Breaking News
Home / ರಾಜಕೀಯ / ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದ ಕೊನೆಯ ಓವರ್​ ಹೇಗಿತ್ತು?: ವಿಡಿಯೋ

ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದ ಕೊನೆಯ ಓವರ್​ ಹೇಗಿತ್ತು?: ವಿಡಿಯೋ

Spread the love

Hardik Pandya: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಬೌಲಿಂಗ್​ನಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯ ಮಿಂಚಿದರೆ, ಬ್ಯಾಟಿಂಗ್​ನಲ್ಲಿ ಕೂಡ ಹಾರ್ದಿಕ್ ಸ್ಫೋಟಕ ಆಟವಾಡಿದರು. ರವೀಂದ್ರ ಜಡೇಜಾ ಹಾಗೂ ವಿರಾಟ್ ಕೊಹ್ಲಿ ಕೂಡ ಉಪಯುಕ್ತ ಕಾಣಿಕೆ ನೀಡಿದರು.

 

ಹದಿನೈದನೆ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ (Asia Cup 2022) ಭಾರತ ಕ್ರಿಕೆಟ್ ತಂಡ ಗೆಲುವಿನ ಮೂಲಕ ತನ್ನ ಅಭಿಯಾನ ಆರಂಭಿಸಿದೆ. ಭಾನುವಾರ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಬದ್ದವೈರಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮನಮಮೋಹಕ ಪ್ರದರ್ಶನ ನೀಡಿದ ಭಾರತ (India vs Pakistan) 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಬೌಲಿಂಗ್​ನಲ್ಲಿ ಭುವನೇಶ್ವರ್ ಕುಮಾರ್ ಹಾಗೂ ಹಾರ್ದಿಕ್ ಪಾಂಡ್ಯ (Hardik Pandya) ಮಿಂಚಿದರೆ, ಬ್ಯಾಟಿಂಗ್​ನಲ್ಲಿ ಕೂಡ ಹಾರ್ದಿಕ್ ಸ್ಫೋಟಕ ಆಟವಾಡಿದರು. ರವೀಂದ್ರ ಜಡೇಜಾ ಹಾಗೂ 100ನೇ ಟಿ20 ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ ಕೂಡ ಉಪಯುಕ್ತ ಕಾಣಿಕೆ ನೀಡಿದರು. ಕಠಿಣ ಟಾರ್ಗೆಟ್ ಅಲ್ಲದಿದ್ದರೂ ಭಾರತ ಗುರಿ ತಲುಪಲು ಕೊನೆಯ ಓವರ್ ವರೆಗೂ ಹೋರಾಡ ಬೇಕಾಯಿತು.

ಕೊನೆಯ 20ನೇ ಓವರ್​ನಲ್ಲಿ ಭಾರತಕ್ಕೆ ಗೆಲ್ಲಲು 7 ರನ್​ಗಳ ಅವಶ್ಯಕತೆಯಿತ್ತು. ರವೀಂದ್ರ ಜಡೇಜಾ ಹಾಗೂ ಹಾರ್ದಿಕ್ ಪಾಂಡ್ಯ ಕ್ರೀಸ್​ನಲ್ಲಿದ್ದರು. ಬಾಬರ್ ಲೆಗ್ ಸ್ಪಿನ್ನರ್ ಮೊಹಮ್ಮದ್ ನವಾಜ್​ಗೆ ಬೌಲಿಂಗ್ ನೀಡಿದರು. ಆದರೆ, ಅಚ್ಚರಿ ಎಂಬಂತೆ ಜಡೇಜಾ ಅವರು ನವಾಜ್​ರ ಮೊದಲ ಎಸೆದಲ್ಲೇ ಕ್ಲೀನ್ ಬೌಲ್ಡ್ ಆದರು. ಈ ಮೂಲಕ 29 ಎಸೆತಗಳಲ್ಲಿ ತಲಾ 2 ಫೋರ್, ಸಿಕ್ಸರ್ ಸಿಡಿಸಿದ್ದ ಜಡ್ಡು 35 ರನ್​ಗೆ ಔಟಾದರು. ಈ ಸಂದರ್ಭ ಕ್ರೀಸ್​ಗೆ ಬಂದ ದಿನೇಶ್ ಕಾರ್ತಿಕ್ ಎರಡನೇ ಎಸೆತದಲ್ಲಿ 1 ರನ್ ಕಲೆಹಾಕಲಷ್ಟೆ ಸಾಧ್ಯವಾಯಿತು. ಹೀಗಾಗಿ 4 ಎಸೆತಗಲ್ಲಿ 6 ರನ್ ಬೇಕಾಗಿತ್ತು.

ಮೂರನೇ ಎಸೆತ ಹಾರ್ದಿಕ್ ಪಾಂಡ್ಯ ಕಡೆಯಿಂದ ಡಾಟ್ ಆಯಿತು. ಆಗ ಪಂದ್ಯದ ಕಾವು ಮತ್ತಷ್ಟು ಹೆಚ್ಚಿತು. ಒಂದು ದೊಡ್ಡ ಹೊಡೆತ ಭಾರತಕ್ಕೆ ಅತಿ ಮುಖ್ಯವಾಗಿತ್ತು. ಆದರೆ, ಈ ಒತ್ತಡವನ್ನು ಹಾರ್ದಿಕ್ ಅಚ್ಚುಕಟ್ಟಾಗಿ ನಿರ್ವಹಿಸಿದರು. 4ನೇ ಎಸೆತದ ಕ್ವಿಕ್ ಶಾರ್ಟ್ ಬಾಲ್ ಅನ್ನು ಚೆನ್ನಾಗಿ ಅರಿತ ಪಾಂಡ್ಯ ಲಾಂಗ್​ಆನ್​ನಲ್ಲಿ ಫ್ಲಾಟ್ ಸಿಕ್ಸ್ ಸಿಡಿಸಿದರು. ಈ ಮೂಲಕ ಭಾರತ 5 ವಿಕೆಟ್​ಗಳ ಗೆಲುವು ಕಂಡಿತು. ಈ ಅಮೋಘ ಪ್ರದರ್ಶನಕ್ಕಾಗಿ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ಬಾಚಿಕೊಂಡರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ