Breaking News

ಕೋವಿಡ್ -19 ರ ಸಂಕಷ್ಟದ ಸಂದರ್ಭದಲ್ಲಿ ವಿರೇಶ್ ಕಿವಡಸಣ್ಣವರ್ ಯಾವುದೇ ಪ್ರಚಾರ ಬಯಸದೆ ಸೈಲೆಂಟ್ ಆಗಿ ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದಾರೆ.

ಬೆಳಗಾವಿ : ಸಮರ್ಥನಂ ಅಂಥ ಮಕ್ಕಳ ಸಂಸ್ಥೆ ಮತ್ತು ಸಮೃದ್ಧಿ ಸೇವಾ ಸಂಸ್ಥೆಯ ಮುಖ್ಯಸ್ಥ ವಿರೇಶ ಕಿವಡಸಣ್ಣವರಗೆ ಜಿಲ್ಲಾಡಳಿತ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಕೋವಿಡ್ -19 ರ ಸಂಕಷ್ಟದ ಸಂದರ್ಭದಲ್ಲಿ ವಿರೇಶ್ ಕಿವಡಸಣ್ಣವರ್ ಯಾವುದೇ ಪ್ರಚಾರ ಬಯಸದೆ ಸೈಲೆಂಟ್ ಆಗಿ ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದಾರೆ. ಬೆಳಗಾವಿ ನಗರ ಮತ್ತು ಗ್ರಾಮೀಣ ಪ್ರದೇಶದ ಪ್ರತಿ ಮೂಲೆ ಮೂಲೆಗೆ ತೆರಳಿ ಅಗತ್ಯ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಜನರಿಗೆ …

Read More »

ಡಿಸಿಸಿ ಬ್ಯಾಂಕ್  ಚುನಾವಣೆ  ಯಾವುದೇ ಪಕ್ಷದ ಆಧಾರಿತವಲ್ಲ, ಬದಲಾಗಿ ಕೆಲವರ  ವೈಯಕ್ತಿಕವಾಗಿ ಮೂರು ಸ್ಥಾನಗಳಿಗೆ ಸ್ಪರ್ಧೆ ನಡೆಯುತ್ತಿದೆ:ಸತೀಶ ಜಾರಕಿಹೊಳಿ

ಗೋಕಾಕ:  ಡಿಸಿಸಿ ಬ್ಯಾಂಕ್  ಚುನಾವಣೆ  ಯಾವುದೇ ಪಕ್ಷದ ಆಧಾರಿತವಲ್ಲ, ಬದಲಾಗಿ ಕೆಲವರ  ವೈಯಕ್ತಿಕವಾಗಿ ಮೂರು ಸ್ಥಾನಗಳಿಗೆ ಸ್ಪರ್ಧೆ ನಡೆಯುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ  ಹೇಳಿದ್ದಾರೆ. ನಗರದಲ್ಲಿ ತಮ್ಮ ಕಚೇರಿಯಲ್ಲಿ ಇಂದು ಮಾತನಾಡಿದ ಅವರು, ಈಗಾಗಲೇ ಸಂಘ- ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಿದವರು  ಅವಿರೋಧವಾಗಿ  ಆಯ್ಕೆಯಾಗಿದೆ. ಮೂರಕ್ಕೆ ಚುನಾವಣೆ ನಡೆಯುತ್ತಿದೆ.  ಅದು ಅವರವರ   ವೈಯಕ್ತಿಕವಾಗಿದೆ ಎಂದಷ್ಟೇ ಹೇಳಿದರು. ಕರ್ನಾಟಕದಲ್ಲಿ  ಕನ್ನಡ-ಮರಾಠಿ ಸಮಸ್ಯೆ ಇಲ್ಲ: ಹಾದಿ ಬೀದಿಯಲ್ಲಿ  ನಿಂತು …

Read More »

ಕನ್ನಡ ರಾಜ್ಯೋತ್ಸವ ಬಹಿಷ್ಕರಿಸಿ, ಪ್ರತ್ಯೇಕ ರಾಜ್ಯದ  ಧ್ವಜಾರೋಹಣ ನೆರವೇರಿಸಲು ಯತ್ನಿಸಿದ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ: ಕನ್ನಡ ರಾಜ್ಯೋತ್ಸವ ಬಹಿಷ್ಕರಿಸಿ, ಪ್ರತ್ಯೇಕ ರಾಜ್ಯದ  ಧ್ವಜಾರೋಹಣ ನೆರವೇರಿಸಲು ಯತ್ನಿಸಿದ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಸರ್ದಾರ್ ವಲ್ಲಭಭಾಯ್​ ಪಟೇಲ್ ವೃತ್ತದಲ್ಲಿ ಸೇರಿದ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಸದಸ್ಯರು ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನಿಸಿದರು. ತಕ್ಷಣ ಎಚ್ಚೆತ್ತುಕೊಂಡು  ಪೊಲೀಸರು  ಧ್ವಜಾರೋಹಣ  10 ಜನರ ವಶಕ್ಕೆ ಪಡೆದರು. ಯಾವುದೇ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಕಲ್ಯಾಣ ಕರ್ನಾಟಕ ಭಾಗವನ್ನು ಪದೇ ಪದೇ ನಿರ್ಲಕ್ಷಿಸಲಾಗುತ್ತಿದೆ. ನಮಗೆ ಪ್ರತ್ಯೇಕ …

Read More »

ಸಚಿವ ರಮೇಶ್ ಸಿಪಿಎಡ್ ಮೈದಾನದಲ್ಲಿ ರಾಜ್ಯೋತ್ಸವದ ಧ್ವಜಾರೋಹಣ ವೀರರಾಣಿ  ಕಿತ್ತೂರು ಚನ್ನಮ್ಮ ಪತ್ರಿಮೆಗೆ ಮಾಲಾರ್ಪಣೆ

ಬೆಳಗಾವಿ  : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಮ್ಮ ಸರ್ಕಾರ ಕೋವಿಡ್ ಸೋಂಕು ಸಂದರ್ಭದಲ್ಲಿಯೂ ಜನಪರ ಕಾರ್ಯಕ್ರಮಗನ್ನು ರೂಪಿಸುವುದರ ಜತೆಗೆ ಪ್ರವಾಹ ಸಂತ್ರಸ್ತರಿಗೆ ಬದುಕು ಕಟ್ಟಿಕೊಡುವ ದೃಢ ಸಂಕಲ್ಪ ಮಾಡಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ನಗರದ ಸಿಪಿಎಡ್ ಮೈದಾನದಲ್ಲಿ ರಾಜ್ಯೋತ್ಸವದ ಧ್ವಜಾರೋಹಣ ಬಳಿಕ ಮಾತನಾಡಿದ ಅವರು, ಪ್ರತಿ ವರ್ಷ ಕರ್ನಾಟಕ  ರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾ ಹಿನ್ನೆಲೆ ಅತ್ಯಂತ ಸರಳ ರೀತಿಯಲ್ಲಿ …

Read More »

ಆರ್.ಆರ್.ನಗರದಲ್ಲಿ ಕಾಂಗ್ರೆಸ್‍ನಿಂದ ಹಣ ಹಂಚಿಕೆ ಹಣ ಹಂಚೋದರಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಫಾಸ್ಟ್: H.D.K.

ಬೆಂಗಳೂರು: ಉಪ ಚುನಾವಣೆ ಕ್ಷೇತ್ರ ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಹಣ ಹಂಚುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಇಂದು ನಗರದ ಪೀಣ್ಯದಲ್ಲಿ ತುರ್ತುಗೋಷ್ಠಿ ನಡೆಸಿದ ಕುಮಾರಸ್ವಾಮಿ ಅವರು ಹಣ ಹಂಚಿಕೆಯ ಆರೋಪವನ್ನ ಮಾಡಿದರು. ಮನೆಯಲ್ಲಿ ಎಷ್ಟು ಮತಗಳಿವೆ ಎಂದು ಲಿಸ್ಟ್ ಮಾಡಿಕೊಂಡು ಹಣ ಹಂಚಿಕೆ ಮಾಡಲಾಗುತ್ತಿದೆ. ಕನಕಪುರದಿಂದ ಬಂದಿರುವ ಅರ್ಜುನ್ ಮತ್ತು ಅರುಣ್ ಎಂಬವರು ಹಣ ಹಂಚುವ ವೇಳೆ ಪೊಲೀಸರು ಬಂಧಿಸಿದ್ದಾರೆ. ಕಾಂಗ್ರಸ್ ನವರು ದೊಡ್ಡ ಮಟ್ಟದಲ್ಲಿ ಹಣ ಹಂಚುವ …

Read More »

ಮಹಾನಗರ ಪಾಲಿಕೆ ಮೇಲೆ ಕನ್ನಡ ಧ್ವಜಾರೋಹಣ ಮಾಡಿದ ಬಳಿಕ ಪೋಲೀಸರು ಕನ್ನಡ ಧ್ವಜ ತೆರವುಗೊಳಿಸಿದ ಘಟನೆ

ಬೆಳಗಾವಿ- ಬೆಳಗಾವಿಯ ಕನ್ನಡದ ಕಸ್ತೂರಿ ಎಂದೇ ಕರೆಯಲ್ಪಡುವ ಕಸ್ತೂರಿ ಭಾವಿ ನೇತ್ರತ್ವದಲ್ಲಿ ಕನ್ನಡದ ಯುವಕರು ಬೆಳಗಾವಿ ‌ಮಹಾನಗರ ಪಾಲಿಕೆ ಮೇಲೆ ಕನ್ನಡ ಧ್ವಜಾರೋಹಣ,ಮಾಡಿದ ಘಟನೆ ಮದ್ಯರಾತ್ರಿ ನಡೆದಿದೆ. ಕನ್ನಡ ಪರ ಹೋರಾಗಾರರಿಂದ ಧ್ವಜಾರೋಹಣ ನಡೆದಿದ್ದು ಇದೇ‌ ಮೊದಲ ಬಾರಿಗೆ ಪಾಲಿಕೆ ‌ಮೇಲೆ ಕನ್ನಡ ಧ್ವಜ ಹಾರಾಡಿದೆ. ಯುವಕ ರವಿ ಬೋವಿ ಸೇರಿ ಅನೇಕರಿಂದ ಧ್ವಜಾರೋಹಣ ನಡೆದಿದೆ. ಪಾಲಿಕೆ ಮೇಲೆ ಕನ್ನಡ ಧ್ವಜಕ್ಕಾಗಿ ಶಪಥ ‌ಮಾಡಿದ್ದ‌ ತಾಯಿ. ಕಸ್ತೂರಿ ಭಾವಿ ಎಂಬ …

Read More »

65ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ನರೇಂದ್ರ ಮೋದಿಯವರು ರಾಜ್ಯದ ಜನತೆಗೆ ಕನ್ನಡದಲ್ಲಿಯೇ ಶುಭಾಶಯಗಳನ್ನು ಕೋರಿದ್ದಾರೆ.

    ನವದೆಹಲಿ: 65ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ನಾಡಿನೆಲ್ಲೆಡೆ ಮನೆಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯದ ಜನತೆಗೆ ಕನ್ನಡದಲ್ಲಿಯೇ ಶುಭಾಶಯಗಳನ್ನು ಕೋರಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮೋದಿಯವರು, ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡಿಗರ ಜನ ಶಕ್ತಿ ಮತ್ತು ಕೌಶಲ್ಯದಿಂದ ಕರ್ನಾಟಕ ಪ್ರಗತಿಯ ಉತ್ತುಂಗಕ್ಕೇರುತ್ತಿದೆ. ಕರ್ನಾಟಕದ ಜನತೆಯ ಸಂತಸ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆಂದು …

Read More »

ಸೂರ್ಯ, ಚಂದ್ರ ಇರುವವರೆಗೂ ಬೆಳಗಾವಿ ಕರ್ನಾಟಕದ್ದು ಎನ್ನುವ ಮೂಲಕ  ಗಡಿಯಲ್ಲಿ ಕ್ಯಾತೆ ತಗೆಯುವ ಎಂಇಎಸ್ ಪುಂಡರಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿರುಗೇಟು

ಬೆಳಗಾವಿ: ಸೂರ್ಯ, ಚಂದ್ರ ಇರುವವರೆಗೂ ಬೆಳಗಾವಿ ಕರ್ನಾಟಕದ್ದು ಎನ್ನುವ ಮೂಲಕ  ಗಡಿಯಲ್ಲಿ ಕ್ಯಾತೆ ತಗೆಯುವ ಎಂಇಎಸ್ ಪುಂಡರಿಗೆ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ಮಹಾರಾಷ್ಟ್ರದ  ಗಡಿ ಜಿಲ್ಲೆಯ ಮರಾಠಿಗರಿಗೆ ಪತ್ರ ಕಳುಹಿಸುವ ಮೂಲಕ  ಕರಾಳ ದಿನಾಚರಣೆಗೆ ಕರೆ ನೀಡಿದ್ದರು.  ಈ ವಿಚಾರವಾಗಿ  ನಗರದಲ್ಲಿ  ಡಿಸಿಎಂ ಸವದಿ ಪ್ರತಿಕ್ರಿಯಿಸಿ, ಯಾರು ಎಷ್ಟೇ ಕೂಗಾಡಿದರು ಕೂಡ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಮಹಾರಾಷ್ಟ್ರದಲ್ಲಿ ಕುಳಿತು ಕನ್ನಡದ …

Read More »

ಬೆಟ್ಟದ ಮೇಲೆ ಯುವಕರ ತಂಡವೊಂದು 65 ಅಡಿ ಉದ್ದದ ಬೃಹತ್ ಬಾವುಟ ಹಾರಿಸಿ, ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ಬೆಂಗಳೂರು:  ರಾಜ್ಯದಲ್ಲೆಡೆ 65ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ, ಆದರೆ ನಾಡ  ಯುವಕರ ತಂಡವೊಂದು ಇತಿಹಾಸ ಪ್ರಸಿದ್ಧ ಬೆಟ್ಟದ ತುತ್ತತುದಿಯಲ್ಲಿ ರಾಜ್ಯೋತ್ಸವವನ್ನು ಸ್ಮರಣೀಯವಾಗಿ ಆಚರಿಸಿದ್ದಾರೆ. ಇತಿಹಾಸ ಪ್ರಸಿದ್ಧ ಮಾಗಡಿ ಕೆಂಪೇಗೌಡರು ಆಳಿದ ಭೈರವದುರ್ಗ ಬೆಟ್ಟದ ಮೇಲೆ ಯುವಕರ ತಂಡವೊಂದು 65 ಅಡಿ ಉದ್ದದ ಬೃಹತ್ ಬಾವುಟ ಹಾರಿಸಿ, ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಕುದೂರು ಹೋಬಳಿಯ ಭೈರವೇಶ್ವರ ನಗರದ ಯುವಕರು, ಪ್ರತಿವರ್ಷವು ಬೃಹತ್ ಆದ ಬಾವುಟವನ್ನು …

Read More »

ಮದ್ಯ ಸೇವಿಸುವವರಿಗೆ ‘ಕೊರೊನಾ’ದಿಂದ ಗಂಭೀರ ಸಮಸ್ಯೆ ಎದುರಾಗಲಿದೆ.

      ಬೆಂಗಳೂರು: ಮದ್ಯ ಸೇವಿಸುವವರಿಗೆ ‘ಕೊರೊನಾ’ದಿಂದ ಗಂಭೀರ ಸಮಸ್ಯೆ ಎದುರಾಗಲಿದೆ. ಮದ್ಯಪ್ರಿಯರ ಲಿವರ್ ಮೇಲೆ ‘ಕೊರೊನಾ’ ಪ್ರಭಾವ ಅಪಾರವಾಗಿರುತ್ತೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಸೋಂಕಿನಿಂದ ಮೃತಪಟ್ಟ ಕೆಲವರಲ್ಲಿ ಲಿವರ್ ಸಮಸ್ಯೆ ಕಂಡು ಬಂದಿದೆ. ಹೀಗಾಗಿ ಮದ್ಯಪಾನ ಮಾಡುವವರಿಗೆ ವೈದ್ಯರು ವಾರ್ನಿಂಗ್ ಕೊಟ್ಟಿದ್ದಾರೆ. ಸೋಂಕಿತರು ಲಿವರ್ ಮೇಲಾಗುವ ಪರಿಣಾಮದ ಬಗ್ಗೆ ಎಚ್ಚರಿಕೆ ವಹಿಸಬೇಕು. ಶ್ವಾಸಕೋಶದೊಂದಿಗೆ ವಿವಿಧ ಅಂಗಗಳ ಮೇಲೂ ಪರಿಣಾಮ ಬೀರುತ್ತೆ. ಮದ್ಯಪಾನ ಮಾಡುವವರ ಲಿವರ್ ದುರ್ಬಲವಾಗುವ …

Read More »