Breaking News
Home / Uncategorized / ಸಿದ್ಧಾರೂಢ ಮಿಷನ್‌ಗೆ ಬೆಳ್ಳಿ

ಸಿದ್ಧಾರೂಢ ಮಿಷನ್‌ಗೆ ಬೆಳ್ಳಿ

Spread the love

ಹುಬ್ಬಳ್ಳಿ: 1998 ರಲ್ಲಿ ಹುಬ್ಬಳ್ಳಿಯಲ್ಲಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ದಕ್ಷಿಣ ತಾಲ್ಲೂಕಿನ ರಾಮೋಹಳ್ಳಿಯ ಶ್ರೀ ಸಿದ್ಧಾರೂಢ ಮಿಷನ್ ಇದೇ ಮೇ 10 ರಿಂದ 12 ರ ವರೆಗೆ 25 ನೇ ವರ್ಷದ ಸಂಭ್ರಮವನ್ನು ಆಚರಿಸಿಕೊಳ್ಳುತ್ತಿದೆ. ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಶಾಂಡಿಲ್ಯಾಶ್ರಮದ ಚಂದ್ರಶೇಖರ್ ಸ್ವಾಮಿಗಳಿಂದ ಉದ್ಘಾಟನೆಗೊಂಡು ರಾಮೋಹಳ್ಳಿಯಲ್ಲಿ ನೆಲೆಯೂರಿದ ಈ ಸಂಸ್ಥೆ ಹಲವು ಸಾಧನೆ ಮಾಡುವಲ್ಲಿ ಯಶಸ್ವಿಯಾಗಿದೆ.

ಇದರ ಸಂಸ್ಥಾಪಕ ಅಂದಿನ ವಿದ್ವಾನ್ ಎಸ್. ಪ್ರಭುಲಿಂಗದೇವರು ಇಂದು ಡಾ. ಆರೂಢಭಾರತೀ ಸ್ವಾಮೀಜಿ.

2001 ರಲ್ಲಿ ಗೋಕಾಕ್ ತಾಲ್ಲೂಕಿನ ಚಿಕ್ಕನಂದಿ, ಮಂಡ್ಯ ಜಿಲ್ಲೆಯ ಶಿವನ ಸಮುದ್ರ ಹಾಗೂ ಮೈಸೂರುಗಳಿಂದ ಸಿದ್ಧಾರೂಢ ಜ್ಯೋತಿಯಾತ್ರೆಗಳನ್ನು ನಡೆಸಿ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಬೃಹತ್ ಪ್ರಮಾಣದ ಸಿದ್ಧಾರೂಢ ಜಯಂತಿಯನ್ನು ಆಚರಿಸಲಾಯಿತು. ರೇಲ್ವೆಯೊಂದಕ್ಕೆ ಸಿದ್ಧಾರೂಢರ ಹೆಸರಿಡಲು ಮುಖ್ಯಮಂತ್ರಿ ಎಸ್. ಎಮ್. ಕೃಷ್ಣ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದರು. ಹುಬ್ಬಳ್ಳಿಯ ರೈಲು ನಿಲ್ದಾಣಕ್ಕೆ ಸಿದ್ಧಾರೂಢರ ನಾಮಕರಣವಾಗುವಲ್ಲಿ ಈ ಪ್ರಯತ್ನ ಫಲಕೊಟ್ಟಿತು. ಎಚ್. ಕೆ. ಪಾಟೀಲ್, ಪಿಜಿಆರ್ ಸಿಂಧ್ಯ ಮುಂತಾದವರ ಸಹಕಾರ ಇಲ್ಲಿ ಸ್ಮರಣೀಯ.

 2002 ಹಾಗೂ 2003 ರಲ್ಲಿ ರಾಜ್ಯಮಟ್ಟದ ಭಜನಾ ಸ್ಪರ್ಧೆಗಳನ್ನು ನಡೆಸಿದೆ. 2005 ರಲ್ಲಿ ಸಿದ್ಧಾರೂಢರ ಜನ್ಮಸ್ಥಳವಾದ ಚಳಕಾಪುರದಿಂದ ಆಗಮಿಸಿದ ಸಿದ್ಧಾರೂಢ ಜ್ಯೋತಿಯಾತ್ರೆಗೆ ಅದ್ದೂರಿಯ ಸ್ವಾಗತ ಕೋರಿ ಭವ್ಯ ಮೆರವಣಿಗೆ ಮಾಡಿ ಬೃಹತ್ ಸಮಾರಂಭವನ್ನು ನಡೆಸಿಕೊಟ್ಟಿದೆ. ಮುಖ್ಯಮಂತ್ರಿ ಎನ್ ಧರ್ಮಸಿಂಗ್ ಮುಂತಾದವರು ಪಾಲ್ಗೊಂಡಿದ್ದರು. ವಿಜಯಪುರದ ಶ್ರೀ ಸಿದ್ಧೇಶ್ವರ ಸ್ವಾಮಿಗಳ ಉಪನ್ಯಾಸವನ್ನು ಬೆಂಗಳೂರಿನಲ್ಲಿ ಏರ್ಪಡಿಸುವಲ್ಲಿ ಸಿದ್ಧಾರೂಢ ಮಿಷನ್ ನ ಪಾತ್ರವಿದೆ.

ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, ಆದಿಚುಂಚನಗಿರಿಯ ಡಾ. ಬಾಲಗಂಗಾಧರನಾಥ ಮಹಾಸ್ವಾಮಿಗಳು, ರಾಮಕೃಷ್ಣ ಆಶ್ರಮದ ಸ್ವಾಮಿ ಜಗದಾತ್ಮಾನಂದಜಿ, ಸ್ವಾಮಿ ಹರ್ಷಾನಂದಜಿ, ಸಿದ್ಧಾರೂಢ ಮಠದ ಶ್ರೀ ಶಾಂತಮುನಿ ಸ್ವಾಮೀಜಿ, ಷಣ್ಮುಖಾರೂಢ ಮಠದ ಅಭಿನವ ಶಿವಪುತ್ರ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ ಮುಂತಾದ ಸಂತ ಮಹಂತರು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ನೇತ್ರತಜ್ಞ ಡಾ. ಎಂ. ಸಿ. ಮೋದಿ, ನ್ಯಾಯಮೂರ್ತಿ ನಿಟ್ಟೂರು ಶ್ರೀನಿವಾಸ ರಾವ್, ವಿದ್ವಾನ್ ಎನ್. ರಂಗನಾಥ ಶರ್ಮಾ ಮುಂತಾದವರಿಗೆ ಆರೂಢಶ್ರೀ ಪುರಸ್ಕಾರ ನೀಡಿ ಗೌರವಿಸಿದೆ.


Spread the love

About Laxminews 24x7

Check Also

ಯಾವುದೇ ಕಾರಣಕ್ಕೂ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲ್ಲ ; ಸಿಎಂ

Spread the love ಬೆಂಗಳೂರು : ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ