Breaking News

ಬೆಂಗಳೂರು ‘ರೇವ್ ಪಾರ್ಟಿ’ ಕೇಸ್: ಪೊಲೀಸರಿಂದಲೇ ಮೌಖಿಕ ಅನುಮತಿ? ಪ್ರಕರಣದ ಸುತ್ತ ಅನುಮಾನದ ಹುತ್ತ

Spread the love

ಬೆಂಗಳೂರು: ನಗರದಲ್ಲಿ ನಡೆದಿದ್ದಂತ ರೇವ್ ಪಾರ್ಟಿಯಲ್ಲಿ ಈಗಾಗಲೇ ಡ್ರಗ್ಸ್ ಸೇವಿಸಿದ್ದು ಪರೀಕ್ಷೆಯಲ್ಲಿ ಖಚಿತಗೊಂಡಿದೆ. ಈ ಪಾರ್ಟಿಯಲ್ಲಿ ಸೇರಿದ್ದಂತ 86 ಮಂದಿ ಡ್ರಗ್ ಸೇವನೆ ಪರೀಕ್ಷೆಯಲ್ಲಿ ದೃಢಪಟ್ಟಿದೆ. ನಟಿ ಹೇಮಾ ಕೂಡ ಡ್ರಗ್ಸ್ ಸೇವನೆ ಮಾಡಿರೋದಾಗಿ ತಿಳಿದು ಬಂದಿದೆ.

ಈ ಬೆನ್ನಲ್ಲೇ ಬೆಂಗಳೂರು ರೇವ್ ಪಾರ್ಟಿ ಕೇಸ್ ಸಂಬಂಧ ಹಲವು ಅನುಮಾನಗಳು ಕಾಡುತ್ತಿವೆ. ಅಲ್ಲದೇ ಪೊಲೀಸರಿಂದಲೇ ಮೌಖಿಕ ಅನುಮತಿ ಪಡೆದು, ಪಾರ್ಟಿ ನಡೆಸಿರೋದಾಗಿಯೂ ಹೇಳಲಾಗುತ್ತಿದೆ. ಆ ಬಗ್ಗೆ ಮುಂದೆ ಓದಿ.ಬೆಂಗಳೂರು 'ರೇವ್ ಪಾರ್ಟಿ' ಕೇಸ್: ಪೊಲೀಸರಿಂದಲೇ ಮೌಖಿಕ ಅನುಮತಿ? ಪ್ರಕರಣದ ಸುತ್ತ ಅನುಮಾನದ ಹುತ್ತ

ಹೆಬ್ಬಗೋಡಿ ರೇವ್ ಪಾರ್ಟಿ ಪ್ರಕರಣ ಸಂಬಂಧ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ರೇವ್ ಪಾರ್ಟಿಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇಲ್ವ? ಪೊಲೀಸರ ಮಾಹಿತಿ ಪಡೆಯದೆ ಪಾರ್ಟಿ ಅರೆಂಜ್ ಮಾಡಿದ್ರಾ..? ಅನ್ನೋ ಪ್ರಶ್ನೆ ಮೂಡುತ್ತಿದೆ.

ಇನ್ನೂ ಯಾರ ಬಳಿ ಮಾಹಿತಿ ಕೇಳಬೇಕು ಅಂತ ಗೊಂದಲಕ್ಕೆ ಒಳಗಾಗಿದ್ದಂತ ಅರ್ಗನೈಜರ್, ಹೆಗ್ಗೊಡಿ ಠಾಣೆ ವ್ಯಾಪ್ತಿಯಲ್ಲಿ ಬರ್ತ್ ಡೇ ಪಾರ್ಟಿ ಮಾಡಲು ಸಿದ್ದತೆಗೆ ಮುನ್ನವೇ ಯಾವ ಠಾಣಾ ವ್ಯಾಪ್ತಿ ಅಂತ ಗೊತ್ತಾದೆ ಪರಪ್ಪನ ಅಗ್ರಹಾರಕ್ಕೆ ಹೋಗಿದ್ದಾರೆ ಎನ್ನಲಾಗುತ್ತಿದೆ.

ಪರಪ್ಪನ ಅಗ್ರಾಹರ ಪೊಲೀಸರ ಬಳಿ ಮೌಖಿಕ ಅನುಮತಿ ಪಡೆದ ಪಾರ್ಟಿ ಬಾಯ್ಸ್ ಅರೆಂಜ್ ಮಾಡಿದ್ದಾರೆ ಎನ್ನಲಾಗಿದೆ. ಎಲ್ಲಿ ಏನು ಕೇಳದೆ ಪರಪ್ಪನ ಅಗ್ರಹಾರ ಪೊಲೀಸರು, ಕೇವಲ ಹತ್ತು ಸಾವಿರಕ್ಕಾಗಿ ಪರಿಶೀಲನೆ ನಡಸದೆ ಮೌಖಿಕ ಅನುಮತಿಯನ್ನು ಆರ್ಗನೈಸರ್ ಗೆ ನೀಡಿದ್ದಾರೆ ಎನ್ನಲಾಗುತ್ತಿದೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ