Breaking News
Home / ಜಿಲ್ಲೆ / ಕರ್ನಾಟಕಕ್ಕೆ ತಲೆನೋವಾದ ಮಂಗಳೂರು ಕೊರೊನಾ ಸೋಂಕಿತ

ಕರ್ನಾಟಕಕ್ಕೆ ತಲೆನೋವಾದ ಮಂಗಳೂರು ಕೊರೊನಾ ಸೋಂಕಿತ

Spread the love

ಮಂಗಳೂರು: ದೆಹಲಿಯ ನಿಜಾಮುದ್ದೀನ್ ಜಮಾತ್ ಪ್ರಕರಣದಂತೆ ಮಂಗಳೂರಿನ ಒಂದು ಪ್ರಕರಣ ಇದೀಗ ಕರ್ನಾಟಕಕ್ಕೆ ಕಗ್ಗಂಟಾಗಿದೆ.

ಸಂಘಟನೆಯೊಂದಕ್ಕೆ ಸೇರಿರುವ ದಕ್ಷಿಣ ಕನ್ನಡ ಜಿಲ್ಲೆಯ (ರೋಗಿ ನಂ.144)ಈ ಸೋಂಕಿತ ವ್ಯಕ್ತಿ, ದೆಹಲಿಯಲ್ಲಿ ಮಾರ್ಚ್ 13ರಿಂದ 18ರವರೆಗೆ ತಂಗಿದ್ದರು. ಈ ವೇಳೆ ಪೌರತ್ವ ಕಾಯ್ದೆ ವಿರೋಧಿಸಿ ದೆಹಲಿಯ ಶಾಹೀನ್‍ಭಾಗ್‍ನಲ್ಲಿ ನಡೆದ ಪ್ರತಿಭಟನೆಯಲ್ಲೂ ಭಾಗಿಯಾಗುವುದರ ಜೊತೆಗೆ ಹಲವರನ್ನು ಭೇಟಿಯಾಗಿರೋದು ತಲೆ ನೋವಾಗಿ ಪರಿಣಮಿಸಿದೆ. ಈ 52 ವರ್ಷದ ವ್ಯಕ್ತಿ ಹಲವರ ಸಂಪರ್ಕದಲ್ಲಿದ್ದು, ಅವರಿಗೂ ಸೋಂಕು ತಗಲಿರೋ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗುತ್ತಿದೆ.

ದೆಹಲಿಯಿಂದ ಮಾರ್ಚ್ 19ರಂದು ಮಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸಿದ್ದು, ಅಲ್ಲಿಯೂ ವೈರಸ್ ಹರಡಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಇದು ದೃಢಪಟ್ಟಲ್ಲಿ ದೆಹಲಿಯ ನಿಜಾಮುದ್ದೀನ್, ಜಮಾತ್ ಪ್ರಕರಣದಂತೆ, ಈ ಪ್ರಕರಣ ಕರ್ನಾಟಕಕ್ಕೆ ಸವಾಲಿಗೆ ಪರಿಣಮಿಸಲಿದೆ. ಸದ್ಯ ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ಸೋಂಕಿತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮಂಗಳೂರು ಕೇಸ್ ಏಕೆ ಕಗ್ಗಂಟು?
ಕಗ್ಗಂಟು 1: ಶಾಹೀನ್ ಭಾಗ್ ಪ್ರತಿಭಟನೆ: ಸೋಂಕಿತನಿಗೆ ದೆಹಲಿಗೆ ಹೋಗುವ ಮುನ್ನ ಕೊರೊನಾ ತಗುಲಿದ್ದಲ್ಲಿ ಶಾಹೀನ್‍ಭಾಗ್ ಪ್ರತಿಭಟನೆಯಲ್ಲಿ ಭಾಗಿಯಾದವರಿಗೂ ಹರಡಿರೋ ಸಾಧ್ಯತೆ ಇದೆ. ಒಂದು ವೇಳೆ ಇದು ಹೌದಾದಲ್ಲಿ ದೆಹಲಿಯ ಜಮಾತ್‍ಗಿಂತಲೂ ಸೋಂಕಿತರು ಜಾಸ್ತಿಯಾಗುವ ಸಾಧ್ಯತೆಗಳಿವೆ.

ಕಗ್ಗಂಟು 2: ದೆಹಲಿಯಲ್ಲಿ ಹಲವರ ಭೇಟಿ: ಸೋಂಕಿತ ಸಂಘಟನೆಯೊಂದಕ್ಕೆ ಸೇರಿರೋದರಿಂದ ದೆಹಲಿಯಲ್ಲಿ ಹಲವರನ್ನು ಭೇಟಿಯಾಗಿದ್ದಾನೆ. ದೆಹಲಿಗೆ ಹೋಗೋ ಮುನ್ನ ಸೋಂಕು ತಟ್ಟಿದ್ದಲ್ಲಿ ಅವರಿಗೂ ಹರಡಿರೋ ಸಾಧ್ಯತೆಗಳು ಹೆಚ್ಚಿವೆ.

ಕಗ್ಗಂಟು 3: ರೈಲಿನಲ್ಲಿ ಹಲವರಿಗೆ ಸೋಂಕು: ದೆಹಲಿಯಿಂದ ಬರುವಾಗ ಸೋಂಕು ತಗುಲಿದ್ದಲ್ಲಿ, ಸೋಂಕಿತ ಪ್ರಯಾಣಿಸಿದ್ದ ರೈಲಿನ ಬೋಗಿಯಲ್ಲಿ ಹಲವರಿಗೆ ಹರಡಿರೋ ಸಾಧ್ಯತೆಗಳಿವೆ. ಒಂದು ವೇಳೆ ರೈಲಿನಲ್ಲಿ ಸಹಪ್ರಯಾಣಿಕನಿಂದ ಈತನಿಗೆ ಸೋಂಕು ತಗುಲಿದ್ದಲ್ಲಿ ಅಷ್ಟೇನೂ ಪರಿಣಾಮಕಾರಿಯಾಗದು.


Spread the love

About Laxminews 24x7

Check Also

ಸುವರ್ಣಸೌಧದಲ್ಲಿ‌ ಸ್ಪೀಕರ್, ಸಭಾಪತಿಗಳು ಹಸಿರೀಕರಣಕ್ಕೆ ಪಣ ತೊಟ್ಟಿದ್ದಾರೆ

Spread the loveಬೆಳಗಾವಿ: ಸುವರ್ಣಸೌಧದಲ್ಲಿ ಪರಿಸರ ಕಾಳಜಿ ಮೆರೆಯುವ ನಿಟ್ಟಿನಲ್ಲಿ ಸ್ಪೀಕರ್ ಯು ಟಿ ಖಾದರ್ ಚಳಿಗಾಲದ‌ ಅಧಿವೇಶನದಲ್ಲಿ ವಿನೂತನ ಪ್ರಯೋಗವೊಂದನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ