Breaking News
Home / ರಾಜಕೀಯ / ಸಚಿವ ಸತೀಶ್​ ಜಾರಕಿಹೊಳಿ ಭೇಟಿ ಬಳಿಕ ಸಂಸದ ಡಿ ಕೆ ಸುರೇಶ್ ಹೇಳಿದ್ದೇನು​?

ಸಚಿವ ಸತೀಶ್​ ಜಾರಕಿಹೊಳಿ ಭೇಟಿ ಬಳಿಕ ಸಂಸದ ಡಿ ಕೆ ಸುರೇಶ್ ಹೇಳಿದ್ದೇನು​?

Spread the love

ಬೆಂಗಳೂರು: ಸಂಸದ ಡಿ ಕೆ ಸುರೇಶ್ ಅವರು ಇಂದು ಸಚಿವ ಸತೀಶ್ ಜಾರಕಿಹೊಳಿ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿದ್ದಾರೆ.

ಮೊನ್ನೆಯಷ್ಟೇ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಠಾತ್ ಆಗಿ ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾಗಿ ಅಚ್ಚರಿ ಮೂಡಿಸಿದ್ದರು. ಇದೀಗ ಸಂಸದ ಸುರೇಶ್​ ಅವರ ಭೇಟಿ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ನಮ್ಮ ಕಾರ್ಯಾಧ್ಯಕ್ಷರ ಜೊತೆಗೆ ಮಹತ್ತರವಾದ ಖಾತೆ ಹೊಂದಿದ್ದಾರೆ. ಮಳೆಯಿಂದ ರಸ್ತೆಗೆ ಗುಂಡಿಗಳು ಬಿದ್ದು, ದೊಡ್ಡ ಸಮಸ್ಯೆ ಆಗಿದೆ. ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಅಂತ ಕೇಳುವುದಕ್ಕೆ ಬಂದಿದ್ದೆ. ಭೇಟಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸರ್ಕಾರ ಅನುಮೋದನೆ ಕೊಟ್ಟ ತಕ್ಷಣ ನನ್ನ ಕ್ಷೇತ್ರಕ್ಕೂ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಸತೀಶ್​ ಜಾರಕಿಹೊಳಿ ಹೇಳಿದ್ದರಲ್ಲಿ ತಪ್ಪಿಲ್ಲ: ಬಳಿಕ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಂಸದ ಡಿ ಕೆ ಸುರೇಶ್​, ನಾನೂ ಸಿಎಂ ಆಕಾಂಕ್ಷಿ ಎಂದು ಸತೀಶ್ ಹೇಳಿದ್ದರಲ್ಲಿ ತಪ್ಪಿಲ್ಲ. ಯಾರು ಸಿಎಂ ಆದ್ರೂ ಕೂಡ ನಾನು ಸ್ವಾಗತ ಮಾಡುತ್ತೇನೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರಬೇಕು ಅಂತ ನಾನು ಬಯಸುತ್ತೇನೆ. ಸದ್ಯ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾರೆ. ಮುಂದಿನ ದಿನಗಳಲ್ಲಿ ನಾನೂ ಸಿಎಂ ಆಕಾಂಕ್ಷಿ ಅಂತ ಸತೀಶ್ ಹೇಳಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ ಎಂದರು.

ಸಿಎಂ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ, ಯಾರೂ ಆಗಬಾರದು ಎನ್ನುವಹಾಗಿಲ್ಲ. ಶಾಸಕರಾದವರಿಗೆ ಮಂತ್ರಿ ಆಗಬೇಕು ಅಂತ ಆಸೆ. ಮಂತ್ರಿ ಆದವರಿಗೆ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ. ಏನೂ ಇಲ್ಲದವರಿಗೆ ಶಾಸಕರಾಗಬೇಕು ಅಂತ ಆಸೆ. ಇದೊಂದು ಸೈಕಲ್, ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಬಿಜೆಪಿ ವಿರುದ್ಧ ವಾಗ್ದಾಳಿ: ನಂತರಬಿಜೆಪಿಯಿಂದ ಆಪರೇಷನ್ ಕಮಲ ಪ್ರಯತ್ನ ವಿಚಾರವಾಗಿ ಪ್ರತಿಕ್ರಿಯಿಸಿದ ಡಿ.ಕೆ. ಸುರೇಶ್, ಬಿಜೆಪಿಯವರಿಗೆ ಆಪರೇಷನ್ ಬಿಟ್ಟರೆ ಬೇರೆ ಇನ್ನೇನಾದರೂ ಗೊತ್ತಿದೆಯಾ?. ಆಪರೇಷನ್ ಒಂದೇ ಗೊತ್ತಿರೋದು. ಜನಕ್ಕೆ ಏನು ಬೇಕೋ ಅದನ್ನು ಮಾಡುವುದು ಗೊತ್ತಿಲ್ಲ ಅವರಿಗೆ. ಭ್ರಷ್ಟಾಚಾರದಲ್ಲಿ ಮುಳುಗಿ ಕೆಲಸ ಇಲ್ಲದೇ ಕೂತಿದ್ದಾರೆ ಇವತ್ತು. ಜನರೇ ತಿರಸ್ಕಾರ ಮಾಡಿದ್ದಾರೆ ಅವರನ್ನು. ಜನರು ಬಿಜೆಪಿ ಮೇಲೆ ನಂಬಿಕೆ ಕಳೆದುಕೊಂಡಾಗ ಈ ತರಹ ಮಾತಾಡೋದು ಸರ್ವೆ ಸಾಮಾನ್ಯ ಎಂದು ಟೀಕಿಸಿದರು.

ಜನರ ಮನಸ್ಸನ್ನು ಬೇರೆ ಕಡೆಗೆ ಒಯ್ಯಬೇಕು ಅಂದ್ರೆ ಬಿಜೆಪಿ ಆಪರೇಷನ್ ಹೆಸರೇ ಹೇಳಬೇಕು. ಬಿಜೆಪಿಗೆ ನಮ್ಮ ಗ್ಯಾರಂಟಿಗಳಿಂದ ಆಘಾತ ಆಗಿದೆ. ಆಘಾತ ತಪ್ಪಿಸಿಕೊಳ್ಳಲು ಆಪರೇಷನ್ ಕಮಲದ ಹೆಸರು ಹೇಳ್ತಿದ್ದಾರೆ. ವಿಪಕ್ಷ ನಾಯಕರು ಇದ್ದಾರೋ ಇಲ್ವೋ ಅವರಿಗೆ ಬಿಟ್ಟಿದ್ದು. ಆದರೆ ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದು, ನಮ್ಮ ತಟ್ಟೆಯಲ್ಲಿ ಜಿರಳೆ ಹುಡಿಕಿದರೆ ನಾವೇನು ಮಾಡೋಕಾಗತ್ತೆ? ಎಂದರು.

ಅಭಿವೃದ್ದಿ ವಿಚಾರ ಚರ್ಚೆ: ಡಿ.ಕೆ. ಸುರೇಶ್ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಅಭಿವೃದ್ಧಿ ಕೆಲಸಕ್ಕೆ ಕೆಲವರು ಬರ್ತಾರೆ. ಅದು ಸ್ವಾಭಾವಿಕ. ವಿರೋಧ ಪಕ್ಷದವರೂ ಕೂಡ ಬರ್ತಾರೆ. ಅಭಿವೃದ್ಧಿ ವಿಚಾರ ಚರ್ಚೆಯಾಗಿದೆ ಎಂದು ತಿಳಿಸಿದರು.


Spread the love

About Laxminews 24x7

Check Also

ಗೃಹಲಕ್ಷ್ಮೀ ಹಣದಿಂದ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಡ ಮಹಿಳೆ

Spread the love ರಾಮದುರ್ಗ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಎರಡು ಸಾವಿರ ರೂಪಾಯಿ ಹಣ ಕಳೆದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ