Breaking News
Home / ಜಿಲ್ಲೆ / ಬೆಂಗಳೂರು / ನಾಳೆಯಿಂದ ವಿಧಾನಮಂಡಲ ಅಧಿವೇಶನ; ಈ ಬಾರಿ 11 ವಿಧೇಯಕ ಮಂಡನೆ; ಸ್ಪೀಕರ್​ ಕಾಗೇರಿ

ನಾಳೆಯಿಂದ ವಿಧಾನಮಂಡಲ ಅಧಿವೇಶನ; ಈ ಬಾರಿ 11 ವಿಧೇಯಕ ಮಂಡನೆ; ಸ್ಪೀಕರ್​ ಕಾಗೇರಿ

Spread the love

ಬೆಂಗಳೂರು (ಜ. 27): ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಅಧಿವೇಶನ ನಾಳೆಯಿಂದ ಅಂದರೆ ಜ. 28ರಿಂದ ಪ್ರಾರಂಭವಾಗಲಿದೆ. ಫೆ. 5ರವರೆಗೆ ಏಳು ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಈ ಬಾರಿ 11 ವಿಧೇಯಕಗಳು ಮಂಡನೆಯಾಗಲಿದೆ ಎಂದು ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು. ಅಧಿವೇಶನ ಹಿನ್ನಲೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಧಿವೇಶನಕ್ಕೆ ಎಲ್ಲ ಸಿದ್ದತೆಗಳು ಪೂರ್ಣಗೊಂಡಿವೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವಂತೆ ರಾಜ್ಯಪಾಲರರಾದ ವಾಜೂಭಾಯಿ ಅವರನ್ನು ಆಹ್ವಾನಿಸಲಾಗಿದೆ. ನಾಳೆ ರಾಜ್ಯಪಾಲರ ಭಾಷಣ ಗಳಿಕ ಸಂತಾಪ ಸೂಚನೆ ಮಾಡಲಾಗುವುದು. ನಂತರ ಕಲಾಪವನ್ನು ಮುಂದೂಡಲಾಗುತ್ತದೆ. ಶುಕ್ರವಾರದಿಂದ ಪ್ರಶ್ನೋತ್ತರ ಕಲಾಪ ನಡೆಯಲಿದೆ.

ಈ ಬಾರಿ ಅಧಿವೇಶನದಲ್ಲಿ  11 ಮಸೂದೆಗಳು  ಮಂಡನೆಯಾಗುತ್ತವೆ. ಗೋ ಹತ್ಯೆ ನಿಷೇಧ ವಿಧೇಯಕ ಇನ್ನೂ ವಿಧಾನ ಪರಿಷತ್ ನಲ್ಲಿ ಅಂಗೀಕಾರವಾಗುವುದು ಬಾಕಿ ಇದೆ. ಮೂರು ವಿಶ್ವವಿದ್ಯಾಲಯ ಗಳ ವಿಧೇಯಕ ಹಾಗು ಮೂರು ಸುಗ್ರೀವಾಜ್ಞೆ ಗಳ ವಿಧೇಯಕಗಳಿವೆ. ಯಾವುದೇ ಮಸೂದೆಗಳಿದ್ದರೂ ಸರ್ಕಾರ ಮುಂಚಿತವಾಗಿಯೇ ಸಚಿವಾಲಯಕ್ಕೆ ಕಳುಹಿಸಿಕೊಡಬೇಕು. ಇದರಿಂದ ಸದಸ್ಯರಿಗೆ ಚರ್ಚೆಗೆ ಸಿದ್ದವಾಗಿ ಬರಲು ಅವಕಾಶವಾಗುತ್ತದೆ ಎಂದರು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ