Breaking News

ಗೆಲುವು ಡೌಟ್​ ಎಂಬ ಹತಾಶೆಯಿಂದ. ಅಮೇಥಿಯ ಕಾಂಗ್ರೆಸ್​ ಕಛೇರಿ ಬಳಿ ಕಾರುಗಳು ಧ್ವಂಸ, ‘ಕೈ’ ಕಿಡಿ

Spread the love

ತ್ತರಪ್ರದೇಶ: ಇಲ್ಲಿನ ಅಮೇಥಿಯ ಗೌರಿಗಂಜ್​ ಪ್ರದೇಶದಲ್ಲಿದ್ದ ಕಾಂಗ್ರೆಸ್​ ಕಚೇರಿ ಎದುರು ನಿಲ್ಲಿಸಲಾಗಿದ್ದ ‘ಕೈ’ ಕಾರ್ಯಕರ್ತರ ಕಾರುಗಳನ್ನು ಯಾರೋ ಕಿಡಿಗೇಡಿಗಳು ಧ್ವಂಸಗೊಳಿಸಿದ್ದು, ಈ ಹಿನ್ನಲೆ ಬಿಜೆಪಿ ವಿರುದ್ಧ ನೇರ ಆರೋಪ ಎಸಗಿದ ಕಾಂಗ್ರೆಸ್​, ತಪ್ಪಿತಸ್ಥರು ಬೇರಾರು ಅಲ್ಲ, ಬಿಜೆಪಿ ಗೂಂಡಾಗಳು ಎಂದು ಆಕ್ರೋಶ ಹೊರಹಾಕಿದೆ.

ಒಂದಲ್ಲ, ಎರಡಲ್ಲ ಹಲವು ಕಾರುಗಳನ್ನು ಜಖಂಗೊಳಿಸಿರುವ ದುಷ್ಕರ್ಮಿಗಳು ಬಿಜೆಪಿಯವರೇ ಎಂದು ದೂರಿದ ಕಾಂಗ್ರೆಸ್​, ಈ ದುಷ್ಕೃತ್ಯಕ್ಕೆ ಅವರ ಕಾರ್ಯಕರ್ತರೇ ಕಾರಣ ಎಂದು ತಿಳಿಸಿದೆ.ಇದಕ್ಕೆಲ್ಲಾ ಮೂಲ ಕಾರಣ ಸೃತಿ ಇರಾನಿ, ಯಾಕಂದ್ರೆ, ಇಲ್ಲಿನ ಲೋಕಸಭಾ ಕ್ಷೇತ್ರದಿಂದಲೇ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ಅವರಿಗೆ ಸೋಲು ಖಚಿತ ಎಂಬುದು ತಿಳಿಯುತ್ತಿದ್ದಂತೆ, ಅವರ ಪಕ್ಷದ ಕಾರ್ಯಕರ್ತರು ಇಂಥ ಕಿಡಿಗೇಡಿ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಆರೋಪಿಸಿದೆ

 


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ