Breaking News

ಮನೆಯ ಕಿಟಕಿ ಅಥವಾ ಬಾಗಿಲು ಮುರಿದು ಒಳನುಗ್ಗಿದ್ದ ಚೋರರು ಮನೆಯಲ್ಲಿದ್ದ ಚಿನ್ನ, ಒಡವೆ ಹಣವನ್ನೆಲ್ಲಾ ಕದ್ದು ಪರಾರಿಯಾದರು ಅನ್ನೋ ಸುದ್ದಿನ ನಾವೆಲ್ಲರೂ ಸಾಮಾನ್ಯವಾಗಿ ಕೇಳಿರುತ್ತೇವೆ.

ಮುಂಬೈ: ಮನೆಯ ಕಿಟಕಿ ಅಥವಾ ಬಾಗಿಲು ಮುರಿದು ಒಳನುಗ್ಗಿದ್ದ ಚೋರರು ಮನೆಯಲ್ಲಿದ್ದ ಚಿನ್ನ, ಒಡವೆ ಹಣವನ್ನೆಲ್ಲಾ ಕದ್ದು ಪರಾರಿಯಾದರು ಅನ್ನೋ ಸುದ್ದಿನ ನಾವೆಲ್ಲರೂ ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಗೃಹಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು ಅವುಗಳು ಸಹ ಕದಿಯಲು ಯೋಗ್ಯವೆಂಬಂತೆ ಭಾಸವಾಗುತ್ತಿದೆ. ಅಲ್ಲಿಗೂ ಸೈಕಲ್​ ಗ್ಯಾಪ್​ನಲ್ಲಿ 9 ಮೂಟೆ ಮಾರಿಬಿಟ್ಟಿದ್ದಾರೆ!   ಅಂತೆಯೇ, 100 ರೂಪಾಯಿಯ ಗಡಿ ಮುಟ್ಟಿರುವುದರಿಂದ ಈರುಳ್ಳಿ ಸಹ ಕದಿಯಲು ಸೂಕ್ತವಾದ, ಅತ್ಯಮೂಲ್ಯ ವಸ್ತುವಾಗಿ ಮಾರ್ಪಟ್ಟಂತಿದೆ. ಹೌದು, ಮಹಾರಾಷ್ಟ್ರದ …

Read More »

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 6 ರೂ. ಹೆಚ್ಚಳ ಸಾಧ್ಯತೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 6 ರೂಪಾಯಿ ಹೆಚ್ಚಳವಾಗುವ ಸಾಧ್ಯತೆಗಳಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇದಕ್ಕೂ ಮೊದಲು ಸರ್ಕಾರ ಮೇ ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 10 ರೂ ಮತ್ತು ಡೀಸೆಲ್ 13 ರೂ. ಏರಿಕೆ ಮಾಡಿತ್ತು. ಇದೀಗ ಮತ್ತೊಮ್ಮೆ 3 ರಿಂದ 6 ರೂ. ಅಬಕಾರಿ ಸುಂಕ ಹೆಚ್ಚಿಸಲು ಸರ್ಕಾರದ ಮಟ್ಟದಲ್ಲಿ …

Read More »

ವಾಣಿಜ್ಯ ನಗರಿಯಲ್ಲಿ ಕೆಲವೇ ದಿನ ಸುರಿದ ಮಳೆಗೆ ರಸ್ತೆಗಳೆಲ್ಲಾ ಯಮಪುರಿಯ ದಾರಿಗಳಾಗಿವೆ.

ಹುಬ್ಬಳ್ಳಿ: ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಸುರಿದ ಭಾರೀ ಮಳೆ ಸಾಕಷ್ಟು ಅನಾಹುತಗಳನ್ನು ಮಾಡಿದೆ. ಮಳೆರಾಯನ ಆರ್ಭಟಕ್ಕೆ ಸಾವಿರಾರು ಮನೆಗಳು ನೆಲಸಮವಾಗಿದ್ರೆ ರೈತರ ಬೆಳೆಗಳು ಮಣ್ಣುಪಾಲಾಗಿವೆ. ಆದರೆ ವಾಣಿಜ್ಯ ನಗರಿಯಲ್ಲಿ ಕೆಲವೇ ದಿನ ಸುರಿದ ಮಳೆಗೆ ರಸ್ತೆಗಳೆಲ್ಲಾ ಯಮಪುರಿಯ ದಾರಿಗಳಾಗಿವೆ. ಮೊದಲೇ ಹುಬ್ಬಳ್ಳಿ ಧಾರವಾಡದಲ್ಲಿ ರಸ್ತೆಗಳು ತಗ್ಗು ಗುಂಡಿಗಳಿಂದ ತುಂಬಿ ಹೋಗಿವೆ. ಇದೀಗ ಕಳೆದೊಂದು ವಾರದಿಂದ ಸುರಿದ ಮಹಾಮಳೆಗೆ ಮಹಾನಗರದಲ್ಲಿನ ರಸ್ತೆಗಳು ಅಕ್ಷರಶಃ ಆಳವಾದ ಗುಂಡಿ ಬಿದ್ದು ಗಬ್ಬೆದ್ದಿವೆ. ರಸ್ತೆಯಲ್ಲಿ ಹೊಂಡವೋ, …

Read More »

ಸಾರಾಯಿ ಸೇವಿಸಬೇಡ ಎಂದು ಪತ್ನಿ ಬುದ್ದಿವಾದ ಹೇಳಿದಕ್ಕೆ ಮನನೊಂದು ಪತಿ ಆತ್ಮಹತ್ಯೆ

ಬೆಳಗಾವಿ: ಸಾರಾಯಿ ಸೇವಿಸಬೇಡ ಎಂದು ಪತ್ನಿ ಬುದ್ದಿವಾದ ಹೇಳಿದಕ್ಕೆ ಮನನೊಂದು ಪತಿ ಆತ್ಮಹತ್ಯೆಗೆ ಶರಣಾದ ಘಟನೆ ಶಹಾಪೂರದಲ್ಲಿ ಇಂದು ನಡೆದಿದೆ. ರಾಹುಲ್ ಸಹದೇವ ಸೈನೊಚೆ(30) ಮೃತ ವ್ಯಕ್ತಿ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಮದ್ಯ ವ್ಯಸನಿಗೆ ಅಂಟುಕೊಂಡಿದ್ದ.  ದಸರಾ ಹಬ್ಬ ಹಿನ್ನೆಲೆ ದಿನಸಿಗಾಗಿ  ಪತ್ನಿ  ಹಣ ಬೇಡಿದ್ದು,  ಸಾರಾಯಿ ಸೇವಿಸದಂತೆ ಪತ್ನಿ ಮನವಿ ಮಾಡಿದ್ದಾಳೆ. ಈ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆ ನಡೆದು ಆತ ಎರಡು ದಿನದಿಂದ ಮನೆ …

Read More »

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೂತನ ಪ್ರತಿಮೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು  ಉದ್ಘಾಟನೆ ಮಾಡಿದರು.

ಬೈಲಹೊಂಗಲ:  ತಾಲೂಕಿನ ಹಹೊಳಿನಾಗಲಾಪುರ ಗ್ರಾಮದಲ್ಲಿ ನಿರ್ಮಿಸಲಾಗಿರುವ  ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೂತನ ಪ್ರತಿಮೆಯನ್ನು ಸೋಮವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು  ಉದ್ಘಾಟನೆ ಮಾಡಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ ಶಾಸಕ ಸತೀಶ ಜಾರಕಿಹೊಳಿ ಗೌರವ   ನಮನ ಸಲ್ಲಿಸಿದರು ಬಳಿಕ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಅಪ್ರತಿಮ ಹೋರಾಟಗಾರ.  ಆತ ಒಂದು ಸಮುದಾಯಕ್ಕೆ ಸೀಮಿತವಲ್ಲ, ಇಡೀ ದೇಶದ ಆಸ್ತಿ. ರಾಯಣ್ಣ ಆದರ್ಶಗಳನ್ನು ಮೈಗೂಡಿಸಿಕೊಂಡು ನಾಡು, ನುಡಿಗಾಗಿ …

Read More »

ಯಾವುದೇ ಸಂಘಟನೆ ಒಂದು ಜಾತಿಗೆ ಸೀಮಿತವಾಗದೇ ಮಾನವೀಯತೆ ಪರವಾಗಿ ಕೆಲಸ ಮಾಡಬೇಕು: ಸತೀಶ ಜಾರಕಿಹೊಳಿ

ಬೈಲಹೊಂಗಲ: ಯಾವುದೇ ಸಂಘಟನೆ ಒಂದು ಜಾತಿಗೆ ಸೀಮಿತವಾಗದೇ ಮಾನವೀಯತೆ ಪರವಾಗಿ ಕೆಲಸ ಮಾಡಬೇಕು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಬೈಲಹೊಂಗಲ ತಾಲೂಕಿನ ಮುರ್ಕಿಭಾಂವಿ ಗ್ರಾಮದಲ್ಲಿ ಸೋಮವಾರ ದಂದು ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ಸಂಘಟನೆಗೆ ಚಾಲನೆ ನೀಡಿ  ಉದ್ಘಾಟಿಸಲಾಯಿತು. ನೀಡಿ ಬಳಿಕ ಮಾತನಾಡಿದ ಅವರು, ಸಂಘ ಕಟ್ಟುವುದು ಸುಲಭ, ಆದ್ರೆ ಅವುಗಳನ್ನು ಸರಿಯಾದ ದಾರಿಯಲ್ಲಿ ನಡೆಸುವುದು ಕಷ್ಟಕರವಾಗಿದೆ. ಇತ್ತೀಚಿಗೆ ಸಾಕಷ್ಟು ಸಂಘಟನೆಗಳು ಹುಟ್ಟಿಕೊಂಡಿವೆ. …

Read More »

ಈರುಳ್ಳಿ ಬೆಳೆಗಾರರು ಅಪಾರ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಇದೇ ಸಂದರ್ಭದಲ್ಲಿ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡಿರುವುದು ಸ್ವಲ್ಪ ಮಟ್ಟಿನ ಸಮಾಧಾನ

ರಾಯಚೂರು: ಜಿಲ್ಲೆಯ ಈರುಳ್ಳಿ ಬೆಳೆಗಾರರು ಅಪಾರ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಇದೇ ಸಂದರ್ಭದಲ್ಲಿ ಈರುಳ್ಳಿ ಬೆಲೆಯಲ್ಲಿ ಏರಿಕೆ ಕಂಡಿರುವುದು ಸ್ವಲ್ಪ ಮಟ್ಟಿನ ಸಮಾಧಾನವನ್ನುಂಟು ಮಾಡಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರೈತರ ಬೆಳೆಗೆ ಉತ್ತಮ ಬೆಲೆ ಸಿಗುತ್ತಿದ್ದು, 6 ಸಾವಿರ ರೂಪಾಯಿಗೆ ಒಂದು ಕ್ವಿಂಟಾಲ್ ಈರುಳ್ಳಿ ಖರೀದಿಯಾಗುತ್ತಿದೆ. ಭಾರೀ ಮಳೆಗೆ ರೈತರು ಅರ್ಧ ಬೆಳೆ ಕಳೆದುಕೊಂಡಿದ್ದಾರೆ. ಇದೀಗ ಉಳಿದ ಬೆಳೆಗೆ ಉತ್ತಮ ಬೆಲೆ ಸಿಗುತ್ತಿರುವುದರಿಂದ ಸಮಾಧಾನಪಟ್ಟುಕೊಂಡಿದ್ದಾರೆ. ಈ ಬಾರಿಯ ಮುಂಗಾರು ಮಳೆ …

Read More »

ಕಾಡೆಮ್ಮೆಯನ್ನ ಕೂಗಿ-ಕೂಗಿ ಕರೆದ ಗ್ರಾಮಸ್ಥರು

ಚಿಕ್ಕಮಗಳೂರು: ಕಾಡೆಮ್ಮೆಯನ್ನ ಕೂಗಿ-ಕೂಗಿ ಕರೆದ ಗ್ರಾಮಸ್ಥರು ಕಾಡೆಮ್ಮೆ ಗ್ರಾಮದೊಳಗೆ ಬರುತ್ತಿದ್ದಂತೆ ಭಯಗೊಂಡು ಅಂಗಡಿಯೊಳಗೆ ಹೋಗಿ ರೋಲಿಂಗ್ ಶಟರ್‌ ಎಳೆದುಕೊಂಡ ಘಟನೆ ಜಿಲ್ಲೆಯ ಕೊಪ್ಪ ತಾಲೂಕಿನ ಕೂಳೂರು ಗ್ರಾಮದಲ್ಲಿ ನಡೆದಿದೆ. ಜಯಪುರ ಸಮೀಪದ ಕೂಳುರು, ಧರೆಕೊಪ್ಪ ಭಾಗದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಕಾಡೆಮ್ಮೆಯೊಂದು ಬೀಡು ಬಿಟ್ಟಿತ್ತು. ಆಗಾಗ ಗ್ರಾಮಸ್ಥರ ಕಣ್ಣಿಗೂ ಬೀಳುತ್ತಿತ್ತು.  ಗ್ರಾಮದ ಬಳಿ ಕಾಡೆಮ್ಮೆ ಆಗಾಗ ಕಂಡು ಕಾಡಂಚಿನಲ್ಲಿ ಮರೆಯಾಗುತ್ತಿತ್ತು. ಆದರೆ ಇಂದು ಕೂಳೂರು ಗ್ರಾಮದ ಗದ್ದೆ ಬದಿಯಲ್ಲಿ ನಿಂತಿದ್ದ …

Read More »

ಮಡಿಕೇರಿಯಲ್ಲಿ ಸರಳ ದಸರಾ- ದಶಮಂಟಪಗಳ ಮೆರವಣಿಗೆ

ಮಡಿಕೇರಿ: ತುಂಬಾ ಸಂಭ್ರಮ ಹಾಗೂ ಸಡಗರದಿಂದ ನಡೆಯುತ್ತಿದ್ದ ಮಂಜಿನನಗರಿ ಮಡಿಕೇರಿ ದಸರಾ ಜನೋತ್ಸವವನ್ನು ಈ ಬಾರಿ ಅತ್ಯಂತ ಸರಳವಾಗಿ ಆಚರಿಸಲಾಗಿದ್ದು, ದಶ ಮಂಟಪಗಳ ಮೆರವಣಿಗೆ ಕಣ್ಮನ ಸೆಳೆಯಿತು. ಪ್ರತಿ ವರ್ಷ ಡಿಜೆ ಸೌಂಡ್ ನ ಅಬ್ಬರ ಈ ಬಾರಿ ಇರಲಿಲ್ಲ. ಬೆಳಕಿನ ಓಕುಳಿಯಲ್ಲಿ ಮಿಂದೆದ್ದು ಜೀವ ಪಡೆಯುತ್ತಿದ್ದ ದೇವಾನುದೇವತೆಗಳು ಮತ್ತು ರಾಕ್ಷಸರ ನಡುವೆ ನಡೆಯುತ್ತಿದ್ದ ಕಾಳಗವೂ ಇರಲಿಲ್ಲ. ಬದಲಾಗಿ ಮಡಿಕೇರಿ ನಗರದ ನಾಲ್ಕು ಶಕ್ತಿ ದೇವತೆಗಳು ಸೇರಿದಂತೆ ಒಟ್ಟು ಹತ್ತು …

Read More »

ಗೇಲ್‌ ಆಡಿದ ಎಲ್ಲ ಮ್ಯಾಚ್‌ ವಿನ್‌ , ಪಂಜಾಬ್‌ ಪ್ಲೇ ಆಫ್‌ ಕನಸು ಜೀವಂತ

ಶಾರ್ಜಾ: ಕ್ರೀಸ್‌ ಗೇಲ್‌ ಸ್ಫೋಟಕ ಬ್ಯಾಟಿಂಗ್‌ ಮತ್ತು ಮನ್‌ದೀಪ್‌ ಸಿಂಗ್‌ ಅವರ ಅರ್ಧಶತಕದಿಂದ ಕಿಂಗ್ಸ್‌ ಇಲೆವನ್‌ ಪಂಜಾಬ್‌ ತಂಡ ಕೋಲ್ಕತ್ತಾ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕೋಲ್ಕತ್ತಾ 9 ವಿಕೆಟ್‌ ನಷ್ಟಕ್ಕೆ 149 ರನ್‌ ಹೊಡೆಯಿತು. ಸುಲಭದ ಸವಾಲನ್ನು ಬೆನ್ನಟ್ಟಿದ್ದ ಪಂಜಾಬ್‌ 18.5 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 150 ರನ್‌ ಹೊಡೆಯಿತು. 12 ಪಂದ್ಯಗಳಿಂದ …

Read More »