Breaking News

ಮೇ 2ರಿಂದ ನೆಟ್‌, 4ರಿಂದ ಸಿಬಿಎಸ್‌ಇ ಪರೀಕ್ಷೆ

Spread the love

ಹೊಸದಿಲ್ಲಿ: ಯುಜಿಸಿ ನೆಟ್‌ (ರಾಷ್ಟ್ರೀಯ ಪ್ರವೇಶ ಪರೀಕ್ಷೆ ) ಪರೀಕ್ಷೆಯ ದಿನಾಂಕ ಮಂಗಳವಾರ ಹೊರಬಿದ್ದಿದ್ದು, ಮೇ 2ರಂದು ಪರೀಕ್ಷೆಗಳು ಆರಂಭವಾಗಲಿವೆ ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್‌ ಪೋಖ್ರಿಯಾಲ್‌ ಮಾಹಿತಿ ನೀಡಿದ್ದಾರೆ.

ಜೂನಿಯರ್‌ ರಿಸರ್ಚ್‌ ಫೆಲೋಶಿಪ್‌ ಹಾಗೂ ಸಹಾಯಕ ಪ್ರೊಫೆಸರ್‌ ಹುದ್ದೆಗೆ ಅರ್ಹತೆ ಪಡೆಯಲು ಇರುವ ಯುಜಿಸಿ- ನೆಟ್‌ ಪರೀಕ್ಷೆ ಗಳು ಮೇ 2ರಿಂದ ಆರಂಭ ವಾಗಿ 17ರವರೆಗೆ ನಡೆಯಲಿವೆ. ಪರೀಕ್ಷೆ ಬರೆಯ ಲಿಚ್ಛಿಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ugcnet.nta.nic.in ಮೂಲಕ ಅರ್ಜಿಯನ್ನು ಆನ್‌ಲೈನ್‌ನಲ್ಲೇ ಭರ್ತಿ ಮಾಡಬೇಕು. ಆನ್‌ಲೈನ್‌ ಅರ್ಜಿ ತುಂಬಲು ಫೆ. 2ರಿಂದ ಮಾ. 2ರ  ವರೆಗೆ ಅವಕಾಶವಿದೆ. ಅರ್ಜಿ ಶುಲ್ಕವನ್ನು ಮಾ. 3ರೊಳಗೆ ಪಾವತಿಸಬೇಕು ಎಂದೂ ಪೋಖ್ರಿಯಾಲ್ ತಿಳಿಸಿದ್ದಾರೆ.

ಮೇ 4ರಿಂದ ಸಿಬಿಎಸ್‌ಇ ಪರೀಕ್ಷೆ
ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಕೂಡ ಮಂಗಳವಾರ 10 ಮತ್ತು 12ನೇ ತರಗತಿ ಪರೀಕ್ಷೆಯ ದಿನಾಂಕ ಪ್ರಕಟಿಸಿದೆ. ಮೇ 4ರಿಂದ ಪರೀಕ್ಷೆ ಗಳು ಆರಂಭವಾಗಲಿದ್ದು, 10ನೇ ತರಗತಿ ಪರೀಕ್ಷೆ ಜೂ.7ಕ್ಕೆ ಹಾಗೂ 12ನೇ ತರಗತಿಯ ಪರೀಕ್ಷೆಗಳು ಜೂ. 10ರಂದು ಮುಕ್ತಾಯ ವಾಗಲಿವೆ ಎಂದು ಹೇಳಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ