Breaking News
Home / ರಾಜ್ಯ / ಧಾರವಾಡ: ಜಿಲ್ಲೆಯ ಜನರಿಗೆ ತಪ್ಪು ಮಾಹಿತಿ ನೀಡಿದ ಆರೋಪ ಹಿನ್ನೆಲೆಯಲ್ಲಿ ಎಐಸಿಸಿ ಸದಸ್ಯ ದೀಪಕ್‌ಗೆ ಧಾರವಾಡ ಡಿಸಿ ನೋಟಿಸ್

ಧಾರವಾಡ: ಜಿಲ್ಲೆಯ ಜನರಿಗೆ ತಪ್ಪು ಮಾಹಿತಿ ನೀಡಿದ ಆರೋಪ ಹಿನ್ನೆಲೆಯಲ್ಲಿ ಎಐಸಿಸಿ ಸದಸ್ಯ ದೀಪಕ್‌ಗೆ ಧಾರವಾಡ ಡಿಸಿ ನೋಟಿಸ್

Spread the love

ಧಾರವಾಡ: ಜಿಲ್ಲೆಯ ಜನರಿಗೆ ತಪ್ಪು ಮಾಹಿತಿ ನೀಡಿದ ಆರೋಪ ಹಿನ್ನೆಲೆಯಲ್ಲಿ ಎಐಸಿಸಿ ಸದಸ್ಯ ದೀಪಕ್‌ಗೆ ಧಾರವಾಡ ಡಿಸಿ ನೋಟಿಸ್ ಜಾರಿ ಮಾಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಆಕ್ಸಿಜನ್, ಬೆಡ್, ವೆಂಟಿಲೇಟ್, ICU ಬೆಡ್ ಇಲ್ಲವೆಂದು ದೀಪಕ್ ವಿಡಿಯೋ ಮಾಡಿದ್ದರು. ಆದರೆ ಧಾರವಾಡ ಜಿಲ್ಲೆಯಲ್ಲಿ 80 ಐಸಿಯು ಬೆಡ್, 103 ವೆಂಟಿಲೇಟರ್, 545 ಆಕ್ಸಿಜನ್ ಬೆಡ್ ಖಾಲಿ ಇವೆ. ಹೀಗಾಗಿ ತಪ್ಪು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ದೀಪಕ್‌ಗೆ ನೋಟಿಸ್ ಜಾರಿ ಮಾಡಿದ್ದಾರೆ.

ಎಐಸಿಸಿ ಸದಸ್ಯ ಮತ್ತು ಪಾಲಿಕೆ ಮಾಜಿ ಸದಸ್ಯ ದೀಪಕ್ ಚಿಂಚೋರೆಗೆ ಧಾರವಾಡ ಡಿಸಿ ನಿತೇಶ ಪಾಟೀಲ್ ಷೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ಬೆಡ್ ಇಲ್ಲ. ಡಿಸಿ ಬರೀ ಮಾಧ್ಯಮಗಳ ಮುಂದೆ ಫೋಸ್ ಕೊಡುತ್ತಾರೆ. ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್, ವೆಂಟಿಲೇಟರ್ ಇಲ್ಲ ಎಂದು ದೀಪಕ್ ವೀಡಿಯೋ ಮಾಡಿ ಡಿಸಿ ವಿರುದ್ಧ ಹರಿಹಾಯ್ದಿದ್ದರು. ಮಾಧ್ಯಮಗಳಲ್ಲಿ ವಿಡಿಯೋ ರಿಲೀಸ್ ಮಾಡಿದ್ದರು. ದೀಪಕ್ ಮಾಡಿದ ವಿಡಿಯೋ ನೋಡಿ ಡಿಸಿ ಗರಂ ಆಗಿದ್ದಾರೆ.

ಜಿಲ್ಲೆಯಲ್ಲಿ 80 ಐಸಿಯು ಬೆಡ್, 103 ವೆಂಟಿಲೇಟರ್, 545 ಆಕ್ಸಿಜನ್ ಬೆಡ್ ಖಾಲಿ ಇವೆ. ಆದರೂ ಜನರಿಗೆ ತಪ್ಪು ಮಾಹಿತಿ ನೀಡಿದ್ದೀರಿ. ಆ ಮೂಲಕ ಜನರನ್ನು ಆತಂಕಪಡಿಸಿದ್ದೀರಿ. ಈ ಹಿನ್ನೆಲೆಯಲ್ಲಿ ನಿಮ್ಮ ವಿವರಣೆಯನ್ನು ನೀಡಿ ಅಂತಾ ಕೊವಿಡ್-19 ನಿಯಂತ್ರಣ ಕಾಯ್ದೆಯಡಿ ನೋಟಿಸ್ ಜಾರಿ ಮಾಡಿದ್ದಾರೆ. 24 ಗಂಟೆಯೊಳಗೆ ಖುದ್ದಾಗಿ ಹಾಜರಾಗಿ ವಿವರಣೆ ನೀಡುವಂತೆ ದೀಪಕ್ ಚಿಂಚೋರೆಗೆ ಸೂಚನೆ ನೀಡಿದ್ದಾರೆ.


Spread the love

About Laxminews 24x7

Check Also

ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ.: ಲಕ್ಷ್ಮೀ ಹೆಬ್ಬಾಳ್ಕರ್

Spread the love ಬೆಳಗಾವಿ: ರಾಜ್ಯದ ರಾಜಕಾರಣ, ದೇಶದ ರಾಜಕಾರಣ ತಲೆ ತಗ್ಗಿಸುವ ಘಟನೆಯಿದು. ನಾಗರಿಕ ಸಮಾಜ ತಲೆ ತಗ್ಗಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ