Breaking News
Home / ರಾಜಕೀಯ / ಇಂದಿರಾ, ಸೋನಿಯಾ ಬಳಿಕ ರಾಜ್ಯಕ್ಕೆ ಪ್ರಿಯಾಂಕಾ?

ಇಂದಿರಾ, ಸೋನಿಯಾ ಬಳಿಕ ರಾಜ್ಯಕ್ಕೆ ಪ್ರಿಯಾಂಕಾ?

Spread the love

ಬೆಂಗಳೂರು: ರಾಜಸ್ಥಾನದಲ್ಲಿ ನಡೆದಿರುವ ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಕರ್ನಾಟಕವನ್ನು ಗೆಲ್ಲುವ ಬಗ್ಗೆ ಚಿಂತನ ಮಂಥನ ಕೂಡ ನಡೆದಿದೆ. ಈ ವರ್ಷದ ನವೆಂಬರ್​ನಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆ ಹಾಗೂ 2023ರ ಮಾರ್ಚ್-ಏಪ್ರಿಲ್​ನಲ್ಲಿ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆ ಬಗ್ಗೆ ಕಾಂಗ್ರೆಸ್ ಗಂಭೀರವಾಗಿದ್ದು, 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಈ ಎರಡು ರಾಜ್ಯಗಳನ್ನು ಕೈ ವಶಮಾಡಿಕೊಳ್ಳಲೇಬೇಕೆಂದು ಪಕ್ಷದ ನಾಯಕರು ಸಂಕಲ್ಪ ಮಾಡಿದ್ದಾರೆ.

ಈ ಎರಡು ರಾಜ್ಯಗಳ ಕುರಿತಂತೆ ಪ್ರಮುಖ ಅಜೆಂಡವಾಗಿ ಸಭೆಯಲ್ಲಿ ಚರ್ಚೆಯಾಗಿಲ್ಲ. ಬದಲಾಗಿ ಅನೌಪಚಾರಿಕ ಚರ್ಚೆ ಸಂದರ್ಭದಲ್ಲಿ ಕರ್ನಾಟಕದ ಬಗ್ಗೆ ಹೈಕಮಾಂಡ್ ಆಸಕ್ತಿ ತೋರಿರುವುದು ರಾಜ್ಯ ನಾಯಕರ ಗಮನಕ್ಕೆ ಬಂದಿದೆ. ಕಾಂಗ್ರೆಸ್ ಪೈಪೋಟಿ ನೀಡಬಹುದಾದ ಹಾಗೂ ಗೆಲ್ಲಲು ಸಾಧ್ಯವಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಅಗತ್ಯವಿರುವಷ್ಟು ಸ್ಥಾನಗಳು ಬಾರದೇ ಇದ್ದರು ಶೇಕಡವಾರು ಮತಗಳಿಕೆಯಲ್ಲಿ ಮುಂದಿತ್ತು. ಹೀಗಾಗಿ ಪಕ್ಷದ ಬೇರು ಇಲ್ಲಿ ಗಟ್ಟಿಯಾಗಿದೆ ಎಂದು ಭಾವಿಸಿರುವ ಕಾಂಗ್ರೆಸ್, ಈ ಬಾರಿ ಮತಗಳನ್ನು ಸ್ಥಾನಗಳಾಗಿ ಪರಿವರ್ತನೆಯಾಗಿಸುವ ನಿಟ್ಟಿನಲ್ಲಿ ಗಮನ ಹರಿಸಿದೆ ಎಂದು ಪಕ್ಷದ ಹಿರಿಯ ಮುಖಂಡರು


Spread the love

About Laxminews 24x7

Check Also

ಹೋಟೆಲ್ ರೂಮಿನಲ್ಲಿ ಇಬ್ಬರು ಪುರುಷರೊಂದಿಗೆ ವಿವಾಹಿತ ಮಹಿಳೆಯ ಚೆಲ್ಲಾಟ

Spread the love ಇತ್ತೀಚಿನ ದಿನಗಳಲ್ಲಿ ವಿವಾಹಿತ ಪುರುಷರು ಮತ್ತು ಮಹಿಳೆಯರ ಅಕ್ರಮ ಸಂಬಂಧದ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಇಂತಹದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ