Breaking News
Home / ರಾಜಕೀಯ / ಸ್ಟಾರ್​ಗಳ ಮಕ್ಕಳು ಮಾತ್ರ ಡ್ರಗ್ಸ್​ ಸೇವಿಸುವವರಲ್ಲ.. ನಶೆವ್ಯೂಹಕ್ಕೆ ಸಿಲುಕಿದ್ದಾರೆ ಲಕ್ಷಾಂತರ ಮಕ್ಕಳು

ಸ್ಟಾರ್​ಗಳ ಮಕ್ಕಳು ಮಾತ್ರ ಡ್ರಗ್ಸ್​ ಸೇವಿಸುವವರಲ್ಲ.. ನಶೆವ್ಯೂಹಕ್ಕೆ ಸಿಲುಕಿದ್ದಾರೆ ಲಕ್ಷಾಂತರ ಮಕ್ಕಳು

Spread the love

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು.. ಈ ಮಾತನ್ನ ಇತ್ತೀಚಿನ ಪೀಳಿಗೆಯ ಮಕ್ಕಳಿಗೆ ಒತ್ತಿ ಹೇಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ಯಾಕೆ ಗೊತ್ತಾ ? ಹದಿಹರೆಯದ ವಯಸ್ಸಿನಲ್ಲಿ, ಮುಂದಿನ ಜವಾಬ್ದಾರಿಗಳನ್ನು ಮರೆತು, ನಶೆಯ ಜೀವನಕ್ಕೆ ಮಾರು ಹೋಗ್ತಾ ಇದ್ದಾರೆ ಯುವ ಚೇತನಗಳು. ಕಳೆದ ದಶಕವನ್ನು ಹೋಲಿಸಿ, ಮಾದಕ ಲೋಕದ ಜಾಲಕ್ಕೆ ಸಿಲುಕಿರುವ ಮಕ್ಕಳ ಬಗೆಗಿನ ಈ ಸಮೀಕ್ಷೆ ನೋಡಿದರೆ, ದೇಶದ ಮುಂದಿನ ಭವಿಷ್ಯದ ಬಗ್ಗೆ ಭಯ ಹುಟ್ಟುತ್ತದೆ. ಆ ಸರ್ವೆ ಕುರಿತ ರಿಪೋರ್ಟ್​ ಇಲ್ಲಿದೆ..

ವಿಶ್ವದಲ್ಲಿ ಅತೀ ಹೆಚ್ಚು ಯುವಕರನ್ನು ಹೊಂದಿರುವ ದೇಶ ನಮ್ಮದು. ಕಲೆ, ಸಂಸ್ಕೃತಿ, ನಮ್ಮ ದೇಶದ ಹಿರಿಮೆ. ದಶಕದ ಹಿಂದೆ ನಮ್ಮ ಯುವಕರ ದೇಶ ಕಟ್ಟುವ ಹುಮ್ಮಸ್ಸು ನೆನೆದರೆ, ಅದ್ಭುತ ಎನಿಸುತ್ತದೆ. ಆದರೆ, ಈಗ ಆ ಯುವ ಶಕ್ತಿಯ ಸಾಮರ್ಥ್ಯ ಕಣ್ಮರೆ ಆಗ್ತಿದೆಯಾ ಎನ್ನುವ ಅನುಮಾನ ಮೂಡ್ತಿದೆ. ಯುವಕರು ನಶೆ ದುನಿಯಾದ ಮಾದಕ ಲೋಕಕ್ಕೆ ಮಾರು ಹೋಗ್ತಾ ಇದ್ದಾರಾ. ಜವಾಬ್ದಾರಿಗಳನ್ನು ಬದಿಗೊತ್ತಿ, ಎಲ್ಲವನ್ನೂ ಮರೆತು ನಶೆಯ ಪ್ರಪಂಚವನ್ನು ಅನುಭವಿಸುವ ಜಾಲಕ್ಕೆ ಇಳಿದಿದ್ದಾರಾ.?

 

 

ಮಾದಕ ಲೋಕದಲ್ಲಿ ಮಕ್ಕಳು ಮಾರು ಹೋಗ್ತಿರೋದೇಕೆ?

ಹೌದು, ಮಕ್ಕಳು.. ಅವರದ್ದೇ ಒಂದು ಪುಟ್ಟ ದುನಿಯಾ.. ಇಲ್ಲಿ ಸಣ್ಣ ಪುಟ್ಟ ಜಗಳಗಳು, ಆಟದ ವಿಷಯಕ್ಕೆ ಹೋರಾಟಗಳು, ಅವರನ್ನೇ ನಕ್ಕು ನಗಿಸುವ, ದುಃಖ ತರಿಸುವ, ಖುಷಿ ಸಂತೋಷ ತುಂಬಿರುವ ಜಗತ್ತು. ಆ ಮುಗ್ಧ ಜೀವಗಳಿಗೆ ಒಳಿತು ಕೆಡುಕುಗಳ ಅರಿವು ತುಂಬಾ ಕಡಿಮೆ. ಮಕ್ಕಳು ತಪ್ಪು ಹೆಜ್ಜೆ ಇಡುತ್ತಿದ್ದರೆ ಹಿರಿಯರು ಅವರಿಗೆ ಬುದ್ದಿವಾದಗಳನ್ನು ಹೇಳುತ್ತಾ, ಅವರ ತಪ್ಪು ನಡೆಗಳನ್ನು ತಿದ್ದುಪಡಿಸಿ, ಸರಿಯಾದ ದಾರಿ ತೋರಬೇಕು. ಇದೇ 10 ವರ್ಷಗಳ ಹಿಂದೆ ಮಕ್ಕಳು, ಹಲವು ವಿಚಾರಕ್ಕೆ ಹಿರಿಯರ ಮೇಲೆ ಅವಲಂಬಿತರಾಗಿದ್ದರು. ಏನಾದ್ರೂ ತಮಗೆ ಬೇಕು ಅಂದ್ರೆ ಕಷ್ಟ ಪಟ್ಟು ಪಡೆದುಕೊಳ್ಳುತ್ತಿದ್ದರು. ಆದ್ರೆ ಈ ಪೀಳಿಗೆಯ ಮಕ್ಕಳಿಗೆ ಎಲ್ಲವೂ ಸುಲಭವಾಗಿಬಿಟ್ಟಿದೆ. ವಸ್ತುವಿನಿಂದ ವಿಚಾರದವರೆಗೂ ಎಲ್ಲವೂ ಕೈಗೆಟುಕುವ ಹಾಗಾಗಿದೆ. ಇದರಿಂದ ತಮ್ಮ ಅಮೂಲ್ಯವಾದ ಸಮಯ, ಅನ್ಯ ಪ್ರಪಂಚಕ್ಕೆ ಕಾಲಿಡುತ್ತಿದೆ.

ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳ ಡ್ರಗ್ಸ್​ ಸೇವನೆ ಹಾಗೂ ಬಂಧನಗಳಿಂದಾಗಿ ದೇಶದಲ್ಲಿ ಇಂದಿನ ಹಾಟ್​ ಟಾಪಿಕ್​ ಅದೇ ವಿಷಯವಾಗಿದೆ. ಅದ್ರಲ್ಲೂ ಬಾಲಿವುಡ್​ ದೈತ್ಯ ಸೆಲೆಬ್ರಿಟಿ ಶಾರುಖ್​ ಖಾನ್​ ಮಗನ ಬಂಧನದ ನಂತರವಂತೂ ಭಾರತ ಮಾದಕದ್ರವ್ಯದ ಭೀತಿಯಿಂದ ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ. ಈಗ ನಾವ್​ ಹೇಳ್ತಾ ಇರೋ ಟಾಪಿಕ್​ ದೊಡ್ಡ ದೊಡ್ಡ ವ್ಯಕ್ತಿಯ ಮಕ್ಕಳ ಸ್ಟೋರಿಯಲ್ಲಾ.. ಸಾಮಾನ್ಯರಲ್ಲಿ ಅತೀ ಸಾಮಾನ್ಯರು ಎನ್ನುವ ನಮ್ಮ ನಿಮ್ಮ ಮನೆಗಳಲ್ಲಿ ಇರುವ ಮುಗ್ಧ ಮಕ್ಕಳ ವಿಚಾರ. ಆತಂಕಕಾರಿ ಸಂಗತಿಯೆಂದರೆ ಕಳೆದ 10 ವರ್ಷಗಳಲ್ಲಿ ಮಕ್ಕಳು ಮತ್ತು ಹದಿಹರೆಯದವರನ್ನು ಒಳಗೊಂಡ ಡ್ರಗ್ ಪ್ರಕರಣಗಳು ಸಹ ಏರಿಕೆಯಾಗಿದೆ.

 

 

ಕಳೆದ 10 ವರ್ಷದಲ್ಲಿ ಶೇ. 74ಕ್ಕೆ ಏರಿಕೆ ಆದ ಡ್ರಗ್ಸ್​ ಪ್ರಕರಣಗಳು
ಬಾಲಾಪರಾಧಿಗಳನ್ನು ಒಳಗೊಂಡ ಪ್ರಕರಣಗಳ ಸಂಖ್ಯೆ ದುಪ್ಪಟ್ಟು!

ಇದೇ ವರ್ಷದಲ್ಲಿ ನಾವು ನೋಡಿದ ಹಾಗೆ, ದೇಶದಲ್ಲಿ ಇತ್ತೀಚೆಗೆ ಡ್ರಗ್ಸ್​ ಸೇವನೆ ಹಾಗೂ ಮಾರಾಟ, ಅದರಿಂದ ಆದ ಆನಾಹುತ ಹಾಗೂ ಅದೆಷ್ಟೋ ಜನರ ಬಂಧನಗಳನ್ನು ನೋಡಿದ್ದೇವೆ. ಇದನ್ನೆಲ್ಲಾ ಹತ್ತು ವರ್ಷಗಳ ಹಿಂದಕ್ಕೆ ಹೋಲಿಕೆ ಮಾಡಿದರೆ, ಡ್ರಗ್ಸ್​ಗಳ ಬಗ್ಗೆ ಇಷ್ಟೊಂದು ಸುದ್ದಿ ಇರುತ್ತಿರಲಿಲ್ಲ. ಹೌದು ನ್ಯಾಷನಲ್​ ಕ್ರೈಂ ರೆಕಾರ್ಡ್​ ಬ್ಯೂರೋರವರ ಸಮೀಕ್ಷೆ ಪ್ರಕಾರ ಕಳೆದ 10 ವರ್ಷಗಳಿಂದ ಇತ್ತೀಚೆಗೆ ಶೇಕಡಾ 74ರಷ್ಟು ಡ್ರಗ್​ ಸೇವನೆ ಹಾಗೂ ಮಾರಾಟದ ಪ್ರಕರಣಗಳೂ ಹೆಚ್ಚಾಗಿದೆ. ಕೇವಲ 18 ವರ್ಷ ದಾಟಿದ ಯುವಕರಲ್ಲಿ ಬಾಲಾಪರಾಧಿಗಳ ಸಂಖ್ಯೆ ಸಹ ದುಪ್ಪಟ್ಟಾಗಿದೆ. ಕಾನೂನು ಬಾಹಿರ ಔಷಧಿಗಳು, ಮತ್ತೇರಿಸುವ ಸೈಕೋಟ್ರೋಪಿಕ್ ಮಾದಕಗಳು, ಗಾಂಜಾ ಸೇವಿಸುವ ಮಕ್ಕಳ ಸಂಖ್ಯೆಯಲ್ಲಿನ ಏರಿಕೆಯೂ ಅಸಮಾಧಾನವನ್ನುಂಟುಮಾಡುತ್ತದೆ.

30 ಲಕ್ಷಕ್ಕೂ ಅಧಿಕ ಮಕ್ಕಳಿಂದ ಕಾನೂನು ಬಾಹಿರ ಔಷಧಿ ಸೇವನೆ!
ದೇಶದ 40 ಲಕ್ಷಕ್ಕೂ ಅಧಿಕ ಮಕ್ಕಳು ಮದ್ಯವ್ಯಸನಿಗಳು

ನ್ಯಾಷನಲ್​ ಕ್ರೈಂ ರೆಕಾರ್ಡ್​ ಬ್ಯೂರೋರವರ ಸಮೀಕ್ಷೆ ಪ್ರಕಾರ, ದೇಶದಲ್ಲಿ ಮಕ್ಕಳು ಕಾನೂನು ಬಾಹಿರವಾದ ಔಷಧಿಗಳನ್ನು ಸೇವಿಸುತ್ತಿದ್ದಾರೆ. ಅದರಲ್ಲೂ ಒಪಿಯಾಡ್​ ಎನ್ನುವ ಔಷಧಿ ಮಕ್ಕಳ ಕೈಯಲ್ಲಿ ಅತಿ ಹೆಚ್ಚು ಸಂಚರಿಸುತ್ತಿರುವ ಮಾದಕ. ಸಮೀಕ್ಷೆಯ ಅಂದಾಜಿನ ಪ್ರಕಾರ ದೇಶದಲ್ಲಿ 30 ಲಕ್ಷಕ್ಕೂ ಅಧಿಕ ಮಕ್ಕಳು ಈ ಒಪಿಯಾಡ್​​ ಮಾತ್ರೆಗಳನ್ನು ಸೇವಿಸುತ್ತಿದ್ದಾರೆ ಅನ್ನೋ ಪ್ರಕರಣಗಳು ವರದಿಯಾಗಿದೆ. ಅಲ್ಲದೆ, ಮದ್ಯಪಾನ ಅನ್ನೋದು ಮಕ್ಕಳ ಪಾಲಿಗೆ ಹಾಗೂ 18 ತಲುಪದ ಯುವಕರ ಪಾಲಿಗೆ ಅತಿ ಸುಲಭದಿ ಸಿಗುವ ನಶಾ ವಸ್ತುವಾಗಿದೆ. ಇದರಿಂದ ದೇಶದಲ್ಲಿ 40 ಲಕ್ಷಕ್ಕೂ ಅಧಿಕ ಮಕ್ಕಳು ಮದ್ಯಸೇವನೆ ಮಾಡಿ ಕ್ರೈಂ ರೆಕಾರ್ಡ್​ನಲ್ಲಿ ಹೆಸರು ಹಾಕಿಸಿಕೊಂಡಿದ್ದಾರೆ.

ಸೆಪ್ಟೆಂಬರ್ 2020ರಲ್ಲಿ, ಸರ್ಕಾರವು ಸಂಸತ್ತಿನಲ್ಲಿ ಬಾಲಾಪರಾಧಿಗಳಲ್ಲಿ ಹೆಚ್ಚು ಬಳಕೆಯಾಗುವ ಮಾದಕ ಔಷಧಿಗಳು ಒಪಿಯಾಡ್‌ಗಳು ಎಂದು ತಿಳಿಸಿತ್ತು. ಇದರ ಬಗ್ಗೆ ಚರ್ಚೆ ಹಾಗೂ ಇದಕ್ಕೆ ತಕ್ಕ ಪರಿಹಾರವನ್ನು ಹುಡುಕುವುದಾಗಿ ತಿಳಿಸಿದ್ದರು. ಇನ್ನುಳಿದಂತೆ ಅಫೀಮು, ಮಾರ್ಫಿನ್, ಹೆರಾಯಿನ್, ಸ್ಮ್ಯಾಕ್ ಸಹ ಇದೇ ವರ್ಗಕ್ಕೆ ಸೇರುತ್ತವೆ. ಇದರ ಜೊತೆಗೆ ಇತ್ತೀಚೆಗೆ ಹದಿಹರೆಯದವರಲ್ಲಿ ಹೆಚ್ಚು ಸೇವಿಸುವ ನಶಾ ಪಟ್ಟಿಯಲ್ಲಿ ಆಲ್ಕೋಹಾಲ್ ಮತ್ತು ಇನ್ಹಲೇಂಟ್‌ಗಳು ಸೇರಿಸಲಾಗಿದೆ. ಈ ಮಕ್ಕಳ ನಶಾ ಪಟ್ಟಿಯಲ್ಲಿ ಒಪಿಯಾಡ್​ ಮೊದಲ ಸ್ಥಾನವನ್ನು ಅಲಂಕರಿಸುತ್ತದೆ, ಈ ನಶಾ ಪಟ್ಟಿಯನ್ನು ನೀವೇ ನೋಡಿ.

 

 

ಮಕ್ಕಳ ‘ಮಾದಕ’ ಲೆಕ್ಕ!

  • ಒಪಿಯಾಡ್​ : 40 ಲಕ್ಷ
  • ಇನ್ಹೇಲೆಂಟ್​ : 30 ಲಕ್ಷ
  • ಆಲ್ಕೋಹಾಲ್ ​: 30 ಲಕ್ಷ
  • ನಿದ್ರೆ ಮಾತ್ರೆಗಳು : 20 ಲಕ್ಷ
  • ಕ್ಯಾನಬೀಸ್​ : 20 ಲಕ್ಷ
  • ಮ್ಯಾಜಿಜ್​ ಮಶ್ರೂಮ್​ : 2 ಲಕ್ಷ
  • ಕೊಕೇನ್​ : 2 ಲಕ್ಷ
    – ಮಾಹಿತಿ : ನ್ಯಾಷನಲ್​ ಕ್ರೈಂ ರೆಕಾರ್ಡ್ಸ್​ ಬ್ಯೂರೋ

ಇನ್ನು ಕೋವಿಡ್​ 19 ಪ್ಯಾಂಡಮಿಕ್​ ಕಾಲದಲ್ಲೂ ಬಾಲಾಪರಾಧಿಗಳ ಸಂಖ್ಯೆಯಲ್ಲಿ ಬಹುದೊಡ್ಡ ಏರಿಕೆಯಾಗಿದೆ. ಅಂದ್ರೆ 2019 ರಿಂದ 2020ರ ಅವಧಿಯಲ್ಲಿ ಶೇಕಡ 21 ರಷ್ಟು ಹೆಚ್ಚು ಬಾಲಕರನ್ನ ಮಾದಕ ಸೇವನೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಒಟ್ಟು 2001ರಿಂದ 2021ರ ವರೆಗೂ ಶೇಕಡ 74 ರಷ್ಟು ಏರಿಕೆ ಆಗಿರುವ ಗ್ರಾಫ್​ ಹೀಗಿದೆ ನೋಡಿ..

ಮಕ್ಕಳ ‘ಮಾದಕ’ ಲೆಕ್ಕ!

  • 2001 : 24,377 ಪ್ರಕರಣಗಳು
  • 2010 : 27,000 ಪ್ರಕರಣಗಳು
  • 2015 : 50,000 ಪ್ರಕರಣಗಳು
  • 2020 : 72,721 ಪ್ರಕರಣಗಳು
  • 2021 : 59,809 ಪ್ರಕರಣಗಳು
    – ಮಾಹಿತಿ : ನ್ಯಾಷಿನಲ್​ ಕ್ರೈಂ ರೆಕಾರ್ಡ್ಸ್​ ಬ್ಯೂರೋ

2001ರಲ್ಲಿ ಡ್ರಗ್ಸ್​ ಸೇವಿಸಿ ಅರೆಸ್ಟ್​ ಆದ ಬಾಲಾಪರಾಧಿಗಳು 24,377 ಇದ್ದರು, 2010ರಲ್ಲಿ ಅಂದಾಜು 27 ಸಾವಿರ ಪ್ರಕರಣಗಳು ದಾಖಲಾದರೆ, 2015 ರಲ್ಲಿ 50 ಸಾವಿರ ಪ್ರಕರಣಗಳ ಗಡಿ ದಾಟಿತ್ತು. ಇನ್ನು 2020 ರ ಹೊತ್ತಿಗೆ ಅತಿ ಹೆಚ್ಚು ಪ್ರಕರಣಗಳು ಅಂದ್ರೆ 72,721 ಕೇಸ್​ಗಳಿಂದ ಮಕ್ಕಳು ಕಂಬಿ ಹಿಂದಿದ್ದರು. 2021ರ ಈ ವರ್ಷ ಈಗಾಗಲೇ 59 ಸಾವಿರ ಮಕ್ಕಳು ಕೇಸ್​ನಲ್ಲಿ ಒಳಗಾಗಿದ್ದಾರೆ.

ಏರಿಕೆಯಾಗುತ್ತಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಶಾ ಮುಕ್ತ ಭಾರತದಡಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಶಾಲಾ ಕಾಲೇಜುಗಳಲ್ಲಿ, ಯೂನಿವರ್ಸಿಟಿಗಳಲ್ಲಿ ಮಕ್ಕಳು ಹಾಗೂ ಯುವಕರಲ್ಲಿ ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಆದರೆ ಯಾವ ಮಾರ್ಗವೂ ಉಪಯುಕ್ತವಾಗಿ ಪರಿಣಮಿಸಿಲ್ಲಾ ಅನ್ನೋದನ್ನು ಈ ಸಮೀಕ್ಷೆ ಸಾರಿ ಹೇಳುತ್ತಿದೆ. 2020ರ ಇದೇ ಅವದಿಯಲ್ಲಿ ಸೀಜ್​ ಮಾಡಿರುವಂತ ಡ್ರಗ್ಸ್​ಗಳು ಸಹ ಕಳೆದ ದಶಕದಲ್ಲಿ ಅತೀ ಹೆಚ್ಚು ಎನ್ನಲಾಗ್ತಾ ಇದೆ. ಆ ಲಿಸ್ಟ್​ನಲ್ಲಿ

2020ರಲ್ಲಿ ಸೀಜ್​ ಆದ ವಸ್ತುಗಳು

  • ಕ್ಯಾನಬೀಸ್​ : 8,53,554 ಕೆಜಿ
  • ಅಫೀಮು​ : 2,99,402 ಕೆಜಿ
  • ನಶೆ ಏರಿಸೋ ಔಷಧಿ : 82,112 ಕೆಜಿ
  • ಕೊಕೇನ್​ : 493 ಕೆಜಿ
    – ಮಾಹಿತಿ : ನ್ಯಾಷಿನಲ್​ ಕ್ರೈಂ ರೆಕಾರ್ಡ್ಸ್​ ಬ್ಯೂರೋ

 

 

2020ರಲ್ಲಿ ಸೀಜ್​ ಆದ ಮಾದಕ ವಸ್ತುಗಳ ಲಿಸ್ಟ್​ನಲ್ಲಿ. ಗಾಂಜಾ ಹಾಗೂ ಗಿಡ ಮೂಲಿಕೆಯಿಂದ ನಶೆ ಹೆಚ್ಚಿಸುವ ಕ್ಯಾನಬಿಸ್ ವಸ್ತುಗಳು 8 ಲಕ್ಷದ 53 ಸಾವಿರ ಕೆಜಿ ಸೀಜ್​ ಆದರೆ, ಅಫೀಮ್​ ಹಾಗೂ ಇನ್ನಿತರೇ ಡ್ರಗ್ಸ್​ಗಳು 2 ಲಕ್ಷದ 99 ಸಾವಿರ ಕೆಜಿ ವಶ ಪಡಿಸಿಕೊಂಡಿದ್ದಾರೆ​. ಇಂಜೆಕ್ಷನ್​ ಮೂಲಕ ಔಷಧಿಯ ಮಾದಕಗಳು 82 ಸಾವಿರ ಕೆಜಿ ಸೀಜ್​ ಆದರೆ, ಕೊಕೇನ್​ 493 ಕೆಜಿ ಡ್ರಗ್ಸ್​ ಸೀಜ್​ ಆಗಿದೆ.

ಇಲ್ಲಿ, ಎಚ್ಚೆತ್ತುಕೊಳ್ಳಬೇಕಾದ ವಿಷಯವೇನೆಂದರೆ, ಭಾರತ ಏಕಮಾತ್ರದಲ್ಲಿ ಶೇಕಡಾ 2ರಷ್ಟು ಒಪಿಯಾಡ್​ ಮಾರಾಟವಾಗಿರೋದು ನೋಡಬಹುದು. ಇದು ಇಡೀ ಏಷಿಯಾದಲ್ಲೇ ಹೋಲಿಕೆ ಮಾಡಿದರೆ 4ರಷ್ಟು ಹೆಚ್ಚು ವ್ಯಸನಿಗಳು ನಮ್ಮ ದೇಶದಲ್ಲಿ ಇರುವುದು ಕಂಡುಬರುತ್ತದೆ. ಈ ಕೂಡಲೇ ಈ ಡ್ರಗ್​ ಟ್ರಾಫಿಕಿಂಗ್​ ರೂಟ್​ಗಳನ್ನು ಪತ್ತೆ ಹಚ್ಚಿ ಅದನ್ನು ನಿಯಂತ್ರಿಸಿವುದು ನಾರ್ಕೋಟಿಕ್​ ಬ್ಯೂರೋ ಪಾಲಿಗಿರುವ ಕೆಲಸ. ಇನ್ನು ಮಾದಕ ಲೋಕಕ್ಕೆ ಜಾರುತ್ತಿರುವ ನವಯುಗದ ಮಕ್ಕಳು, ಹಾಗೂ ಹದಿ ಹರಿಯದ ಯುವಕರನ್ನು ಈಗಿನಿಂದಲೇ ಅದರ ಬಗ್ಗೆ ಅರಿವು ಮೂಡಿಸಿ, ಮಾರ್ಗ ಬದಲಾವಣೆ ಬಗ್ಗೆ ಜಾಗೃತಿ ಮೂಡಿಸಬೇಕು.

ಬಾಲಿವುಡ್​ನ ಸೆಲಿಬ್ರಿಟಿಗಳ ಮಕ್ಕಳು ಜಾಲದಲ್ಲಿ ಇದ್ದಾರೆ, ನಮ್ಮ ಮಕ್ಕಳಲ್ಲಾ ಎಂದು ಅಜಾಗೃತ ನಡೆಯನ್ನು ಪೋಷಕರು ತೋರಿದರೆ, ಮುಂದೆ ಏನಾಗಬಹುದು ಊಹಿಸಿನೋಡಿ. ಮಕ್ಕಳ ಪ್ರತಿ ಹೆಜ್ಜೆ, ಅವರ ನಡವಳಿಕೆ ಹಾಗೂ ಅವರ ಸಂಪರ್ಕ ಆದಷ್ಟು ಒಳ್ಳೆಯ ಮಾರ್ಗದಲ್ಲಿರುವುದನ್ನು ಖಾತರಿ ಮಾಡಿಕೊಳ್ಳಿ. ಇನ್ನು ದೇಶದೊಳಗೆ ಮಾದಕದ ಹರಿವನ್ನು ನಿಲ್ಲಿಸುವುದು ಕೇವಲ ಅಧಿಕಾರಿಗಳ ಕೈಯಲ್ಲಿ ಇರೋದು.


Spread the love

About Laxminews 24x7

Check Also

ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ.: ಲಕ್ಷ್ಮೀ ಹೆಬ್ಬಾಳ್ಕರ್

Spread the love ಬೆಳಗಾವಿ: ರಾಜ್ಯದ ರಾಜಕಾರಣ, ದೇಶದ ರಾಜಕಾರಣ ತಲೆ ತಗ್ಗಿಸುವ ಘಟನೆಯಿದು. ನಾಗರಿಕ ಸಮಾಜ ತಲೆ ತಗ್ಗಿಸುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ