Breaking News

Daily Archives: ಫೆಬ್ರವರಿ 3, 2021

ಬಾರದ ಚುನಾವಣಾಧಿಕಾರಿ; ನಾಮಪತ್ರ ಸ್ವೀಕರಿಸಿದ ಪಿಡಿಒ ತಿಗಡೊಳ್ಳಿ ಗ್ರಾಮ ಪಂಚಾಯತಿ

ಕಿತ್ತೂರ: ತಾಲೂಕಿನ ತಿಗಡೊಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಆರಂಭವಾಗಿದೆ. ನಾಮ ಪತ್ರ ಸಲ್ಲಿಕೆ ಬೆಳಿಗ್ಗೆ 8 ರಿಂದ 9 ಗಂಟೆಗೆ ನಿಗದಿಯಾಗಿತ್ತು. ಆದರೆ ಚುನಾವಣೆ ಅಧಿಕಾರಿಯಾದ ಎಸ್. ಆರ್. ಮೆಹೆರವಾಡಿ ನಿಗದಿತ ಸಮಯಕ್ಕೆ ಬರದೆ ಇರುವುದರಿಂದ ಇಲ್ಲಿಯ ಪಿಡಿಒ ನಾಮ ಪತ್ರ ಸ್ವೀಕರಿಸಿದರು.

Read More »

ಜನವರಿ 26 ಹಿಂಸಾಚಾರ ಕೇಸ್: ಪ್ರಮುಖ ಆರೋಪಿ ದೀಪ್ ಮಾಹಿತಿ ಕೊಟ್ರೆ 1 ಲಕ್ಷ ಬಹುಮಾನ

ನವದೆಹಲಿ: ಗಣರಾಜ್ಯೋತ್ಸವ(ಜ.26) ದಿನಾಚರಣೆಯಂದು ರೈತರ ಟ್ರ್ಯಾಕ್ಟರ್ ರಾಲಿ ವೇಳೆ ಸಂಭವಿಸಿದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದೀಪ್ ಸಿಧು ಸೇರಿದಂತೆ ಪ್ರಮುಖ ಆರೋಪಿಗಳ ಕುರಿತು ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಬುಧವಾರ (ಫೆ.3, 2021) ಘೋಷಿಸಿದ್ದಾರೆ. ವರದಿಗಳ ಪ್ರಕಾರ, ಪ್ರಮುಖ ಆರೋಪಿಗಳಾದ ನಟ ದೀಪ್ ಸಿಧು, ಜುಗ್ ರಾಜ್ ಸಿಂಗ್, ಗುರ್ಜೋತ್ ಸಿಂಗ್ ಮತ್ತು ಗುರ್ಜಂತ್ ಸಿಂಗ್ ಕುರಿತು ಮಾಹಿತಿ ನೀಡಿದವರಿಗೆ ತಲಾ …

Read More »

ಸ್ಯಾಮ್‌ ಸಂಗ್ ಗ್ಯಾಲಕ್ಸಿ M02 ಭಾರತದಲ್ಲಿ 6,999 ರೂ (2 ಜಿಬಿ + 32 ಜಿಬಿ ಮಾಡೆಲ್ ) ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಗೆ ಬರಲಿದೆ.

ನವ ದೆಹಲಿ: 5000mAh ಬ್ಯಾಟರಿ, ಉತ್ತಮ ಕ್ಯಾಮೆರಾ ಮತ್ತು ದೊಡ್ಡ ಸ್ಕ್ರೀನ್ ನೊಂದಿಗೆ ಗ್ಯಾಲಕ್ಸಿ M02 ಅನ್ನು ಬಿಡುಗಡೆ ಮಾಡುವ ಮೂಲಕ ಸ್ಯಾಮ್‌ ಸಂಗ್ ತನ್ನ ಯಶಸ್ವಿ ‘M’ ಸೀರೀಸ್ ನ್ನು ಭಾರತದಲ್ಲಿ ವಿಸ್ತರಿಸಿದೆ. ಸ್ಯಾಮ್‌ ಸಂಗ್ ಗ್ಯಾಲಕ್ಸಿ M02 ಭಾರತದಲ್ಲಿ 6,999 ರೂ (2 ಜಿಬಿ + 32 ಜಿಬಿ ಮಾಡೆಲ್ ) ಆರಂಭಿಕ ಬೆಲೆಯಲ್ಲಿ ಮಾರುಕಟ್ಟೆಗೆ ಬರಲಿದೆ. 3 ಜಿಬಿ + 32 ಜಿಬಿ ಮಾಡೆಲ್ ಅಮೆಜಾನ್.ಇನ್, …

Read More »

ಬೆಳಗಾವಿಯಲ್ಲಿ ನಾಳೆಯಿಂದ ಸೇನಾ ರ‍್ಯಾಲಿ

ಬೆಳಗಾವಿ(ಫೆ.3): ಬೆಳಗಾವಿಯಲ್ಲಿ ನಾಳೆಯಿಂದ ಸೇನಾ ರ‍್ಯಾಲಿ ನಡೆಯಲಿದ್ದು, ಸಾವಿರಾರು ಜನ ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ. ರ‍್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ. ಕೋವಿಡ್ ಪರಿಕ್ಷೆಗಾಗಿ ಬೆಳಗಾವಿ ಬಿಮ್ಸ್ ಆಸ್ಪತ್ರೆಯ ಮುಂದೆ ನೂರಾರು ಜನ ಸರತಿ ಸಾಲಿನಲ್ಲಿ ನಿಂತಿದ್ದಾರೆ. ನಾಳೆಯಿಂದ ಬೆಳಗಾವಿಗೆ ಸಾವಿರಾರು ಯುವಕರು ರ‍್ಯಾಲಿಗೆ ಬರುವ ಹಿನ್ನೆಲೆ ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲಿ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಮೈದಾನದಲ್ಲಿ ನಾಳೆಯಿಂದ ಸೇನಾ ನೇಮಕಾತಿ‌ ರ‍್ಯಾಲಿ …

Read More »

ಮಾರ್ಕೆಟ್​, ಬಸ್​ನಲ್ಲಿ ಜನಜಂಗುಳಿ ಓಕೆ…ಥಿಯೇಟರ್​ಗೆ ಮಾತ್ರ ನಿರ್ಬಂಧ ಏಕೆ ಎಂದು ಪ್ರಶ್ನಿಸಿದ ಧ್ರುವ ಸರ್ಜಾ

ಕೋವಿಡ್​ 19 ಅಬ್ಬರ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಾರಿಗೆ ಸೇವೆ, ಶಾಲಾ – ಕಾಲೇಜುಗಳು ಸಹಜ ಸ್ಥಿತಿಯತ್ತ ಮರಳುತ್ತಿವೆ. ಆದರೆ ಫೆಬ್ರವರಿ 28ರವರೆಗೆ ರಾಜ್ಯದ ಚಿತ್ರ ಮಂದಿರಗಳಲ್ಲಿ ಶೇಕಡಾ 50ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದ್ದು ಚಂದನವನದ ತಾರೆಯರ ಕಣ್ಣು ಕೆಂಪಗಾಗಿಸಿದೆ. ಈ ವಿಚಾರವಾಗಿ ಟ್ವೀಟ್​ ಮಾಡಿರುವ ಸ್ಯಾಂಡಲ್​ವುಡ್​ ನಟ ಧ್ರುವ ಸರ್ಜಾ, ಮಾರ್ಕೆಟ್​ನಲ್ಲಿ ಗಿಜಿ ಗಿಜಿಗುಡುತ್ತಿರುವ ಜನ, ಬಸ್​ನಲ್ಲೂ ಜನರ ಹಿಂಡೇ ತುಂಬಿರುತ್ತೆ. …

Read More »

ಚಿತ್ರಮಂದಿರಕ್ಕೆ ಮಾತ್ರ ಏಕೆ ಶೇ.50ರಷ್ಟು ಪ್ರೇಕ್ಷಕರ ನಿರ್ಬಂಧ ಪುನಿತ್ ರಾಜ್ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ.

ಬೆಂಗಳೂರು : ಖಾಸಗಿ ಸಮಾರಂಭಕ್ಕೆ, ಕಾರ್ಯಗಾರಕ್ಕೆ, ಸಾರ್ವಜನಿಕ ಪ್ರಯಾಣಕ್ಕೆ, ಮಾರ್ಕೆಟ್, ಪ್ರವಾಸಿ ಸ್ಥಳಗಳಲ್ಲಿ ಜನಸಾಮಾನ್ಯರ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಆದ್ರೇ ಚಿತ್ರಮಂದಿರದಲ್ಲಿ ಚಿತ್ರವೀಕ್ಷಿಸಲು ಏಕೆ 50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅವಕಾಶದ ನಿರ್ಬಂಧ ಎಂಬುದಾಗಿ ನಟ ಪುನಿತ್ ರಾಜ್ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಈ ಕುರಿತಂತೆ ನಟ ಧೃವ ಸರ್ಜಾ ಅವರ ಬೆಂಬಲಕ್ಕೆ ನಿಂತು ಟ್ವಿಟ್ ಮಾಡಿರುವಂತ ನಟ ಪುನಿತ್ ರಾಜ್ ಕುಮಾರ್, ಖಾಸಗಿ ಸಮಾರಂಭಗಳು, ಪೂಜಾ ಸ್ಥಳಗಳು, …

Read More »

ವಿಶ್ವದ ಮೊದಲ ಹೈಬ್ರಿಡ್ ಏರ್ ಶೋ ಇಂದಿನಿಂದ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ.

ಬೆಂಗಳೂರು : ವಿಶ್ವದ ಮೊದಲ ಹೈಬ್ರಿಡ್ ಏರ್ ಶೋ ಇಂದಿನಿಂದ ಬೆಂಗಳೂರಿನ ವಾಯುನೆಲೆಯಲ್ಲಿ ನಡೆಯುತ್ತಿದ್ದು, ಈ ಏರೋ ಇಂಡಿಯಾ ಶೋಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿದ ರಾಜನಾಥ್ ಸಿಂಗ್, ಏರ್ ಶೋ ನಮ್ಮ ದೇಶದ ಶಕ್ತಿ ಪ್ರದರ್ಶನದ ವೇದಿಕೆಯಾಗಿದೆ. ವಿಶ್ವದ ಮೊಟ್ಟ ಮೊದಲ ಹೈಬ್ರಿಡ್ ಏರ್ ಶೋ ಇದಾಗಿದೆ. ಭಾರತೀಯ ತಯಾರಿಕೆಯ ತೇಜಸ್ ಯುದ್ಧ ವಿಮಾನಕ್ಕೆ ಸಾಕಷ್ಟು ಬೇಡಿಕೆಯಿದೆ. ಈಗಾಗಲೇ 83 …

Read More »

ಕೇರಳ ಹೈಕೋರ್ಟ್ ತೀರ್ಪು ಎತ್ತಿ ಹಿಡಿದ ʼಸುಪ್ರೀಂʼ: ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ʼPhD ಕಡ್ಡಾಯʼ

ನವದೆಹಲಿ: ಕೇರಳ ಹೈಕೋರ್ಟ್ ತೀರ್ಪನ್ನ ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್, AICTE ನಿಯಮಾವಳಿಗಳ ಪ್ರಕಾರ, 5.3.2010ರ ನಂತರ ತಾಂತ್ರಿಕ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪಿಎಚ್ ಡಿ ಕಡ್ಡಾಯ ಎಂದಿದೆ. ಪಿಹೆಚ್ ಡಿ ಪದವಿಯ ಕೊರತೆಗೆ ಸಂಬಂಧಿಸಿದಂತೆ ಸಹಾಯಕ ಪ್ರಾಧ್ಯಾಪಕರು ಸಲ್ಲಿಸಿದ್ದ ಹನ್ನೆರಡು ಅರ್ಜಿಗಳನ್ನ ವಿಲೇವಾರಿ ಮಾಡಿದ ಸುಪ್ರಿಂಕೋರ್ಟ್‌, ಕೇರಳ ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ವಿಶೇಷ ಅರ್ಜಿಗಳನ್ನ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ದಿನೇಶ್ ಮಹೇಶ್ವರಿ …

Read More »

PUC ವಿದ್ಯಾರ್ಥಿನಿಯರಿಗೆ 25 ಸಾವಿರ ರೂ, ಡಿಗ್ರಿ ಮುಗಿಸಿದ ಹೆಣ್ಣುಮಕ್ಕಳಿಗೆ 50 ಸಾವಿರ! ಸರ್ಕಾರದಿಂದ ಬಂಪರ್ ಗಿಫ್ಟ್

ಪಾಟ್ನಾ : ಪಿಯುಸಿ ತೇರ್ಗಡೆ ಮಾಡಿರುವ ಅವಿವಾಹಿತ ಹೆಣ್ಣು ಮಕ್ಕಳಿಗೆ 25 ಸಾವಿರ ರೂ. ಹಾಗೂ ಪದವಿ ಮುಗಿಸಿದ ವಿವಾಹಿತ ಮತ್ತು ಅವಿವಾಹಿತ ಹೆಣ್ಣುಮಕ್ಕಳಿಗೆ 50 ಸಾವಿರ ರೂ. ನೀಡಲಾಗುವುದು ಎಂದು ಬಿಹಾರ ಸರ್ಕಾರ ಘೋಷಣೆ ಮಾಡಿದೆ. ಸ್ತ್ರೀಯರಿಗೆ ಆರ್ಥಿಕ ನೆರವು, ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಸೇರಿದಂತೆ 20 ಅಂಶಗಳ ಯೋಜನೆಗೆ ಜಾರಿಗೆ ನಿರ್ಧರಿಸಿರುವ ನಿತೀಶ್ ಕುಮಾರ್ ಸರ್ಕಾರ ಅವಿವಾಹಿತ ಮತ್ತು ವಿವಾಹಿತ ಸ್ತ್ರೀಯರಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ಬಿಹಾರದಲ್ಲಿ ಫೆ. …

Read More »

ಈ ಸರ್ಕಾರ ಡಕೋಟಾ ಬಸ್ʼನಂತೆ ಕೆಟ್ಟಿದೆ, ಗೇರ್ ಹಾಕೋಗಲ್ಲ, ಒಂದ್ವೇಳೆ ಗೇರ್ ಹಾಕಿದ್ರೂ ಕಿತ್ತಿ ಬರುತ್ತೆ: ಸಿದ್ದರಾಮಯ್ಯ

ಬೆಂಗಳೂರು: ಈ ಸರ್ಕಾರ ಡಕೋಟಾ ಎಕ್ಸ್‌ಪ್ರೆಸ್‌ ಸಿನಿಮಾದ ಬಸ್ʼನಂತಿದೆ. ರಸ್ತೆಯಲ್ಲೇ ಡಕೋಟಾ ಬಸ್ ರೀತಿ ಕೆಟ್ಟು ಹೋಗಿದೆ. ಗೇರ್ ಹಾಕೋಕೆ ಆಗೋದಿಲ್ಲ, ಹಾಕಿದ್ರು ಗೇರ್ ಕಿತ್ತಿಕೊಂಡು ಬರುತ್ತೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಭಾಷಣ ಮಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ‘ ರಾಜ್ಯ ಸರ್ಕಾರ ರಾಜ್ಯಪಾಲರ ಭಾಷಣದ ಸುಳ್ಳುಗಳನ್ನ ಹೇಳಿಸಿದೆ. ಭಾಷಣದಲ್ಲಿ ಒಂಚೂರು ಸತ್ಯವಿಲ್ಲ. ಇದಕ್ಕೆ ಮುಂದಾಲೋಚನೆ‌ ಇಲ್ಲ, ದೂರದೃಷ್ಟಿಯೂ …

Read More »