Breaking News

ಬೆಳಗಾವಿಯಲ್ಲಿ ಬೆಚ್ಚಿ ಬೀಳಿಸೋ ಘಟನೆ: ಎರಡು ಗುಂಪುಗಳ ಮಧ್ಯೆ ಗಲಾಟೆ, ಕಲ್ಲು, ತಲ್ವಾರ್ ತೂರಾಟ

Spread the love

ಬೆಳಗಾವಿ: ಕ್ರಿಕೆಟ್ ವಿಚಾರಕ್ಕೆ ಉಂಟಾದಂತ ಜಗಳ, ತಾರಕಕ್ಕೆ ಏರಿದ ಪರಿಣಾಮ, ಬೆಳಗಾವಿಯಲ್ಲಿ ಮನೆಗಳ ಮೇಲೆ ಕಲ್ಲು ತೂರಾಟ, ತಲ್ವಾರ್ ಗಳನ್ನು ಎಸೆದು ಬೆಚ್ಚಿ ಬೀಳಿಸುವಂತೆ ಮಾಡಿರುವ ಘಟನೆ ನಡೆದಿದೆ. ಮನೆಯ ಮುಂದಿನ ವಾಹನಗಳು ಕಿಡಿಗೇಡಿಗಳ ದಾಳಿಯಲ್ಲಿ ಜಖಂ ಗೊಂಡಿದ್ದಾರೆ.

 

ಬೆಳಗಾವಿ ಆಳ್ವಾಸ್ ಓಣಿಯಲ್ಲಿ ಕ್ರಿಕೆಟ್ ವಿಚಾರಕ್ಕೆ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಈ ಗಲಾಟೆ ತಾರಕ್ಕೇರಿದ ಪರಿಣಾಮ, ಮನೆಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನೆಡಸಿದ್ದಾರೆ. ಅಲ್ಲದೇ ವಾಹನಗಳಲ್ಲು ಜಖಂ ಗೊಳಿಸಿದ್ದಾರೆ. ಈ ಎಲ್ಲಾ ಕಿಡಿಗೇಡಿಗಳ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಳಗಾವಿಯ ಆಳ್ವಾಸ್ ಗಲ್ಲಿಯಲ್ಲಿನ ಈ ಘಟನೆಯಿಂದ ಬೆಳಗಾವಿ ನಗರದಾಧ್ಯಂತ ಹೈ ಅಲರ್ಟ್ ಅನ್ನು ಪೊಲೀಸರು ಘೋಷಿಸಿದ್ದಾರೆ. ಅಲ್ಲದೇ ಕಿಡಿಗೇಡಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸದ್ಯ ಬೆಳಗಾವಿಯ ಆಳ್ವಾಸ್ ಗಲ್ಲಿಯಲ್ಲಿ ಬಿಗುವಿನ ವಾತಾವರಣವಿದ್ದು, ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ


Spread the love

About Laxminews 24x7

Check Also

ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆ. 1ರಂದು 16ನೇ ಪದವಿ ಪ್ರದಾನ ಸಮಾರಂಭ

Spread the loveಬಾಗಲಕೋಟೆ: ನಗರದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ 2024–25ನೇ ಸಾಲಿನ ವಿದ್ಯಾರ್ಥಿಗಳಿಗಾಗಿ ೧೬ನೇ ಪದವಿ ಪ್ರದಾನ ಸಮಾರಂಭವನ್ನು ಆಗಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ