ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ತಡೆ ಬೇಡ ,ಎಂಈಎಸ್ ನಾಯಕರ ಜೊತೆ ಡಿಸಿ ಚರ್ಚೆಗೆ ಸಮಯ ನಿಗದಿ
ಬೆಳಗಾವಿ- ಗಡಿಭಾಗದ ಬೆಳಗಾವಿಯಲ್ಲಿ ಎಂಈಎಸ್ ಹಾಗು ಶಿವಸೇನೆಯ ತಂತ್ರಗಾರಿಗೆ ,ಪುಂಡಾಟಿಕೆ ಮುಂದುವರೆದಿದೆ,ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ತಡೆಯಬೇಡಿ ಎಂದು ಎಂಈಎಸ್ ನಾಯಕರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿದ್ದಾರೆ
ಮಾಜಿ ಶಾಸಕ ಮನೋಹರ ಕಿಣೇಕರ ದೀಪಕ ದಳವಿ ಸೇರಿದಂತೆ ಹಲವಾರು ಜನ ಎಂಈಎಸ್ ನಾಯಕರು ಜಿಲ್ಲಾಧಿಕಾರಿ ಮೊಮ್ಮನಹಳ್ಳಿ ಅವರನ್ನು ಭೇಟಿಯಾಗಲು ಡಿಸಿ ಕಚೇರಿಗೆ ಬಂದಿದ್ದರು ,ಜಿಲ್ಲಾಧಿಕಾರಿಗಳು ನಾನು ಮೀಟೀಂಗ್ ನಲ್ಲಿ ಇದ್ದೇನೆ ಸಂಜೆ 5-30 ಕ್ಕೆ ಬನ್ನೀ ಎಂದು ಹೇಳಿ ಕಳಿಸಿದ್ದಾರೆ .
ಬೆಳಗಾವಿ ಗಡಿಭಾಗದಲ್ಲಿ ಶಿವಸೇನೆ ಮತ್ತು ಎಂಈಎಸ್ ನಾಯಕರು ಮರಾಠಿ ಸಾಹಿತ್ಯ ಸಮ್ಮೇಳನದ ನೆಪದಲ್ಲಿ ಗಡಿಭಾಗದಲ್ಲಿ ಭಾಷಾವೈಷಮ್ಯದ ವಿಷ ಬೀಜ ಬಿತ್ತುತ್ತಿದ್ದು ಜಿಲ್ಲಾಡಳಿತ ಇವರ ಪುಂಡಾಟಿಕೆಗೆ ಬ್ರೇಕ್ ಹಾಕಲು ಮುಂದಾಗಿರುವದು ಸಂತಸದ ಸಂಗತಿಯಾಗಿದೆ
ಜಿಲ್ಲಾಡಳಿತ ದಿಟ್ಟ ಕ್ರಮಕ್ಕೆ ಬೆಚ್ವಿಬಿದ್ದಿರುವ ಎಂಈಎಸ್ ನಾಯಕರು ಈಗ ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸಲು ನಮಗೆ ಅನುಮತಿ ಕೊಡಿ ಎಂದು ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ
ಇನ್ನೊಂದೆಡೆ ಬೆಳಗಾವಿಯ ಕರ್ನಾಟಕ ರಕ್ಷಣಾವೇದಿಕೆ ,ರಕ್ಷಣಾವೇದಿಕೆಯ ಸ್ವಾಭಿಮಾನಿ ಬಣ ,ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು ,ಸಾಹಿತ್ಯದ ಹೆಸರಿನಲ್ಲಿ ಗಡಿ ಕ್ಯಾತೆ ತೆಗೆಯುತ್ತಿರುವ ಸಮ್ಮೇಳನಗಳಿಗೆ ಅನುಮತಿ ಕೊಡಬೇಡಿ ಎಂದು ಪ್ರತಿಭಟಿಸಿದ್ದಾರೆ