ಅಂಗಾಗಗಳಲ್ಲಿ ಶಕ್ತಿಯ ಕೊರತೆ ಇದ್ದರೂ ಅದನ್ನು ಎದುರಿಸಿ ಬಾಳು ನಡೆಸುತ್ತಿರುವ ಮಕ್ಕಳ ಪ್ರೀತಿಯ ಒರತೆಗೆ ಬೆರಗಾದೆ ”
ಮಂಗಳೂರಿನ ಪಿ.ವಿ.ಎಸ್ ಸರ್ಕಲ್ ಬಳಿ ಇರುವ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಛೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಸಬಲೀಕರಣ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ಖಾತೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ,ಜಿ ಯವರನ್ನು ಅಕ್ಕರೆಯಿಂದ ಮಾತನಾಡಿಸಿ, ಹೂಗುಚ್ಛ ನೀಡಿ ಪ್ರೀತಿಯಿಂದ ಸ್ವಾಗತಿಸಿ, ಮಂಗಳೂರು ಭೇಟಿಯನ್ನು ಅವಿಸ್ಮರಣಿಯವಾಗಿಸಿದ ದಿವ್ಯಾಂಗ ಮಕ್ಕಳೊಂದಿಗೆ ಬೆರೆತು, ಮಾತನಾಡಿದ ಅತ್ಯಮೂಲ್ಯ ಕ್ಷಣಗಳು.
