Breaking News
Home / ರಾಜಕೀಯ / ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ, ಡಿಸಿ ಮಂಜುನಾಥ್​ ವಿರುದ್ದವೂ ದೂರುದಾರ ಅರೋಪ

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಮೇಲೆ ಎಸಿಬಿ ದಾಳಿ, ಡಿಸಿ ಮಂಜುನಾಥ್​ ವಿರುದ್ದವೂ ದೂರುದಾರ ಅರೋಪ

Spread the love

ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹಬ್ಬಿದೆ ಎಂಬ ಪ್ರತತಿಪಕ್ಷಗಳ ಕೂಗಿನ ಮಧ್ಯೆ ರಾಜಧಾನಿ ಬೆಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ಇಂದು ಶನಿವಾರ ದಾಳಿ ನಡೆಸಿದ್ದಾರೆ.

ಜಿಲ್ಲಾಧಿಕಾರಿ ಜೆ. ಮಂಜುನಾಥ್ ಕಚೇರಿಯಲ್ಲಿ ಕಳೆದ ಅರ್ಧ ಗಂಟೆಯಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) 6 ಮಂದಿ ಅಧಿಕಾರಿಗಳ ತಂಡದಿಂದ ಡಿಸಿ ಕಚೇರಿ ಮೇಲೆ ದಾಳಿ ನಡೆದಿದೆ. ಡಿಸಿ ಕಚೇರಿಗೆ ಹಲವು ಹಿರಿಯ ಅಧಿಕಾರಿಗಳನ್ನ ಕರೆಸಿಕೊಂಡ ಎಸಿಬಿ ಅಧಿಕಾರಿಗಳು ಡೋರ್ ಕ್ಲೋಸ್ ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಉಪ ತಹಶೀಲ್ದಾರ್​ ಮಹೇಶ್ ಬಳಿ ಹಣ ಇದ್ದಾಗ..

DC ಕಛೇರಿ ಯಲ್ಲಿ ಲಂಚ ಪಡೆಯುವಾಗ ಮಹೇಶ್ ಎಂಬಾತ ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಇದೀಗ ಚಂದ್ರ ಎಂಬಾತನನನ್ನು ಎಸಿಬಿ ಅಧಿಕಾರಿಗ ವಿಚಾರಣೆ ನಡೆಸುತ್ತಿದ್ದಾರೆ. ಉಪ ತಹಶೀಲ್ದಾರ್​ ಮಹೇಶ್ ಬಳಿ ಹಣ ಇದ್ದಾಗ ಎಸಿಬಿ ಅಧಿಕಾರಿಗಳು ಟ್ರಾಪ್ ಮಾಡಿದ್ದಾರೆ. ಡಿಸಿ ಮಂಜುನಾಥ್ ರವರ ಜೊತೆಗೆ ಕೆಲಸ ಮಾಡ್ತಿದ್ದ ಮಹೇಶ್. 5 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಕ್ಲರ್ಕ್ ಚಂದ್ರು ಎಸಿಬಿ ಬಲೆಗೆ ಬಿದ್ದಿದ್ದಾನೆ. ಎಸಿಬಿ ಡಿವೈಎಸ್​ಪಿ ರವಿಶಂಕರ್ ನೇತೃತ್ವದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.

ಜಿಲ್ಲಾಧಿಕಾರಿ ಮಂಜುನಾಥ್​ ವಿರುದ್ದವೂ ದೂರುದಾರ ಅರೋಪ:

ಆಜಾಂ ಪಾಷ ಎಂಬಾತನಿಗೆ ಜಮೀನಿನ ವಿಷಯ ಎಸಿ ಕೋರ್ಟ್ ನಲ್ಲಿ ತೀರ್ಮಾನ ಅಗಿ ಡಿಸಿ ಕೋರ್ಟ್ ಗೆ ಹೋಗಿತ್ತು. ಈ ಫೈಲ್ ಅನ್ನು ಕ್ಲಿಯರ್ ಮಾಡಿಕೊಡಲು 15 ಲಕ್ಷ ರೂಪಾಯಿ ಕೇಳಿ ಕೊನೆಗೆ ಐದು ಲಕ್ಷ ರೂಪಾಯಿಗೆ ಒಪ್ಪಿ, ಲಂಚ ಒಡೆಯುತ್ತಿದ್ದಾಗ ದಾಳಿ ನಡೆದಿದೆ. ದೂರು ನೀಡಿದ ನಂತ್ರ ಕೇಸ್ ದಾಖಲು ಮಾಡಿ, ಎಸಿಬಿ ಅಧಿಕಾರಿಗಳು ಟ್ರಾಪ್ ಮಾಡಿದ್ದಾರೆ. ಜಿಲ್ಲಾಧಿಕಾರಿ ಮಂಜುನಾಥ್​ ವಿರುದ್ದವೂ ಎಸಿಬಿ ಅಧಿಕಾರಿಗಳ ಎದುರು ದೂರುದಾರ ಅರೋಪ ಮಾಡಿದ್ದಾರೆ. ಸದ್ಯ ವಿಚಾರಣೆ ನಡೆಸಿ ಡಿಸಿ ವಿರುದ್ದ ಸಾಕ್ಷ್ಯ ಸಿಕ್ಕರೆ ಅವರ ವಿರುದ್ದವೂ ತನಿಖೆ ನಡೆಯಲಿದೆ ಎಂದು ಎಸಿಬಿ ಮೂಲಗಳು ಹೇಳಿವೆ.


Spread the love

About Laxminews 24x7

Check Also

ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ.: ಲಕ್ಷ್ಮೀ ಹೆಬ್ಬಾಳ್ಕರ್

Spread the love ಬೆಳಗಾವಿ: ರಾಜ್ಯದ ರಾಜಕಾರಣ, ದೇಶದ ರಾಜಕಾರಣ ತಲೆ ತಗ್ಗಿಸುವ ಘಟನೆಯಿದು. ನಾಗರಿಕ ಸಮಾಜ ತಲೆ ತಗ್ಗಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ