬೆಳಗಾವಿ  : ರಾಜ್ಯದಲ್ಲಿ ೨೦೨೦ ಪೋಷಣಾ ಅಭಿಯಾನ ಯೋಜನೆಯಲ್ಲಿ ಬೆಳಗಾವಿ ಜಿಲ್ಲೆಯು ಮೊದಲ ಸ್ಥಾನದಲ್ಲಿದೆ ಎಂಬುದು ಹೆಮ್ಮೆಯ ವಿಷಯ. ಅಪೌಷ್ಟಿಕತೆ ಮುಕ್ತ ಬೆಳಗಾವಿ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಮಾಡಿದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಹೇಳಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ(ಫೆ.೨) ನಡೆದ ಎಲ್ಲಾ ಶಕ್ತಿ ಕೇಂದ್ರ ಯೋಜನೆ ಟ್ರಾನ್ಸ್ಜೆಂಡರ್ ರವರ ಸಮನ್ವಯ ಮತ್ತು ಉಸ್ತುವಾರಿ ಸಮಿತಿ, ಪ್ರಧಾನ ಮಂತ್ರಿ ಯೋಜನೆ ಹಾಗೂ ಪೋಷಣ ಅಭಿಯಾನ ಯೋಜನೆಯ …

Read More »

ಬೆಂಗಳೂರು ತಲುಪಿದ ಕುರುಬರ ಪಾದಯಾತ್ರೆ; ಎಲ್ಲೆಲ್ಲಿ ಟ್ರಾಫಿಕ್ ಜಾಮ್?

ಬೆಂಗಳೂರು(ಫೆ. 03): ಕುರುಬರಿಗೆ ಎಸ್​ಟಿ ಮೀಸಲಾತಿ ಸ್ಥಾನಮಾನ ಕಲ್ಪಿಸುವಂತೆ ಒತ್ತಾಯಿಸಿ ಕಾಗಿನೆಲೆ ಶ್ರೀಗಳ ನೇತೃತ್ವದಲ್ಲಿ ಕುರುಬ ಸಮುದಾಯದವರು ಜನವರಿ 15ರಂದು ಆರಂಭಿಸಿರುವ ಬೃಹತ್ ಪಾದಯಾತ್ರೆ ಇಂದು ಬೆಂಗಳೂರು ನಗರವನ್ನ ಪ್ರವೇಶಿಸಿದೆ. ‘ಎಸ್​ಟಿ ನಮ್ಮ ಹಕ್ಕು’ ಹೆಸರಿನಲ್ಲಿ ನಡೆಯುತ್ತಿರುವ ಈ ಪಾದಯಾತ್ರೆ ಬೆಳಗ್ಗೆ 6ಗಂಟೆ ಬಳಿಕ ನಗರಕ್ಕೆ ಅಡಿ ಇಟ್ಟಿತು. ದಾಸರಹಳ್ಳಿ ಶಾಸಕ ಆರ್ ಮಂಜುನಾಥ್ ಅವರು ನಿರಂಜನಾನಂದಪುರಿ ಸ್ವಾಮಿಗಳಿಗೆ ಹೂ, ಹಾರ ಶಾಲು ಹಾಕಿ ಸ್ವಾಗತಿಸಿ ಆಶೀರ್ವಾದ ಪಡೆದರು. ನೆಲಮಂಗಲ …

Read More »