Breaking News
Home / ರಾಜಕೀಯ / ಗೃಹಲಕ್ಷ್ಮೀ ಹಣದಿಂದ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಡ ಮಹಿಳೆ

ಗೃಹಲಕ್ಷ್ಮೀ ಹಣದಿಂದ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಡ ಮಹಿಳೆ

Spread the love

ರಾಮದುರ್ಗ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಎರಡು ಸಾವಿರ ರೂಪಾಯಿ ಹಣ ಕಳೆದ 10 ತಿಂಗಳಿಂದ ರಾಜ್ಯದ ಬಡ ಮಹಿಳೆಯರ ಪಾಲಿಗೆ ಸಂಜೀವಿನಿಯಾಗುತ್ತಿದೆ. ಗೃಹಲಕ್ಷ್ಮಿ ಹಣದಿಂದ ಬಡ ಮಹಿಳೆಯೊಬ್ಬರು ಮೊನ್ನೆಯಷ್ಟೆ ತಮ್ಮ ಮನೆಗೆ ಫ್ರೀಜ್ ಖರೀದಿಸಿದ್ದರೆ, ಮತ್ತೋರ್ವ ಮಹಿಳೆ ತನಗಿಷ್ಟದ ಮೊಬೈಲ್ ಖರೀದಿಸಿದ್ದರು.

ಗೃಹಲಕ್ಷ್ಮೀ ಹಣದಿಂದ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಡ ಮಹಿಳೆ; ನನ್ನ ಸಮಸ್ಯೆಗೆ ಪರಿಹಾರ ಸಿಕ್ಕಿತು..ಸಿಎಂ,ಡಿಸಿಎಂಗೆ ಧನ್ಯವಾದ

ಬಡ ವಿದ್ಯಾರ್ಥಿಗಳ ಪಾಲಿಗೆ ಈ ಯೋಜನೆ ಹಲವು ರೀತಿಯಲ್ಲಿ ವರದಾನವಾಗಿದೆ. ಇದೀಗ ಬೆಳಗಾವಿಯ ರಾಮದುರ್ಗದ ಸುರೇಬಾನ ಮನಿಹಾಳ ಗ್ರಾಮದ ಮಹಿಳೆಯೊಬ್ಬರು ಕಳೆದ 10 ತಿಂಗಳ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು, ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

ರಾಮದುರ್ಗದ ಮನಿಹಾಳ ಗ್ರಾಮದ ಸಕ್ಕುಬಾಯಿ ಈರಣ್ಣ ಕರದಿನ, ಹಲವು‌ ತಿಂಗಳಿಂದ ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದರು. ಬಲಗಣ್ಣಿನಲ್ಲಿ ಪೊರೆ ಬಂದಿದ್ದ ಕಾರಣ ಶಸ್ತ್ರಚಿಕಿತ್ಸೆ ಅನಿವಾರ್ಯ ಆಗಿತ್ತು. ಹಣಕಾಸಿನ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೆ ಸುಮ್ಮನಿದ್ದ ಸಕ್ಕುಬಾಯಿ, ಕಳೆದ 10 ತಿಂಗಳಿಂದ ರಾಜ್ಯ ಸರ್ಕಾರದಿಂದ ಬರುತ್ತಿರುವ ಗೃಹಲಕ್ಷ್ಮಿ ಯೋಜನೆಯ ಮೊತ್ತವನ್ನು ಕೂಡಿಟ್ಡು, ಕಳೆದ ವಾರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ರಾಮದುರ್ಗದ ಡಾ.ವಿಜಯ್ ಸುಲ್ತಾನ್ ಪುರ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.


Spread the love

About Laxminews 24x7

Check Also

ರೇಣುಕಾಸ್ವಾಮಿಗೆ ಎ5, ಎ13 ಆರೋಪಿಗಳಿಂದ ಎಲೆಕ್ಟ್ರಿಕ್ ಶಾಕ್: ನಟ ದರ್ಶನ್ ಪರ ವಕೀಲರ ಶಾಕಿಂಗ್ ಮಾಹಿತಿ

Spread the love ಬೆಂಗಳೂರು: ರೇಣುಕಾಸ್ವಾಮಿಗೆ ಆರೋಪಿ ಎ.5, ಎ.13ಗೆ ಎಲೆಕ್ಟ್ರಿಕ್ ಶಾಕ್ ನೀಡಿದ್ದಾರೆ. ಅದನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ