ಬಾಗಲಕೋಟೆ: ಈ ಬಾರಿ ಜೂನ್ ಕಳೆದ್ರೂ ವಿಜಯಪುರ ಜಿಲ್ಲೆಯಲ್ಲಿ ಮಳೆ ಇಲ್ಲ. ಜೊತೆಗೆ ಆಲಮಟ್ಟಿ ಜಲಾಶಯವೂ ಖಾಲಿ ಆಗಿದೆ. ಮಳೆಯಿಲ್ಲದ್ದಕ್ಕೆ ಕೃಷ್ಣೆಯ ಒಡಲು ಬತ್ತಿಹೋಗಿದ್ದು, ಅವಳಿ ಜಿಲ್ಲೆಗಳಾದ ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಯ ಜನರಿಗೆ ಆತಂಕ ಶುರುವಾಗಿದೆ. ಈ ಬಾರಿ ವಿಜಯಪುರ ಜಿಲ್ಲೆಯಲ್ಲಿ ಜೂನ್ ಕಳೆದ್ರೂ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಮಳೆ ಆಗಿಲ್ಲ. ಇದರಿಂದ ನದಿಗಳು ಬತ್ತಿ ಹೋಗ್ತಿವೆ. ಜಲಾಶಯಗಳು ಖಾಲಿ ಆಗ್ತಿವೆ. ಇದರಿಂದ ಜನರ ಮೊಗದಲ್ಲಿ ಆತಂಕ ಮೂಡಿದೆ. …
Read More »ಬೆಳಗಾವಿ ಯಳ್ಳೂರ ರಸ್ತೆಯ ಕೆಎಲ್‌ಇ ಶತಮಾನೋತ್ಸವ
ಬೆಳಗಾವಿ: ವೈದ್ಯಕೀಯ ವೃತ್ತಿ ಮೂಲ ಆತ್ಮ ಪ್ರಾಮಾಣಿಕತೆ ಮತ್ತು ಅನುಕಂಪ. ಎಷ್ಟೇ ಹಿರಿಯ ಅನುಭವಿ ಮತ್ತು ಪಾಂಡಿತ್ಯವಿರುವ ವೈದ್ಯನೇ ಇರಲಿ, ರೋಗಿಗೆ ಮೋಸ ಮಾಡದೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವರು ಮಾತ್ರ ಅತ್ಯುತ್ತಮ ವೈದ್ಯರಾಗಿರುತ್ತಾರೆ ಎಂದು ಯುಎಸ್‌ಎಂ-ಕೆಎಲ್‌ಇ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ ಹೇಳಿದರು. ರಾಷ್ಟ್ರೀಯ ವೈದ್ಯರ ದಿನ ಪ್ರಯುಕ್ತ ಬುಧವಾರ ಯಳ್ಳೂರ ರಸ್ತೆಯ ಕೆಎಲ್ಇ ಸಂಸ್ಥೆಯ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ರಾಜ್ಯದ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ …
Read More »ಬೆಳಗಾವಿ ಮಹಾಂತ ಭವನದಲ್ಲಿ ಅಂಚೆ ಚೀಟಿ, ನಾಣ್ಯಗಳ ಪ್ರದರ್ಶನ
ಬೆಳಗಾವಿ : ಅಂಚೆಚೀಟಿ ಹಾಗೂ ನಾಣ್ಯ ಸಂಗ್ರಹಣೆ ನಾಗರಿಕರು ಮತ್ತು ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಅತ್ಯಂತ ಸಹಕಾರಿಯಾಗಿದೆ. ಇತಿಹಾಸ, ಸಂಸ್ಕೃತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ದೃಷ್ಟಿಯಿಂದ ಅಮೂಲ್ಯ ಮಾಹಿತಿಯ ಭಂಡಾರವಾಗಿದೆ. ಈ ಎರಡೂ ಅಮೂಲ್ಯ ಸಂಗ್ರಹಣೆಗಳು ನಮ್ಮ ಇತಿಹಾಸ ಬಹುಮುಖ್ಯ ಸಂಪತ್ತು ಎಂದು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು. ಮಹಾಂತೇಶ ನಗರ ರಹವಾಸಿಗಳ ಸಂಘ, ಅಂಚೆ ಇಲಾಖೆ ಹಾಗೂ ಅಂಚೆಚೀಟಿ ಮತ್ತು ನಾಣ್ಯ ಸಂಗ್ರಹಣಾ ಸಂಘದಿಂದ ಮಹಾಂತೇಶ ನಗರ ಮಹಾಂತ ಭವನದಲ್ಲಿ …
Read More »ವಚನ ಕಂಠಪಾಠ ಚನ್ನಪ್ಪ ನರಸನ್ನವರಿಗೆ ಪ್ರಥಮ ಸ್ಥಾನ
ಬೆಳಗಾವಿ:ಇಲ್ಲಿನ ಮಹಾಂತೇಶ ನಗರದ ಲಿಂಗಾಯತ ಸಂಘಟನೆ ಪ್ರಾರ್ಥನಾ ಮಂದಿರ, ಡಾ.ಎಫ್.ಜಿ.ಹಳಕಟ್ಟಿ ಭವನದಲ್ಲಿ ನಡೆದ ಜಿಲ್ಲಾಮಟ್ಟದ ಬಸವಾದಿ ಶರಣರ ಆಯ್ದ 15 ಶರಣರ ವಚನ ಕಂಠಪಾಠ ಸ್ಪರ್ಧೆಯಲ್ಲಿ 239 ವಚನಗಳನ್ನು ಕಂಠಪಾಠವಾಗಿ ಹೇಳುವ ಮೂಲಕ ಚನ್ನಪ್ಪ ನರಸನ್ನವರ ಪ್ರಥಮ ಸ್ಥಾನ ಪಡೆದಿದ್ದಾರೆ. ಬೆಳಗಾವಿ ಗುರು ಬಸವ ಬಳಗ ವತಿಯಿಂದ ವಾಗ್ದೇವಿ ತಾಯಿಯವರು ಹಾಗೂ ಕುಮುದಿನಿ ತಾಯಿಯವರ ಪ್ರೇರಣೆ ಮತ್ತು ಪ್ರೋತ್ಸಾಹದೊಂದಿಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ಸರಸ್ವತಿ ಯಡಾಲ 208 …
Read More »ಬೆಳಗಾವಿ : ಗ್ಯಾರಂಟಿ ನೂನ್ಯತೆಗಳು ಶೀಘ್ರ ಪರಿಹಾರ
ಬೆಳಗಾವಿ : ಗ್ಯಾರಂಟಿ ಯೋಜನೆಗಳಲ್ಲಿನ ಸಣ್ಣ ಪುಟ್ಟ ನೂನ್ಯತೆಗಳನ್ನು ಶೀಘ್ರ ಪರಿಹರಿಸಲಾಗುವುದು. ಇದಕ್ಕೆ ಪೂರಕವಾಗಿ ಅನರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯದ ಮೇಲೆ ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷರು, ಸದಸ್ಯರು ನಿಯಮಿತವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ (ಬ್ಯಾಡಗಿ) ನಿರ್ದೇಶನ ನೀಡಿದರು. ಜಿಪಂ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ಗ್ಯಾರಂಟಿ ಯೊಜನೆಗಳ ಅನುಷ್ಠ್ಠಾನ ಪ್ರಾಧಿಕಾರ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೃಹಲಕ್ಷ್ಮೀ …
Read More »ಬೆಳಗಾವಿ:ಮುಂಗಾರಿನ ಹಂಗಾಮಿನಲ್ಲಿ ರೋಗ ಬಾಧಿಸುವ ಆತಂಕ
ಬೆಳಗಾವಿ:ಮುಂಗಾರಿನ ಹಂಗಾಮಿನಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಗುರುವಾರ ಜಿಟಿಜಿಟಿ ಮಳೆ ಸುರಿದರೆ, ಇನ್ನೂ ಕೆಲವು ಪ್ರದೇಶಗಳಲ್ಲಿ ದಿನವಿಡೀ ತಂಪಾದ ವಾತಾವರಣ ಮುಂದುವರಿಯಿತು. ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ರೈತರಲ್ಲಿ ಒಂದೆಡೆ ಸಂತಸ ಮೂಡಿದರೆ, ಮತ್ತೊಂದೆಡೆ ಬೆಳೆಗಳಿಗೆ ರೋಗ ಬಾಧಿಸುವ ಆತಂಕ ಹೆಚ್ಚಾಗಿದೆ. ಕಳೆದ ಎರಡು ದಿನಗಳಿಂದ ಬೆಳಗಾವಿ ಮಹಾನಗರದಲ್ಲಿ ನಿರಂತವಾಗಿ ಜಿಟಿಜಿಟಿ ಮಳೆ ಸುರಿಯುತ್ತಿದೆ. ಗ್ರಾಮೀಣ ಭಾಗದಲ್ಲಿ ಒಮ್ಮೆ ಮಳೆಗಿಂತ ಮೂಡಕವಿದ ತಂಪಾದ ವಾತಾವರಣವಿದೆ. ಗೋಕಾಕ, ರಾಯಬಾಗ, ಹುಕ್ಕೇರಿ, …
Read More »ಕಾಲೇಜಿಗೆ ಬರುತ್ತಿದ್ದ ವೇಳೆ ಅಪಘಾತ: ಅಣ್ಣ ಸಾವು, ತಂಗಿಗೆ ಗಂಭೀರ ಗಾಯ
ಚಿಕ್ಕಬಳ್ಳಾಪುರ: ತಾಲೂಕಿನ ನಂದಿ ಗ್ರಾಮದ ಸಮೀಪವಿರುವ ಕಣಿವೆ ಬಸವಣ್ಣ ರಸ್ತೆಯಲ್ಲಿ ಥಾರ್ ಜೀಪು ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ಬೈಕ್ ಸವಾರ ಮೃತಪಟ್ಟು, ವಿದ್ಯಾರ್ಥಿನಿ ಗಾಯಗೊಂಡಿರುವ ಘಟನೆ ನಡೆದಿದೆ. ದೊಡ್ಡಬಳ್ಳಾಪುರ ತಾಲೂಕಿನ ಸೊಣಮಾರನಹಳ್ಳಿಯ ಶಶಿಕುಮಾರ್ (32) ಮೃತ. ಈತನ ಸಹೋದರಿ ಚಂದನಾ (21) ಗಾಯಾಳು. ತಂಗಿಯನ್ನು ಗ್ರಾಮದಿಂದ ಚಿಕ್ಕಬಳ್ಳಾಪುರದಲ್ಲಿನ ಕಾಲೇಜಿಗೆ ಕರೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಥಾರ್ ಜೀಪು ವೇಗವಾಗಿ ಬಂದು ಬೈಕಿಗೆ ಡಿಕ್ಕಿ ಹೊಡೆದಿದೆ. ಬಳಿಕ ಅಪಘಾತಕ್ಕೆ ಕಾರಣನಾದ ಅಪರಿಚಿತ ಚಾಲಕನೇ ಇಬ್ಬರು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಶಶಿಕುಮಾರ್ ಆ ವೇಳೆಗಾಗಲೇ ಮೃತಪಟ್ಟಿರುವುದನ್ನು ವೈದ್ಯರು ಖಾತ್ರಿಪಡಿಸಿದ್ದಾರೆ. ಇದರಿಂದ ಆರೋಪಿಯು ಭಯದಲ್ಲಿ ತನ್ನ ವಾಹನವನ್ನು ಪೊಲೀಸ್ ಠಾಣೆಯ ಮುಂಭಾಗ ಬಿಟ್ಟು ಪರಾರಿಯಾಗಿದ್ದಾನೆ. ಹಾಗೆಯೇ ಗಾಡಿಯ ನಂಬರ್ ಪ್ಲೇಟ್ ಗಳನ್ನು ಕಿತ್ತು ಹಾಕಿದ್ದಾನೆ. ನಂದಿ ಗಿರಿಧಾಮ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕಣಿವೆ ಬಸವಣ್ಣ ರಸ್ತೆಯ ಇಳಿಜಾರಿನಲ್ಲಿ ವಾಹನಗಳನ್ನು ವೇಗವಾಗಿ ಓಡಿಸುವಂತಹುದು, ಅಪಘಾತಗಳು ಸಂಭವಿಸುವಂತಹುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Read More »ಜನರಿಗೆ ಲೈಂಗಿಕ ಶಿಕ್ಷಣದ ಅವಶ್ಯವಿದೆ
ಧಾರವಾಡ: ಪ್ರತಿ ವರ್ಷ ನಮ್ಮ ದೇಶದಲ್ಲಿ ಸುಮಾರು 50 ಲಕ್ಷ ಬಲವಂತದ ಗರ್ಭಪಾತ ಘಟನೆಗಳು ನಡೆಯುತ್ತಿದ್ದು, ಜನರಿಗೆ ಲೈಂಗಿಕ ಶಿಕ್ಷಣ ನೀಡುವುದು ಅವಶ್ಯಕವಾಗಿದೆ ಎಂದು ಹಿರಿಯ ಮಹಿಳಾ ಆರೋಗ್ಯ ತಜ್ಞ ಡಾ. ಸಂಜೀವ ಕುಲಕರ್ಣಿ ಹೇಳಿದರು. ಅವರು ಪಂ. ಬಸವರಾಜಶಾಸ್ತ್ರೀ ಕೊಂಡಿಕೊಪ್ಪಮಠ ಸ್ಮರಣಾರ್ಥ ದತ್ತಿ ನಿಮಿತ್ತ ಈಚೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘ, ಕನ್ನಡ ವೈದ್ಯ ಬರಹಗಾರರ ಸಮಿತಿ, ಭಾರತೀಯ ವೈದ್ಯಕೀಯ ಸಂಘ ಗೋಕಾಕ ಶಾಖೆ ಸಹಯೋಗದಲ್ಲಿ …
Read More »ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ, ಮನೆಗೆ ಕಲ್ಲು ತೂರಿದ ಗುಂಪು
ಚಿಕ್ಕಬಳ್ಳಾಪುರ: ಅನುಚಿತ ವರ್ತನೆಯನ್ನು ಪ್ರಶ್ನಿಸಿದ ಕಾಲೇಜು ವಿದ್ಯಾರ್ಥಿನಿಗೆ ಚಾಕುವಿನಿಂದ ಚುಚ್ಚಿದ್ದು ಬಳಿಕ ಗುಂಪೊಂದು ಆಕೆಯ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿದೆ. ಚಿಂತಾಮಣಿ ನಗರದ ಆಶ್ರಯ ಬಡಾವಣೆಯ ಮೇಘನಾ (೧೮). ವಿದ್ಯಾರ್ಥಿನಿಯರಿಗೆ ನೃತ್ಯ ತರಬೇತಿ ನೀಡಿದ ಬಳಿಕ ಮನೆಗೆ ತೆರಳುತ್ತಿದ್ದಾಗ ಕಾರ್ತಿಕ್ ಹಾಗೂ ವಿನೋದ್ ಎಂಬುವರು ಮಾತನಾಡಲು ಮುಂದಾಗಿದ್ದಾರೆ. ಅನುಚಿತವಾಗಿ ವರ್ತಿಸಿದರು ಎನ್ನಲಾಗಿದೆ. ಇದಕ್ಕೆ ಮೇಘನಾ ಅವರನ್ನು ಕೆಳಕ್ಕೆ ತಳ್ಳಿ ಮನೆಗೆ ಓಡಿ ಬಂದಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿಗಳು …
Read More »ಪೊಲೀಸ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯನ್ನು ಬಲಪಡಿಸಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ 2026-27ನೇ ಸಾಲಿನಲ್ಲಿ 7,925 ಪೊಲೀಸ್ ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವತಿಯಿಂದ ನೇಮಕಾತಿಗಳನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಡಿಟೆಕ್ಟಿವ್ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗಳ ಸಂಖ್ಯೆ ಕಲ್ಯಾಣ ಕರ್ನಾಟಕ(ಕೆಕೆ) 05, ಉಳಿದ ಭಾಗಕ್ಕೆ (ಎನ್‌ಕೆಕೆ) 15 ಸೇರಿ 20 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಸಿದ್ಧವಾಗಿದ್ದು, ಶೀಘ್ರದಲ್ಲೇ ಕೆಇಎ …
Read More »
Laxmi News 24×7