Breaking News

ನಿವೃತ್ತ ಐಎಎಸ್​ ಅಧಿಕಾರಿ ಪತ್ನಿ ಶವವಾಗಿ ಪತ್ತೆ,

Spread the love

ನಿವೃತ್ತ ಐಎಎಸ್​ ಅಧಿಕಾರಿ ದೇವೇಂದ್ರ ನಾಥ್ ದುಬೆ ಅವರ ಪತ್ನಿ ಮೋಹಿನಿ ದುಬೆ ಶನಿವಾರ ಲಕ್ನೋದಲ್ಲಿರುವ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇವೇಂದ್ರನಾಥ್ ಅವರು ಗಾಲ್ಫ್ ಆಡಲು ಹೋಗಿದ್ದರು ಆದರೆ ಅವರು ಮನೆಗೆ ಹಿಂದಿರುಗಿದಾಗ, ಅವರು ತಮ್ಮ ಮನೆಯ ಒಳಗಿನಿಂದ ಬೀಗ ಹಾಕಿರುವುದನ್ನು ಗಮನಿಸಿದರು

ಬಳಿಕ ಒಳಗೆ ಹೋಗಿ ನೋಡಿದಾಗ ಪತ್ನಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ದುಬೆ ಅವರ ಮನೆಯ ಬೀರುವಿನಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದನ್ನು ಗಮನಿಸಿದ್ದಾರೆ. ಆಭರಣಗಳ ಜತೆಗೆ ಇತರೆ ಬೆಲೆಬಾಳುವ ವಸ್ತುಗಳು ಕೂಡ ಕಾಣೆಯಾಗಿದ್ದವು.ನಿವೃತ್ತ ಐಎಎಸ್​ ಅಧಿಕಾರಿ ಪತ್ನಿ ಶವವಾಗಿ ಪತ್ತೆ, ಮನೆಯಲ್ಲಿದ್ದ ಚಿನ್ನಾಭರಣ ಲೂಟಿ

ಲಕ್ನೋದ ಇಂದಿರಾ ನಗರ ಪ್ರದೇಶದ ಸೆಕ್ಟರ್ 22 ರ ಪಾಶ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಡಿಎನ್ ದುಬೆ ಅವರು ಬೆಳಗ್ಗೆ 9.45 ರ ಸುಮಾರಿಗೆ ಗಾಲ್ಫ್ ಆಡಿ ಹಿಂತಿರುಗಿದಾಗ, ಅವರು ತಮ್ಮ ಪತ್ನಿ ಮೃತಪಟ್ಟಿರುವುದನ್ನು ಕಂಡಿದ್ದಾರೆ.


Spread the love

About Laxminews 24x7

Check Also

ಜನರ ಆರೋಗ್ಯ ಕಾಪಾಡುವ ಸರಕಾರದ ಸಂಕಲ್ಪಕ್ಕೆ ಕೈಜೋಡಿಸಿ: ಲಕ್ಷ್ಮೀ ಹೆಬ್ಬಾಳಕರ್

Spread the loveಜನರ ಆರೋಗ್ಯ ಕಾಪಾಡುವ ಸರ್ಕಾರದ ಸಂಕಲ್ಪ ಸಾಕಾರಗೊಳ್ಳಬೇಕಾದರೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಕೈಜೋಡಿಸುವುದು ಅಗತ್ಯ ಎಂದು ಮಹಿಳಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ