Breaking News

ದರ್ಶನ್‌ಗೆ ಕೋರ್ಟ್‌ನಲ್ಲಿ ಮತ್ತೆ ಹಿನ್ನಡೆ – ಖುದ್ದು ಹಾಜರಾತಿ ಅರ್ಜಿ ವಜಾ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ  ನ್ಯಾಯಾಲಯದಲ್ಲಿ ಮತ್ತೆ ಹಿನ್ನಡೆಯಾಗಿದೆ. ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ಅನುಮತಿ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು 57ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರಾದ ಸುಜಾತ ಎಂ. ಸಾಂಬ್ರಾಣಿ ಅವರು ವಜಾಗೊಳಿಸಿದ್ದಾರೆ. ಪ್ರಾಸಿಕ್ಯೂಷನ್ ವಾದವನ್ನು ಪುರಸ್ಕರಿಸಿರುವ ನ್ಯಾಯಾಲಯ ವಿಡಿಯೋ ಕಾನ್ಫರೆನ್ಸ್ (VC) ಮೂಲಕವೇ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ. ವಿಡಿಯೋ ಕಾನ್ಫರೆನ್ಸ್ಮೂಲಕ ವಿಚಾರಣೆ ನಡೆದರೆ ಆಡಿಯೋ ಹಾಗೂ ವಿಡಿಯೋ ಗುಣಮಟ್ಟದ …

Read More »

ಪ್ರಧಾನಿ ಮೋದಿ ಭೇಟಿಯಾದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್  ಅವರಿಂದು (ಆ.17) ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಈ ಕುರಿತು ಸಿಎಂ ಫಡ್ನವೀಸ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಭೇಟಿ ವೇಳೆ ರಾಜ್ಯದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಯೋಜನೆಗಳ ಪ್ರಗತಿ ಹಾಗೂ ಕೇಂದ್ರ-ರಾಜ್ಯ ಜಂಟಿ ಯೋಜನೆಗಳಿಗೆ ಹೆಚ್ಚಿನ ಬೆಂಬಲ ಕೋರುವ ಕುರಿತು ಚರ್ಚೆ ನಡೆಸಿದ್ದಾಗಿ ತಿಳಿಸಿದ್ದಾರೆ. ಎಕ್ಸ್ ಪೋಸ್ಟ್‌ನಲ್ಲಿ ಏನಿದೆ? ಈ ಚರ್ಚೆಯ ವಿವರಗಳನ್ನು …

Read More »

ಪಾವನಾ ಹೊಸ ಲುಕ್ – ‘ಡಿಯರ್ ಹಸ್ಬೆಂಡ್’ ಚಿತ್ರತಂಡ ಸೇರಿದ ನಟಿ

ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೆ ಗ್ಲಾಮರಸ್ ಮತ್ತು ಟ್ರೆಡೀಷನಲ್ ಪಾತ್ರಗಳಲ್ಲಿ ಹೆಚ್ಚಾಗಿ ಮಿಂಚಿದ್ದ ನಟಿ ಪಾವನಾ ಗೌಡ, ಇದೀಗ ರಗಡ್ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಆರಂಭದಿಂದ ಇಲ್ಲಿಯವರೆಗೂ ಹೆಚ್ಚಾಗಿ ಸೌಂದರ್ಯ ಮತ್ತು ಸೌಮ್ಯ ಸ್ವಭಾವದ ಹುಡುಗಿಯ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡು ಗಮನ ಸೆಳೆದಿದ್ದ ಪಾವನಾ ಗೌಡ, ಈಗ ಉತ್ತರ ಕರ್ನಾಟಕದ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ನಟಿ ಪಾವನಾ ಗೌಡ ಇದೇ ಮೊದಲ …

Read More »

ಕೋಟೇಶ್ವರದಲ್ಲಿ ಗಮನಸೆಳೆದ ನಾಗಬನ ಮರಳು ಶಿಲ್ಪ

ಉಡುಪಿ: ಜಿಲ್ಲೆಯ ಕೋಟೇಶ್ವರದ ಹಳೆ ಅಳಿವೆ ಕಡಲ ಕಿನಾರೆಯಲ್ಲಿ ಇದೀಗ ವಿಶೇಷ ಮರಳು ಶಿಲ್ಪವೊಂದು ಗಮನ ಸೆಳೆಯುತ್ತಿದೆ. ತ್ರಿವರ್ಣ ಆರ್ಟ್ ಕ್ಲಾಸಸ್ ವಿದ್ಯಾರ್ಥಿಗಳು, ಕಲಾವಿದ ಹರೀಶ್ ಸಾಗಾ ಅವರ ತರಬೇತಿಯಲ್ಲಿ ಸುಮಾರು 12 ಅಡಿ ಅಗಲದ ವಿಸ್ತೀರ್ಣದಲ್ಲಿ ಈ ಕಲಾಕೃತಿಯನ್ನು ನಿರ್ಮಿಸಿದ್ದಾರೆ. ನಾಗದೇವರ ಆರಾಧನೆಯ ಜೊತೆಗೆ ಪ್ರಕೃತಿಯನ್ನು ಉಳಿಸುವ ಸಂದೇಶವನ್ನೂ ಕಲಾಕೃತಿ ಸಾರುತ್ತಿದೆ. ಮರಳಿನ ಕಣಕಣದಲ್ಲೂ ಕಲಾವಿದರ ಕೈಚಳಕ ಮೂಡಿಬಂದಿದೆ. ನಾಗಬನದ ಮೂಲಕ ಸೇವ್ ನೇಚರ್ ಸಂದೇಶ ಸಾರಲಾಗಿದೆ. ನಾಗಾರಾಧನೆಯ ಸಂಪ್ರದಾಯದ …

Read More »

ಮದುವೆಯಾಗುವಂತೆ ಒತ್ತಾಯ – ಪ್ರೇಯಸಿಯನ್ನು ಕೊಂದು ಗೋಣಿ ಚೀಲದಲ್ಲಿ ಶವ ಬಚ್ಚಿಟ್ಟು ಪ್ರಿಯಕರ ಪರಾರಿ

ಹೈದರಾಬಾದ್: ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಪ್ರೇಯಸಿಯನ್ನು  21 ವರ್ಷದ ಯುವಕನೊಬ್ಬ ಚಾಕುವಿನಿಂದ ಇರಿದು ಹತ್ಯೆ ಮಾಡಿ, ಬಳಿಕ ಆಕೆಯ ಮೃತದೇಹವನ್ನು ಗೋಣಿ ಚೀಲದಲ್ಲಿ ಬಚ್ಚಿಟ್ಟು ಪರಾರಿಯಾಗಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮೃತ ಯುವತಿಯನ್ನು ಬಿಹಾರ ಮೂಲದ ರೆಹಾನಾ ಎಂದು ಗುರುತಿಸಲಾಗಿದೆ. ರೆಹಾನಾ ಹೈದರಾಬಾದ್‌ನ ಬ್ಯಾಂಕ್ವೆಟ್ ಹಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬಿಹಾರ ಮೂಲದವರೇ ಆಗಿರುವ 21 ವರ್ಷದ ಅಹ್ಮದ್ ಸಲಾಂ ಎಂಬಾತನೊಂದಿಗೆ ರೆಹಾನಾ ಕಳೆದ ಒಂದು ವರ್ಷದಿಂದ ಸಂಬಂಧದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. …

Read More »

ಬೆಂಗಳೂರಿನ ಖಾಸಗಿ ಶಾಲೆಯಲ್ಲಿ H1N1; ಇಬ್ಬರು ಶಿಕ್ಷಕರಿಗೆ ಸೋಂಕು ದೃಢ

ಬೆಂಗಳೂರು: ನಗರದ ಖಾಸಗಿ ಶಾಲೆಯೊಂದರ ಇಬ್ಬರು ಶಿಕ್ಷಕರಿಗೆ ಹೆಚ್1ಎನ್1  ದೃಢಪಟ್ಟಿದ್ದು, ಆತಂಕ ಮೂಡಿಸಿದೆ. ಸದ್ಯಕ್ಕೆ ಹೈಸ್ಕೂಲ್ ಮಾತ್ರ ಬಂದ್ ಮಾಡಲಾಗಿದೆ. ಮಕ್ಕಳಿಗೆ ಆನ್‌ಲೈನ್ ಮೂಲಕ ಕ್ಲಾಸ್ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಪ್ರೈಮರಿ ಶಾಲೆ ಸದ್ಯ ಓಪನ್ ಆಗಿದೆ. ಹಂತ ಹಂತವಾಗಿ ಶಾಲೆ ರಿ-ಓಪನ್ ಆಗಲಿದೆ. ಒಟ್ಟು 500 ಮಕ್ಕಳಿಗೆ ಶೀತ ಜ್ವರ ಬಂದಿತ್ತು. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಷನ್ ಮಾಡಿದ್ದೇವೆ. ಆತಂಕ ಬೇಡ.. ಮಕ್ಕಳಿಗೆ ಯಾರಿಗೂ H1N1 ಕಾಣಿಸಿಕೊಂಡಿಲ್ಲ. ಸುತ್ತಮುತ್ತ ಬೀದಿಬದಿ …

Read More »

SIR ನಮೂನೆ ಹಿಂದಿರುಗಿಸಲು ಇಂದೇ ಕೊನೆಯ ದಿನ; ತಪ್ಪಿದ್ರೆ ಮತದಾರರ‌ ಪಟ್ಟಿಯಿಂದ ಹೆಸರು ಡಿಲೀಟ್

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಗಣತಿ ನಮೂನೆ ವಾಪಸ್ ನೀಡಲು ಇಂದು (ಆ. 17) ಸಂಜೆ 4 ಗಂಟೆಯವರೆಗೆ ಮಾತ್ರ ಅವಕಾಶ ಇದೆ. ಈಗಾಗಲೇ ಬೂತ್ ಮಟ್ಟದ ಅಧಿಕಾರಿ (BLO) ಮೂಲಕ ಗಣತಿ ನಮೂನೆ ಪಡೆದಿದ್ದರೆ, ಅದರಲ್ಲಿ ಬೇಕಾದ ಮಾಹಿತಿಯನ್ನು ಭರ್ತಿ ಮಾಡಿ, ಸಹಿ ಮಾಡಿ ಇಂದು ಸಂಜೆ 4 ಗಂಟೆಯೊಳಗೆ ಸಂಬಂಧಪಟ್ಟ BLOಗೆ ವಾಪಸ್ ನೀಡಬೇಕು. ಹೆಸರು ರದ್ದಾಗಿದ್ದರೆ ಏನು ಮಾಡಬೇಕು? SIR ಪ್ರಕ್ರಿಯೆಯಲ್ಲಿ …

Read More »

ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು – ನಿವೃತ್ತ ಶಿಕ್ಷಕನ ಬರ್ಬರ ಹತ್ಯೆ

ವಿಜಯಪುರ: ಭೀಮಾ ತೀರದಲ್ಲಿ  ಮತ್ತೊಮ್ಮೆ ನೆತ್ತರು ಹರಿದಿದೆ. ನಿವೃತ್ತ ಶಿಕ್ಷಕನ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ವಿಜಯಪುರ  ಜಿಲ್ಲೆಯ ಇಂಡಿ ತಾಲೂಕಿನ ಚೌಡಿಹಾಳ ರಸ್ತೆಯ ಪೂಜಾರಿ ವಸ್ತಿ ಬಳಿ ನಡೆದಿದೆ. ಸಿದ್ದಪ್ಪ ಅಂಜುಟಗಿ (63) ಹತ್ಯೆಯಾದ ನಿವೃತ್ತ ಶಿಕ್ಷಕ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಹತ್ಯೆ ಬಳಿಕ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ಇಂಡಿ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ …

Read More »

ಅಪಾರ್ಟ್‌ಮೆಂಟ್ ಮನೆ ಬೀಗ ಮುರಿದು 1.55 ಲಕ್ಷ ಮೌಲ್ಯದ ಲ್ಯಾಪ್‌ಟಾಪ್, ಮೊಬೈಲ್ ಕಳವು

ಹುಬ್ಬಳ್ಳಿ: ಅಪಾರ್ಟ್‌ಮೆಂಟ್‌ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಬೀಗ ಮುರಿದು ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಫೋನ್ ಕದ್ದೊಯ್ದಿರುವ ಘಟನೆ ಹುಬ್ಬಳ್ಳಿಯ ವಿದ್ಯಾನಗರದಲ್ಲಿ ನಡೆದಿದೆ. ಹುಬ್ಬಳ್ಳಿಯ ವಿದ್ಯಾನಗರದ ಶಿರೂರ ಪಾರ್ಕ್‌ನ ಸೃಷ್ಟಿ ಎಲೈಟ್ ಅಪಾರ್ಟ್‌ಮೆಂಟ್‌ನಲ್ಲಿ ಈ ಕಳ್ಳತನ ನಡೆದಿದೆ. ಶದರ್‌ಕುಮಾರ ಮೌರ್ಯ ಎಂಬುವರ ಮನೆಗೆ ಬೀಗ ಹಾಕಿದ್ದ ವೇಳೆ ಕಳ್ಳರು ಕೃತ್ಯ ಎಸಗಿದ್ದಾರೆ. ಮನೆಯ ಬಾಗಿಲಿನ ಬೀಗ ಮುರಿದು ಒಳಗೆ ಪ್ರವೇಶಿಸಿದ ಕಳ್ಳರು, 1.55 ಲಕ್ಷ ಮೌಲ್ಯದ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಫೋನ್ …

Read More »

ಹೆಂಡತಿಯ ಹತ್ಯೆಗೈದ BSF ಯೋಧ – ಮಹಡಿಯಿಂದ ಬಿದ್ದು ಸಾವು ಎಂದು ಬಿಂಬಿಸಲು ಯತ್ನ

ಚಂಡೀಗಢ: ರಜೆ ಮೇಲೆ ಮನೆಗೆ ಬಂದಿದ್ದ ಗಡಿ ಭದ್ರತಾ ಪಡೆ ಯೋಧನೊಬ್ಬ ತನ್ನ ಪತ್ನಿಯನ್ನು ಹತ್ಯೆ ಮಾಡಿ, ಆಕೆ ಮನೆಯ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾಳೆ ಎಂದು ಬಿಂಬಿಸಲು ಯತ್ನಿಸಿರುವ ಘಟನೆ ಪಂಜಾಬ್‌ನ  ಹೋಶಿಯಾರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ರಾಮಾ ಎಂದು ಗುರುತಿಸಲಾಗಿದೆ. ಸುಮಾರು 12 ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಗೆ ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಇದ್ದಾರೆ. ರಾಮಾ ಕುಟುಂಬದವರು ನೀಡಿರುವ ದೂರಿನ ಪ್ರಕಾರ, ಆಕೆಯ …

Read More »