Breaking News
Home / ರಾಜ್ಯ / ಯಶಸ್ವಿ ಅನುಷ್ಠಾನವಾಗಲಿ ಗುಜರಿ ನೀತಿ

ಯಶಸ್ವಿ ಅನುಷ್ಠಾನವಾಗಲಿ ಗುಜರಿ ನೀತಿ

Spread the love

ಸೋಮವಾರ ಮಂಡನೆಯಾದ ಕೇಂದ್ರ ಬಜೆಟ್‌ ಮೂಲಸೌಕರ್ಯಾ ಅಭಿವೃದ್ಧಿಗೆ ಹಾಗೂ ಸ್ವಾಸ್ಥ್ಯವಲಯಕ್ಕೆ ಕೊಟ್ಟಿರುವ ಆದ್ಯತೆ ಗಮನಾರ್ಹ. ಅದರ ಜತೆಗೆ ಪರಿಸರ ರಕ್ಷಣೆಯ ನಿಟ್ಟಿನಲ್ಲೂ ಅದು ಮಹತ್ವ ಪೂರ್ಣ ಯೋಜನೆಯ ಅನುಷ್ಠಾನಕ್ಕೆ ಮುಂದಾಗಿರುವುದೂ ಶ್ಲಾಘನೀಯ. ಈ ಬಜೆಟ್‌ನಲ್ಲಿ ಕೇಂದ್ರ ಸರಕಾರ “ವಾಹನ ಗುಜರಿ’ ನೀತಿಯನ್ನು ಘೋಷಣೆ ಮಾಡಿದೆ.

ಇದರನ್ವಯ 20 ವರ್ಷ ದಾಟಿದ ಖಾಸಗಿ ವಾಹನಗಳು ಹಾಗೂ 15 ವರ್ಷ ತುಂಬಿದ ವಾಣಿಜ್ಯ ವಾಹನ ಗಳು ಕಡ್ಡಾಯ ಫಿಟೆ°ಸ್‌ ಪರೀಕ್ಷೆಗೆ ಒಳಪಡಬೇಕು. ಆಗ ಅವು ರಸ್ತೆಯಲ್ಲಿ ಓಡಾಡಲು ಅರ್ಹವಾಗಿವೆಯೋ ಅಥವಾ ಗುಜರಿ ಸೇರ ಬೇಕೋ ಎಂದು ನಿರ್ಧರಿಸಲಾಗುತ್ತದೆ. ಜತೆಗೆ 15 ದಿನಗಳಲ್ಲೇ ಹೊಸ ನೀತಿಯ ಅನುಷ್ಠಾನವನ್ನೂ ಮಾಡಲಿರುವುದಾಗಿ ಕೇಂದ್ರ ಹೇಳಿದೆ.

ನಿಸ್ಸಂಶಯವಾಗಿಯೂ ಪರಿಸರದ ದೃಷ್ಟಿಯಿಂದ ಹಾಗೂ ವ್ಯಾವ ಹಾರಿಕ ದೃಷ್ಟಿಯಿಂದ ಇದೊಂದು ಗಮನಾರ್ಹ ನಡೆ. ಇಂದು ದೇಶದ ಮಾಲಿನ್ಯ ಕಾರಕಗಳಲ್ಲಿ ಹಳೆಯ ವಾಹನಗಳ ಪಾತ್ರ ಪ್ರಮುಖವಾಗಿದೆ. ಅಲ್ಲದೇ ಇವುಗಳಿಂದ ಇಂಧನ ಬಳಕೆಯಲ್ಲಿ ಅನಗತ್ಯ ಹೆಚ್ಚಳವೂ ಆಗುತ್ತಿದೆ. ಹೀಗಾಗಿ ಅನಗತ್ಯ ಹಾಗೂ ಹಾನಿಕಾರಕ ವಾಹನಗಳನ್ನು ಗುಜರಿಗೆ ಕಳುಹಿಸುವ ಈ ನೀತಿ ಹಲವು ರೀತಿಗಳಿಂದ ಪರಿಣಾಮಕಾರಿ ಯಾಗುವ ನಿರೀಕ್ಷೆಯಿದೆ. ಈ ವಾಹನ ಗುಜರಿ ನೀತಿಯಿಂದ ಪರಿಸರ ರಕ್ಷಣೆಯಷ್ಟೇ ಅಲ್ಲದೇ, 10 ಸಾವಿರ ಕೋಟಿ ರೂಪಾಯಿಗಳಷ್ಟು ಹೊಸ ಹೂಡಿಕೆ ಹರಿದುಬರುವ ಹಾಗೂ 50 ಸಾವಿರದಷ್ಟೂ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ಕೆಲವೇ ದಿನಗಳ ಹಿಂದಷ್ಟೇ ಕೇಂದ್ರ ಸರಕಾರ ಪರಿಸರಕ್ಕೆ ಮಾರಕವಾದ ಹಳೆಯ ಖಾಸಗಿ ವಾಹನಗಳ ವಿರುದ್ಧ ಹಸಿರು ತೆರಿಗೆ ಪರಿಕಲ್ಪನೆಯ ಮೂಲಕ ಸಮರ ಘೋಷಿಸಿತ್ತು. 8 ವರ್ಷಗಳಿಗಿಂತ ಹಳೆಯದಾಗಿರುವ ವಾಹನಗಳಿಗೆ ಶೀಘ್ರದಲ್ಲಿಯೇ ಹಸರು ತೆರಿಗೆ ಹೇರುವ ಪ್ರಸ್ತಾವಕ್ಕೆ ಕೇಂದ್ರೀಯ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯ ಒಪ್ಪಿಗೆ ನೀಡಿದೆ. ಈ ಕುರಿತು ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿ ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು ಎಂದೂ ಅದು ಹೇಳಿದೆ. ಈ ಎಲ್ಲ ಸಂಗತಿಗಳು ಹಳೆಯ ವಾಹನಗಳ ವಿಚಾರದಲ್ಲಿ ಕೇಂದ್ರ ಸರಿಯಾದ ಹೆಜ್ಜೆಯಿಡುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ಸೆಂಟರ್‌ ಫಾರ್‌ ಸೈನ್ಸ್‌ ಆಯಂಡ್‌ ಎನ್‌ವೈರ್ನಮೆಂಟ್‌(ಸಿಎಸ್‌ಇ) ಪ್ರಕಾರ 2025ರ ವೇಳೆಗೆ ಭಾರತದಲ್ಲಿ 2 ಕೋಟಿಗೂ ಹೆಚ್ಚು ಹಳೆಯ ವಾಹನಗಳ ಬೃಹತ್‌ ಭಾರ ಸೃಷ್ಟಿಯಾಗಲಿದೆ. ಈ ವಾಹನಗಳು ವಾತಾವರಣಕ್ಕೆ ಭಾರೀ ಹಾನಿ ಮಾಡುವ ಸಾಧ್ಯತೆ ಇಲ್ಲದಿಲ್ಲ. 2014ರಲ್ಲಿ ಐಐಟಿ ಬಾಂಬೆ ದೇಶಾದ್ಯಂತ ನಡೆಸಿದ ಅಧ್ಯಯನದ ಪ್ರಕಾರ 2005ಕ್ಕೂ ಪೂರ್ವದ ವಾಹನಗಳೇ ಇಂದು ದೇಶದಲ್ಲಿ ವಾಹನಗಳಿಂದ ಉಂಟಾಗುತ್ತಿರುವ ವಾಯುಮಾಲಿನ್ಯದಲ್ಲಿ 70 ಪ್ರತಿಶತ ಕಾರಣೀಕರ್ತವಾಗಿವೆ. ಹೀಗಾಗಿ ಗುಜರಿ ನೀತಿ ಹಾಗೂ ಸಂಭಾವ್ಯ ಹಸರು ತೆರಿಗೆ ಪದ್ಧತಿ ಈ ಸಮಸ್ಯೆಗೆ ಯಾವ ಪ್ರಮಾಣದಲ್ಲಿ ಪರಿಹಾರ ಒದಗಿಸಲಿವೆಯೋ ಎಂಬ ನಿರೀಕ್ಷೆಯಂತೂ ಹುಟ್ಟಿಕೊಂಡಿದೆ.


Spread the love

About Laxminews 24x7

Check Also

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

Spread the love ಕಾಸರಗೋಡು: ಕೇರಳದ ಕಾಸರ ಗೋಡು ಲೋಕಸಭೆ ಕ್ಷೇತ್ರದಲ್ಲಿ ನಡೆದ ಅಣಕು ಮತದಾನ ವೇಳೆ ಬಿಜೆಪಿ ಪರವಾಗಿ ಹೆಚ್ಚು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ