Breaking News
Home / ರಾಜಕೀಯ / ತುಳಿತಕೊಳ್ಳಪಟ್ಟ ದಲಿತ ಸಮುದಾಯದ ಸ್ವಾಭಿಮಾನದ ಬದುಕಿಗಾಗಿ ಕಾರ್ಯ ನಿರ್ವಹಿಸುವ ಮಹದಾಸೆ ನಿರೀಕ್ಷಿಸಲು ಸಾಧ್ಯ: ಅಶೋಕ ಪೂಜಾರಿ

ತುಳಿತಕೊಳ್ಳಪಟ್ಟ ದಲಿತ ಸಮುದಾಯದ ಸ್ವಾಭಿಮಾನದ ಬದುಕಿಗಾಗಿ ಕಾರ್ಯ ನಿರ್ವಹಿಸುವ ಮಹದಾಸೆ ನಿರೀಕ್ಷಿಸಲು ಸಾಧ್ಯ: ಅಶೋಕ ಪೂಜಾರಿ

Spread the love

ಗೋಕಾಕ : 3, ಸ್ವಾತಂತ್ರ್ಯ ಭಾರತದ ಸಂವಿಧಾನ ಶಿಲ್ಪಿ ಡಾ,ಬಾಬಾಸಾಹೇಬ ಅಂಬೇಡ್ಕರ್ ಅವರ ಪರ್ವ ಕಾಲದಲ್ಲಿ ನಾವಿದ್ದೇವೆ. ಸ್ವಾತಂತ್ರ್ಯ ಮತ್ತು ಸಮಾನತೆ ಬದುಕು ದೇಶದ ಸಮಗ್ರ ಅಭಿವೃದ್ಧಿಗೆ ಪೂರಕವಾದ ನ್ಯಾಯ ಸಮ್ಮತ ಆಡಳಿತ ವ್ಯವಸ್ಥೆ, ಸ್ತ್ರೀ ಸ್ವಾತಂತ್ರ್ಯ ಸಮಗ್ರ ಶಿಕ್ಷಣ, ಎಲ್ಲರಿಗೂ ಸಮ ಬಾಳು ಮತ್ತು ಸಮಪಾಲು ಮುಂತಾದ ಉದಾತ್ತ ದ್ಧ್ಯೆಯಗಳೊಂದಿಗೆ ಸಾಂದರ್ಭಿಕ ತಿದ್ದುಪಡಿಗಳ ಅವಕಾಶಗಳೊಂದಿಗೆ ರಚಿಸಲ್ಪಟ್ಟಿರುವ ದೇಶದ ಸಂವಿಧಾನ ಭಾರತೀಯರ ಧರ್ಮ ಗ್ರಂಥವಗಬೇಕೆಂದು ಪ್ರೋ ಎ. ವಾಯ. ಪಂಗಣ್ಣವರ ಹೇಳಿದರು.

ನಗರದ ಜ್ಞಾನ ಮಂದಿರ ಆಧ್ಯಾತ್ಮಿಕ ಕೇಂದ್ರದಲ್ಲಿ ಜರುಗಿದ ನೂತನ ಸ್ವಾಭಿಮಾನಿ ದಲಿತ ಸಂಘಟನೆಯನ್ನು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ದೇಶದ ಸಾಮಾಜಿಕ, ರಾಜಕೀಯ ಮತ್ತು ಆಡಳಿತ್ಮಾಕ ವ್ಯವಸ್ಥೆ ಸಂವಿಧಾನದ ನೀತಿ ನಿಯಮಗಳಿಗೆ ಪೂರಕವಾಗಿದ್ದಾಗಲೇ ಮಾತ್ರ ದೇಶದ ಸಮಗ್ರ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಿರಿಯ ರಾಜಕೀಯ ಧುರೀಣರಾದ ಅಶೋಕ ಪೂಜಾರಿ ಅವರು ತುಳಿತಕೊಳ್ಳಪಟ್ಟ ದಲಿತ ಸಮುದಾಯದ ಸ್ವಾಭಿಮಾನದ ಬದುಕಿಗಾಗಿ ಕಾರ್ಯ ನಿರ್ವಹಿಸುವ ಮಹದಾಸೆಯೊಂದಿಗೆ ಪ್ರಾರಂಭವಾಗಿರುವ ಸ್ವಾಭಿಮಾನಿ ದಲಿತ ಸಂಘಟನೆ ಮುಂದಿನ ದಿನಗಳಲ್ಲಿ ಅವಕಾಶ ವಂಚಿತ ಸಮಾಜದ ಕಟ್ಟ ಕಡೆಯ ಮನುಷ್ಯನ ಬದುಕಿಗೆ ಕಾಯಕಲ್ಪ ನೀಡುವ ಶಕ್ತಿಯಾಗಿ ಕಾರ್ಯನಿರ್ವಹಿಸಲೆಂದು ಆಶಿಸಿದರು. ಮುಂದುವರೆದು ಮಾತನಾಡಿದ ಅವರು ಮಹಾತ್ಮ ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಪರಿಕಲ್ಪನೆ ದಲಿತ ಶಬ್ದವು ಕೇವಲ ನಿರ್ದಿಷ್ಟ ಪಡಿಸಿದ ಜಾತಿಗಳಿಗೆ ಮಾತ್ರ ಸೀಮಿತವಾಗಿರದೆ ಸಮಾಜದಲ್ಲಿ ತುಳಿತಕ್ಕೊಳಪಟ್ಟ ಎಲ್ಲ ಸಮುದಾಯದ ಜನತೆಯನ್ನೊಳಗೊಂಡಿರುವ ವಿಸ್ತ್ರತ ಅರ್ಥ ಹೊಂದಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಲೇಖಕರಾದ ಬಸವರಾಜ ಕೋಲಕಾರ ಮತ್ತು ಶಿಕ್ಷಕರಾದ ಎಸ್. ಜಿ. ಕೋಟೆ ಅವರು ಡಾ, ಭೀ ಆರ್ ಅಂಬೇಡ್ಕರ್ ಅವರ ವೈಚಾರಿಕತೆ ನಿಲುವಿನ ಕುರಿತು ಮಾತನಾಡಿದರು.ಸಂತೋಷ ದೊಡಮನಿ ಪ್ರಾಸ್ತವಿಕವಾಗಿ ಮಾತನಾಡಿದರು ಮತ್ತು ಹೊಳ್ಳೆಪ್ಪಾ ಮಾಂಗ ಕಾರ್ಯಕ್ರಮವನ್ನು ನಿರೂಪಿಸಿದರು.ಇದೇ ಸಂದರ್ಭದಲ್ಲಿ ಸಂಘಟನೆ ಸಂಸ್ಥಾಪಕ ಅಧ್ಯಕ್ಷರಾಗಿ ಕುಮಾರ ಶಿಡ್ಲಪ್ಪಗೋಳ (ಕಡಹಟ್ಟಿ ) ಆಯ್ಕೆಯಾದರು.ಕಾರ್ಯಕ್ರಮದಲ್ಲಿ ಶಂಕರ ಸಣಕ್ಕಿ, ಪವನ ಸಾಂಗ್ಲಿ, ಸುರೇಶ ತಳವಾರ, ಯಲ್ಲಪ್ಪ ಶಿಡ್ಲಪ್ಪಗೋಳ, ರಾಘವೇಂದ್ರ ಚಿಂಚಲಿ, ಸಚಿನ್ ಮಾಳಗೆ, ರಾಜು ಬಂಗಾರಿ ಮುತಾಂದವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ