Breaking News
Home / ರಾಜಕೀಯ / ಬದುಕಿರುವಾಗಲೇ 2 ಕೋಟಿ ರೂ. ಇನ್ಶೂರೆನ್ಸ್​ ಹಣಕ್ಕಾಗಿ ತಾಯಿ,ಮಗನ ಮಾಸ್ಟರ್​ ಪ್ಲ್ಯಾನ್:​​​ ಬಯಲಾಯ್ತು ಅಸಲಿ ಕಥೆ

ಬದುಕಿರುವಾಗಲೇ 2 ಕೋಟಿ ರೂ. ಇನ್ಶೂರೆನ್ಸ್​ ಹಣಕ್ಕಾಗಿ ತಾಯಿ,ಮಗನ ಮಾಸ್ಟರ್​ ಪ್ಲ್ಯಾನ್:​​​ ಬಯಲಾಯ್ತು ಅಸಲಿ ಕಥೆ

Spread the love

ಹಾರಾಷ್ಟ್ರ: ಮಹಿಳೆಯೊಬ್ಬರು ತನ್ನ 29 ವರ್ಷದ ಮಗ ಸಾವನ್ನಪ್ಪಿದ್ದಾನೆಂದು ಸುಳ್ಳು ದಾಖಲೆ ಸೃಷ್ಟಿಸಿ 2 ಕೋಟಿ ವಿಮೆ ಪಡೆಯಲು ಪ್ರಯತ್ನಿಸಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ದಿನೇಶ್ 2015ರಲ್ಲಿ ಎಲ್​ಐಸಿ ಪಾಲಿಸಿಯನ್ನು ಖರೀದಿಸಿ ಪ್ರೀಮಿಯಂ ಪಾವತಿಸಿದ್ದರು.

ದಿನೇಶ್ 2016 ಡಿಸೆಂಬರ್ 25 ರಂದು ಅಹಮದ್ ನಗರ ಜಿಲ್ಲೆಯ ನಗರ ಪುಣೆ ಹೆದ್ದಾರಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆಂದು 2017 ಮಾರ್ಚ್ 14 ರಂದು ಆತನ ತಾಯಿ ನಂದಾಬಾಯಿ ತಕ್ಸಾಲೆ ಇನ್ಶೂರೆನ್ಸ್ ಹಣಕ್ಕೆ ಅರ್ಜಿಸಲ್ಲಿಸಿದ್ದರು.

ವಿಮೆ ಹಣ ತೆಗೆದುಕೊಳ್ಳಲು ನಂದಾಬಾಯಿ ತಮ್ಮ ಮಗ ದಿನೇಶ್ ಅವರ ವಾರ್ಷಿಕ ಆದಾಯ 8 ಕೋಟಿ ಎಂದು ಅರ್ಜಿಯ ಜೊತೆಗೆ ಕೆಲವು ದಾಖಲಾತಿಗಳನ್ನು ಸಲ್ಲಿಸಿದ್ದರು. ಅಲ್ಲದೆ 38.85 ಲಕ್ಷ ಕೃಷಿ ಆದಾಯ ಮತ್ತು ಹೋಟೆಲ್‌ ಉದ್ಯಮದಿಂದ 3 ಲಕ್ಷ ಆದಾಯವಿದೆ ಎಂದು ನಾಲ್ಕು ವರ್ಷಗಳ ನಕಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ. ಆದರೆ ಎಲ್‌ಐಸಿ ಅಧಿಕಾರಿಗಳು ಆಕೆಯ ಅರ್ಜಿಯನ್ನು ಪರಿಶೀಲಿಸುವಾಗ, ಆಕೆ ಸಲ್ಲಿಸಿದ್ದ ಮರಣ ಪ್ರಮಾಣಪತ್ರ ಸಹ ನಕಲಿ ಎಂಬುದು ಸಾಬೀತಾಗಿದೆ.

ತಾಯಿಯ, ಮಗ ಇಬ್ಬರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಾಜಿ ಪಾರ್ಕ್ ಪೊಲೀಸರು ಅಹಮದ್‌ನಗರ ಮೂಲದ ಮಹಿಳೆ ನಂದಾಬಾಯಿ ಪ್ರಮೋದ ತಕ್ಸಾಲೆ ಮತ್ತು ಅವರ ಮಗ ದಿನೇಶ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.


Spread the love

About Laxminews 24x7

Check Also

ಗೃಹಲಕ್ಷ್ಮೀ ಹಣದಿಂದ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಡ ಮಹಿಳೆ

Spread the love ರಾಮದುರ್ಗ: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಎರಡು ಸಾವಿರ ರೂಪಾಯಿ ಹಣ ಕಳೆದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ