Breaking News

ಅಂಬೇವಾಡಿ, ಮೌಳಂಗಿ ಸುತ್ತಮುತ್ತ ಕಾಡಾನೆ ಹಾವಳಿ

ದಾಂಡೇಲಿ : ನಗರದ ಸಮೀಪದ ಮೌಳಂಗಿ, ಹಳೆ ಕೊಣಪ, ಕೊಣಪ ಹಾಗೂ ಅಲ್ಲೇ ಹತ್ತಿರದ ವಿಟ್ನಾಳ, ಹರೇಗಾಳಿ, ಅಂಬೇವಾಡಿ ಬರ್ಚಿ ರಸ್ತೆ, ಗೋಬ್ರಾಳ ಪ್ರದೇಶ ವ್ಯಾಪ್ತಿಯಲ್ಲಿ ಕಳೆದ ಎರಡ್ಮೂರು ತಿಂಗಳುಗಳಿಂದ ಕಾಡಾನೆಯೊಂದು ಸ್ಥಳೀಯ ರೈತರ ಕೃಷಿ ಬೆಳೆಗಳ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ಕೃಷಿ ಬೆಳೆಗಳು ಹಾನಿಯಾಗುತ್ತಿದೆ. ಪರಿಣಾಮವಾಗಿ ಸ್ಥಳೀಯ ರೈತರು ಸಂಕಷ್ಟವನ್ನು ಎದುರಿಸುವಂತಾಗಿದೆ. ಶುಕ್ರವಾರವೂ ಕಾಡಾನೆ ಮತ್ತೆ ಸ್ಥಳೀಯರ ಕೃಷಿ ಜಮೀನಿಗೆ ನುಗ್ಗಿದೆ. ಈ ಸಂದರ್ಭದಲ್ಲಿ ಸ್ಥಳೀಯರು …

Read More »

ಜಯದೇವಕ್ಕೆ ಇನ್ನೂ ಇಲ್ಲ ಪೂರ್ಣಾವಧಿ ನಿರ್ದೇಶಕ

ಬೆಂಗಳೂರು: ಡಾ| ಸಿ.ಎನ್‌.ಮಂಜುನಾಥ್‌ ನಿವೃತ್ತಿಯಿಂದ ತೆರವಾಗಿರುವ ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನಗಳ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಸ್ಥಾನದ ಮೇಲೆ ಹಲವರು ಕಣ್ಣಿಟ್ಟಿದ್ದು, ಹುದ್ದೆ ಗಿಟ್ಟಿಸಲು ಭಾರೀ ಪೈಪೋಟಿ ಶುರುವಾಗಿದೆ. ಆದರೆ ಈ ನಡುವೆಯೇ, ಇಷ್ಟೊಂದು ದೊಡ್ಡ ಸಂಸ್ಥೆಗೆ ನಿರ್ದೇಶಕರಾಗಲು ಸಂಸ್ಥೆಯಲ್ಲಿಯೇ ಹಲವು ಮಂದಿ ಹಿರಿಯರು, ಅನುಭವಿಗಳು, ಸೇವಾ ಹಿರಿತನವುಳ್ಳವರಿದ್ದರೂ ನಿವೃತ್ತರೊಬ್ಬರನ್ನು ಹಂಗಾಮಿಯಾಗಿ ನೇಮಿಸಿರುವುದು ಸಂಸ್ಥೆಯಲ್ಲಿ ಅನೇಕರ ಹುಬ್ಬೇರಿಸಿದೆ.   ಬೆಂಗಳೂರು, ಮೈಸೂರು, ಕಲಬುರಗಿ ಸೇರಿ 3 ಸಾವಿರ ಹಾಸಿಗೆ …

Read More »

ಬಸ್ ನಿಲ್ದಾಣದಲ್ಲಿ ಕಳ್ಳತನ: ಮೂವರು ಕಳ್ಳಿಯರ ಬಂಧನ

ವಿಜಯಪುರ: ನಗರದ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರಣ ಆಭರಣ ಕಳ್ಳತನ ಪ್ರಕರಣದಲ್ಲಿ ನಗರದ ಪೊಲೀಸರು ಕಲಬುರಗಿ ಮೂಲದ ಮೂವರು ಅಂತರ ಜಿಲ್ಲಾ ಕಳ್ಳಿಯರನ್ನು ಬಂಧಿಸಿ, 8.70 ಲಕ್ಷ ರೂ. ಮೌಲ್ಯದ 146 ಗ್ರಾಂ ಚಿನ್ನಾಭರಣಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.   ಕಳ್ಳತನ ಆರೋಪದಲ್ಲಿ ಬಂಧಿತರನ್ನು ಕಲಬುರಗಿ ನಗರದ ಬಾಪು ನಗರ ನಿವಾಸಿಗಳಾದ 56 ವರ್ಷದ ಗಂಗೂಬಾಯಿ ನಾರಾಯಣ ಕಾಳೆ, 44 ವರ್ಷದ ನರಸಮ್ಮ ಅಮಿತ ಕುಮಾರ ಪಾಟೀಲ ಹಾಗೂ 35 ವರ್ಷದ …

Read More »

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ 100 ಕೋಟಿ ರೂ ಮಂಜೂರು: ಮಂಗಳಾ ಅಂಗಡಿ

ಬೆಳಗಾವಿ: ಕೇಂದ್ರದ ಉಚ್ಚತರ ಶಿಕ್ಷಾ ಅಭಿಯಾನ ಯೋಜನೆಯಡಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯಕ್ಕೆ 100 ಕೋಟಿ ರೂ ಮಂಜೂರು ಮಾಡಲಾಗಿದೆ ಎಂದು ಬೆಳಗಾವಿ ಸಂಸದೆ ಮಂಗಲಾ ಸುರೇಶ್ ಅಂಗಡಿ ಹೇಳಿದರು. ದೇಶದಾದ್ಯಂತ ಒಟ್ಟು 78 ವಿಶ್ವವಿದ್ಯಾಲಯಗಳನ್ನು ಈ ಯೋಜನೆಯಡಿ ಆಯ್ಕೆಯಾಗಿದ್ದು ಅದರಲ್ಲಿ ರಾಣಿ ಚೆನ್ನಮ್ಮ ವಿವಿ ಸಹ ಒಂದಾಗಿದೆ. ಫೆ.20ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದರು. ಈ ಅನುದಾನವನ್ನು ರಾಣಿ …

Read More »

ಫಲಕ ವಿರುದ್ಧ ಮೋದಿ, ಅಮಿತ್‌ ಶಾಗೆ ದೂರು ನೀಡಲು ಮಹಾರಾಷ್ಟ್ರ ನಿರ್ಧಾರ

ಬೆಳಗಾವಿ: ಬೆಳಗಾವಿಯ ಗಡಿ ವಿವಾದ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಅಂತಿಮ ತೀರ್ಪು ಬರುವವರೆಗೂ ಯಾವುದೇ ಕಾರಣಕ್ಕೂ ಬೆಳಗಾವಿಯಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯಗೊಳಿಸಬಾರದು ಎಂದು ಆಗ್ರಹಿಸಲು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ಕರ್ನಾಟಕ ಸರಕಾರದ ವಿರುದ್ಧ ದೂರು ನೀಡಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ.   ಮುಂಬಯಿಯ ಸಹ್ಯಾದ್ರಿ ಅತಿಥಿ ಗೃಹದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಮುಖಂಡರ ಜತೆಗೆ ಮಹಾರಾಷ್ಟ್ರದ ಸಮನ್ವಯ ಸಚಿವ ಶಂಭುರಾಜೆ ದೇಸಾಯಿ ನೇತೃತ್ವದಲ್ಲಿ …

Read More »

ಅರ್ಧರಾತ್ರಿಯಲ್ಲಿ ಸಂಪೂರ್ಣ ಕಾಶಿ ಸುತ್ತಿದ ಪ್ರಧಾನಿ.

ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ತಮ್ಮ ಸ್ವಂತ ಕ್ಷೇತ್ರವಾದ ವಾರಣಾಸಿಗೆ ಗುರುವಾರ ಅರ್ಧರಾತ್ರಿ ದಿಢೀರನೆ ಭೇಟಿ ನೀಡಿ ಸ್ಥಳೀಯವಾಗಿ ನಡೆದ ಇತ್ತೀಚಿನ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.   ಪ್ರಧಾನಿ ಮೋದಿ ಅವರು ನೂತನವಾಗಿ ನಿರ್ಮಿಸಿರುವ ಶಿವಪುರ-ಫುಲ್ವಾರಿಯಾ-ಲಾ-ತಾರಾ ಮಾರ್ಗವನ್ನು ಪರಿಶೀಲಿಸಲಾಯಿತು. ಅವರೊಂದಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಉಪಸ್ಥಿತರಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ   360 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಈ …

Read More »

ಬಿಜೆಪಿ ವಿರುದ್ಧ ಅವಹೇಳನಕಾರಿ ಜಾಹೀರಾತು: ‘ಕಾಂಗ್ರೆಸ್ ನಾಯಕ’ರಿಗೆ ಕೋರ್ಟ್ ಸಮನ್ಸ್

ಬೆಂಗಳೂರು: ಬಿಜೆಪಿ ವಿರುದ್ಧ ಅವಹೇಳನಕಾರಿ ಜಾಹೀರಾತು ವಿಚಾರವಾಗಿ ಕಾಂಗ್ರೆಸ್ ನಾಯಕರಿಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ಕಾಂಗ್ರೆಸ್ ಪಕ್ಷದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಹಾಗೂ ರಾಹುಲ್‌ಗಾಂಧಿಗೆ ಸಮನ್ಸ್ ಜಾರಿಗೊಳಿಸಿದೆ. ಬಿಜೆಪಿ ವಿರುದ್ಧವಾಗಿ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಿಂದ ಡಬ್ಬಲ್ ಎಂಜಿನ್ ಸರ್ಕಾರ ಹಾಗೂ 40% ಸರ್ಕಾರ ಎಂದು ಜಾಹೀರಾತು ನೀಡಲಾಗಿತ್ತು. ಈ ಸಂಬಂಧ ಬಿಜೆಪಿ ಕಾನೂನು ಘಟಕದ ವಕೀಲ ವಿನೋದ್‌ ಕುಮಾರ್ ಸಲ್ಲಿಸಿದ್ದ ಖಾಸಗಿ ದೂರು ನೀಡಿದ್ದರು. ಇಂದು ಜನಪ್ರತಿನಿಧಿಗಳ …

Read More »

ಕಾಂಗ್ರೆಸ್ ಸಂಸದ ‘ಡಿ.ಕೆ.ಸುರೇಶ್’ ವಿರುದ್ಧ ‘ಡಾ.ಮಂಜುನಾಥ್’ ಕಣಕ್ಕಿಳಿಯಲು ‘NDA’ ಚಿಂತನೆ

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರನ್ನು ಕಣಕ್ಕಿಳಿಸಲು ಎನ್ಡಿಎ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಗುರುವಾರ ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರ ಸಭೆಯಲ್ಲಿ ಮಂಜುನಾಥ್ ಅವರ ಹೆಸರು ಪ್ರಸ್ತಾಪಿಸಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.   ಪದ್ಮಶ್ರೀ ಪುರಸ್ಕೃತ ಡಾ.ಮಂಜುನಾಥ್ ಅವರು ಹೃದ್ರೋಗ ತಜ್ಞರಾಗಿದ್ದು, ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ …

Read More »

ಮದುವೆ ಮುರಿದ ಪ್ರಿಯಕರ; ಧರಣಿ ಕುಳಿತ ಯುವತಿ

(ಬೆಳಗಾವಿ ಜಿಲ್ಲೆ): ಪ್ರೀತಿಸುತ್ತಿದ್ದ ಯುವತಿಯನ್ನು ಪತಿ ಮನೆಯಿಂದ ಮರಳಿ ಕರೆದುಕೊಂಡು ಬಂದ ಯುವಕ; ತಾನೂ ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಾನೆ. ಇದರಿಂದ ಬೇಸತ್ತ ಯುವತಿ ಪ್ರೀತಿಸಿದ ಯುವಕನ ಮನೆ ಮುಂದೆ ಏಕಾಂಗಿ ಆಗಿ ಧರಣಿ ನಡೆಸಿದ ಪ್ರಕರಣ ಪಟ್ಟಣದಲ್ಲಿ ಗುರುವಾರ ನಡೆದಿದೆ.   ಇದರಿಂದ ಎರಡೂ ಕುಟುಂಬದವರ ಮಧ್ಯೆ ಮಾತಿನ ಜಟಾಪಟಿ ನಡೆಯಿತು. ಯುವಕನ ಮನೆಯವರು ಬಾಗಿಲನ್ನು ಹಾಕಿಕೊಂಡರೆ, ಯುವಕ ಮಾತ್ರ ಎಲ್ಲೋ ಹೋಗಿದ್ದಾನೆ ಎಂದು ಕುಟುಂಬದವರು ತಿಳಿಸಿದರು. ಇಲ್ಲಿಯ ಸೋಮವಾರ ಪೇಟೆಯ …

Read More »

ಅಥಣಿ ತಾಲ್ಲೂಕಿನಾದ್ಯಂತ ಚುಟುಕುಹಬ್ಬ ಸಂತಸದ ಸಂಗತಿ: ಡಾ ಮಹಾಂತೇಶ ಉಕ್ಕಲಿ

ಅಥಣಿ: ‘ತಾಲ್ಲೂಕಿನ‌ ಪ್ರತಿಯೊಂದು ಶಾಲೆಗಳಿಗೆ ತೆರಳಿ ಚುಟುಕುಗೋಷ್ಠಿ ಆಯೋಜಿಸುವ ಮೂಲಕ ತಾಲ್ಲೂಕಿನಾದ್ಯಂತ ಚುಟುಕುಹಬ್ಬ ಮಾಡುತ್ತಿರುವುದು ಸಂತಸದ ಸಂಗತಿ’ ಎಂದು ಸಾಹಿತಿ ಡಾ ಮಹಾಂತೇಶ ಉಕ್ಕಲಿ ಹೇಳಿದರು. ತಾಲ್ಲೂಕಿನ‌ ಕಿರಣಗಿ ಗ್ರಾಮದಲ್ಲಿ ಚುಟುಕು ಸಾಹಿತ್ಯ ಪರಿಷತ್ ಹಾಗೂ ಅಥಣಿ ತಾಲ್ಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ಜರುಗಿದ ‘ಶಾಲೆಗೊಂದು ಚುಟುಕುಗೋಷ್ಠಿ’ ಕಾರ್ಯಕ್ರಮದಲ್ಲಿ ಮಾತನಾಡಿ, ನೂತನ ಕವಿಗಳನ್ನು ಹುಟ್ಟುಹಾಕುವ ಪ್ರಯತ್ನ ಮಾಡಿ ಚುಟುಕು‌ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಆಯೋಜಕರ ಪ್ರಯತ್ನ ಅಭಿನಂದನಾರ್ಹ ಎಂದರು.   ಯೋಗ …

Read More »