Breaking News
Home / Uncategorized / ಹರೀಶ್ ಪೂಂಜಾ ಶಾಸಕರೆಂದ ಮಾತ್ರಕ್ಕೆ ಅವರ ಮೇಲಿನ ಆರೋಪ ಅಲ್ಲ ಗೆಳೆಯಲು ಸಾಧ್ಯವೇ? ಸಿಎಂ

ಹರೀಶ್ ಪೂಂಜಾ ಶಾಸಕರೆಂದ ಮಾತ್ರಕ್ಕೆ ಅವರ ಮೇಲಿನ ಆರೋಪ ಅಲ್ಲ ಗೆಳೆಯಲು ಸಾಧ್ಯವೇ? ಸಿಎಂ

Spread the love

ಮಂಗಳೂರು: ಹರೀಶ್ ಪೂಂಜಾ ಶಾಸಕರೆಂದ ಮಾತ್ರಕ್ಕೆ ಅವರ ಮೇಲಿನ ಆರೋಪ ಅಲ್ಲ ಗೆಳೆಯಲು ಸಾಧ್ಯವೇ?ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಶಾಸಕ ಹರೀಶ್ ಪೂಂಜಾ ಪೊಲೀಸರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ 353ರ ಪ್ರಕಾರ ಎಫ್ ಐ ಆರ್ ಅನ್ನು ದಾಖಲಿಸಲಾಗಿದ್ದು, ಅದರಂತೆ ಕ್ರಮ‌ ಆಗಲಿದೆ ಎಂದರು.

ಕಾನೂನು ಎಲ್ಲರಿಗೂ ಒಂದೇ. ಇದು ಜಾಮೀನು ರಹಿತ ಅಪರಾಧವಾಗಿರುತ್ತದೆ. ಈ ಕಾನೂನಿನಂತೆ 7 ವರ್ಷ ಜೈಲು ಶಿಕ್ಷೆ ನೀಡುವ ಅವಕಾಶವಿದೆ.

ಆದರೆ ಹರೀಶ್ ಪೂಂಜಾ ಅವರು ಶಾಸಕರೆಂದ ಮಾತ್ರಕ್ಕೆ ಅವರ ಮೇಲಿನ ಆರೋಪವನ್ನು ಅಲ್ಲಗೆಳೆಯಲು ಸಾಧ್ಯವೇ? ಪೊಲೀಸರ ಮೇಲೆ ಬೆದರಿಕೆ ಹಾಕಿರುವ 2 ಪ್ರಕರಣಗಳು ಹರೀಶ್ ಪೂಂಜ ಅವರ ಮೇಲೆ ದಾಖಲಾಗಿದೆ.

ಒಂದರಲ್ಲಿ ಸ್ಟೇಷನ್ ಬೇಲ್ ಸಿಕ್ಕಿದೆ. ಶಾಸಕರಾದರೆ ಪೊಲೀಸರ ಮೇಲೆ ಬೆದರಿಕೆ ಹಾಕಬಹುದೇ? ಕಾನೂನು ಹಾಗೆ ಹೇಳುತ್ತದೆಯಾ? ಎಂದು ಪ್ರಶ್ನಿಸಿದರು.


Spread the love

About Laxminews 24x7

Check Also

ಸರ್ಕಾರಿ ನೌಕರರಿಗೆ ಹೊಸ ಭರಸೆ ಕೊಟ್ಟ ಡಿಸಿಎಂ

Spread the love ಬೆಂಗಳೂರು, ಜೂನ್‌ 17: ಕರ್ನಾಟಕದ ಸರ್ಕಾರಿ ನೌಕರರು, ನಿವೃತ್ತ ನೌಕರರು ಕೆ. ಸುಧಾಕರ್‌ ರಾವ್ ನೇತೃತ್ವದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ