Breaking News
Home / ಜಿಲ್ಲೆ / ಬೆಂಗಳೂರು / ಜಾರಕಿಹೊಳಿ ‘ಸಿಡಿ’ ಪ್ರಕರಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನ ಕೈವಾಡ : ಮಾಜಿ ಶಾಸಕ ನಾಗರಾಜ್ ಹೊಸ ಬಾಂಬ್

ಜಾರಕಿಹೊಳಿ ‘ಸಿಡಿ’ ಪ್ರಕರಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರನ ಕೈವಾಡ : ಮಾಜಿ ಶಾಸಕ ನಾಗರಾಜ್ ಹೊಸ ಬಾಂಬ್

Spread the love

ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಕೈವಾಡವಿದೆ ಎಂದು ಮಾಜಿ ಶಾಸಕ ಹಾಗೂ ರಮೇಶ್ ಜಾರಕಿಹೊಳಿ ಆಪ್ತ ನಾಗರಾಜ್ ಹೊಸ ಬಾಂಬ್ ಸಿಡಿಸಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುವ ವಿಚಾರ ಗೊತ್ತಾಯ್ತು, ಈ ವಿಚಾರವನ್ನು ನಾನು 2 ಬಾರಿ ರಮೇಶ್ ಗೆ ಹೇಳಿದ್ದೆ, ಅವರು ಇಂತಹ ನೂರು ಸಿಡಿ ಬಂದರೂ ನಾನು ತಲೆಕೆಡಿಸಿಕೊಳ್ಳಲ್ಲ ಎಂದಿದ್ದರು.

ಸಿಡಿ ಪ್ರಕರಣದ ಮೂಲಕ ರಮೇಶ್ ಜಾರಕಿಹೊಳಿಯನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆದಿದೆ . ಸಿಡಿಯ ಹಿಂದೆ ಪ್ರಭಾವಿ ನಾಯಕರು ಇದ್ದಾರೆ ಎಂದು ರಮೇಶ್ ಜಾರಕಿಹೊಳಿ ಆಪ್ಗ ನಾಗರಾಜ್ ಹೊಸ ಬಾಂಬ್ ಸಿಡಿಸಿದ್ದಾರೆ.

ಡಿಕೆಶಿ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ನನ್ನ ನಡುವಿನ ಸಂಬಂಧ ಹಾಳಾಗಲು ಆ ಶಾಸಕಿಯೇ ಕಾರಣ. ಮಹಿಳೆಯ ಮೂಲಕ ಡಿ.ಕೆ. ಶಿವಕುಮಾರ್ ತೇಜೋವಧೆ ಮಾಡಿದ್ದಾರೆ. ಇದೊಂದು ವೈಯಕ್ತಿಕ ಯುದ್ಧ. ಡಿಕೆಶಿ ರಾಜಕಾರಣಿಯಾಗಲು ನಾಲಾಯಕ್ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸಿಡಿಯಲ್ಲಿರುವ ಹುಡುಗಿಯನ್ನು, ಡಿಕೆಶಿ, ಸೇರಿದಂತೆ ಕನಕಪುರದ ಗ್ರಾನೈಟ್ ವ್ಯಾಪಾರಿ ಸೇರಿದಂತರೆ ನನ್ನ ವಿರುದ್ದ ಆರೋಪ ಮಾಡಿರುವ ಮೈಸೂರು ಮೂಲದ ಇಬ್ಬರು ಶಾಸಕರನ್ನು ಬಂಧಿಸಬೇಕು ಅಂತ ಅವರು ಹೇಳಿದರು. ಇದೇ ವೇಳೆ ಅವರು ಕೇಸ್ ಸಂಬಂಧ ಸಿಬಿಐಗೆ ವಹಿಸಬೇಕು ಅಂಥ ತಿಳಿಸಿದರು.

ಇದೇ ವೇಳೆ ಅವರು ನನ್ನ ಬಳಿ 20 ಸಿಡಿಗಳಿವೆ, ಎಲ್ಲವನ್ನು CBI ಗೆ ನೀಡುವೆ . 1985ರಲ್ಲಿ ಶಿವಕುಮಾರ್ ಅವರು ಚಪ್ಪಲಿ ಹಾಕೊಂಡು ಇದ್ದರು. ನಾನು ಆ ವೇಳೇಯಲ್ಲೆಯಲ್ಲಿ ರ್ಯಾಡೋ ವಾಚ್ ಮತ್ತು ಟೀ ಶರ್ಟ್ ಹಾಕೊಂಡು ಇದ್ದೆ. ಸಿಡಿಗೆ ಸಂಬಂಧಪಟ್ಟಂತೆ ಶ್ರವಣ್ ಮತ್ತು ನರೇಶ್ ಅವರನ್ನು ಕೂಡಲೇ ಬಂಧಿಸಬೇಕು ಅಂತ ಹೇಳಿದರು. ಇನ್ನೂ ಡಿಕೆಶಿ ಒಬ್ಬ ಜಂಗ್ಲಿ ಮನುಶ್ಯ ಅಂತ ವ್ಯಂಗ್ಯವಾಡಿದರು. ನಾನು ಡಿಕೆಶಿ ಅಣ್ಣ ತಮ್ಮಂದಿರ ಹಾಗೇ ಇದ್ದೇವೆ, ನಮ್ಮಿಬ್ಬರ ಸಂಬಂಧ ಹಳಸಲು ಗ್ರಾಮೀಣ ಶಾಸಕಿ ಕಾರಣ ಅಂತ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹೆಸರನ್ನು ಹೇಳದೇ ಕಿಡಿಕಾರಿದರು.

ನನ್ನ ಹೇಳಿಕೆಯನ್ನು ತಿರುಚಿ ಆಡಿಯೋವೊಂದನ್ನು ವೈರಲ್ ಆಗಿದ್ದು, ನಾಳೆ ಏನು ಆದ್ರು ಜಾತಿ ಸಂಘರ್ಶಕ್ಕೆ ಕಾರಣವಾದ್ರೆ ಅದಕ್ಕೆ ಇವರೇ ಕಾರಣ ಅಂತ ತಿಳಿಸಿದರು. ಶುಗರ್ ಕಾರ್ಖನೆಯಲ್ಲಿ ಕೋಟ್ಯಾಂತರ ಅವ್ಯವಾಹರವಾಗಿದ್ದು, ಕಪ್ಪು ಹಣ ಬಿಳಿಯಾಗಿದೆ ಈ ಬಗ್ಗೆ ಸಿಬಿಐ ತನಿಖೆಯಾಗ ಬೇಕು ಅಂತ ಹೇಳಿದರು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ