Breaking News
Home / ಜಿಲ್ಲೆ / ಯತ್ರೀಂದ್ರ ಸಿದ್ದರಾಮಯ್ಯ ಅವರು ಆಪ್ತ ಸ್ನೇಹಿತನ ವಿರುದ್ಧವೇ ಪ್ರಚಾರ

ಯತ್ರೀಂದ್ರ ಸಿದ್ದರಾಮಯ್ಯ ಅವರು ಆಪ್ತ ಸ್ನೇಹಿತನ ವಿರುದ್ಧವೇ ಪ್ರಚಾರ

Spread the love

ತುಮಕೂರು: ಜಿಲ್ಲೆಯ ಶಿರಾ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಇದರ ಮಧ್ಯೆ ಸಿದ್ದರಾಮಯ್ಯನವರ ಪುತ್ರ ಯತ್ರೀಂದ್ರ ಸಿದ್ದರಾಮಯ್ಯ ಅವರು ಆಪ್ತ ಸ್ನೇಹಿತನ ವಿರುದ್ಧವೇ ಪ್ರಚಾರಕ್ಕಿಳಿದಿದ್ದಾರೆ.

ಹೌದು….ಶಿರಾದ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಅವರು ಯತೀಂದ್ರ ಅವರ ಆಪ್ತ ಸ್ನೇಹಿತರು. ಆದರೂ ಇಂದು (ಸೋಮವಾರ) ಯತೀಂದ್ರ ಅವರು ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರನವರ ಪರವಾಗಿ ಶಿರಾ ನಗರ ಮತ್ತು ಗೌಡಗೆರೆಯಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಈ ಮೂಲಕ ವೈಯಕ್ತಿಕ ಸಂಬಂಧಗಳೇ ಬೇರೆ, ರಾಜಕೀಯವೇ ಬೇರೆ ಎಂದು ಸಾರಿದ್ದಾರೆ.

ಸಿದ್ದರಾಮಯ್ಯಗೆ ‘ವಾರ್ನಿಂಗ್‌’ ಕೊಟ್ಟ ಎಚ್.ಡಿ ಕುಮಾರಸ್ವಾಮಿ…!

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಯತೀಂದ್ರ, ರಾಜೇಶ್ ಗೌಡರು ನನ್ನ ಸ್ನೇಹಿತರೇ.

ಲ್ಯಾಬ್ ಕೂಡ ಜೊತೆಗೆ ಮಾಡಿದ್ವಿ,ಆಮೇಲೆ ಆಚೆ ಬಂದ್ವಿ. ಆದ್ರೆ, ವೈಯಕ್ತಿಕ ಸಂಬಂಧಗಳೇ ಬೇರೆ ರಾಜಕೀಯವೇ ಬೇರೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ನಿಂದ ಟಿಕೆಟ್ ಕೊಡಿ ಅಂತಾ ಕೇಳಿಕೊಂಡಿದ್ರು. ಟಿ.ಬಿ ಜಯಚಂದ್ರ ಅರು ನಮ್ಮ ಹಿರಿಯರು. ಅವ್ರೇ ಅಭ್ಯರ್ಥಿ ಅಂತಾ ಹೇಳಿದ್ವಿ. ಟಿಕೆಟ್ ಕೊಡೊಕೆ ಆಗಲ್ಲಾ. ಪಕ್ಷಕ್ಕೆ ಸೇರಿ ಕೆಲಸ ಮಾಡಿ ಎಂದು ಹೇಳಿದ್ವಿ. ಅವರಿಗೆ ಅವಸರಕ್ಕೆ ಟಿಕೆಟ್ ಬೇಕಿತ್ತು. ಹಾಗಾಗಿ ಬಿಜೆಪಿ ಸೇರಿದ್ರು. ಅವರು ಸ್ನೇಹಿತರು ಅನ್ನೋ ಕಾರಣಕ್ಕೆ ಪಕ್ಷ ನಿಷ್ಠೆ ಬಿಡೋಕೆ ಆಗಲ್ಲಾ. ಎಂದು ಯತೀಂದ್ರ ಹೇಳಿದರು.


Spread the love

About Laxminews 24x7

Check Also

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 12 ಜನ ಕೊರೊನಾ ಸೋಂಕಿಗೆ ಬಲಿ; ಜನರಲ್ಲಿ ಹೆಚ್ಚಾದ ಆತಂಕ

Spread the loveಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೊತೆಗೆ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ