Breaking News
Home / Uncategorized / ಸತೀಶ್ ಜಾರಕಿಹೊಳಿ ಜೊತೆ ಹೆಲಿಕಾಪ್ಟರ್ ನಲ್ಲಿ ಸುತ್ತಲು ಆಯ್ಕೆಯಾದವರ ಪಟ್ಟಿ

ಸತೀಶ್ ಜಾರಕಿಹೊಳಿ ಜೊತೆ ಹೆಲಿಕಾಪ್ಟರ್ ನಲ್ಲಿ ಸುತ್ತಲು ಆಯ್ಕೆಯಾದವರ ಪಟ್ಟಿ

Spread the love

ಗೋಕಾಕ:  ಇಲ್ಲಿನ ವಾಲ್ಮೀಕಿ ಕ್ರೀಡಾಂಗಣದಲ್ಲಿ  ಭಾನುವಾರ(ಜ.10) ರಂದು ಬೆಳಗ್ಗೆ 11 ಗಂಟೆಗೆ ಮಾನವ ಬಂಧುತ್ವ ವೇದಿಕೆ ವತಿಯಿಂದ ‘ಸಾವಿತ್ರಿಬಾಯಿ ಫುಲೆ ಜಯಂತಿ’ ಹಾಗೂ ‘ರಾಜ್ಯ ಮಟ್ಟದ ಪ್ರಬಂಧ’ ಹಾಗೂ ‘ಭಾಷಣ’ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ, ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕರು ಆದ ಸತೀಶ ಜಾರಕಿಹೊಳಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದು,  ಮುಖ್ಯ ಅತಿಥಿಗಳಾಗಿ ಸಾಹಿತಿ ಡಾ. ವಿನಯ ವಕ್ಕುಂದ, ಡಾ. ಯಲ್ಲಪ್ಪ ಹಿಮ್ಮಡಿ ಅವರು ಭಾಗವಹಿಸಲಿದ್ದಾರೆ. ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್ ಅವರು ಪ್ರಾಸ್ತಾವಿಕ ಮಾತನಾಡಲಿದ್ದಾರೆ. ಜತೆಗೆ ವಿವಿಧ ಜಿಲ್ಲೆಗಳಿಂದ ಸಾಹಿತಿಗಳು ಭಾಗಿಯಾಗಲಿದ್ದಾರೆ.
ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಹಿನ್ನೆಲೆ ಮಾನವ ಬಂಧುತ್ವ ವೇದಿಕೆ ಸಂಘಟನೆ  ವಿದ್ಯಾರ್ಥಿಗಳಿಗೆ ಸ್ಪರ್ಧೆಯೊಂದನ್ನು  ಆಯೋಜಿಸಿತ್ತು.  ರಾಜ್ಯಮಟ್ಟದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆ ಏರ್ಪಡಿಸುವ ಮೂಲಕ  ವಿದ್ಯಾರ್ಥಿಗಳಿಗೆ ಹೆಲಿಕಾಪ್ಟರ್ ನಲ್ಲಿ ಸುತ್ತಾಡಿಸುವ ಆಫರ್ ನೀಡಿತ್ತು.
ಈ ಸ್ಪರ್ಧೆಯಲ್ಲಿ  ರಾಜ್ಯ ಹಾಗೂ  ಹೊರ ರಾಜ್ಯದ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಪ್ರಬಂಧ ಹಾಗೂ ಭಾಷಣ ಪ್ರತಿಗಳನ್ನು ಕಳುಹಿಸಿಕೊಟ್ಟಿದ್ದರು. ಇದೀಗ ಅತ್ಯುತ್ತಮ ಪ್ರಬಂಧ, ಭಾಷಣ ಮಾಡಿದ ವಿಜೇತರ ಆಯ್ಕೆ ಮಾಡಲಾಗಿದ್ದು, ನಾಳೆ ಕಾರ್ಯಕ್ರಮದಲ್ಲಿ ವಿಜೇತರಿಗೆ  ಪ್ರಮಾಣ ಪತ್ರ ವಿತರಿಸಲಾಗುತ್ತಿದೆ. ಜತೆಗೆ ಶಾಸಕ ಸತೀಶ ಜಾರಕಿಹೊಳಿ ಅವರೊಂದಿಗೆ ಹೆಲಿಕಾಪ್ಟರ್ ರೈಡಿಂಗ್ ಗೆ ಅವಕಾಶ ಕಲ್ಪಿಸಲಾಗುತ್ತಿದೆ.
ಪ್ರಬಂಧ ಸ್ಪರ್ಧೆ ವಿಜೇತರ ಹೆಸರು:
ವೈಷ್ಣವಿ ಕಡೋಲ್ಕರ್- ಬೆಳಗಾವಿ,  ಜ್ಯೋತಿ ಗುದ್ದೀನ -ಶಿರಗುಪ್ಪಿ, ಸುಧಾ ಕರ್ಲಿ -ರಾಯಚೂರು, ಸಿಮ್ರಾನ್ ಬಾಗವಾನ್ -ಯಾದವಾಡ, ಮಾನಸ ವಿ- ಚಾಮರಾಜನಗರ.
 ಭಾಷಣ ಸ್ಪರ್ಧೆ ವಿಜೇತರು:
ಪೂಜಾ ತೀರ್ಥಹಳ್ಳಿ-ತೀರ್ಥಹಳ್ಳಿ, ಮುಷ್ರಫ್ ಸಯ್ಯದ- ಘಟಪ್ರಭಾ, ಪ್ರಯಂಕಾ ಭರಣಿ-ಕಲಬುರ್ಗಿ, ಪವಿತ್ರಾ ಹತ್ತರವಾಟ-ಮೆಳವಂಕಿ- ಶ್ವೇತಾ ಜುಗಳೆ-ಧಾರವಾಡ, ಶಾಮಲಾ ಭರಮಾ ಹಿರೋಜಿ-ಕಲಖಾಂಬ.
2021 ರ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗೆ ಆಯ್ಕೆಯಾದ ಶಿಕ್ಷಕಿಯರು:
ಬೆಳಗಾವಿ- ಲಕ್ಷ್ಮಿದೇವಿ ನಾಯಕ, ಸುನೀತಾ ದುಂಡಪ್ಪಾ ನರಸಣ್ಣವರ
ಕಿತ್ತೂರು- ಶಾಂತಾ ಎಚ್. ಸಾವಕ್ಕನವರ
ಖಾನಾಪೂರ- ಶೀತಲ ಸುಭಾಷ ಚೌಗಲೆ
ಬೈಲಹೊಂಗಲ- ಮಹಾಲಕ್ಷ್ಮೀ ಕೆ.ಸಿ
ಸವದತ್ತಿ- ಮಹಾದೇವಿ ರವಳಪ್ಪ ಫಂಡಿ
ಯರಗಟ್ಟಿ-  ಲಲಿತಾ ಗಲಗಲಿ
ರಾಮದುರ್ಗ- ಅನಸೂಯ ಎನ್. ಸಾವಳಗಿ
ಗೋಕಾಕ- ಮಹಾನಂದ ಯಲ್ಲನಗೌಡ ಪಾಟೀಲ್
ಮೂಡಲಗಿ- ರಾಧಾ ಎಮ್.ಎನ್
ಹುಕ್ಕೇರಿ- ನನ್ನಿಮಾ ಕಾಗಜಿ, ಮಮತಾ ಸಾಗರ ಭೋಸಲೆ
ನಿಪ್ಪಾಣಿ- ಸುಧಾ ಶಂಕರ ಖಾಡೆ
ಚಿಕ್ಕೋಡಿ- ಸರೋಜಿನಿ ಕುಂದರಗಿ
ರಾಯಬಾಗ- ಶಬಾನಾ ಅನ್ವರಖಾನ ದೇಸಾಯಿ
ಕಾಗವಾಡ- ಗಾಯತ್ರಿ ಅಶೋಕ ಮಾಳಗೆ
ಅಥಣಿ- ಮಂಜುಳಾ ಮಹಾಂತೇಶ ನಾಗನಾಥ್

Spread the love

About Laxminews 24x7

Check Also

ಜನರ ಬದುಕಿನ ಭಾರ ಕಡಿಮೆ ಮಾಡಿದ್ದು ಕಾಂಗ್ರೆಸ್‌ ಎಂದ ಈ. ತುಕಾರಾಂ

Spread the love ಹೊಸಪೇಟೆ: ರೈತರ ಸಾಲ ಮನ್ನಾದಿಂದ ಹಿಡಿದು ಜನ ಸಾಮಾನ್ಯರ ಬದುಕಿನ ಭಾರವನ್ನು ಕಡಿಮೆ ಮಾಡಿದ್ದು ಕಾಂಗ್ರೆಸ್‌. ರಾಜ್ಯದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ