Breaking News
Home / Uncategorized / ಮೇ.1ಕ್ಕೆ ವಿಶ್ವ ನೃತ್ಯ ದಿನಾಚರಣೆ: ಸೃಷ್ಟಿ ರಾಷ್ಟ್ರೀಯ ನೃತ್ಯಪರಿಣಿತಿ ಪ್ರಶಸ್ತಿ ಪ್ರದಾನ

ಮೇ.1ಕ್ಕೆ ವಿಶ್ವ ನೃತ್ಯ ದಿನಾಚರಣೆ: ಸೃಷ್ಟಿ ರಾಷ್ಟ್ರೀಯ ನೃತ್ಯಪರಿಣಿತಿ ಪ್ರಶಸ್ತಿ ಪ್ರದಾನ

Spread the love

ಬೆಂಗಳೂರು: ವಿಶ್ವ ನೃತ್ಯ ದಿನಾಚರಣೆ ಅಂಗವಾಗಿ ಮೇ.1 ಮತ್ತು 2ರಂದು ಸೃಷ್ಟಿ ಸಂಸ್ಥೆ ಮತ್ತು ರೋಟರಿ ಕ್ಲಬ್ ಜಂಟಿಯಾಗಿ ರವೀಂದ್ರ ಕಲಾಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಫ್ರೆಂಚ್ ನೃತ್ಯ ಕಲಾವಿದ, ಪ್ರಸಿದ್ಧ ನಾಟ್ಯ ಸಂಯೋಜಕ ಜೀನ್ ಜಾರ್ಜ್ ನೋರ್ವೆಯವರ ಹುಟ್ಟಿದ ದಿನವನ್ನು ವಿಶ್ವ ನೃತ್ಯ ದಿನಾಚರಣೆಯನ್ನಾಗಿ ಆಚರಿಸಲಾಗುವುದು.

ಕಾರ್ಯಕ್ರಮದಲ್ಲಿ ಉದಯೋನ್ಮುಖ ಕಲಾವಿದರಿಗೆ ಮತ್ತು ನೃತ್ಯ ದಿಗ್ಗಜರಿಗೆ ಅವಕಾಶವನ್ನು ಕಲ್ಪಿಸಲಾಗಿದ್ದು, ಭರತನಾಟ್ಯ, ಕೂಚುಪುಡಿ, ಒಡಿಸ್ಸಿ, ಕಥಕ್ ಸೇರಿದಂತೆ 25 ತಂಡಗಳ ಸುಮಾರು 100 ಕಲಾವಿದರು ಪ್ರದರ್ಶನ ನೀಡಲಿದ್ದಾರೆ.

ವಿಶ್ವ ನೃತ್ಯ ದಿನಾಚರಣೆ ಅಂಗವಾಗಿ ಮೇ.01ರಂದು ಸಂಜೆ ‘ಸೃಷ್ಟಿ ರಾಷ್ಟ್ರೀಯ ಪ್ರಶಸ್ತಿ’ ಮತ್ತು ‘ರೋಟರಿ ಸೇವಾ ಪರಿಣಿತಿ ಪ್ರಶಸ್ತಿ’ ಪ್ರದಾನ ನಡೆಯಲಿದ್ದು, ರಾಜಮಾತಾ ಪ್ರಮೋದಾದೇವಿ ಒಡೆಯರ್ ಅವರು ಲಕ್ಷ್ಮಿ ಗೋಪಾಲಸ್ವಾಮಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಂತರ ಲಕ್ಷ್ಮಿ ಗೋಪಾಲ್ ಸ್ವಾಮಿ ಅವರು ನೃತ್ಯ ಪ್ರದರ್ಶನ ನಡೆಸಿಕೊಡಲಿದ್ದಾರೆ.


Spread the love

About Laxminews 24x7

Check Also

ಕಾಯಕಲ್ಪಕ್ಕೆ ಕಾದಿದೆ ಶತಮಾನದ ಕೆರೆ

Spread the love ಚಿಕ್ಕೋಡಿ: ‘ಕೆರೆಯನ್ನು ಕಟ್ಟಿಸು. ಬಾವಿಯನ್ನು ಸವೆಸು….’ ಎಂದು ಕನ್ನಡ ಶಾಸನವೊಂದರಲ್ಲಿ ಬರೆದಿರುವುದು ಎಲ್ಲರಿಗೂ ಗೊತ್ತಿದೆ. ಆದರೆ, ಈಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ