Breaking News
Home / ಹುಬ್ಬಳ್ಳಿ / ಸರ್ಕಾರಕ್ಕೆ ಚಾಟಿ ಬೀಸಿದ ಪ್ರಲ್ಹಾದ್​ ಜೋಶಿ

ಸರ್ಕಾರಕ್ಕೆ ಚಾಟಿ ಬೀಸಿದ ಪ್ರಲ್ಹಾದ್​ ಜೋಶಿ

Spread the love

ಹುಬ್ಬಳ್ಳಿ, ಮೇ 25: ದಾವಣಗೆರೆ ಜಿಲ್ಲೆಯ ಚನ್ನಗಿರಿ (Channagiri) ಠಾಣೆ ಪೊಲೀಸರ ಕಸ್ಟಡಿಯಲ್ಲಿದ್ದ ಆರೋಪಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆ ಮೇಲೆ ಕಲ್ಲು ತೂರಿದ್ದ 10 ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಉಳಿದವರಿಗಾಗಿ ಶೋಧ ಮುಂದುವರೆಸಿದ್ದಾರೆ. ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ (Pralhad Joshi), ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಹೋದವರ ಮೇಲೆ ಕ್ರಮಕೈಗೊಂಡಿಲ್ಲ ಅದನ್ನು ಬಿಟ್ಟು ಸರ್ಕಲ್ ಇನ್​ಸ್ಪಕ್ಟರ್​ ಮತ್ತು ಡಿವೈಎಸ್​ಪಿಯನ್ನು ಅಮಾನತು ಮಾಡಲಾಗಿದೆ.

ಅಂಜಲಿ, ನೇಹಾ ಹಿರೇಮಠ ಪ್ರಕರಣದಲ್ಲಿ ಸಿದ್ದರಾಮಯ್ಯರವರು ಪೊಲೀಸರ ಮೇಲೆ ಕ್ರಮ ತೆಗೆದುಕೊಂಡಿಲ್ಲ. ಆದರೆ ಈ ಪ್ರಕರಣದಲ್ಲಿ ಪೊಲೀಸರ ಮೇಲೆ ಕ್ರಮ ಏಕೆ? ನೀವು ಎಷ್ಟು ತುಷ್ಟೀಕರಣದ ರಾಜಕೀಯ ಮಾಡಿತ್ತಿದ್ದಿರಿ.

ನಿಮ್ಮ ಈ ತುಷ್ಟೀಕರಣ ರಾಜಕೀಯ ಅರಾಜಕತೆ ಸೃಷ್ಟಿ ಆಗುತ್ತದೆ. ಅಲ್ಪ ಸಂಖ್ಯಾತರು ಗಲಭೆ ಮಾಡಿದರೆ ಯಾಕೆ ಖಂಡನೆ ಮಾಡೋದಿಲ್ಲ.

ಯಾರೇ ಗಲಭೆ ಮಾಡಿದ್ರೂ ತಪ್ಪು ಅದನ್ನು ಖಂಡಿಸಿ. ಈ ವಿಚಾರದಲ್ಲಿ ಪೊಲೀಸ್ ನೈತಿಕತೆ ಕುಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಇದರಿಂದಾಗಿ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಪೊಲೀಸರು ಠಾಣೆ ಬಿಟ್ಟು ಓಡಿಹೋಗತ್ತಾರೆ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಮದುವೆಯಾಗುವುದಾಗಿ ನಂಬಿಸಿ ₹ 1.69 ಲಕ್ಷ ವಂಚನೆ

Spread the love ಧಾರವಾಡ: ಸಂಗೀತಾ ಎಂಬುವರು ‘ಜೀವನ್‌ ಸಾಥಿ’ ಮ್ಯಾಟ್ರಿಮೋನಿ ಆಯಪ್‌ ಮೂಲಕ ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಆನ್‌ಲೈನ್‌ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ