Breaking News

ಪೋಕ್ಸೊ ಪ್ರಕರಣ: ತಲೆಮರೆಸಿಕೊಂಡಿದ್ದ ಶಿಕ್ಷಕ ಸೆರೆ

ಮೂಡುಬಿದಿರೆ: ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿ ಪೋಕ್ಸೊ ಪ್ರಕರಣ ಎದುರಿಸುತ್ತಾ ತಲೆಮರೆಸಿಕೊಂಡಿದ್ದ ಆರೋಪಿ ಕಲ್ಲಮುಂಡ್ಕೂರು ಪ್ರೌಢಶಾಲೆಯ ಶಿಕ್ಷಕ ಗುರು ಎಂ.ಪಿ.ಯನ್ನು ಗುರುವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಪೋಕ್ಸೊ ಪ್ರಕರಣದಿಂದಾಗಿ ಶಾಲೆಯಿಂದ ಅಮಾನತುಗೊಂಡಿದ್ದ ಆರೋಪಿ ಗುರು ಇತ್ತೀಚೆಗೆ ಜಿಲ್ಲಾ ಸೆಶನ್ಸ್‌ ಕೋರ್ಟ್‌ನಲ್ಲಿ ಸಲ್ಲಿಸಿದ್ದ ನಿರೀಕ್ಷಣ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಶಾಲೆಯ ಕೆಲವು ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಶಿಕ್ಷಕ ಗುರು ವಿರುದ್ಧ ಸಂತ್ರಸ್ತ ಮಕ್ಕಳು, ಅವರ ಹೆತ್ತವರು ಮತ್ತು …

Read More »

₹9.50 ಲಕ್ಷ ಮೌಲ್ಯದ ಚಿನ್ನಾಭರಣ ವಶ, ಆರೋಪಿ ಬಂಧನ

ಹುಬ್ಬಳ್ಳಿ: ಗೋಕುಲ ಬಸ್‌ ನಿಲ್ದಾಣದಲ್ಲಿ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಮಹಿಳೆಯನ್ನು ಗೋಕುಲ ಠಾಣೆ ಪೊಲೀಸರು ಬಂಧಿಸಿ, ₹9.50 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ತಮಿಳುನಾಡಿನ ಕುಪ್ಪಂ ನಿವಾಸಿ ಸಂಧ್ಯಾ ಬಂಧಿತ ಆರೋಪಿ.ಬಸ್‌ ನಿಲ್ದಾಣದ ಪ್ಲಾಟ್‌ಫಾರ್ಮ್‌ 4ರ ಬಳಿ ಜನವರಿ 5ರಂದು ಮಹಿಳೆ ಬಸ್‌ ಹತ್ತುವಾಗ, ಆರೋಪಿ ಅವರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ 139 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಳು. ಗೋಕುಲ ರೋಡ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. …

Read More »

ಕಳ್ಳನ ಬಂಧನ: 3 ಲಕ್ಷ ರೂ. ಮೌಲ್ಯದ ಸೊತ್ತುಗಳ ವಶ

ಸುರತ್ಕಲ್‌: ಇಲ್ಲಿನ ಮುಂಚೂರು ಸಮೀಪ ರೈಲ್ವೇ ಹಳಿ ಬಳಿಯ ಬಾಡಿಗೆ ಮನೆಯೊಂದರಿಂದ ನಗದು ಸಹಿತ ಚಿನ್ನ, ಬೆಳ್ಳಿಯ ಸೊತ್ತುಗಳನ್ನು ಕಳವುಗೈದಿದ್ದ ಆರೋಪಿಯನ್ನು 24 ಗಂಟೆಯಲ್ಲೇ ಪೊಲೀಸರು ಬಂಧಿಸಿದ್ದಾರೆ. ಹೊಸಕೋಟೆ ನಿವಾಸಿ ಜಂಬಯ್ಯ (24) ಬಂಧಿತ ಆರೋಪಿ. ಈತ ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ಮೊಬೈಲ್‌ ಅನ್ನು ವಶಕ್ಕೆ ಪಡೆಯಲಾಗಿದೆ.

Read More »

ಜಿಲ್ಲೆಯ ವಿವಿಧೆಡೆ ಮಳೆ: ಕಾರಿನ ಮೇಲೆ ಬಿದ್ದ ಮರ

ಬೆಳಗಾವಿ: ನಗರ ಹಾಗೂ ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಒಂದು ತಾಸಿನವರೆಗೆ ಉತ್ತಮ ಮಳೆ ಸುರಿಯಿತು. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಸಂಜೆ 5ರ ಸುಮಾರಿಗೆ ಆರಂಭವಾದ ಮಳೆ ಗುಡುಗು- ಮಿಂಚಿನ ಜತೆಗೆ ಸುರಿಯಿತು. ಇಲ್ಲಿನ ಅನಗೋಳ ಪ್ರದೇಶದಲ್ಲಿರುವ ಸಂತ ಮೀರಾ ಶಾಲೆಯ ಬಳಿ ಮಳೆ, ಗಾಳಿಯ ರಭಸಕ್ಕೆ ಮರವೊಂದು ಬುಡಸಮೇತ ಕಿತ್ತು ಕಾರಿನ ಮೇಲಿ ಬಿದ್ದಿದೆ. ಕಾರು ಜಖಂಗೊಂಡಿದ್ದು ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಮಹಾದ್ವಾರ ರಸ್ತೆ, ಭೋವಿ ಗಲ್ಲಿಯಲ್ಲಿ …

Read More »

ಕಾಂಗ್ರೆಸ್‌ ಅಭ್ಯರ್ಥಿ ರಾಜು ಆಲಗೂರ ನಾಮಪತ್ರ ಸಲ್ಲಿಕೆ

ವಿಜಯಪುರ: ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಪ್ರೊ.ರಾಜು ಆಲಗೂರ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಾವಿರಾರು ಸಂಖ್ಯೆಯ ಬೆಂಬಲಿಗರು, ಮುಖಂಡರು, ಪಕ್ಷದ ಕಾರ್ಯಕರ್ತರೊಂದಿಗೆ ಏ. 15 ರಂದ ಮತ್ತೊಮ್ಮೆ ನಾಮಪತ್ರ ಸಲ್ಲಿಸುವುದಾಗಿ ಆಲಗೂರ ತಿಳಿಸಿದರು.   ರಾಜ್ಯ ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳು ನಮ್ಮ ಕೈಹಿಡಿಯಲಿದೆ. ಜನ ನಮ್ಮ ಮೇಲೆ ವಿಶ್ವಾಸವಿಟ್ಟಿದ್ದಾರೆ. ನನ್ನ ಗೆಲುವು ಖಚಿತ ಎಂದು ಹೇಳಿದರು

Read More »

ಚುನಾವಣೆ ಬಳಿಕ ಬೆಳಗಾವಿಯಲ್ಲೇ ‘ಪೆನ್ ಡ್ರೈವ್’ ಬಿಡುಗಡೆ

ಬೆಳಗಾವಿ : ಲೋಕಸಭೆ ಚುನಾವಣೆ ಹೊತ್ತಲ್ಲೇ ಎಂಎಲ್ಸಿ ಬಿಜೆಪಿ ಹರಿಪ್ರಸಾದ್ ಅವರು ಸ್ಪೋಟಕ ಹೇಳಿಕೆಯ ನೀಡಿದ್ದು ಲೋಕಸಭೆ ಚುನಾವಣೆಯಲ್ಲಿ ನಾನು ಸ್ಟಾರ್ ಕ್ಯಾಂಪೇನರ್ ಇದಿನಿ ನನ್ನ ಯಾರು ಉಪಯೋಗಿಸಿಕೊಳ್ಳಲು ಆಗುವುದಿಲ್ಲ ಆದರೆ ಕಾಂಗ್ರೆಸ್ ಪಕ್ಷಕ್ಕೆ ನನ್ನ ಉಪಯೋಗವಿದೆ ಹಾಗಾಗಿ ಬೆಳಗಾವಿಯಲ್ಲಿ ಬಂದು ಪೆನ್ಡ್ರೈವ್ ಬಿಡುಗಡೆ ಮಾಡುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಬೆಳಗಾವಿಯಲ್ಲಿ ಸಮುದಾಯದ ಸಮಾವೇಶ ಒಂದರಲ್ಲಿ ಮಾತನಾಡಿದ ಅವರು ನಾನು ಸ್ಟಾರ್ ಕ್ಯಾಂಪೇನರ್ ನನ್ನನ್ನು ಉಪಯೋಗಿಸಿಕೊಳ್ಳಲು ಆಗುವುದಿಲ್ಲ. ಏನೆ …

Read More »

ಧಾರವಾಡ, ಬೆಳಗಾವಿ, ವಿಜಯನಗರ ಜಿಲ್ಲೆಗಳಲ್ಲಿ ಉತ್ತಮ ಮಳೆ

ಧಾರವಾಡ, ಬೆಳಗಾವಿ ಮತ್ತು ವಿಜಯನಗರ ಜಿಲ್ಲೆಯ ವಿವಿಧೆಡೆ ಬುಧವಾರ ಸಂಜೆ ಉತ್ತಮ ಮಳೆಯಾಯಿತು. ಹುಬ್ಬಳ್ಳಿ ನಗರ ಸೇರಿ ಧಾರವಾಡ ಜಿಲ್ಲೆ ವ್ಯಾಪ್ತಿಯ ಕಲಘಟಗಿ, ನವಲಗುಂದ, ಕುಂದಗೋಳ ಭಾಗದಲ್ಲಿ ಮಳೆಯಾಯಿತು. ಜೋರಾಗಿ ಮಳೆಯಾದ ಪರಿಣಾಮ ಹುಬ್ಬಳ್ಳಿಯ ಬಹುತೇಕ ಕಡೆ ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಯಿತು. ಕೆಲ ಕಡೆ ಮರಗಳು ಉರುಳಿ ಬಿದ್ದವು. ಅಲ್ಲಲ್ಲಿ ವಿದ್ಯುತ್ ಪೂರೈಕೆ ಕಡಿತಗೊಳಿಸಲಾಯಿತು. ಬೆಳಗಾವಿ ಜಿಲ್ಲೆಯ ಹುಕ್ಕೇರಿ, ಸಂಕೇಶ್ವರ ಹಾಗೂ ಯಮಕನಮರಡಿ ಭಾಗದಲ್ಲಿ ಒಂದು ಗಂಟೆಗೂ ಹೆಚ್ಚು …

Read More »

‘ಪರಿಮಳದವರು’ ನಾಟಕ ಪ್ರದರ್ಶನ 13ರಿಂದ

ಬೆಳಗಾವಿ: ‘ಇಲ್ಲಿನ ಕೋನವಾಳ ಗಲ್ಲಿಯ ಲೋಕಮಾನ್ಯ ರಂಗಮಂದಿರದಲ್ಲಿ ಏ.13, 14ರಂದು ಸಂಜೆ 6.30ಕ್ಕೆ ರಾಘವೇಂದ್ರ ಸ್ವಾಮೀಜಿ ಜೀವನಾಧಾರಿತವಾದ ‘ಪರಿಮಳದವರು’ ನಾಟಕ ಪ್ರದರ್ಶನಗೊಳ್ಳಲಿದೆ’ ಎಂದು ರಂಗಸಂಪದ ಅಧ್ಯಕ್ಷ ಅರವಿಂದ ಕುಲಕರ್ಣಿ ಹೇಳಿದರು. ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕಮಾನ್ಯ ರಂಗಮಂದಿರದಲ್ಲಿ ಮಾ.29ರಂದು ಈ ನಾಟಕ ಪ್ರದರ್ಶಿಸಿದ್ದೆವು. ವೀಕ್ಷಣೆಗೆ ಜನರು ಕಿಕ್ಕಿರಿದು ಸೇರಿದ್ದರು. ಇನ್ನೂ ಕೆಲವು ಪ್ರದರ್ಶನ ನೀಡಬೇಕೆಂದು ಒತ್ತಾಯಿಸಿದರು. ಹಾಗಾಗಿ ಈಗ ಮತ್ತೆ ಪ್ರದರ್ಶಿಸುತ್ತಿದ್ದೇವೆ’ ಎಂದರು. ‘ಶ್ರೀಪತಿ ಮಂಜನಬೈಲು ನಿರ್ದೇಶಿಸಿರುವ …

Read More »

ಬಡವರ ಪರವಾಗಿರುವುದು ಕಾಂಗ್ರೆಸ್‌ ಮಾತ್ರ: ಪ್ರಿಯಂಕಾ ಜಾರಕಿಹೊಳಿ

ಬಡವರ ಪರವಾಗಿರುವುದು ಕಾಂಗ್ರೆಸ್‌ ಮಾತ್ರ: ಪ್ರಿಯಂಕಾ ಜಾರಕಿಹೊಳಿ ಹುಕ್ಕೇರಿ: ‘ಬಡವರು ಹಾಗೂ ಜನಸಾಮಾನ್ಯರ ಪರ ಕೆಲಸ ಮಾಡಿ ಅವರ ಕುಂದು ಕೊರತೆಗಳಿಗೆ ಸ್ಪಂದಿಸುವುದು ಕಾಂಗ್ರೆಸ್ ಪಕ್ಷ. ಹೀಗಾಗಿ ಮೇ 7ರಂದು ನಡೆಯಲಿರುವ ಚಿಕ್ಕೋಡಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ನನ್ನನ್ನು ಆಶೀರ್ವದಿಸಬೇಕು’ ಎಂದು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಮತದಾರರಲ್ಲಿ ಮನವಿ ಮಾಡಿದರು. ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಬೆನಕನಹೊಳಿ, ಕೇರಿಮಾಸ್ತಿಹೊಳಿ, ನರಸಿಂಗಪೂರ, ಮಜತಿ, ಮಾನಗಾಂವ ಗ್ರಾಮಗಳಲ್ಲಿ …

Read More »

ನಿಪ್ಪಾಣಿ: 25 ಎನ್‍ಸಿಪಿ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ನಿಪ್ಪಾಣಿ: ತಾಲ್ಲೂಕಿನ ಶೇಂಡೂರ ಗ್ರಾಮದ ಸುಮಾರು 25 ಎನ್‍ಸಿಪಿ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು. ತಾಲ್ಲೂಕಿನ ಭಿವಶಿ ಗ್ರಾಮದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಎಲ್ಲ ಕಾರ್ಯಕರ್ತರನ್ನು ಪಕ್ಷದ ಶಾಲು ಹೊದಿಸಿ ಬರಮಾಡಿಕೊಂಡರು. ಗ್ರಾಮದ ರಾಜೇಂದ್ರ ಲಾಡ, ಪ್ರವೀಣ ಲಾಡ ನೇತೃತ್ವದಲ್ಲಿ ವಿನಾಯಕ ಗಿರಿ, ತುಕಾರಾಮ ವಡೆಖರ, ಪಾಂಡುರಂಗ ಲಾಡ, ಗಜಾನನ ಕಾಂಬಳೆ, ರಾಜೇಂದ್ರ ದಳವಿ, ಅಣ್ಣಪ್ಪಾ ತೋಡಕರ, ಸಂದೀಪ ದೇಸಾಯಿ, ಮೊದಲಾದವರು ಸೇರಿದಂತೆ ಸುಮಾರು 25 ಕಾರ್ಯಕರ್ತರು ಎನ್‍ಸಿಪಿ ಪಕ್ಷ ತೊರೆದು ಬಿಜೆಪಿಗೆ …

Read More »