Breaking News
Home / Uncategorized / ಅಂತ್ಯ ಸಂಸ್ಕಾರದ ವೇಳೆ ಮರುಜೀವ ಪಡೆದ ಎಳೆಮಗು, ಬಾಗಲಕೋಟೆಯಲೊಂದು ಅಚ್ಚರಿ

ಅಂತ್ಯ ಸಂಸ್ಕಾರದ ವೇಳೆ ಮರುಜೀವ ಪಡೆದ ಎಳೆಮಗು, ಬಾಗಲಕೋಟೆಯಲೊಂದು ಅಚ್ಚರಿ

Spread the love

ಬಾಗಲಕೋಟೆ, ಮೇ 24- ಎಳೆಯ ಮಗುವೊಂದು ಮೃತಪಟ್ಟಿದೆ ಎಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಆ ಮಗು ಕೆಮ್ಮಿದ್ದು ಪೋಷಕರಲ್ಲಿ ಅಚ್ಚರಿ ಮೂಡಿಸಿದ ಘಟನೆ ಜಿಲ್ಲೆಯ ಇಳಕಲ್‌ ನಗರದಲ್ಲಿ ನಡೆದಿದೆ.

ಬಸವರಾಜ ಭಜಂತ್ರಿ ಹಾಗೂ ನೀಲಮ ದಂಪತಿಯ 13 ತಿಂಗಳ ದ್ಯಾಮಣ್ಣ ಭಜಂತ್ರಿ ಮೃತ ಪಟ್ಟಿದೆ ಎಂದು ಭಾವಿಸಿದ್ದ ಮಗು.ಅಂತ್ಯ ಸಂಸ್ಕಾರದ ವೇಳೆ ಮರುಜೀವ ಪಡೆದ ಎಳೆಮಗು, ಬಾಗಲಕೋಟೆಯಲೊಂದು ಅಚ್ಚರಿ

ಉಸಿರಾಟ ತೊಂದರೆ ಸೇರಿದಂತೆ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಮಗುವನ್ನು ನಾಲ್ಕೈದು ದಿನಗಳ ಹಿಂದೆ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೈದ್ಯರು ಪರೀಕ್ಷಿಸಿ ಮಗು ಬದುಕುವುದು ಕಷ್ಟ ಎಂದು ಹೇಳಿದ್ದರು. ಹೀಗಾಗಿ ವಾಪಸ್‌‍ ಮನೆಗೆ ವಾಹನದಲ್ಲಿ ಹಿಂದಿರುಗುವಾಗ ಮಗು ಪ್ರಜ್ಞೆ ತಪ್ಪಿದೆ. ಪ್ರಜ್ಞೆ ತಪ್ಪಿದ ಮಗು ಮೃತಪಟ್ಟಿದೆ ಎಂದು ಭಾವಿಸಿ ಪೋಷಕರು ಸಂಬಂಧಿಕರಿಗೆ ಸಾವಿನ ಸುದ್ದಿ ಮುಟ್ಟಿಸಿದ್ದರು.ಅದರಂತೆ ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಬಂದು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಗು ಕೆಮ್ಮಿದೆ. ಈ ವೇಳೆ ಮಗು ಬದುಕಿದೆ ಎಂದು ಪೋಷಕರು ನಿಟ್ಟುಸಿರು ಬಿಟ್ಟರೆ, ಇತ್ತ ಅಂತ್ಯಸಂಸ್ಕಾರಕ್ಕೆಂದು ಬಂದ ಸಂಬಂಧಿಕರಿಗೆ ಅಚ್ಚರಿಯಾಗಿದೆ. ಸದ್ಯ ಮಗುವಿಗೆ ಇಳಕಲ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.


Spread the love

About Laxminews 24x7

Check Also

ಕರ್ನಾಟಕದ ಎರಡನೇ ರಾಜಧಾನಿಯಾಗಲಿಬೆಳಗಾವಿ

Spread the love ಬೆಳಗಾವಿ: ನಗರದ ಎಸ್‌. ಜಿ. ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ತಾಯಿ ಭುವನೇಶ್ವರಿ, ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ