Breaking News
Home / ರಾಜ್ಯ / ಡಿ.ಕೆ.ಶಿವಕುಮಾರ್ ಕೇಳಿ ಭಾರತೀಯ ಜನತಾ ಪಕ್ಷ ಆಡಳಿತ ಮಾಡಲ್ಲ: ಗೋವಿಂದ ಕಾರಜೋಳ

ಡಿ.ಕೆ.ಶಿವಕುಮಾರ್ ಕೇಳಿ ಭಾರತೀಯ ಜನತಾ ಪಕ್ಷ ಆಡಳಿತ ಮಾಡಲ್ಲ: ಗೋವಿಂದ ಕಾರಜೋಳ

Spread the love

ಬೆಳಗಾವಿ: ಡಿ.ಕೆ.ಶಿವಕುಮಾರ್ ಕೇಳಿ ಭಾರತೀಯ ಜನತಾ ಪಕ್ಷ ಆಡಳಿತ ಮಾಡಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರರ್​ಗೆ ಡಿಸಿಎಂ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.

ಇಂದು ಡಿಸಿಎಂ ಗೋವಿಂದ ಕಾರಜೋಳ ನೇತೃತ್ವದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಬಿಜೆಪಿ ಪದಾಧಿಕಾರಿಗಳ ಹಾಗೂ ಪ್ರಮುಖರ ಸಭೆ ನಡೆಯುತ್ತಿದ್ದು, ಸಭೆಗೂ ಮುನ್ನ ಮಾತನಾಡಿದರು.

ಸಿಎಂ ಬಿಎಸ್​ವೈಗೆ ತಮ್ಮ ಆಡಳಿತ ಸರಿ ಅನಿಸಿದ್ರೆ ಈಶ್ವರಪ್ಪರನ್ನು ಡಿಸ್ಮಿಸ್ ಮಾಡಲಿ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಅಸ್ಪೃಶ್ಯ, ಹಿಂದುಳಿದವರನ್ನು ಮೇಲೆತ್ತಳಲು ಪ್ರಯತ್ನ ಮಾಡಲಿಲ್ಲ, ಅವರಿಗೆ ಶಿಕ್ಷಣ ಕೊಟ್ಟರೆ ವೋಟ್​ಬ್ಯಾಂಕ್ ಕಳೆದುಕೊಳ್ಳುತ್ತೇವೆಂಬ ಆತಂಕದಲ್ಲಿದರು. ಪರಿಶಿಷ್ಟ ಜಾತಿ ಜನಾಂಗದವರು ಈಗ ಬಿಜೆಪಿ ಬೆಂಬಲಿಸುತ್ತಿದ್ದಾರೆ ಎಂದಿದ್ದಾರೆ.

ಇನ್ನು ಸ್ವಾತಂತ್ರ್ಯ ಬಂದ ಬಳಿಕ ಡಾ.ಬಾಬಾಸಾಹೇಬ ಅಂಬೇಡ್ಕರ್​ಗೆ ಕಾಂಗ್ರೆಸ್ ಯಾವ ರೀತಿ ಅವಮಾನಿಸಿದೆ ಎಲ್ಲರಿಗೂ ಗೊತ್ತು. ಅಂಬೇಡ್ಕರ್ ಶವಸಂಸ್ಕಾರಕ್ಕೆ ಮುಂಬೈನಲ್ಲಿ ಕಾಂಗ್ರೆಸ್ ಪಕ್ಷದವರು ಆರಡಿ ಮೂರಡಿ ಜಾಗ ಕೊಡಲಿಲ್ಲ, ಅಸ್ಪೃಶ್ಯರು ಹಿಂದುಳಿದವರು ದಲಿತರು, ಕಾಂಗ್ರೆಸ್ ತಿರಸ್ಕಾರ ಮಾಡಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಶೇಕಡಾ 60ರಷ್ಟು ಅಹಿಂದ ವರ್ಗ ಜನ ಬಿಜೆಪಿ ಬೆಂಬಲಿಸುತ್ತಿದ್ದಾರೆ. ಹೀಗಾಗಿ ದೇಶದ 23 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಬೆಳಗಾವಿ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿರನ್ನು ಜನ ಬೆಂಬಲಿಸಿತ್ತಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


Spread the love

About Laxminews 24x7

Check Also

ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ.: ಲಕ್ಷ್ಮೀ ಹೆಬ್ಬಾಳ್ಕರ್

Spread the love ಬೆಳಗಾವಿ: ರಾಜ್ಯದ ರಾಜಕಾರಣ, ದೇಶದ ರಾಜಕಾರಣ ತಲೆ ತಗ್ಗಿಸುವ ಘಟನೆಯಿದು. ನಾಗರಿಕ ಸಮಾಜ ತಲೆ ತಗ್ಗಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ