Breaking News

ಅಂಗನವಾಡಿ ಕೇಂದ್ರದಲ್ಲಿ ‘ಕಳಪೆ’ ಆಹಾರ ಪೂರೈಕೆ : ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು

ಕಲಬುರ್ಗಿ : ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಆಹಾರ ಪೂರೈಕೆ ಹಾಗೂ ಕಡಿಮೆ ಗುಣಮಟ್ಟದ ಮೊಟ್ಟೆ ವಿತರಣೆ ಮಾಡುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಅಂಗನವಾಡಿ ಕೇಂದ್ರಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಕಲಬುರಗಿಯ ಹನುಮಾನ ನಗರದ ತಾಂಡಾ ಅಂಗನವಾಡಿಯಲ್ಲಿ ಪರೀಶಿಲನೆ‌ ವೇಳೆ ಮೊಟ್ಟೆ ತೂಕದಲ್ಲಿ ಬಾರಿ ವ್ಯತ್ಯಾಸ ಬಂದಿದ್ದು, ನಿಗದಿತ ತೂಕಕ್ಕಿಂತ ಕಡಿಮೆಯಿದೆ. ಕನಿಷ್ಠ 50 ಗ್ರಾಂ ಮೊಟ್ಟೆ ತೂಕ ಇರಬೇಕು‌ ಎಂಬ ನಿಯಮವಿದೆ. ಆದ್ರೆ, ಅಂಗನವಾಡಿಗಳಲ್ಲಿ ಸಿಕ್ಕ …

Read More »

ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ’ ಬಿಗ್ ರಿಲೀಫ್

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಹೈಕೋರ್ಟ್ ಅಪೆಕ್ಸ್ ಬ್ಯಾಂಕ್ ಸಾಲ ಮರುಪಾವತಿ ಮಾಡದೇ ವಂಚನೆ ಪ್ರಕರಣದಲ್ಲಿ ಬಿಗ್ ರಿಲೀಫ್ ನೀಡಿದೆ. ಅದೇ ರಮೇಶ್ ಜಾರಕಿಹೊಳಿ ಅವರನ್ನು ಬಂಧಿಸದಂತೆ ಹೈಕೋರ್ಟ್ ಸಿಐಡಿಗೆ ಸೂಚಿಸಿದೆ. ಇಂದು ಅಪೆಕ್ಸ್ ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣವನ್ನು ರದ್ದುಗೊಳಿಸುವಂತೆ ಸಲ್ಲಿಸಲಾಗಿದ್ದಂತ ಅರ್ಜಿಯನ್ನು ಹೈಕೋರ್ಟ್ ನ್ಯಾಯಪೀಠವು ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ಎಸ್​ಪಿಪಿ ಬ್ಯಾತ ಎನ್ ಜಗದೀಶ್ ಅವರು ರಮೇಶ್ ಜಾರಕಿಹೊಳಿಯವರು ಸಿಐಡಿ ನೋಟಿಸ್ …

Read More »

ಬಿಜೆಪಿ ಪಕ್ಷದ ಬಡವರಿಗೂ ಕೂಡ ‘ಗ್ಯಾರಂಟಿ’ ಯೋಜನೆಗಳನ್ನ ತಲುಪಿಸುತ್ತಿದ್ದೇವೆ:C.M.

ಮೈಸೂರು : ಮೈಸೂರು ಜಿಲ್ಲಾ ಆಡಳಿತ ಮತ್ತು ಜಿಲ್ಲಾ ಪರಿಷತ್ತು ಜಂಟಿಯಾಗಿ ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನು ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಒಂದು ಸಮಾವೇಶದಲ್ಲಿ ಮಾತನಾಡಿ ಬಿಜೆಪಿ ಪಕ್ಷದ ಬಡವರಿಗೂ ಕೂಡ ಗ್ಯಾರಂಟಿ ಯೋಜನೆಗಳನ್ನ ತಲುಪಿಸುತ್ತಿದ್ದೇವೆ ಎಂದು ತಿಳಿಸಿದರು. ಗ್ಯಾರಂಟಿ ಯೋಜನೆಗಳು ಎಲ್ಲಾ ಜಾತಿಯ ಬಡವರು, ಎಲ್ಲಾ ಧರ್ಮದ ಬಡವರು ಅವರೆಲ್ಲರಿಗೂ ಕೂಡ ಈ ಯೋಜನೆಗಳು ತಲುಪುವ ಕೆಲಸ ಮಾಡುತ್ತೇವೆ. ಭಾರತೀಯ ಜನತಾ …

Read More »

ಪ್ರಧಾನಿ ಮೋದಿ ರೋಡ್ ಶೋ’ಗೆ ಅನುಮತಿ ನಿರಾಕರಣೆ

ಕೊಯಮತ್ತೂರು : ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶಿತ ರೋಡ್ ಶೋಗೆ ತಮಿಳುನಾಡಿನ ಕೊಯಮತ್ತೂರು ಆಡಳಿತ ಅನುಮತಿ ನಿರಾಕರಿಸಿದೆ. ಲೋಕಸಭಾ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು, ಮಾರ್ಚ್ 18 ರಂದು ಪ್ರಧಾನಿ ಮೋದಿಯವರ 3.6 ಕಿ.ಮೀ ಉದ್ದದ ರೋಡ್ ಶೋ ನಡೆಸಲು ಅನುಮತಿ ಕೋರಿ ಭಾರತೀಯ ಜನತಾ ಪಕ್ಷ ಗುರುವಾರ ಕೊಯಮತ್ತೂರು ನಗರ ಪೊಲೀಸರಿಗೆ ಜ್ಞಾಪಕ ಪತ್ರವನ್ನ ಸಲ್ಲಿಸಿತ್ತು. ಕೊಯಮತ್ತೂರು ಆಡಳಿತವು ವಿವಿಧ ಕಾರಣಗಳನ್ನ ನೀಡಿ ಅನುಮತಿ ನಿರಾಕರಿಸಿದೆ. ಮೂಲಗಳ ಪ್ರಕಾರ, ಅನುಮತಿ …

Read More »

ರಾಜ್ಯ ಸರ್ಕಾರದಿಂದ ಏ.1ರಿಂದ ಭಾನುವಾರವೂ ‘ಸಬ್ ರಿಜಿಸ್ಟ್ರಾರ್ ಕಚೇರಿ’ ತೆರೆಯಲು ಅಧಿಕೃತ ಆದೇಶ

ಬೆಂಗಳೂರು: ರಾಜ್ಯದಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ( sub-registrar’s office ) ಸಾರ್ವಜನಿಕರಿಗೆ ಮತ್ತಷ್ಟು ಜನಸ್ನೇಹಿ ಸೇವೆ ನೀಡಲು ಏಪ್ರಿಲ್.1ರಿಂದ ಭಾನುವಾರವೂ ಕಾರ್ಯನಿರ್ವಹಿಸುವಂತೆ ಸರ್ಕಾರ ಅಧಿಕೃತ ಆದೇಶ ಮಾಡಿದೆ. ಈ ಕುರಿತಂತೆ ನೋಂದಣಿ ಮತ್ತು ಮುದ್ರಾಂಕದ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಉತ್ತಮ ಸೇವೆಯನ್ನು ನೀಡುವ ಹಾಗೂ ಆಡಳಿತ ಸುಧಾರಣೆ ಮತ್ತು ಜನಸ್ನೇಹಿ ಆಡಳಿತಕ್ಕಾಗಿ ಪ್ರಾಯೋಗಿಕವಾಗಿ ಮೊದಲನೇ ಹಂತದಲ್ಲಿ ಮಾರ್ಚ್ 2024 …

Read More »

ಅಣ್ಣಾಮಲೈ ವಾರ್ನಿಂಗ್, ದಳಪತಿ ವಿಜಯ್‌ ಜೊತೆ ಏನಿದು ಕಿರಿಕ್?

ತಮಿಳುನಾಡು ರಾಜಕೀಯದಲ್ಲಿ ಅಣ್ಣಾಮಲೈ ಹವಾ ಬಲು ಜೋರಾಗಿದ್ದು, ಲೋಕಸಭೆಗೂ ಮೊದಲು ದಕ್ಷಿಣ ಭಾರತದ ಪ್ರಮುಖ ರಾಜ್ಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಗೆಲುವಿಗಾಗಿ ಎನ್‌ಡಿಎ & ಇಂಡಿಯಾ ಮೈತ್ರಿಕೂಟಗಳ ನಡುವೆ ತಿಕ್ಕಾಟ ಬಲು ಜೋರಾಗಿರುವ ಸಮಯದಲ್ಲೇ ನಟ ದಳಪತಿ ವಿಜಯ್ ಕೊಟ್ಟಿರುವ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ.ಹಾಗೇ ವಿಜಯ್ ಅವರು ಕೊಟ್ಟಿದ್ದ ಹೇಳಿಕೆಗೆ ಈಗ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ ಅಣ್ಣಾಮಲೈ.2024ರ ಲೋಕಸಭೆ ಚುನಾವಣೆ ಅಖಾಡ ರಂಗೇರಿದ್ದು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ …

Read More »

ಬೆಳಗಾವಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪೋಸ್ಟರ್ ಅಭಿಯಾನ ಆರಂಭಿಸಿದ ಬಿಜೆಪಿ

ಬೆಳಗಾವಿಯಲ್ಲಿ ಪರಿವಾರವಾದ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪೋಸ್ಟರ್ ಅಭಿಯಾನ ಆರಂಭಿಸಿದ ಬಿಜೆಪಿ ಕೇವಲ ಕಾಂಗ್ರೆಸ್ ಮಾತ್ರ ಅಲ್ಲ, ಪರಿವಾರವಾದವನ್ನು ಅನುಸರಿಸಿಕೊಂಡು ಬರುತ್ತಿರುವ ಸಮಾಜವಾದಿ ಪಕ್ಷ, ಎನ್ ಸಿಪಿ ಮತ್ತು ಶಿವಸೇನೆಯ (ಉದ್ಧವ್ ಬಣ) ಹೆಸರುಗಳನ್ನು ಸಹ ಪೋಸ್ಟರ್ ನಲ್ಲಿ ನೋಡಬಹುದು. ಪ್ರಾಯಶಃ ಪೋಸ್ಟರ್ ಅಭಿಯಾನ ಶುರುಮಾಡಿರುವ ಬೆಳಗಾವಿ ಗ್ರಾಮೀಣ ಮಂಡಲದ ಅಧ್ಯಕ್ಷ ಧನಂಜಯ ರಾ ಜಾಧವ್ ಎನ್ನುವವರು ತನ್ನದು ಮೋದಿ ಕುಟುಂಬ ಎಂದು ಬರೆಸಿಕೊಂಡಿದ್ದಾರೆ. ಬೆಳಗಾವಿ: ಲೋಜಸಭಾ ಚುನಾವಣೆಗೆ ಸಂಬಂಧಿಸಿದಂತೆ …

Read More »

ST ವರ್ಗದವರಿಗೆ ಗುಡ್ ನ್ಯೂಸ್ 5 ಲಕ್ಷ ರೂ.ಗಳಷ್ಟು ಸಹಾಯಧನ

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ವತಿಯಿಂದ ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದ ಪರಿಶಿಷ್ಠ ಪಂಗಡದ ನಿರುದ್ಯೋಗಿ ಯುವಕ, ಯುವತಿಯರು ಜಿಲ್ಲಾ ಅಥವಾ ತಾಲ್ಲೂಕು ಮಟ್ಟದಲ್ಲಿ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮ ಕ್ಷೇತ್ರಗಳಲ್ಲಿ ಉದ್ದಿಮೆ ಸ್ಥಾಪಿಸಲು ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಠ ಪಂಗಡಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಲ್ಲಿಕಾರ್ಜುನ ಅವರು ತಿಳಿಸಿದ್ದಾರೆ. ಯುಟ್ಯೂಬ್ ಚಾನೆಲ್, ಸೋಶಿಯಲ್ …

Read More »

ಯಡಿಯೂರಪ್ಪ ಆಪ್ತ ವಿಶ್ವನಾಥ ಪಾಟೀಲ್ ಇಂದು ಬಿಜೆಪಿ ಸೇರ್ಪಡೆ

ಬೆಳಗಾವಿ : ಬೈಲಹೊಂಗಲ ಮಾಜಿ ಶಾಸಕ ಹಾಗೂ ಯಡಿಯೂರಪ್ಪ ಆಪ್ತ ವಿಶ್ವನಾಥ ಪಾಟೀಲ್ ಇಂದು ಬಿಜೆಪಿ ಸೇರ್ಪಡೆ ಆಗಿದ್ದಾರೆ. ಗುರುವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಸಮ್ಮುಖದಲ್ಲಿ ವಿಶ್ವನಾಥ ಪಾಟೀಲ ಬಿಜೆಪಿ ಸೇರಿದರು. ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಜಗದೀಶ್ ಮೆಟಗುಡ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದ ಹಿನ್ನಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಆದರೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹಾಂತೇಶ್ ಕೌಜಲಗಿ ಗೆಲುವು ಸಾಧಿಸಿದ್ದರು. …

Read More »

ಲಂಚ ಪಡೆದು ಲೋಕಾಯುಕ್ತ ಬಲೆಗೆ ಬಿದ್ದ ಇನ್ಸ್‌ಪೆಕ್ಟರ್‌ಗಳು

ಬೆಂಗಳೂರು: ವ್ಯಕ್ತಿಯನ್ನು ಬಂಧಿಸಿ ಹಣಕ್ಕೆ (Money) ಬೇಡಿಕೆ ಇಟ್ಟಿದ್ದ ಕೆಆರ್ ಪುರ ಪೋಲಿಸರು (KR Pura Police) ಲೋಕಾಯುಕ್ತ (Lokayukta) ಬಲೆಗೆ ಬಿದ್ದ ಘಟನೆ ನಡೆದಿದೆ. ಕೆಆರ್‌ ಪುರ ಠಾಣಾ ಇನ್ಸ್‌ಪೆಕ್ಟರ್ ವಜ್ರಮುನಿ ಹಾಗೂ ಸಬ್ ಇನ್ಸ್‌ಪೆಕ್ಟರ್ ರಮ್ಯಾ ಹಣಕ್ಕೆ ಬೇಡಿಕೆ ಇಟ್ಟಿದ್ದ ಪೊಲೀಸರು. ಶ್ರೀರಾಮ್‌ ಎನ್ನುವವರನ್ನು 420 ಕೇಸ್‌ನಲ್ಲಿ ಬಂಧಿಸಿದ್ದ ರಮ್ಯಾ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದರು. ರಾತ್ರೋ ರಾತ್ರಿ 50 ಸಾವಿರ ರೂ. ಪಡೆದು ಶ್ರೀರಾಮ್‌ನನ್ನು …

Read More »