Breaking News

ಜಿಲ್ಲೆಯ ವಿವಿಧೆಡೆ ಮಳೆ: ಕಾರಿನ ಮೇಲೆ ಬಿದ್ದ ಮರ

Spread the love

ಬೆಳಗಾವಿ: ನಗರ ಹಾಗೂ ತಾಲ್ಲೂಕಿನ ವಿವಿಧೆಡೆ ಶುಕ್ರವಾರ ಒಂದು ತಾಸಿನವರೆಗೆ ಉತ್ತಮ ಮಳೆ ಸುರಿಯಿತು. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಸಂಜೆ 5ರ ಸುಮಾರಿಗೆ ಆರಂಭವಾದ ಮಳೆ ಗುಡುಗು- ಮಿಂಚಿನ ಜತೆಗೆ ಸುರಿಯಿತು.

ಇಲ್ಲಿನ ಅನಗೋಳ ಪ್ರದೇಶದಲ್ಲಿರುವ ಸಂತ ಮೀರಾ ಶಾಲೆಯ ಬಳಿ ಮಳೆ, ಗಾಳಿಯ ರಭಸಕ್ಕೆ ಮರವೊಂದು ಬುಡಸಮೇತ ಕಿತ್ತು ಕಾರಿನ ಮೇಲಿ ಬಿದ್ದಿದೆ.

ಜಿಲ್ಲೆಯ ವಿವಿಧೆಡೆ ಮಳೆ: ಕಾರಿನ ಮೇಲೆ ಬಿದ್ದ ಮರ

ಕಾರು ಜಖಂಗೊಂಡಿದ್ದು ಯಾವುದೇ ಜೀವ ಹಾನಿ ಸಂಭವಿಸಿಲ್ಲ.

ಮಹಾದ್ವಾರ ರಸ್ತೆ, ಭೋವಿ ಗಲ್ಲಿಯಲ್ಲಿ ರಸ್ತೆ ಮೇಲೆ ಹರಿದ ನೀರು ವ್ಯಾಪಾರ- ವಹಿವಾಟಿಗೆ ತೊಂದರೆ ಮಾಡಿದೆ. ಕ್ಯಾಂಪ್‌ ಪ್ರದೇಶದಲ್ಲಿ ರಸ್ತೆಯ ಮಧ್ಯದಲ್ಲೇ ಡಾಂಬರ್‌ ಕಿತ್ತುಕೊಂಡು ಬಂದಿದೆ.

ಉಳಿದಂತೆ ರಾಮದುರ್ಗ, ರಾಯಬಾಗ, ಬೈಲಹೊಂಗಲ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧೆಡೆ ಸಾಧಾರಣ ಮಳೆಯಾಗಿದೆ


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ