Breaking News

ಮಂಗಳೂರು ವಿಮಾನ ನಿಲ್ದಾಣ ಅದಾನಿ ಗ್ರೂಪ್‍ಗೆ ಹಸ್ತಾಂತರ – ಕಾಂಗ್ರೆಸ್ ವಿರೋಧ

ಮಂಗಳೂರು: ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅದಾನಿ ಗ್ರೂಪ್‍ಗೆ ಹಸ್ತಾಂತರ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ದ.ಕ.ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಮಂಗಳೂರಿನ ಬಜಪೆ ಕೆಂಜಾರು ಬಳಿಯಲ್ಲಿರುವ ಪ್ರವೇಶ ದ್ವಾರದ ಎದುರು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ವಾರದ ಹಿಂದೆ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆ ಗುತ್ತಿಗೆಯನ್ನು ಅದಾನಿ ಗ್ರೂಪ್‍ಗೆ ಹಸ್ತಾಂತರಿಸಲಾಗಿತ್ತು. ಅದೇ ದಿನ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು …

Read More »

ಡ್ರಗ್ಸ್ ದಂಧೆಯನ್ನು ಬಯಲಿಗೆಳೆಯುತ್ತಾನೆ ಎಂದು ಟಿವಿ ಪತ್ರಕರ್ತನನ್ನು ಕತ್ತು ಹಿಸುಕಿ ಕೊಲೆ

ಚೆನ್ನೈ: ಡ್ರಗ್ಸ್ ದಂಧೆಯನ್ನು ಬಯಲಿಗೆಳೆಯುತ್ತಾನೆ ಎಂದು ಟಿವಿ ಪತ್ರಕರ್ತನನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಡ್ರಗ್ ಡೀಲರ್‍ಗಳ ಕುರಿತು ಪೊಲೀಸರಿಗೆ ಮಾಹಿತಿ ನೀಡುತ್ತಾನೆ ಎಂಬ ಭಯದಲ್ಲಿ ಗ್ಯಾಂಗ್ ಪತ್ರಕರ್ತನನ್ನು ಹತ್ಯೆ ಮಾಡಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇಸ್ರೇವೆಲ್ ಮೋಸಸ್(27) ಕೊಲೆಯಾದ ಪತ್ರಕರ್ತ, ಭಾನುವಾರ ಸಂಜೆ ಅವರನ್ನು ಮನೆಯಿಂದ ಹೊರಗೆ ಕರೆದೊಯ್ದು, …

Read More »

ಆರ್‌ಆರ್‌ ನಗರದಲ್ಲಿ 3,249 ಮತಗಳಿಂದ ಮುನಿರತ್ನ ಮುನ್ನಡೆ, ಕುಸುಮಾಗೆ 2,915 ಮತಗಳು

ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆಯ ಮೊದಲ ಸುತ್ತಿನಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಮುನಿರತ್ನಗೆ 6,164 ಮತಗಳು ಬಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾಗೆ 2,915 ಮತಗಳು ಬಿದ್ದಿವೆ. ಮುನಿರತ್ನ 3,249 ಮತಗಳ ಮುನ್ನಡೆಯಲ್ಲಿದ್ದಾರೆ. ಜೆಡಿಎಸ್ ಕೃಷ್ಣಮೂರ್ತಿಗೆ 136 ಮತಗಳು ಬಿದ್ದಿದೆ. ಆರ್‍ಆರ್ ನಗರದಲ್ಲಿ 4,62,201 ಮತದಾರರು ಇದ್ದು ಒಟ್ಟು 2,09,828 ಮತಗಳು ಚಲಾವಣೆ ಆಗಿತ್ತು. ಈ ಪೈಕಿ 412 ಅಂಚೆ ಮತಗಳು ಚಲಾವಣೆ ಆಗಿತ್ತು. ಶಿರಾದಲ್ಲಿ 2,15,694 ಮತದಾರರು ಇದ್ದು 1,77,645 …

Read More »

ಲೈಟ್ ಕಂಬದ ವಿಚಾರಕ್ಕೆ ಜಗಳ – ನಾದಿನಿಗೆ ಹಿಗ್ಗಾಮುಗ್ಗ ಥಳಿಸಿದ ಬಾವ

ಕೋಲಾರ: ಕ್ಷುಲ್ಲುಕ ಕಾರಣಕ್ಕೆ ಉಂಟಾದ ಜಗಳದಲ್ಲಿ ವ್ಯಕ್ತಿಯೋರ್ವ ತನ್ನ ತಮ್ಮನ ಹೆಂಡತಿಯನ್ನು ಹಿಗ್ಗಾಮುಗ್ಗ ಥಳಿಸಿದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಕಲ್ಲುಕುಂಟೆ ಗ್ರಾಮದಲ್ಲಿ ನಡೆದಿದೆ.ಮನೆ ಬಳಿ ವಿದ್ಯುತ್ ಕಂಬ ಅಳವಡಿಸುವ ವಿಚಾರದಲ್ಲಿ ಬಾವನೊಂದಿಗೆ ಜಗಳ ಕಿತ್ತ ನಾದಿನಿ, ಮೊದಲಿಗೆ ಬಾವನಿಗೆ ಪೊರಕೆ ಸೇವೆ ಮಾಡಿದ್ದಾಳೆ. ಈ ವೇಳೆ ಇಬ್ಬರ ನಡುವೆ ಜಗಳ ಹೆಚ್ಚಾದಾಗ ಜಗಳ ಬಿಡಿಸುವ ನೆಪದಲ್ಲಿ ಬಂದ ಬಾವನ ಮಗನೂ ಕೂಡ ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ. …

Read More »

ಇಕೋ ಫ್ರೆಂಡ್ಲಿ ಗಣೇಶ ಹಬ್ಬ ಮತ್ತು ನಾಯ್ಸ್ ಲೆಸ್ ದೀಪಾವಳಿ ರೀತಿಯಲ್ಲೇ ಬ್ಲಡ್‍ಲೆಸ್ ಬಕ್ರೀದ್, ನಾಯ್ಸ್ ಲೆಸ್ ಫ್ರೈಡೇನೂ ಮಡೋಣ:ಯತ್ನಾಳ್

ಬೆಂಗಳೂರು: ರಾಜ್ಯ ಸರ್ಕಾರ ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧ ಮಾಡಿರುವುದಕ್ಕೆ ಅಡಳಿತ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮದೇ ಸರ್ಕಾರವನ್ನು ಕುಟುಕಿರುವ ಯತ್ನಾಳ್, ಇಕೋ ಫ್ರೆಂಡ್ಲಿ ಗಣೇಶ ಹಬ್ಬ ಮತ್ತು ನಾಯ್ಸ್ ಲೆಸ್ ದೀಪಾವಳಿ ರೀತಿಯಲ್ಲೇ ಬ್ಲಡ್‍ಲೆಸ್ ಬಕ್ರೀದ್, ನಾಯ್ಸ್ ಲೆಸ್ ಫ್ರೈಡೇನೂ ಮಡೋಣ ಎಂದು ಪೋಸ್ಟ್ ಹಾಕಿದ್ದಾರೆ. ಈ ವಿಚಾರವಾಗಿ ಫೇಸ್‍ಬುಕ್ ಪೋಸ್ಟ್ ಹಾಕಿರುವ ಅವರು, …

Read More »

ವೀರಶೈವ ಮಹಾಸಭಾ ಯುವ ಘಟಕಕ್ಕೆ ಸುರೇಶ ಅಂಗಡಿ ಅಣ್ಣನ ಮಗ

ಬೆಳಗಾವಿ: ಅಖಿಲ ಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾ ಯುವ ಘಟಕದ ಅಧ್ಯಕ್ಷರನ್ನಾಗಿ ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಸಹೋದರ ಹಾಗೂ ಬಿಜೆಪಿ ಮುಖಂಡ ಮೋಹನ ಅಂಗಡಿ ಅವರ ಪುತ್ರ ಚೇತನ ಅಂಗಡಿ ಅವರನ್ನು ನೇಮಕಗೊಳಿಸಲಾಗಿದೆ ಎಂದು ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಬೆಳಗಾವಿ ಜಿಲ್ಲೆಯ ವೀರಶೈವ ಬಾಂಧವರನ್ನು ಅದರಲ್ಲೂ ಮುಖ್ಯವಾಗಿ ಸಮಾಜದ ಯುವ ಪೀಳಿಗೆಯನ್ನು ಒಗ್ಗೂಡಿಸುವುದು, ಅವರಿಗೆ …

Read More »

ಬಿಹಾರದಲ್ಲಿ ಮಹಾಮೈತ್ರಿಗೆ ಮುನ್ನಡೆ – ಎನ್‍ಡಿಎಗೆ ಹಿನ್ನಡೆ

ಪಾಟ್ನಾ: ಬಿಹಾರದಲ್ಲಿ ಮತ ಎಣಿಕೆ ಆರಂಭಗೊಂಡಿದ್ದು ಚುನಾವಣೋತ್ತರ ಸಮೀಕ್ಷೆಯಂತೆ ಮಹಾಮೈತ್ರಿ ಮುನ್ನಡೆಯಲ್ಲಿದೆ. ಆರ್‌ಜೆಡಿ 61, ಬಿಜೆಪಿ 28, ಜೆಡಿಯು 23, ಕಾಂಗ್ರೆಸ್ 16, ಎಲ್‌ಜೆಪಿ 02, ಇತರರು 10 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. 2015ರ ಚುನಾವಣೆಯಲ್ಲಿ ಆರ್‌ಜೆಡಿ 80, ಬಿಜೆಪಿ 53, ಜೆಡಿಯು 71, ಕಾಂಗ್ರೆಸ್ 27 ಎಲ್‍ಜೆಪಿ 2, ಇತರರು 10 ಸ್ಥಾನ ಗೆದ್ದಿದ್ದರು. ಒಟ್ಟು 243 ವಿಧಾನಸಭಾ ಕ್ಷೇತ್ರಗಳಿದ್ದು 123 ಮ್ಯಾಜಿಕ್ ಸಂಖ್ಯೆಯಾಗಿದೆ. 5 ವರ್ಷಗಳ ಕಾಲ ಅಧಿಕಾರದಲ್ಲಿದ್ದ …

Read More »

ಭಾರತೀಯ ಜನತಾಪಾರ್ಟಿ ರಾಜ್ಯ ಕಾರ್ಯಕಾರಿಣಿ ಸಭೆ ಡಿಸೆಂಬರ್ 5ರಂದು ಬೆಳಗಾವಿಯಲ್ಲಿ ನಡೆಯಲಿದೆ.

ಬೆಳಗಾವಿ – ಭಾರತೀಯ ಜನತಾಪಾರ್ಟಿ ರಾಜ್ಯ ಕಾರ್ಯಕಾರಿಣಿ ಸಭೆ ಡಿಸೆಂಬರ್ 5ರಂದು ಬೆಳಗಾವಿಯಲ್ಲಿ ನಡೆಯಲಿದೆ. ಅಂದು ಇಡೀ ದಿನ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ. ಪ್ರತಿ 3 ತಿಂಗಳಿಗೊಮ್ಮೆ ಕಾರ್ಯಕಾರಿಣಿ ಸಭೆ ನಡೆಯಬೇಕು. ಆದರೆ ಕೊರೋನಾ ಹಿನ್ನೆಲೆಯಲ್ಲಿ ಸಭೆ ನಡೆದಿರಲಿಲ್ಲ. ಕಳೆದ ವಾರ ಮಂಗಳೂರಿನಲ್ಲಿ ಸಭೆ ನಡೆದಿತ್ತು. ಬೆಳಗಾವಿ ಲೋಕಸಭಾ ಉಪಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕಾರಿಣಿ ಬೆಳಗಾವಿಯಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ಲೋಕಸಭಾ ಚುನಾವಣೆ ಪೂರ್ವತಯಾರಿಯ ಭಾಗವಾಗಿ …

Read More »

ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ ಕೊರೊನಾ

ಬೆಂಗಳೂರು: ಶಿರಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಅವರಿಗೆ ಕೊರೊನಾ ಸೋಂಕು ತಗುಲಿದೆ. ತೀವ್ರ ಕೆಮ್ಮು ಕಾಣಿಸಿಕೊಂಡು ಹಿನ್ನೆಲೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ವರದಿಯಲ್ಲಿ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದ್ದು, ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಟಿ.ಬಿ.ಜಯಚಂದ್ರ ಅವರ ಪತ್ನಿ ನಿರ್ಮಲಾರಿಗೂ ಕೊರೊನಾ ಸೋಂಕು ತಗುಲಿದೆ. ಕಳೆದ ಕೆಲ ದಿನಗಳಿಂದ ತಮ್ಮ ಸಂಪರ್ಕದಲ್ಲಿದವರು ಆರೋಗ್ಯದ ಬಗ್ಗೆ ಮುಂಜಾಗ್ರತೆ ತೆಗೆದುಕೊಳ್ಳುವದರ ಜೊತೆಗೆ ಕೊರೊನಾ ಪರೀಕ್ಷೆಗೆ ಒಳಗಾಗಿ ಎಂದು …

Read More »

ರಾಜ್ಯದ ಬೈಎಲೆಕ್ಷನ್ ಮಾತ್ರವಲ್ಲ ಇಂದು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶವೂ ಹೊರಬೀಳಲಿದೆ.

ದೆಹಲಿ : ರಾಜ್ಯದ ಬೈಎಲೆಕ್ಷನ್ ಮಾತ್ರವಲ್ಲ ಇಂದು ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶವೂ ಹೊರಬೀಳಲಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಮಧ್ಯೆ ಮದಗಜಗಳ ಮಹಾ ಕಾಳಗ ಏರ್ಪಟ್ಟಿದ್ದು, ಇಂದಿನ ರಿಸಲ್ಟ್ ತೀವ್ರ ಕುತೂಹಲ ಕೆರಳಿಸಿದೆ. ಈ ಮಧ್ಯೆ, ಸಮೀಕ್ಷೆಗಳು ಮಹಾಘಟಬಂಧನ್ ಗೆಲ್ಲೋ ಹಾಟ್ ಫೇವರಿಟ್ ಅಂತಾ ಭವಿಷ್ಯ ನುಡಿದಿವೆ. ರಾಜ್ಯದ 2 ಕ್ಷೇತ್ರಗಳ ಬೈಎಲೆಕ್ಷನ್ ಫಲಿತಾಂಶ ಒಂದೆಡೆಯಾದ್ರೆ, ಮತ್ತೊಂದೆಡೆ ಇಂದು ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶವೂ ಹೊರಬೀಳಲಿದೆ. ಇಡೀ …

Read More »