Breaking News

ನನ್ನನ್ನು ಜೈಲಿಗೆ ಹಾಕಲಿ,ನಾಚಿಕೆಯಾಗಬೇಕು ಇದೊಂದು ಸರ್ಕಾರ ಅಂತಾರೇನ್ರೀ:

ಹಾಸನ: ನನ್ನನ್ನು ಜೈಲಿಗೆ ಹಾಕಲಿ, ನಾನು ಹೋರಾಟ ಮಾಡುತ್ತೇನೆ. ಜೈಲಿನಲ್ಲೇ ಸಮಯಕ್ಕೆ ಸರಿಯಾಗಿ ಊಟ ಕೊಡ್ತಾರೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎರಡು ಉಪಚುನಾವಣೆ ಕಳೆದ ಬಳಿಕ ಕೆಇಬಿ ಬಿಲ್ ಹೆಚ್ಚು ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಮಂಗಳೂರು ವಿಮಾನ ನಿಲ್ದಾಣವನ್ನು ಅಂಬಾನಿ ಕಂಪನಿಗೆ ಕೊಡಲಾಗಿದೆ. ಇನ್ನೂ ಈ ಕೆಇಬಿಯನ್ನ ಯಾವ ಕಂಪನಿಗೆ ಮಾರಾಟ ಮಾಡ್ತಾರೋ ಗೊತ್ತಿಲ್ಲಾ …

Read More »

ನಾಳೆ ವಿನಯ್ ಕುಲಕರ್ಣಿ ಹುಟ್ಟುಹಬ್ಬ – ಬ್ಯಾನರ್ ಹಾಕಿದ ಅಭಿಮಾನಿಗಳು

ಧಾರವಾಡ: ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರದ್ದು ನಾಳೆ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಈಗಾಗಲೇ ಭರದ ಸಿದ್ಧತೆ ನಡೆಸುತ್ತಿದ್ದಾರೆ. ಹೌದು. ನಾಳೆ ವಿನಯ್ ಕುಲಕರ್ಣಿ ಅವರ 55ನೇ ಹುಟ್ಟುಹಬ್ಬವಾಗಿದ್ದು, ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಧಾರವಾಡದ ಎಲ್ಲ ಕಡೆ ಶುಭಾಶಯ ಕೋರಿ ಬ್ಯಾನರ್ ಗಳನ್ನು ಹಾಕಿದ್ದಾರೆ. ಅಲ್ಲದೆ ಮುಖವಾಡ ಗಳನ್ನು ಕೂಡ ತಯಾರಿಸಿದ್ದಾರೆ. ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ …

Read More »

ನಮ್ಮನ್ನ ರಾಜಕೀಯವಾಗಿ ಮುಗಿಸಲು ಕುತಂತ್ರ:ವಿಜಯ್ ಕುಲಕರ್ಣಿ

ಹುಬ್ಬಳ್ಳಿ: ನಮ್ಮನ್ನು ರಾಜಕೀಯವಾಗಿ ಮುಗಿಸುವುದಕ್ಕೆ ಈ ರೀತಿ ಕುತಂತ್ರ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ ಅವರು, ಈ ಪ್ರಕರಣದಲ್ಲಿ ರಾಜಕೀಯ ಕೈವಾಡವಿದೆ. ಬಿಜೆಪಿ ಅವರದ್ದೇ ಕೈವಾಡವಿದೆ ಎಂದು ನೇರವಾಗಿ ಬಿಜೆಪಿ ಮೇಲೆ ಆರೋಪ …

Read More »

ಸಿಎಂ ಬದಲಾವಣೆ ಇಲ್ಲ – ರಮೇಶ್ ಜಾರಕಿಹೊಳಿ‌*

  ವಿಪಕ್ಷ ನಾಯಕ ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ.ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬದಲಾವಣೆ ಇಲ್ಲ ಎಂದು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಾರಕಿಹೊಳಿ‌, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಸುಭದ್ರವಾಗಿದೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಸಾಧ್ಯವಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ. ಇತ್ತೀಚೆಗೆ ಸಿಎಂ ಯಡಿಯೂರಪ್ಪನವರೇ ಸಿದ್ದರಾಮಯ್ಯನವರಿಗೆ ಉತ್ತರ ಕೊಟ್ಟಿದ್ದಾರೆ.ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಮಾಡುವುದಿಲ್ಲ ಎಂದು …

Read More »

ಬಿದ್ದು ಎದ್ದು ಗೆದ್ದು ಬರುವೆನು, ಸುಳ್ಳು ಕುಣಿಯುತ್ತಿರುವಾಗ ಸತ್ಯ ಅಳುತ್ತದೆ: ವಿನಯ್ ಕುಲಕರ್ಣಿ,.

ಧಾರವಾಡ: ತಮ್ಮ ಬಂಧನ ರಾಜಕೀಯ ಪ್ರೇರಿತ ಎಂದು ಹೇಳಿರುವ ವಿನಯ್ ಕುಲಕರ್ಣಿ, ಬಿದ್ದು, ಎದ್ದು, ಗೆದ್ದು ಬರುವೆನು. ಸುಳ್ಳು ಕುಣಿಯುತ್ತಿರುವಾಗ ಸತ್ಯ ಅಳುತ್ತದೆ. ಆದರೆ ಸತ್ಯ ಎದ್ದು ನಿಂತಾಗ ಸುಳ್ಳು ಸತ್ತೇ ಹೋಗುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ .ಈ ಕುರಿತು ಫೇಸ್ಬುಕ್‍ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿದ್ದು, ಎದ್ದು, ಗೆದ್ದು ಬರುವೆನು. ಸತ್ಯದ ತಳಹದಿಯಿಂದ ಎದ್ದು, ಗೆದ್ದು ಬರುವೆನು. ಸುಳ್ಳು ಕುಣಿಯುತ್ತಿರುವಾಗ ಸತ್ಯ ಅಳುತ್ತದೆ. ಆದರೆ ಸತ್ಯ ಎದ್ದು ನಿಂತಾಗ …

Read More »

ವಿನಯ ಕುಲಕರ್ಣಿ ಬಂಧನದ ಹಿಂದೆ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲ: ಲಕ್ಷ್ಮಣ ಸವದಿ

ಬೆಳಗಾವಿ:  ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನದ ಹಿಂದೆ ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲ  ಅಂತಾ ಡಿಸಿಎಂ  ಲಕ್ಷ್ಮಣ ಸವದಿ ಹೇಳಿದ್ದಾರೆ. ವಿನಯ ಕುಲಕರ್ಣಿ ಬಂಧನ ವಿಚಾರವಾಗಿ ಬೆಳಗಾವಿಯಲ್ಲಿ ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಜಿ ಪಂ ಸದಸ್ಯ ಯೋಗೀಶ್ ಗೌಡ ಅವರ ಕೊಲೆ ನಡೆದ ದಿನದಿಂದಲೇ ಈ ಪ್ರಕರಣವನ್ನು ಸಿಬಿಐ ಗೆ ವಹಿಸಬೇಕು ಎಂಬ ಒತ್ತಾಯ ಇತ್ತು. ಅದರಂತೆ ಈಗ ತನಿಖೆ ನಡೆದಿದೆ ಎಂದರು. ಕೊಲೆಯಾಗಿರುವ ಯೋಗೀಶಗೌಡ ಅವರ …

Read More »

ರಾಜ್ಯದಲ್ಲಿ ದೀಪಾವಳಿ ವೇಳೆ ಪಟಾಕಿ ಮಾರಾಟ,  ಹಚ್ಚುವುದು ನಿಷೇಧ

ಬೆಂಗಳೂರು:  ರಾಜ್ಯದಲ್ಲಿ ದೀಪಾವಳಿ ವೇಳೆ ಪಟಾಕಿ ಮಾರಾಟ,  ಹಚ್ಚುವುದು ನಿಷೇಧ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.  ಕೊರೊನಾ ಸೋಂಕು ರಾಜ್ಯದಲ್ಲಿ ಕ್ರಮೇಣ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ಪರಿಸರ ಮಾಲಿನ್ಯ ವಾಗಲಿದೆ. ಜತೆಗೆ ಗುಂಪು ಗುಂಪು ಸೇರುವುದರಿಂದ ಅಂತರ, ಮಾಸ್ಕ್ ಧರಿಸದೆ ಇರುವುದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಆದ ಕಾರಣ ರಾಜ್ಯದ ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ನಗರದಲ್ಲಿ ಮಾಧ್ಯಮಕ್ಕೆ ಹೇಳಿಕೆ …

Read More »

ಅರವಿಂದ್ ಪಾಟೀಲ ಬಿಜೆಪಿಗೆ,ಸಿಎಂ ಸಹಮತ- ಡಿಸಿಎಂ ಸವದಿ

ಬೆಳಗಾವಿ-ಡಿಸಿಸಿ ಬ್ಯಾಂಕ್ ಚುನಾವಣೆ ಇಂದು ನಡೆಯುತ್ತಿದೆ. 16 ನಿರ್ದೇಶಕ ಸ್ಥಾನದ ಪೈಕಿ ಈಗಾಗಲೇ 13ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದಾರೆ. ಮೂರು ಕ್ಷೇತ್ರದಲ್ಲಿ ಮಾತ್ರ ಚುನಾವಣೆ ನಡೆಯುತ್ತಿದೆ. ಖಾನಾಪುರ ಕ್ಷೇತ್ರದಲ್ಲಿ ಎನೂ ಕುತೂಹಲ ಇಲ್ಲ ಮತದಾರರು ಜಾನರಿದ್ದಾರೆ. ಎಂದು ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆಯ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಖಾನಾಪುರ ತಾಲೂಕಿನಲ್ಲಿ ಕಾಂಗ್ರೆಸ್ ಶಾಸಕರು ಸ್ಪರ್ಧೆ, ಮಾಜಿ ಶಾಸಕ ಅರವಿಂದ್ ಪಾಟೀಲ್ …

Read More »

ನ್ಯಾಯ ಎಲ್ಲಿದೆ…? ಅಂತಾ ಇವರು ಕೇಳುತ್ತಿದ್ದಾರೆ….!

ಬೆಳಗಾವಿ- ಗಂಡ,ಹೆಂಡತಿ,ಇಬ್ಬರು ಹೆಣ್ಣು ಮಕ್ಕಳೊಂದಿದೆ ಬೆಳಗಾವಿಯ ಡಿಸಿ ಕಚೇರಿಯ ಎದುರು ಕುಳಿತುಕೊಂಡಿದ್ದಾರೆ.ನ್ಯಾಯ ಎಲ್ಲಿದೆ ಅಂತಾ ಕೇಳುತ್ತಿದ್ದಾರೆ. ನ್ಯಾಯ ಸಿಗೋವರೆಗೂ ಅಹೋರಾತ್ರಿ ಧರಣಿ ಮಾಡುತ್ತೇವೆ,ಅಲ್ಲಿಯವರೆಗೆ ಇಲ್ಲಿಯೇ ಕುಳಿತುಕಿಳ್ಳುತ್ತೇವೆ ಅಂತ,ಈ ಕುಟುಂಬ ಡಿಸಿ ಕಚೇರಿ ಎದುರು ಧರಣಿ ಆರಂಭಿಸಿದೆ. ರಾಯಬಾಗ ತಾಲ್ಲೂಕಿನ, ನರಸಲಾಪೂರ ಗ್ರಾಮದ ಸಂಗೀತಾ ಬಂಡು ಚಾವರೆ ಕುಟುಂಬ ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.ಈವರ ಪಾಲಿಗೆ ಬರುವ ಜಮೀನು ಮತ್ತು ಆಸ್ತಿಯನ್ನು,ಇವರ ಸಮಂಧಿಕರು ಮಾಡಿಕೊಡುತ್ತಿಲ್ಲ,ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎನ್ನುವ ಕಾರಣಕ್ಕಾಗಿ ನಮಗೆ …

Read More »

ಬೆಳಗಾವಿಯ ನಿವಾಸಿ ಈಗ ಅಮೇರಿಕಾದ ಸಂಸದ

  ಅಜ್ಜನ ಕಡೆ ಮಾಸ್ಕ್ ಯಾವ ತರಾ ಇದೆ ಈ ವಿಡಿಯೋ ಕೊನೇವರಿಗೆ ನೀವು ನೋಡ್ಲೆ ಬೇಕು…….           ಬೆಳಗಾವಿ- ಬೆಳಗಾವಿಯ ನಿವಾಸಿಯೊಬ್ಬ ಅಮೇರಿಕಾದ ಸಂಸದನಾಗಿ ಆಯ್ಕೆಯಾಗಿದ್ದಾನೆ. ಬೆಳಗಾವಿ ಶಹಾಪೂರ ಪ್ರದೇಶದ ಮೀರಾಪೂರ ಗಲ್ಲಿಯ ನಿವಾಸಿ ಶ್ರೀನಿವಾಸ ಥಾಣೆದಾರ ಈಗ ಅಮೆರಿಕಾ ದೇಶದ ಸೆನೆಟ್ ಮೆಂಬರ್ ಆಗಿ ಆಯ್ಕೆಯಾಗಿದ್ದಾರೆ. ಚಿಂತಾಮಣರಾವ ಶಾಲೆಯಲ್ಲಿ ಹೈಸ್ಕೂಲ ಕಲೆತಿರುವ ಶ್ರೀನಿವಾಸ ಥಾಣೆದಾರ್ ಅಮೇರಿಕಾದಲ್ಲಿ ಕೆಮಿಕಲ್ ಉದ್ಯಮಿಯಾಗಿದ್ದಾರೆ.

Read More »